ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಮೇಶ್, ಪ್ರಾಯ 34 ವರ್ಷ, ತಂದೆ: ಗೋಪಾಲ, ವಾಸ: ಬೇತ್ರೆಹಿತ್ಲು ಮನೆ, ಕೊರುವೈಲು ಅಂಚೆ, ಕೂಡ್ಲು ಗ್ರಾಮ, ಕಾಸರಗೋಡು ತಾಲೂಕು, ಕೇರಳ ರಾಜ್ಯ ರವರು ನೀಡಿದ ದೂರಿನಂತೆ ದಿನಾಂಕ 02-03-2022 ರಂದು 07-00 ಗಂಟೆಗೆ ಆರೋಪಿ ಸ್ಕೂಟರ್ ಸವಾರೆ ವೀಣಾ ಎಂಬವರು KA-21-R-3758 ನೇ ನೋಂದಣಿ ನಂಬ್ರದ ಸ್ಕೂಟರನ್ನು ತಾರಿಗುಡ್ಡೆ-ಮೌಂಟನ್ವ್ಯೂ ಶಾಲೆ ಮಣ್ಣು ರಸ್ತೆಯಲ್ಲಿ ತಾರಿಗುಡ್ಡೆ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ನಾಯಿಯೊಂದು ರಸ್ತೆಗೆ ಏಕಾಏಕಿ ಅಡ್ಡ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಸ್ಕೂಟರ್ ಹತೋಟಿ ತಪ್ಪಿ ಮಣ್ಣು ರಸೆಗೆ ಬಿದ್ದು, ಸ್ಕೂಟರಿನಲ್ಲಿ ಸಹಸವಾರರಾಗಿದ್ದ ಪಿರ್ಯಾದುದಾರರಿಗೆ ಎದೆಗೆ ಮತ್ತು ಎಡಭುಜಕ್ಕೆ ಗುದ್ದಿದ ನೋವಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಸವಾರೆ ವೀಣಾರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  37/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: ೦1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದೇವಕಿ   ಪ್ರಾಯ(30),ತಂದೆ: ಕೃಷ್ಣ ,ವಾಸ: ಅಜ್ಜೇಲು    ಮನೆ, ಚಾರ್ವಕ   ಗ್ರಾಮ ಕಡಬ ತಾಲೂಕು ರವರು ಅವರ ಅಣ್ಣಂದಿರಾದ ಸೋಮಶೇಖರ, ಬಾಳಪ್ಪ ಮತ್ತು ಆನಂದ ಹಾಗೂ ಮಕ್ಕಳಾದ ನಯನಾ, ನವ್ಯ ಮತ್ತು ನಾರಾಯಣ ಎಂಬವರೊಂದಿಗೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಅಜ್ಜೇಲು ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು ಸುಮಾರು 5 ವರ್ಷಗಳ ಹಿಂದೆ ಪಿರ್ಯಾದುದಾರರ ಗಂಡ ಅವರನ್ನು  ಬಿಟ್ಟು ಹೋಗಿದ್ದು ಮನೆಯಲ್ಲಿ ಅಣ್ಣಂದಿರಿಬ್ಬರು ಮಧ್ಯಪಾನ ವ್ಯಸನಿಗಳಾಗಿದ್ದು ದಿನಾಲು ಮಧ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು ದಿನಾಂಕ: 01.03.2022 ರಂದು ಮಧ್ಯಾಹ್ನ ಊಟಮಾಡಿ ಮನೆಯಲ್ಲಿರುವ ಸಮಯ ಸುಮಾರು 3.30 ಗಂಟೆಗೆ   ಪಿರ್ಯಾದುದಾರರು ತಮ್ಮ ಮಗಳಿಗೆ ತಮಾಷೆ ಮಾಡಿದುದ್ದನ್ನು ಮನೆಯಲ್ಲಿದ್ದ ಪಿರ್ಯಾದುದಾರರ ಅಣ್ಣ ಬಾಳಪ್ಪ ತನ್ನನ್ನು ತಮಾಷೆ ಮಾಡಿರುವುದಾಗಿದೆ ಎಂದು ತಿಳಿದುಕೊಂಡು ಮನೆಯ ಅಂಗಳದಲ್ಲಿದ್ದ ಒಂದು ದೊಣ್ಣೆಯನ್ನು ತಂದು ಪಿರ್ಯಾದುದಾರರ ಎರಡೂ ಕಾಲುಗಳಿಗೆ ಹೊಡೆದು, ನಂತರ ಹೊಟ್ಟೆಗೂ ದೊಣ್ಣೆಯಿಂದ ಹೊಡೆದಿರುವುದಾಗಿದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 17/2022 ಕಲಂ. 324   IPC   . ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಿರೀಶ (21) ತಂದೆ: ಬೆಳ್ಯಪ್ಪ ಗೌಡ ವಾಸ: ರೆಂಜಾಳ ಮನೆ , ಮರ್ಕಂಜ ಗ್ರಾಮ ಸುಳ್ಯ ತಾಲೂಕು ರವರ ಅಣ್ದ ಜಗದೀಶ (31) ವಿಪರೀತ ಮಧ್ಯಪಾನ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಇದರಿಂದ ಮಾನಸೀಕ ಅಸ್ವಸ್ಥನಾಗಿದ್ದವನು, ದಿನಾಂಕ: 01.03.2022 ರಂದು ತಮ್ಮ ಮನೆಯಾದ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ರೆಂಜಾಳ ಎಂಬಲ್ಲಿ ಸಮಯ ಸುಮಾರು 11:15 ಗಂಟೆಗೆ  ಮನೆಯಲ್ಲಿ ಇಟ್ಟಿದ ರಬ್ಬರ್ ಗೆ ಹಾಕುವ ಆ್ಯಸಿಡ್ ನ್ನು ಸೇವನೆ ಮಾಡಿ ಅಸ್ವಸ್ಥಗೊಂಡವನನ್ನು, ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ, ಜಿ,ಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದಲ್ಲಿ ಸಮಯ ಸುಮಾರು 20:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶನು ಮೃತ ಪಟ್ಟಿರುವುದಾಗಿ ವೈದ್ಯರು ದೃಡಪಡಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್  11/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಲಲಿತಾ ಪ್ರಾಯ 62 ವರ್ಷ, ಗಂಡ: ರಾಮಪ್ಪ ಪೂಜಾರಿ, ವಾಸ; ನಾಟಿಕೇರಿ ಮನೆ, ಐವರ್ನಾಡು ಗ್ರಾಮ, ಸುಳ್ಯ ತಾಲೂಕು, ದ.ಕ. ಜಿಲ್ಲೆ  ರವರ ಮಗ ದಯಾನಂದ ಪ್ರಾಯ 37 ತಂದೆ ರಾಮಪ್ಪ ಪೂಜಾರಿ ರವರು ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಮಡ್ತಿಲ ನಿವಾಸಿ ಬಾಲಕೃಷ್ಣ ಎಂಬವರ ಹೊಸ ಮನೆ ನಿರ್ಮಾಣದ ಸೆಂಟ್ರಿಂಗ್ ಕೆಲಸವನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದು, ಅದರಂತೆ ದಿನಾಂಕ 02.03.2022 ರಂದು ಮಧ್ಯಾಹ್ನ 12-15 ಗಂಟೆಗೆ ಮಡ್ತಿಲ ಬಾಲಕೃಷ್ಣ ರವರ ಹೊಸ ಮನೆ ನಿರ್ಮಾಣದ ಕಾಮಾಗಾರಿ ವೇಳೆ ದಯಾನಂದನು ಸೆಂಟ್ರಿಂಗ್ ಹಲಗೆ ಕೊಯ್ಯುವ ಕೆಲಸ ಮಾಡುತ್ತಿರುವಾಗ ಅವನ ಕೈಯಲ್ಲಿದ್ದ ಮರ ಕೊಯ್ಯುವ ಯಂತ್ರ ಆಕಸ್ಮಿಕವಾಗಿ ಆತನ ಕಾಲಿನ ತೊಡೆಗೆ ತಾಗಿ ತೀವ್ರ ಗಾಯಗೊಂಡವನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ದಯಾನಂದ ರವರನ್ನು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ಧೃಢಪಡಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  07/2022  ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗೀತಾ ಸಾಲಿಯಾನ್, ಪ್ರಾಯ: 41 ವರ್ಷ, ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು  ಕುವೆಟ್ಟು ಗ್ರಾಮ ಪಂಚಾಯತ್ ಕುವೆಟ್ಟು ರವರು ನೀಡಿದ ದೂರಿನಂತೆ ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ  ಗುರುವಾಯ ನಕೆರೆಯ ಪೇಟೆಯಲ್ಲಿ  ದಿನಾಂಕ: 28-02-2022 ರಂದು ಅಸೌಖ್ಯಗೊಂಡು ಮಲಗಿದ್ದ ಸುಮಾರು 42 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ಚಿಕಿತ್ಸೆಯ ಬಗ್ಗೆ  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯ ಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:02-03-2022 ರಂದು ಮೃತಪಟ್ಟಿರುತ್ತಾನೆ.  ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 05/2022 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-03-2022 10:52 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080