ಅಪಘಾತ ಪ್ರಕರಣ: ೦3
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕಿರಣ್ ಎಂ(20) ತಂದೆ: ಆನಂದ ಸಾಲಿಯನ್, ವಾಸ: ಮಣಿಹಳ್ಳ ಮನೆ, ಬಂಟ್ವಾಳ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 01.04.2021 ರಂದು ಅಮಿತ್ ಪ್ರಭು ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯ ಜಕ್ರಿಬೆಟ್ಟು ಕಡೆಯಿಂದ KA-70-M-1150 ನೇ ಕಾರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಮಿತ್ ಪ್ರಭು ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಅಮಿತ್ ಪ್ರಭು ರವರು ರಸ್ತೆಗೆ ಬಿದ್ದು, ಬಲಕೋಲು ಕಾಲಿಗೆ ಗುದ್ದಿದ ಹಾಗೂ ಪಾದಕ್ಕೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 37/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಮ್ತಿಯಾಜ್ ಸಯ್ಯದ್ ರಸೋಲ ಅಧೋನಿ, ಪ್ರಾಯ 39 ವರ್ಷ, ತಂದೆ: ಸಯ್ಯದ್ ರಸೋಲ ವಾಸ: ಅಧೋನಿ, ನ್ಯೂ ಗಾಂಧಿನಗರ, ಟಿಪ್ಪು ಸುಲ್ತಾನ್ ಗಲ್ಲಿ, ೫ ನೇ ಕ್ರಾಸ್, ಶಿವಾಜಿನಗರ, ಬೆಳಗಾವಿ ರವರು ನೀಡಿದ ದೂರಿನಂತೆ ದಿನಾಂಕ 01-04-2021 ರಂದು 14-40 ಗಂಟೆಗೆ ಆರೋಪಿ ಮೆಘ ಎಸಿ 4 ವೀಲ್ ವಾಹನ ಚಾಲಕ ಮಲ್ಲಿಕಾರ್ಜುನ ಎಂಬವರು KA-19-AD-0523 ನೇ ನೋಂದಣಿ ನಂಬ್ರದ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮಂಗಳೂರು ಕಡೆಯಿಂದ ಹಾಸನ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ GA-05-T-5713 ನೇ ನೋಂದಣಿ ನಂಬ್ರದ ಈಚರ್ ವಾಹನಕ್ಕೆ ಅಪಘಾತವಾಗಿ, ಆರೋಪಿ ಚಾಲಕನ ಕೈಗೆ ಗಾಯವಾಗಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತವೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 61/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶಿವನಾಂದ,ಬಿ ತಂದೆ: ಭವಾನಿ ಶಂಕರ್ ಹೆಗ್ಡೆ ವಾಸ: ಪುರುಷಕಟ್ಟೆ ನೀರಮೊಗೆರು, ಪುತ್ತೂರು ರವರು ದಿನಾಂಕ: 31.03.2021 ರಂದು ತಮ್ಮ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಸುಳ್ಯ ದಿಂದ ಪುತ್ತೂರಿಗೆ ಹೋಗುತ್ತಿರುವರೇ ಎದುರಿನಲ್ಲಿ ಅವರ ಭಾವ ಅಶೋಕ್ ಕುಂಬ್ಲೆ ರವರು ಕೆಎ 21 ಎನ್ 9406 ನೇದರ ಕಾರಿನಲ್ಲಿ ಆತನ ಹೆಂಡತಿ ಶೋಭಾ, ಮಗಳು ಆಶ್ರಯ ಹಾಗೂ ಅಣ್ಣನ ಹೆಂಡತಿ ಸೂರ್ಯಕಲಾ ಹಾಗೂ ಅಣ್ಣನ ಮಗ ಸಂಪತ್ ರವರೊಂದಿಗೆ ಹೋಗುತ್ತಿರುವ ಸಮಯ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಆನೆಗುಂಡಿ ಎಂಬಲ್ಲಿ ತಲುಪುತ್ತಿದ್ದಂತೆ ಕಾರು ಚಾಲಕರಾದ ಆಶೋಕ್ ಕುಂಬ್ಲೆಯವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಒಮ್ಮೇಲೆ ಕಾರಿನ ಬ್ರೇಕ್ ಹಾಕಿದ ಪರಿಣಾಮ ಕಾರು ರಸ್ತೆಯ ಎಡಬದಿ ದರೆಗೆ ಗುದ್ದಿ ಕಾರು ಜಖಂ ಆಗಿದ್ದು, ಕಾರಿನಲ್ಲಿದ್ದ ಶೋಭಾಗೆ ಕಾಲಿಗೆ ತಲೆಗೆ,ಮೂಗಿಗೆ ಗಾಯವಾಗಿದ್ದು,ಆಶ್ರಯಾಳಿಗೆ ತಲೆಗೆ,ಮುಖಕ್ಕೆ,ಸೂರ್ಯಕಲಾಳಿಗೆ ಕಾಲಿಗೆ,ಸಂಪತ್ ಗೆ ತಲೆಗೆ ಗಾಯವಾಗಿದ್ದು ಮತ್ತು ಅಶೋಕ್ ಕುಂಬ್ಲೆರವರಿಗೆ ಸುಣ್ಣ-ಪುಟ್ಟ ಗಾಯವಾಗಿದ್ದವರನ್ನು ಪಿರ್ಯಾದುದಾರರು ಉಪಚರಿಸಿ ಪುತ್ತೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 22/2021 ಕಲಂ: 279.337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಕಲ್ಪನಾ ಚಂದ್ರಶೇಖರ ನಾಯ್ಕ್ ಪ್ರಾಯ;36 ವರ್ಷ ಗಂಡ: ಚಂದ್ರಶೇಖರ ನಾರಾಯಣ ನಾಯ್ಕ ವಾಸ; ಶಿವನಿಲಯ #91 ಸೋಮನಹಳ್ಳಿ ರಸ್ತೆ ಚಿಪಗಿ ಗ್ರಾಮ ಶಿರಶಿ ತಾಲೂಕು ಉತ್ತರ ಕನ್ನಡ ರವರು ದಿನಾಂಕ:31-03-2021 ರಂದು ಶಿರಸಿಯಿಂದ ತನ್ನ ಪತಿ ಮಕ್ಕಳು ಹಾಗೂ ತಾಯಿಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಟು ಬಂದಿದ್ದು ದಿನಾಂಕ:01-04-2021 ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿ 7.00 ಗಂಟೆಗೆ ದೇವರ ದರ್ಶನ ಮಾಡುವರೇ ಗರ್ಭಗುಡಿ ಒಳಪ್ರವೇಶಿಸಿದ್ದು ನಂತರ 7.30 ಗಂಟೆಗೆ ದೇವರ ದರ್ಶನ ಮುಗಿಸಿ ಗರ್ಭಗುಡಿಯಿಂದ ಹೊರಗಡೆ ಬಂದು ಮಗಳು ಅಂಕಿತಾ ಕಲಿಯುತ್ತಿರುವ ಮಂಗಳೂರಿನ ಶ್ರೀನಿವಾಸ ಕಾಲೇಜ್ ಗೆ ಶುಲ್ಕ ಪಾವತಿಸಲು ಹೋಗಿದ್ದು ಅಲ್ಲಿ ಪಿರ್ಯಾದುದಾರರ ತಾಯಿ ಭವಾನಿಯವರು ಹಿಡಿದುಕೊಂಡಿದ್ದ ವ್ಯಾನಿಟಿ ಬ್ಯಾಗ್ ತೆಗೆದು ನೋಡಲಾಗಿ ಬ್ಯಾಗ್ ನಲ್ಲಿ ಹಣ ಮಾತ್ರ ವಿದ್ದು ಮನೆಯಿಂದ ತಂದಿದ್ದ ಸುಮಾರು 40 ಗ್ರಾಂ ತೂಕ ಗಣಪತಿ ಮೂರ್ತಿ ಇರುವ ಜಿನ್ನದ ಸರ -1 ಮತ್ತು 40 ಗ್ರಾಂ ತೂಕದ ಬ್ರಾಸ್ ಲೈಟ್-1 ಇಟ್ಟಿರುವ ಸ್ಟೀಲ್ ಕರಡಿಗೆ ಇಲ್ಲದೇ ಇದ್ದು ಪಿರ್ಯಾದುದಾರರು ಗಾಬರಿಗೊಂಡು ಹುಡುಕಾಡಿದಾಗ ಎಲ್ಲಿಯು ಸಿಗದೇ ಇದ್ದು ನಂತರ ಧರ್ಮಸ್ಥಳದಲ್ಲಿ ಶ್ರೀ ದೇವರ ದರ್ಶನ ಮಾಡುವಾಗ ಕಳ್ಳತನವಾಗಿರಬಹುದೆಂದು ಭಾವಿಸಿ ಧರ್ಮಸ್ಥಳಕ್ಕೆ ಬಂದು ಶ್ರೀ ಕ್ಷೇತ್ರದ ಸಿಸಿ ಟಿವಿ ಪ್ಯೂಟೆಜ್ ಚೆಕ್ ಮಾಡಿಸಿದಾಗ ಗರ್ಭ ಗುಡಿಯಲ್ಲಿ ಪಿರ್ಯಾದುದಾರರು ಹಾಗೂ ಆಕೆಯ ಮನೆಯವರು ದರ್ಶನ ಮಾಡುವ ಸಮಯ ಸುಮಾರು 5 ಜನ ಹೆಂಗಸರ ಗುಂಪು ಪಿರ್ಯಾದುದಾರರ ತಾಯಿಯನ್ನು ಹಿಂಬಾಲಿಸಿಕೊಂಡು ಬರುತ್ತಿರುವುದು ಕಂಡುಬರುತ್ತದೆ. ಸದ್ರಿ ವ್ಯಕ್ತಿಗಳಲ್ಲಿ ಯಾರಾದರೂ ಕಳ್ಳತನ ಮಾಡಿರಬಹುದೆಂದು ಸಂಶಯಪಟ್ಟಿರುತ್ತಾರೆ. ಕಳ್ಳತನವಾದ ಒಟ್ಟು ಚಿನ್ನದ ತೂಕ ಸುಮಾರು 85 ಗ್ರಾಂ ಮತ್ತು ಇದರ ಅಂದಾಜು ಮೌಲ್ಯ ರೂ 3,20,000/- ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 21-2021 ಕಲಂ;379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦1
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸೋನಿ ಮುಂಡು, ಪ್ರಾಯ 19 ವರ್ಷ, ತಂದೆ: ಮಾಂಗು ಮುಂಡ, ವಾಸ: ಇಡ್ಯಾಡಿ ಮನೆ, ಕೋಂ : ಡಾ|| ಜಯರಾಮ ರೈ, ವಾಸ: ಸವಣೂರು ಗ್ರಾಮ, ಕಡಬ ತಾಲೂಕು ಎಂಬವರು ಅವರ ಅಣ್ಣಂದಿರಾದ ಹಿಂದು ಮತ್ತು ರಾಮು ರವರ ಜೊತೆ ಕಡಬ ತಾಲೂಕು ಸವಣೂರು ಗ್ರಾಮದ ಪದ್ಮಶ್ರೀ ಬೇಕರಿ ಬಳಿ ನಿಂತುಕೊಂಡಿರುವಾಗ ಆರೋಪಿಗಳಾದ ಮೇಘರಾಜ್, ರಮಾನಾಥ ಆಚಾರಿ, ದೇವಿ ಪ್ರಸಾದ್ ರವರು ಪಿರ್ಯಾದಿಯವರ ಬಳಿ ಹೋಗಿ ನೀನು ಏನು ಕೆಲಸ ಮಾಡುತ್ತಿಯಾ? ಇಲ್ಲಿ ಯಾಕೆ ನಿಂತುಕೊಂಡಿದ್ದಿಯಾ ? ಗಂಗಾಧರ ಎಲ್ಲಿ ಎಂಬುದಾಗಿ ಏರು ಧ್ವನಿಯಲ್ಲಿ ಕೇಳಿ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳು ಅಲ್ಲೇ ಇದ್ದ ಜ್ಯೂಸ್ ಬಾಟಲ್ ಗಳನ್ನು ತೆಗೆದು ಮೇಘರಾಜನು ಪಿರ್ಯಾದಿದಾರರಿಗೆ ಬಾಟಲ್ ನಿಂದ ಹೊಡೆದು, ಕಾಲಿನಿಂದ ತುಳಿದು, ಆರೋಪಿ ರಮಾನಾಥನು ಹಿಂದುವಿಗೆ ಹಾಗೂ ದೇವಿ ಪ್ರಸಾದನು ರಾಮುವಿಗೆ ಬಾಟಲ್ ನಿಂದ ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದುದಾರರಿಗೆ ತಲೆಯ ಬಲ ಬದಿಗೆ ರಕ್ತಗಾಯ, ಹಿಂದುವಿಗೆ ತಲೆಗೆ ರಕ್ತಗಾಯ, ರಾಮುವಿಗೆ ಎಡ ಕಿವಿಯ ಹಿಂಭಾಗ ರಕ್ತಗಾಯ ಉಂಟಾಗಿರುವುದಲ್ಲದೇ, ಆರೋಪಿಗಳೆಲ್ಲರೂ ಪಿರ್ಯಾದುದಾರರನ್ನು ಹಾಗೂ ಅವರ ಅಣ್ಣಂದಿರನ್ನು ಉದ್ದೇಶಿಸಿ ಮುಂದಕ್ಕೆ ನೀವು ಗಂಗಾಧರನ ಜೊತೆ ಸೇರಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆಯನ್ನೊಡ್ಡಿದ್ದು, ಆರೋಪಿ ಮೇಘರಾಜ ಹಾಗೂ ಗಂಗಾಧರ ಎಂಬವರ ಮಧ್ಯೆ ಪೂರ್ವ ಧ್ವೇಷ ಇದ್ದು, ಪಿರ್ಯಾದುದಾರರು ಹಾಗೂ ಅವರ ಅಣ್ಣಂದಿರು ಗಂಗಾಧರರ ಜೊತೆ ಇರುವ ಧ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ. ಕ್ರ 14/2021 ಕಲಂ 504,324,323,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.