ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಸ್.ಆದರ್ಶ್, 20 ವರ್ಷ, ತಂದೆ: ಎಂ.ಶ್ರೀನಿವಾಸಲು, ವಾಸ: 67/79, 9ನೇ ಕ್ರಾಸ್, ಭಾರತೀ ಲೇಜೌಟ್, ಕ್ರಿಸ್ಟ್ ಶಾಲೆಯ ಬಳಿ, ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 02-02-2022 ರಂದು ತನ್ನ  ಸ್ನೇಹಿತ ಮಹೇಶ್ವರ ರೆಡ್ಡಿಯವರೊಂದಿಗೆ ಸಹಸವಾರನಾಗಿ KA-19-EX-8291 ನೇ ಮೋಟಾರ್ ಸೈಕಲಿನಲ್ಲಿ ಕುಳಿತುಕೊಂಡು ಧರ್ಮಸ್ಥಳಕ್ಕೆ ಹೋಗಿ ವಾಪಾಸು ಮಂಗಳೂರಿಗೆ ಬರುತ್ತಾ ಸಮಯ ಮಧ್ಯಾಹ್ನ 12:30 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಗುಂಪಕಲ್ಲು ಎಂಬಲ್ಲಿಗೆ ತಲುಪಿದಾಗ ಮೋಟಾರ್ ಸೈಕಲನ್ನು ಸವಾರ ಮಹೇಶ್ವರ ರೆಡ್ಡಿರವರು ದುಡುಕುತನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಹೋಗಿ ರಸ್ತೆ ಬದಿಯ ಚರಂಡಿಗೆ  ಬಿದ್ದು ಅಪಘಾತವಾಗಿದ್ದು ಅಪಘಾತದಲ್ಲಿ ಸವಾರ ಮಹೇಶ್ವರ ರೆಡ್ಡಿರವರ ಹಿಂಬದಿ ತಲೆಗೆ ಗಂಭೀರ ರಕ್ತಗಾಯ ಗಾಯ ಗೊಂಡಿದ್ದು ಹಾಗೂ ಪಿರ್ಯಾದಿದಾರರ ಬಲಬದಿ ಹಣೆಗೆ, ಎಡಕೈ ಮುಂಗೈಗೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ 13:05 ಗಂಟೆಗೆ ಸವಾರ ಮಹೇಶ್ವರ ರೆಡ್ಡಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಪಿರ್ಯಾದಿದಾರರು ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 15/2021 ಕಲಂ: ಕಲಂ 279,337,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಸ್ಮಾನ್ ಶಾಕಿರ್, ಪ್ರಾಯ 21 ವರ್ಷ, ತಂದೆ: ಉಮ್ಮರಬ್ಬವಾಸ: ಜೋಗಿಬೆಟ್ಟು ಮನೆ, ಇಳಂತಿಲ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 01-02-2022 ರಂದು 14-30 ಗಂಟೆಗೆ ಆರೋಪಿ ಟಿಪ್ಪರ್ ಲಾರಿ ಚಾಲಕ ಸಂಶೀರ್ ಎಂಬವರು KA-21-B-6251ನೇ ನೋಂದಣಿ ನಂಬ್ರದ ಟಿಪ್ಪರ್ ಲಾರಿಯನ್ನು ಪೆದಮಲೆ-ಅಜಿಲಮೊಗರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪೆದಮಲೆ ಕಡೆಯಿಂದ ಸರಳಿಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಉಸ್ಮಾನ್ ಶಾಕೀರ್ ರವರು ಸವಾರರಾಗಿ ಮಹಮ್ಮದ್ ಸವಾದ್ ರವರು ಸಹಸವಾರರಾಗಿ ಸರಳಿಕಟ್ಟೆ ಕಡೆಯಿಂದ ಪೆದಮಲೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EU-9528ನೇ ನೋಂದಣಿ ನಂಬ್ರದ ಬುಲ್ಲೆಟ್ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಸಹಸವಾರ ಬುಲ್ಲೆಟ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲ ಕೈಯ ಕೋಲು ಕೈಗೆ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತ ಗಾಯ, ತಲೆಯ ಎಡಭಾಗಕ್ಕೆ ಗುದ್ದಿದ ಗಾಯ ಮತ್ತು ಸಹಸವಾರ ಮಹಮ್ಮದ್ ಸವಾದ್ ರವರಿಗೆ ಎರಡು ಕಾಲಿನ ಕೋಲುಕಾಲಿಗೆ ತರಚಿದ ಗಾಯ, ಎದೆಗೆ ಗುದ್ದಿದ ಗಾಯವಾಗಿ, ಪಿರ್ಯಾದುದಾರರು ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಸಹಸವಾರ ಮಹಮ್ಮದ್ ಸವಾದ್ ರವರು ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  20/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ  ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿಜಾಮುದ್ದೀನ್ (32) ತಂದೆ :ಅಬ್ದುಲ್ ಕೆ ವಾಸ: ಮಾವಿನಕಟ್ಟೆ ಮನೆ ಕುವೆಟ್ಟು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 02-02-2022 ರಂದು KA 21 Y 5326 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ಅಬುಬಕ್ಕರ್‌ ಸಿದ್ದಿಕ್‌ ಎಂಬವರು  ಗೇರುಕಟ್ಟೆ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಶಂಕರ್‌ ಹಾರ್ಡ್ ವೆರ್ಸ್‌ ಎದುರು ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಗೇರುಕಟ್ಟೆ ಕಡೆಗೆ KA 21 B 7884 ನೇ ಆಟೋರಿಕ್ಷಾ ವನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರ ಅಬುಬಕ್ಕರ್‌ ಸಿದ್ದಿಕ್‌ ರವರಿಗೆ ಬಲಗೈ ಅಂಗೈಗೆ, ಬಲ ಮೊಣಗಂಟಿಗೆ ಹಾಗೂ ಬಲಕಾಲಿನ ಪಾದಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ  18/2022 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲೂಸಿ ವೇಗಸ್, ಪ್ರಾಯ: 65 ವರ್ಷ, ಗಂಡ: ಥೋಮಸ್ ವೇಗಸ್, ವಾಸ: ಹುಪ್ಪ ಮನೆ,  ಪಾರೆಂಕಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರಿಗೆ  ಮತ್ತು ವಲೇರಿಯನ್ ಫೆರ್ನಾಂಡಿಸ್ ಎಂಬವರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು ದಿನಾಂಕ: 01-02-2022 ರಂದು ಸಮಯ ಸುಮಾರು ಸಂಜೆ 6.00 ಗಂಟೆಗೆ ಪಿರ್ಯಾದಿದಾರರು ತನ್ನ ಮನೆಯಾದ ಬೆಳ್ತಂಗಡಿ ತಾಲೂಕು, ಪಾರೆಂಕಿ ಗ್ರಾಮದ ಹುಪ್ಪ ಎಂಬಲ್ಲಿನ ತನ್ನ ಮನೆಯ ಸಮೀಪದಲ್ಲಿರುವ ವಲೇರಿಯನ್ ಮೋನಿಸ್ ಎಂಬವರ ಬಾಬ್ತು ಜಾಗದಲ್ಲಿ ತನ್ನ ಮಗಳು ಹಾಗೂ ಗಂಡನ ಜೊತೆ ತರಗೆಲೆ ತೆಗೆಯುತ್ತಿರುವ ಸಮಯ  ಆರೋಪಿ ವಲೇರಿಯನ್ ಫೆರ್ನಾಂಡಿಸ್ ರವರು ಅಲ್ಲಿಯೇ ಪಕ್ಕದಲ್ಲಿದ್ದ ಮಣ್ಣಿನ ರಸ್ತೆಯ ಬದಿಯಲ್ಲಿ ತರೆಗೆಲೆಯನ್ನು ತೆಗೆಯುತ್ತಿದ್ದು, ಈ  ಬಗ್ಗೆ ಫಿರ್ಯಾದಿದಾರರು ವಲೇರಿಯನ್ ಫೆರ್ನಾಂಡಿಸ್ ರವರಿಗೆ, ಈ ಜಾಗದಲ್ಲಿ ಯಾಕೆ ತರಗೆಲೆಯನ್ನು ತೆಗೆಯುತ್ತೀರಿ, ಈ ಜಾಗವನ್ನು ನಮಗೆ ನೋಡಿಕೊಳ್ಳಲು ವಲೇರಿಯನ್ ಮೋನಿಸ್ ರವರು ತಿಳಿಸಿರುತ್ತಾರೆ ಎಂಬುದಾಗಿ ಹೇಳಿದಾಗ, ವಲೇರಿಯನ್ ಫೆರ್ನಾಂಡಿಸ್‌ರವರು ಫಿರ್ಯಾದಿದಾರರನ್ನು ಉದ್ದೇಶಿಸಿ “ನಿನಗೇನು ಇದರಲ್ಲಿ ಅಧಿಕಾರವಿದೆ, ಎಂದು ಹೇಳಿ ತನ್ನ ಬಳಿಯಲ್ಲಿದ್ದ ಹಾರೆಯಿಂದ ಫಿರ್ಯಾದಿದಾರರ ಬಲಕೈಗೆ ಹಲ್ಲೆ ನಡೆಸಿದ್ದು, ಅಲ್ಲಿಯೇ ಇದ್ದ ಫಿರ್ಯಾದಿದಾರರ ಗಂಡ ಹಾಗೂ ಮಗಳು ಓಡಿ ಬರುವುದನ್ನು ನೋಡಿ ವಲೇರಿಯನ್ ಫೆರ್ನಾಡಿಸ್ ರವರು ಅಲ್ಲಿಂದ ಹೊರಟು ಹೋಗುತ್ತಾ, ಇನ್ನೊಂದು ಸಲ ಈ ಜಾಗದ ವಿಚಾರದಲ್ಲಿ ಮಾತನಾಡಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದು, ಹಲ್ಲೆಯ ಪರಿಣಾಮ ಫಿರ್ಯಾದಿದಾರರಿಗೆ ಬಲಕೈಗೆ ರಕ್ತಗಾಯವಾಗಿದ್ದು, ಪಿರ್ಯಾದಿದಾರರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ CR NO 10/2022  ಕಲಂ: 324, 506  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಂಬ ಶ್ರೀರಾಮುಲು ಪ್ರಾಯ 37 ವರ್ಷ ತಂದೆ: ಕುಂಬ ಚಿನ್ನ ವೆಂಕಟಯ್ಯ ವಾಸ: ಎಸ್‌ಟಿ ಕಾಲೋನಿ ಕುರಿಚೆರ್ಲ ಪಡು ಗೂಡುರು ತಾಲೂಕು ನೆಲ್ಲೂರು ಜಿಲ್ಲೆ, ಆಂಧ್ರಪ್ರದೇಶ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶ್ರೀರಾಮುಲುರವರು 1 ತಿಂಗಳಿನಿಂದ ತಮ್ಮ ಸಂಸಾರದೊಂದಿಗೆ ಬುಟ್ಟಿ ಹೆಣೆಯುವ ಕೆಲಸ ಮಾಡಿಕೊಂಡು ಸುಳ್ಯ ಪೇಟೆಯ ಪೈಚಾರ್‌ನಲ್ಲಿ ರಸ್ತೆ ಬದಿಯಲ್ಲಿ ಬಿಡಾರ ಹಾಕಿ ವಾಸ್ತವ್ಯ ಇದ್ದು, ಈ ದಿನ ದಿನಾಂಕ 02.02.2022 ರಂದು 12.00 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ಕುಟುಂಬ ಸಮೇತರಾಗಿ ಪಯಸ್ವಿನಿ ನದಿಗೆ ಸ್ನಾನ ಮಾಡಲು ಹಾಗೂ ಬಟ್ಟೆ ತೊಳೆಯಲು ಹೋಗಿದ್ದು, ಪಿರ್ಯಾದಿದಾರರ ತಾಯಿ, ಹೆಂಡತಿ ಮತ್ತು ಮಾವನ ಹೆಂಡತಿರವರು ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದು, ಪಿರ್ಯಾದಿದಾರರು, ಅವರ ತಮ್ಮ ಮಾವ ಹಾಗೂ ತಂದೆ ಎಲ್ಲರೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಮಯ ಪಿರ್ಯಾದಿದಾರರ ಮಗ 5 ವರ್ಷ ಪ್ರಾಯದ ಕೃಪಾವರಂ ನದಿಯ ಬಳಿ ಸ್ವಲ್ಪ ದೂರದಲ್ಲಿ ಆಟವಾಡಿಕೊಂಡಿದ್ದವನು ಪಿರ್ಯಾದಿದಾರರಿಗೆ ಕಣ್ಣಗೆ ಕಾಣಿಸದೇ ಇದ್ದು ಎಲ್ಲರೂ ಗಾಬರಿಗೊಂಡು ನದಿಯಲ್ಲಿ ನೋಡಿದಾಗ ನದಿ ಹರಿಯುವ ದಿಕ್ಕಿಗೆ ಸುಮಾರು 70 ಅಡಿ ಅಂತರದಲ್ಲಿ ಸಮತಟ್ಟಾದ ಜಾಗದಲ್ಲಿ ಮುಳುಗಿರುವುದು ಕಂಡು ಬಂದಿದ್ದು, ಬಳಿಕ ಮಗನನ್ನು ನದಿಯ ಮಧ್ಯದ ಕಲ್ಲು ಬಂಡೆಯಲ್ಲಿ ಮಲಗಿಸಿ ನೋಡಿದಾಗ ಕೃಪಾವರಂ ಮೃತಪಟ್ಟಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 07/22  ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯತೀಶ್‌ ಕೆ., ಪ್ರಾಯ: 31 ವರ್ಷ, ತಂದೆ: ರಾಮಣ್ಣ  ಗೌಡ, ವಾಸ: ಕೊಡೆಂಕಿರಿ ಮನೆ, ಕನಕಮಜಲು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ರಾಮಣ್ಣ ಗೌಡ, ಪ್ರಾಯ: 65 ವರ್ಷ ಎಂಬವರು ದಿನಂಪ್ರತಿ ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು  ದಿನಾಂಕ:  01.02.2022 ರಂದು ಪಿರ್ಯಾದಿ ಹಾಗೂ ಅವರ ತಾಯಿಯಲ್ಲಿ ರಾಮಣ್ಣ ಗೌಡರು ಜಗಳವಾಡಿ ಮನೆಯಲ್ಲಿದ್ದವರು ರಾತ್ರಿ 11:30 ಗಂಟೆಯ ಸಮಯಕ್ಕೆ ಮನೆಯ ಪಕ್ಕದಲ್ಲಿರುವ ಮಾವಿನ ಮರದ ಕೊಂಬೆಗೆ ಮತ್ತು ತನ್ನ ಕುತ್ತಿಗೆಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ..ಈ ಬಗ್ಗೆ ಸುಳ್ಯ ಠಾಣಾ ಯುಡಿಆರ್‌ ನಂಬ್ರ 6/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-02-2022 11:05 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080