ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜಗನ್ನಾಥ ,ಎಂ (42) ತಂದೆ: ಸುಬ್ಬಣ್ಣ ಗೌಡ ವಾಸ: ಮಂಡೆಕೋಲು ಗ್ರಾಮ,ಸುಳ್ಯ ತಾಲೂಕು ರವರು ಸುಳ್ಯ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ದಿನಾಂಕ: 02.05.2021 ರಂದು ಬಸ್ ನಂಬ್ರ ಕೆಎ 21 ಎಫ್ 0199 ನೇದನ್ನು ಚಾಲನೆ ಮಾಡಿಕೊಂಡು ಸುಳ್ಯದ ಪೈಚಾರಿನಿಂದ ಡಿಪೋಕ್ಕೆ ಬರುವ ಸಮಯ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಒಡಬಾಯಿ ಪೆಟ್ರೋಲ್ ಪಂಪ್ ನ ಬಳಿ ತಲುಪುತ್ತಿದ್ದಂತೆ, ಎದುರಿನಿಂದ ಬಂದ ಅಂದರೆ, ಮಡಿಕೇರಿ ಕಡೆಯಿಂದ ಪುತ್ತೂರು ಕಡೆಗೆ ಕೆಎ 12 ಬಿ 8250 ನೇದರ ಗೂಡ್ಸ್ ಟೆಂಫೋ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಟೆಂಫೋವನ್ನು ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಬಸ್ಸಿನ ಎಡಬದಿಯ ಮುಂಭಾಗ ಜಖಂ ಆಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 29/2021 ಕಲಂ: 279. ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ರವರು ಸಿಬ್ಬಂದಿಗಳೊಂದಿಗೆ ದಿನಾಂಕ 02-05-2021 ರಂದು ಕಡಬ ತಾಲೂಕು ಸವಣೂರು ಗ್ರಾಮದ ಸವಣೂರು ಜಂಕ್ಷನ್ ಎಂಬಲ್ಲಿ ಕರ್ತವ್ಯದಲ್ಲಿರುವ ವೇಳೆ ಆರೋಪಿ ತಾರಾನಾಥ.ಕೆ, ಎಂಬವರು ಸವಣೂರು ಸತ್ಕಾರ್ ಬಾರ್ & ರೆಸ್ಟೋರೆಂಟ್ ನಿಂದ ಯಾವುದೇ ಪರವಾನಿಗೆ ಯಾ ಖರೀದಿ ಬಿಲ್ಲುಗಳನ್ನು ಹೊಂದದೇ, ಅಟೋ ರಿಕ್ಷಾದಲ್ಲಿ ಸರ್ವೆ ಕಡೆಗೆ ಸಾಗಾಟ ಮಾಡುತ್ತಿದ್ದ 1) 180 ಮಿ.ಲೀ ಮದ್ಯ ಇರುವ ಒರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು - 12, 2) 180 ಮಿ.ಲೀ ಮದ್ಯ ಇರುವ ಮೈಸೂರು ಲ್ಯಾನ್ಸರ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು- 10, 3) 90 ಮಿ.ಲೀ ಮದ್ಯ ಇರುವ ಮೈಸೂರು ಲ್ಯಾನ್ಸರ್ ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು-2  4) 180 ಮಿ.ಲೀ ಮದ್ಯ ಇರುವ 8 ಪಿ.ಎಂ ವಿಸ್ಕಿಯ ಟೆಟ್ರಾ ಪ್ಯಾಕೇಟ್-1, 5) 500 ಮಿ.ಲೀ ಬೀಯರ್ ಇರುವ ಬ್ಲಾಕ್ ಪೋರ್ಟ್ sಸೂಪರ್ ಸ್ಟ್ರಾಂಗ್ ಬೀಯರ್ ಟಿನ್ ಗಳು-2, 6) 650 ಮಿ.ಲೀ ಬೀಯರ್ ಇರುವ ಬ್ಲಾಕ್ ಪೋರ್ಟ್ ಬೀಯರ್ ಬಾಟಲ್ ಗಳು -4 ನ್ನು ಪತ್ತೆ ಹಚ್ಚಿ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ 20/2021, ಕಲಂ : 32, 34, 43 (ಎ)  ಕರ್ನಾಟಕ ಅಬಕಾರಿ ಅಧಿನಿಯಮ 1965. ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-05-2021 03:54 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080