ಅಭಿಪ್ರಾಯ / ಸಲಹೆಗಳು

 ಜೀವ ಬೆದರಿಕೆ ಪ್ರಕರಣ: ೦1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ ಪ್ರಾಯ 48 ವರ್ಷ ಗಂಡ:ಕಾಂತಪ್ಪ ಪೂಜಾರಿ ವಾಸ:ಉರುವಾಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಅವರ ಮಗ ಅಮಿತ್ ಕಾರಂಜಿ ರವರಿಗೆ ಪುತ್ತೂರಿನವರಾದ ಪ್ರದೀಪ್ ರೈ ಪಾಂಬಾರು ಬೆಳ್ಳಾರೆ ಮತ್ತು ಪ್ರಖ್ಯಾತ ರೈ ರವರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಲೇಷಿಯಾ ದೇಶಕ್ಕೆ ಸಾಗಾಟ ಮಾಡುವ ಕೆಲಸ ಇದೇ ಎಂದು ಹೇಳಿ ದಿನಾಂಕ:02.03.2013 ರಂದು ಎಲೆಕ್ಟ್ರಾನಿಕ್ ವಸ್ತಗಳನ್ನು ಪಿರ್ಯಾದಿದಾರರ ಮಗನ ಮೂಲಕ ಮಲೇಷಿಯಾಕ್ಕೆ ಕಳುಹಿಸಿಕೊಟ್ಟಿದ್ದು, ಮಲೇಶಿಯ ವಿಮಾಣ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾದಾಗ ಸದ್ರಿ ವಸ್ತುವಿನಲ್ಲಿ ಮಾದಕ  ವಸ್ತು ಇದುದರಿಂದ ಪಿರ್ಯಾದಿದಾರರ ಮಗನನ್ನು ಅಲ್ಲಿಯ ಪೊಲೀಸ್ ರು ಬಂಧಿಸಿರುತ್ತಾರೆ, ಈ ವಿಷಯವನ್ನು ಪ್ರದೀಫ್ ರೈ ಪಾಂಬಾರು ಮತ್ತು ಪ್ರಖ್ಯಾತ್ ರೈ ರವರಿಗೆ ತಿಳಿಸಿದಾಗ ಇದನ್ನು ಯಾರಲ್ಲಿ ಹೇಳಬೇಡಿ ನಿಮ್ಮ ಮಗನನ್ನು ಬಿಟ್ಟುಕೊಡಿಸುತ್ತೇವೆ ಎಂದು ಹೇಳಿದ್ದು ಆದರೆ ಪಿರ್ಯಾದಿದಾರರ ಮಗನನ್ನು ಬಿಡಿಸದೇ ಸತಾಹಿಸುತ್ತಾ ಬಂಧಿರುವುದಾಗಿದೆ. ಬಳಿಕ ಪಿರ್ಯಾದಿದಾರರ ಮಗನನ್ನು ಬಿಡುಸುವಂತೆ ಜೋರು ಮಾಡಿ ಕೇಳಿದಾಗ ಪಿರ್ಯಾದಿದಾರರಿಗೆ ಹಾಗೂ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದಲ್ಲದೇ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 98/2021 ಕಲಂ:506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೆ ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಸುಕನ್ಯ, ಪ್ರಾಯ: 35 ವರ್ಷ, ಗಂಡ: ಸುಬ್ರಹ್ಮಣ್ಯ ಶರ್ಮ, ವಾಸ:  ಕುಮಾರಧಾರ ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ಎಂಬವರ ದೂರಿನಂತೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮ ಕುಮಾರಧಾರ ಮನೆ ಎಂಬಲ್ಲಿ ದಿನೇಶ್  ರವರ ಬಾಡಿಗೆ ಮನೆಯಲ್ಲಿ ಸುಮಾರು 3 ವರ್ಷಗಳಿಂದ ವಾಸವಾಗಿದ್ದು, ಅವರ ಗಂಡ ಸುಬ್ರಹ್ಮಣ್ಯ ಶರ್ಮ ರಿಗೆ ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಸರ್ಪಸಂಸ್ಕಾರ ಸೇವೆಯಲ್ಲಿ ಕ್ರೀಯಾಕೃತ್ಯವಾಗಿ ಪೂಜಾ ಕೈಂಕರ್ಯವನ್ನು ಕೈಗೊಳ್ಳುವ ವೃತ್ತಿಯಾಗಿರುತ್ತದೆ. ಕೋವಿಡ್-19 ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಇಲ್ಲದಿರುವುದರಿಂದ ಅವರು ಸುಮಾರು 2 ತಿಂಗಳಿಂದ ಮನೆಗೆ ಬಾರದೇ ಇರುವುದರಿಂದ ಸಂಬಂದಿಕರಲ್ಲಿ ಮತ್ತು ಸ್ನೇಹಿತರಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಸರ್ಪಸಂಸ್ಕಾರ ಪೂಜೆಗಳು ಪ್ರಾರಂಭವಾದ ನಂತರ ಬರಬಹುದೆಂದು ತಿಳಿದು ಆದರೂ ಈ ತನಕ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ   ಪೊಲೀಸ್ ಠಾಣಾ ಅ.ಕ್ರ  : 67-2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಮಚಂದ್ರ ಎ ( 40 ವರ್ಷ) ತಂದೆ: ಚಿನ್ನಸ್ವಾಮಿ , ವಾಸ: ನಿಸರ್ಗ , ವಿದ್ಯಾನಗರ , ವಳಾಲು ಪೋಸ್ಟ್ , ಪುತ್ತೂರು ಎಂಬವರು ದೂರಿನಂತೆ, ಫಿರ್ಯಾದಿದಾರರ ತಂದೆ ಚಿನ್ನಸ್ವಾಮಿ (67 ವರ್ಷ) ಎಂಬವರಿಗೆ ದಿನಾಂಕ 01.08.2020 ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೋಡಿಂಬಾಡಿ ಎಂಬಲ್ಲಿ ರಸ್ತೆ ವಾಹನ ಅಪಘಾತವಾಗಿ ತೀವ್ರ ತರಹದ ಗಾಯವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿರುತ್ತದೆ. ಆದರೂ ಫಿರ್ಯಾದಿದಾರರ ತಂದೆಯವರು ಸಂಪೂರ್ಣ ಗುಣಮುಖವಾಗದೇ ಮಲಗಿದ ಸ್ಥಿತಿಯಲ್ಲಿಯೇ ಇದ್ದು , ದಿನಾಂಕ 30.09.2021ರಂದು ಸಂಜೆಯ ವೇಳೆಯಲ್ಲಿ ಉಸಿರಾಟದ ತೊಂದರೆಯಾಗಿದ್ದು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ , ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು , ಚಿಕಿತ್ಸೆಯಲ್ಲಿರುತ್ತಾ ಫಿರ್ಯಾದಿದಾರರ ತಂದೆಯವರು ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 01.10.2021 ರಂದು ಬೆಳಿಗ್ಗೆ 9.45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ: 27/2021 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಶೀಲಾ ಪ್ರಾಯ 30 ವರ್ಷ ಗಂಡ: ದೇವದಾಸ್ ವಾಸ ;ಬೋಳಾಜೆ  ಮನೆ  ಕೋಡಿಂಬಾಡಿ   ಗ್ರಾಮ. ಪುತ್ತೂರು ತಾಲೂಕು ಎಂಬವರ ದೂರಿನಂತೆ ತನ್ನ ಸಂಸರಾದೊಂದಿಗೆ ವಾಸವಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:26.09.2021 ರಂದು ಪಿರ್ಯಾದುದಾರರು ತನ್ನ ತವರು ಮನೆಯಾದ ಬಲ್ಯ ಗ್ರಾಮದ ಗಾಣದಕೊಟ್ಟಿಗೆ ಎಂಬಲ್ಲಿಗೆ ಬಂದ ದಿನದಂದು ಪಿರ್ಯಾದುದಾರರ ತಂದೆಯವರಾದ ಮೃತ ದೇವಪ್ಪಗೌಡರವರು ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸಂಘದ ಅಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ:26.09.2021 ರಂದು ದೇವಪ್ಪಗೌಡರವರು ಪ್ರಗತಿ ಬಂದು ಸಂಘದ ಗುಂಪಿನವರೊಂದಿಗೆ ಸೇರಿಕೊಂಡು ನೆರೆಮನೆಯ ಸಂಜೀವ ದೇವಾಡಿಗರವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ಮದ್ಯಾಹ್ನ 13.00 ಗಂಟೆಗೆ ಸಂಜೀವ ದೇವಾಡಿಗರವರ ಮನೆಯಲ್ಲಿ ಕೂಲಿ ಕೆಲಸಕ್ಕೆ ಹೋದ ಆನಂದಗೌಡ, ದೇವಪ್ಪದೇವಾಡಿಗರವರು ಹಾಗೂ ಸಂಜೀವದೇವಾಡಿಗರವರು ಸೇರಿಕೊಂಡು ಕೋಳಿ ಪದಾರ್ಥವನ್ನು ಮಾಡಿ ಬಳಿಕ ಎಲ್ಲರೂ ಊಟ ಮಾಡಿ ನಂತರ ಸಂಜೀವ ದೇವಾಡಿಗರವರ ಮನೆಯಲ್ಲಿ ಕೂಲಿ ಕೆಲಸವನ್ನು ಸಂಜೆಯವರೆಗೂ ಮಾಡಿ ನಂತರ ಸಂಜೆ  ಮನೆಗೆ ಬಂದ ದೇವಪ್ಪಗೌಡರವರಿಗೆ ವಾಂತಿ ಹಾಗೂ ಹೊಟ್ಟೆ ನೋವು ಉಂಟಾದ್ದರಿಂದ ಕೂಡಲೆ ಪಿರ್ಯಾದುದಾರರು ದೇವಪ್ಪಗೌಡರವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಸಂಜೀವಗೌಡರವರ ಮನೆಯಲ್ಲಿ ಊಟ ಮಾಡಿದ ಆನಂದಗೌಡ, ಸಂಜೀವ ದೇವಾಡಿಗರವರಿಗೆ ಹಾಗೂ ಪತ್ನಿ ಗೀತಾ ಮತ್ತು ಮಕ್ಕಳಾದ ಶ್ರೇಯಾ ,ಶ್ರಾವಣ್ ,ರವರಿಗೂ ಸಹ ವಾಂತಿ ಹಾಗೂ ಹೊಟ್ಟೆ ನೋವು ಉಂಟಾಗಿದ್ದರಿಂದ ಅವರು ಸಹ ನೆಲ್ಯಾಡಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತಾರೆ ಆಸ್ಪತ್ರೆಯಲ್ಲಿ ಪಿರ್ಯಾದುದಾರರ ತಂದೆಯವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ:30.09.2021 ರಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ  ಬಳಿಕ ಪುತ್ತೂರು ಆದರ್ಶ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೇನಫೊಯ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದವರು ದಿನಾಂಕ:01.10.2021 ರಂದು ಬೆಳಗ್ಗೆ 08.10 ಗಂಟೆಗೆ ದೇವಪ್ಪಗೌಡರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 23/2021 ಕಲಂ: 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-10-2021 12:40 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080