ಅಪಘಾತ ಪ್ರಕರಣ: ೦2
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರವೀಂದ್ರ ಪ್ರಾಯ 33 ವರ್ಷ ತಂದೆ: ಶೇಖರ ಪೂಜಾರಿ ವಾಸ: ಬಜಿಲ ಮನೆ, ಕೊಯ್ಯೂರು ಗ್ರಾಮದ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 01-03-2021 ರಂದು ತನ್ನ ಬಾಬ್ತು ಕೆಎ 70 ಇ 8279 ನೇ ಮೋಟಾರು ಸೈಕಲ್ ನ್ನು ಉಜಿರೆ ಕಡೆಯಿಂದ ಬೈಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಪಿನಾರಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಬೈಪಾಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 70-1986 ನೇ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕೋಲು ಕಾಲಿಗೆ, ಬಲ ಕಾಲಿನ ಹೆಬ್ಬೆರಳಿಗೆ, ಬಲ ಕೋಲು ಕೈಗೆ, ಬಲ ಕೈಯ ಉಂಗುರ ಬೆರಳಿಗೆ, ಕಿರು ಬೆರಳಿಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ. ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 15/2021, ಕಲಂ; 279, 337 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದೇವಪ್ಪ ಗೌಡ, ಪ್ರಾಯ 58 ವರ್ಷ, ತಂದೆ: ಸೋಮ ಗೌಡ, ವಾಸ:ಕಾಯರ್ ತ್ತಡಿ ಮನೆ, ಹಿರೇಬಂಡಾಡಿ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 01/03/2021 ರಂದು ಆರೋಪಿ ಕಾರು ಚಾಲಕ ತಾರನಾಥ ಪಿ ಶೆಟ್ಟಿ ಎಂಬವರು ಓಮ್ನಿ ಕಾರು ನೋಂದಣಿ ನಂಬ್ರ KA-19-Z-8124 ನೇದನ್ನು ಪುತ್ತೂರು - ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಹಾರಾಡಿ ಎಂಬಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ಸಂಪೂರ್ಣ ತಪ್ಪು ಬದಿಗೆ ಚಲಾಯಿಸಿದ ಪರಿಣಾಮ, ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಫಿರ್ಯಾದುದಾರರ ಮಗ ಯಕ್ಷಿತ್ರವರು ರಸ್ತೆಯ ತೀರಾ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-W-5546 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ ಮೋಟಾರು ಸೈಕಲಿನೊಂದಿಗೆ ರಸ್ತೆಗೆ ಬಿದ್ದ ಯಕ್ಷಿತ್ರವರ ಬೆರಳುಗಳಿಗೆ ಗಂಭೀರ ಗಾಯಗಳಾಗಿದ್ದು, ಎಡಮೊಣಕಾಲಿನ ಗಂಟಿಗೆ ಗುದ್ದಿದ ಗಾಯವಾಗಿದ್ದು ಅವರಿಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮಂಗಳೂರು ಕೆಎಂಸಿ ಆಸ್ಪತ್ರೆಗೆ ನಂತರ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 4/2021 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸತೀಶ ಪ್ರಾಯ 45 ವರ್ಷ ತಂದೆ: ತಿಮ್ಮಪ್ಪ ಗಟ್ಟಿ ವಾಸ: ವಿನಾಯಕ ದೇವಸ್ಥಾನ ಬಳಿ ನಂದಾವರ ಸಜಿಪ ಮುನ್ನೂರು ಗ್ರಾಮ ಬಂಟ್ವಾಲ ತಾಲೂಕು ರವರು ಬಿ ಮೂಡ ಗ್ರಾಮದ ಬಿ ಸಿ ರೋಡ ವೃತ್ತದ ಹತ್ತಿರ ಎಂದಿನಂತೆ ದಿನಾಂಕ 26-02-2021 ರಂದು KA 19 EM 8337 ನೇ ಮೋಟಾರ ಸೈಕಲ್ ನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು ಸಂಜೆ 5.30 ಹಿಂತಿರುಗಿ ಬಂದು ನೋಡಿದಾಗ ಸದ್ರಿ ಸ್ಥಳದಲ್ಲಿ ಮೋಟಾರ್ ಸೈಕಲ್ ಕಾಣದೇ ಇದ್ದು, ಬಳಿಕ ಸದ್ರಿ ಪರಿಸರದಲ್ಲಿ ಹುಡುಕಲಾಗಿ ಪತ್ತೆಯಾಗದೇ ಇದ್ದು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು ಕಳುವಾದ ಮೋಟಾರ ಸೈಕಲ್ ಅಂದಾಜು ಮೌಲ್ಯ 35,000/- ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 29-2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦2
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶರತ್ ಕುಮಾರ್ ಪ್ರಾಯ: 24 ವರ್ಷ ತಂದೆ: ಗೋಪಾಲ ಮಡಿವಾಳ ವಾಸ: ಪುರುಷರಕಟ್ಟೆ ಮನೆ ನರಿಮೊಗರು ಗ್ರಾಮ ಪುತ್ತೂರು ತಾಲೂಕು ರವರು ಪುತ್ತೂರು ಕಸ್ಬಾ ಗ್ರಾಮದ ಕೊಂಬೆಟ್ಟು ಎಂಬಲ್ಲಿ ಆದಂ ಹಾಜಿ ಎಂಬವರ ಮಗಳು ಲೈಲಾ ಎಂಬವರ ಬಾಬ್ತು ಇರುವ ಬಾಡಿಗೆ ಮನೆಯಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಒಂದು ತಿಂಗಳ ಹಿಂದೆ ನಿಘಂಟು ಮಾಡಿ ಪಡೆದುಕೊಂಡಿದ್ದು, ದಿನಾಂಕ: 01-03-2021 ರಂದು ಪಿರ್ಯಾದಿದಾರರ ಹೆಂಡತಿ ರಕ್ಷಿತಾಳ ನ್ನು ಬಾಡಿಗೆ ಮನೆಯನ್ನು ನೋಡಿಕೊಂಡು ಬರಲು ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರ ಬಾಡಿಗೆ ಮನೆಗೆ ಹೊಂದಿಕೊಂಡಂತೆ ದಿವಾಕರ ಆಚಾರ್ಯರ ಬಾಬ್ತು ಬಾಡಿಗೆ ಮನೆ ಇದ್ದು, ಪಿರ್ಯಾದಿದಾರರು ಮತ್ತು ರಕ್ಷಿತಾರವರು ಬಾಡಿಗೆ ರೂಮ್ ನೋಡಿ ಮೆಟ್ಟಿಲಿನಿಂದ ಇಳಿದುಕೊಂಡು ಬರುತ್ತಿರುವ ಸಮಯ ದಿವಾಕರ ಆಚಾರ್ಯರ ಪತ್ನಿ ಜಯಂತಿ ಆಚಾರ್ಯ ಮತ್ತು ಅವರ ಮಗಳು ಶುಭಾಳು ಸಮಾನ ಉದ್ದೇಶದಿಂದ ನೀನು ಇಲ್ಲಿ ಬಾಡಿಗೆ ಮನೆ ಮಾಡುತ್ತಿಯಾ? ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಮೆಟ್ಟಿಲಿನಿಂದ ಇಳಿಯುತ್ತಿದ್ದ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಜಯಂತಿ ಆಚಾರ್ಯಳು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ರಾಡ್ ನಿಂದ ಪಿರ್ಯಾದಿದಾರರ ಬಲಕಾಲಿನ ಪಾದ, ಮೊಣಕಾಲು, ಬಲಕೈಯ ಮೊಣಗಂಟಿಗೆ ಮತ್ತು ಬಲ ಕಣ್ಣಿನ ರೆಪ್ಪೆಯ ಬಳಿ ಹೊಡೆದಿದ್ದು , ಶುಭಾಳು ಪಿರ್ಯಾದಿದಾರರ ಮುಖಕ್ಕೆ ಕೈಯಿಂದ ಹೊಡೆದು ಕಾಲಿನಿಂದ ಎದೆಯ ಬಲಭಾಗಕ್ಕೆ ತುಳಿದಿರುತ್ತಾಳೆ. ಜಯಂತಿಯು ಬಾಡಿಗೆ ಮನೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾಳೆ. ಜಯಂತಿಯು ರಾಡಿನಿಂದ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ರಕ್ತ ಗಾಯವುಂಟಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ . ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆ ಅ.ಕ್ರ:14/2021 341,323, 324,504,506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಶ್ವನಾಥ ಪಿ ಎಸ್ ಪ್ರಾಯ 43 ವರ್ಷ ತಂದೆ ಶೇಷಪ್ಪ ಗೌಡ ಮುಳ್ಯ ಮಠ ಮನೆ ಅಜ್ಜಾವರ ಗ್ರಾಮ ಸುಳ್ಯ ತಾಲೂಕು ರವರು ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯನಾಗಿದ್ದು ದಿನಾಂಕ 01.03.2021 ರಂದು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮುಳ್ಯ ಭಜಾನ ಮಂದಿರದ ಬಳಿ ಯಕ್ಷಗಾನ ನಡೆಯುತ್ತಿದ್ದು ಈ ಸಮಯ ಮದ್ಯ ವ್ಯಸನಿಯಾಗಿದ್ದ ರಾಘವ ಮತ್ತು ಯೋಗಿಶ ಎಂಬವರು ಪಿರ್ಯಾದಿದಾರರ ಬಳಿ ಬಂದು “ನೀನು ಏನು ರಾಜನ ನಮಗೆ ಬುದ್ದಿ ಹೇಳಲು. ,ಇವತ್ತು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಪಿರ್ಯಾದುದಾರರ ಮೇಲೆ ಆರೋಪಿ ರಾಘವನು ತಲವಾರಿನಿಂದ ದಾಳಿ ನಡೆಸಿದ್ದು ,ಆಗ ಇನ್ನೊಬ್ಬ ಆರೋಪಿ ಯೋಗಿಶನು ಪಿರ್ಯಾದಿದಾರರ ತಲೆಗೆ ಕಡಿಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಿಕೊಂಡಾಗ ಪಿರ್ಯಾದಿದಾರರ ಮುಖದ ಭಾಗಕ್ಕೆ ಕತ್ತಿಯಿಂದ ಕಡಿದಿದ್ದು ,ಪಿರ್ಯಾದುದಾರರ ಜೊತೆಯಲ್ಲಿದ್ದ ಶಿವಕುಮಾರ್ ಮತ್ತು ರಾಘವ ಕಜೆ ಇವರ ಮೇಲೆಯೂ ಆರೋಪಿಗಳು ಹಲ್ಲೆಗೆ ಮುಂದಾಗಿದ್ದು” ನಿಮ್ಮನ್ನು ಒಂದು ವಾರದೊಳಗೆ ಕಡಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ಓಡಿಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 17/2021 ಕಲಂ 324 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಸುಳ್ಯ ಪೊಲೀಸ್ ಠಾಣೆಯಲ್ಲಿ ದಿನಾಂಕ 02.03.2021 ರಂದು ಕಲಂ; 504.323.r/w 34 IPC ಮತ್ತು 3 (1) (s) SC/ST PA Amendment Act 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಯಾನಂದ ಪ್ರಾಯ:50 ವರ್ಷ ತಂದೆ; ದಿ/ ಸುಬ್ಬಯ್ಯ ನಾಯ್ಕ ವಾಸ: ಓಣಿತ್ತಾರು ಮನೆ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಾಯಿ ರಾಜೀವಿ ಪ್ರಾಯ 74 ವರ್ಷ ಎಂಬವರು ಸುಮಾರು 5 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು ಮಂಗಳೂರು ಎ ಜೆ ಆಸ್ಪತ್ರೆಯ ವೈಧ್ಯರಿಂದ ಚಿಕಿತ್ಸಯೆಯನ್ನು ಪಡೆಯುತ್ತಿದ್ದು ದಿನಾಂಕ: 02/03/2021 ರಂದು 13.00 ಗಂಟೆಯಿಂದ 15.00 ಗಂಟೆಯ ಮಧ್ಯದ ಅವಧಿಯಲ್ಲಿ ಇದೇ ಕಾರಣಕ್ಕೆ ಮನನೊಂದು ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಓಣಿತ್ತಾರು ಗೇರು ಅಭಿವೃದ್ದಿ ನಿಗಮದ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್ ನಂ: 12/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆನಿತ್ ಮೊಂತೇರೋ ಪ್ರಾಯ 21 ವರ್ಷ ತಂದೆ ತೋಮಸ್ ಮೊಂತೆರೋ, ಭೆಂಜನಪದವು ಮನೆ ಅಮ್ಮಂಜೆ ಗ್ರಾಮ ಬಂಟ್ವಾಳ ತಾಲೂಕು ರವರ ತಂಗಿ ಕ್ರಿಸ್ಟಲ್ ಸಲೋನಿ ಮೋಂತೆರೋ ರವರು ಮೊಡಂಕಾಪು ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರಸ್ತುತ ಅವಳಿಗೆ ಪರೀಕ್ಷೆ ನಡೆಯುತ್ತಿದ್ದರಿಂದ ದಿನಾಂಕ 22.02.2021 ರಂದು ಬೆಳಿಗ್ಗೆ 9.10 ಗಂಟೆಗೆ ಓದಲೆಂದು ಮನೆಯೆ ತಾರಸಿಗೆ ಹೋದವಳು ತಾರಸಿಯಿಂದ ಬಿದ್ದು ತಲೆಗೆ, ಕೈಗೆ ಹಾಗೂ ಕಾಲಿಗೆ ಏಟಾಗಿದ್ದು ಅವಳನ್ನು ಒಂದು ಆಟೋ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ಅಲ್ಲಿನ ವೈದ್ಯಾಧಿಕಾರಿಯವರು ಅವಳನ್ನು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಂಕನಾಡಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು ಅದರಂತೆ ಕಂಕನಾಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 01.03.2021 ರಂದು ಮಧ್ಯಾಹ್ನ 3.45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿದರು. ದಿನಾಂಕ 22.02.2021 ರಂದು ಬೆಳಿಗ್ಗೆ 9.10 ಗಂಟೆಗೆ ಮನೆಯ ಮೇಲೆ ತಾರಸಿಗೆ ಹೋದವಳು ಪೀಡ್ಸ್ ಖಾಯಿಲೆ ಬಂದು ಅಥವಾ ಇನ್ಯಾವುದೋ ಖಾಯಿಲೆಯಿಂದ ತಾರಸಿಯಿಂದ ಕೆಳಗೆ ಬಿದ್ದು ಕೈಗೆ, ಕಾಲಿಗೆ ತೀವ್ರತರಹದ ಗಾಯ ಉಂಟಾಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 08/2021 ಕಲಂ 174(3)(4) ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಮೋದ್ ( 42) ತಂದೆ: ಕೊರಗು ಶೆಟ್ಟಿ ವಾಸ: ಪಾಡಾರು ಮನೆ , ಮೂಡುಕೋಡಿ ಗ್ರಾಮ , ಬೆಳ್ತಂಗಡಿ ತಾಲೂಕು ಪಿರ್ಯಾದಿದಾರರ ಮಾವ ಜಿನರಾಜ ಆಳ್ವ (72 ವರ್ಷ) ಮತ್ತು ಅವರ ಹೆಂಡತಿ ಶ್ರೀಯಾಳ ದೇವಿ ಅವರ 4 ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು ಅವರು ಅವರವರ ಗಂಡನ ಮನೆಯಲ್ಲಿ ಇರುವುದಾಗಿದೆ, ಹೀಗಿರುತ್ತಾ ದಿನಾಂಕ: 02.03.2021 ರಂದು ಬೆಳಿಗ್ಗೆ 07.00 ಗಂಟೆಗೆ ಜಿನರಾಜ ಆಳ್ವರವರ ಹೆಂಡತಿ ಡಿಪ್ಪೊ ಗೆ ಹಾಲು ತೆಗೆದುಕೊಂಡು ಹೋಗಿದ್ದು, ಹೋದವರು ವಾಪಾಸು 07.30 ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಜಿನರಾಜ ಆಳ್ವ ರವರು ಕಾಣದೆ ಇದ್ದು, ನಂತರ ಪಿರ್ಯಾದಿದಾರರು ಮತ್ತು ಇತರರು ಹುಡುಕಾಡಿದಾಗ ಅವರ ಮನೆಯ ಬಾವಿಯ ನೀರಿನಲ್ಲಿ ಜಿನರಾಜ ಆಳ್ವರವರ ಮೃತ ದೇಹ ಕಂಡು ಬಂದಿರುತ್ತದೆ. ಅವರು ಈ ದಿನ ದಿನಾಂಕ: 02.03.2021 ರಂದು ಬೆಳಿಗ್ಗೆ 07.00 ಗಂಟೆಯೀಮದ 07.30 ಗಂಟೆಯ ಮಧ್ಯೆ ಕಾಲದಲ್ಲಿ ಅವರ ಅಂಗಳದ ಬದಿಯಲ್ಲಿರುವ ಬಾವಿಯಿಂದ ನೀರು ಸೇದುತ್ತಿರುವಾಗ ಆಕಸ್ಮಿಕವಾಗಿ ಆಯಾ ತಪ್ಪಿ ಬಾವಿಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ:09-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ