ಅಪಘಾತ ಪ್ರಕರಣ: ೦2
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹರೀಶ್ ಎಸ್, ಪ್ರಾಯ 30 ವರ್ಷ, ತಂದೆ: ದೆವಪ್ಪ ಎಸ್ ವಾಸ: ಸೆಟ್ಲಪಾಲು ಮನೆ, ಹಿರೆಬಂಡಾಡಿ ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 01-05-2022 ರಂದು ಆರೋಪಿ ಓಮ್ನಿ ಕಾರು ಚಾಲಕ ಜಯಂತ್ ಎಂಬವರು KA-21-M-7731ನೇ ನೋಂದಣಿ ನಂಬ್ರದ ಓಮ್ನಿ ಕಾರನ್ನು ದಾಸರಮೂಲೆ-ಅಡೆಕಲ್ ಸಾರ್ವಜನಿಕ ರಸ್ತೆಯಿಂದ ಕವಲೊಡೆಯುವ ಸೆಟ್ಲಪಾಲು ಕಾಂಕ್ರೀಟ್ ರಸ್ತೆಯಲ್ಲಿ, ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಸೆಟ್ಲಪಾಲು ದೈವಸ್ಥಾನದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾದವ ರವರಿಗೆ ಓಮ್ನಿ ಕಾರು ಅಪಘಾತವಾಗಿ, ಬೆನ್ನಿಗೆ ಗಾಯವಾಗಿ ಬಾಯಲ್ಲಿ ರಕ್ತ ಬರುತ್ತಿದ್ದವರಿಗೆ ಚಿಕಿತ್ಸೆಯ ಬಗ್ಗೆ ಅಪಘಾತದ ಓಮ್ನಿ ಕಾರಿನಲ್ಲಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಪಲಿಸದೇ ಮೃತ ಪಟ್ಟಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 84/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರದೀಶ್ ಪ್ರಾಯ 42 ವರ್ಷ ತಂದೆ ; ಮಣಿ ವಾಸ ; ಪಾಲೆತ್ತಡ್ಕ ಮನೆ ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕು ರವರು ಚಾಲಕ ವೃತ್ತಿ ಕೆಲಸ ಮಾಡಿಕೊಂಡಿದ್ದು ದಿನಾಂಕ:01.05.2022 ರಂದು ಕೆ.-12 ಎಂ.ಎ-5999 ನೇ ಮಾರುತಿ 800 ಕಾರು ವಾಹನದಲ್ಲಿ ಉಪ್ಪಿನಂಗಡಿಗೆ ಹೋಗಿ ನಂತರ ವಾಪಾಸ್ಸು ಕಡಬ ಕಡೆಗೆ ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಬರುತ್ತಿರುವಾಗ ಕಡಬ ಗ್ರಾಮದ ಕಳಾರ ಎಂಬಲ್ಲಿಗೆ ಸಮಯ ಸಂಜೆ 16.30 ಗಂಟೆಗೆ ತಲುಪಿದಾಗ ಕಡಬ ಗ್ರಾಮದ ಕಳಾರ ಎಂಬಲ್ಲಿರುವ RAN ಬಾರ್ ಕಡೆಯ ರಸ್ತೆಯಿಂದ ವ್ಯಕ್ತಿಯೊಬ್ಬನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ತನ್ನ ಮೊಟಾರ್ ಸೈಕಲ್‌ನ್ನು ಚಲಾಯಿಸಿಕೊಂಡು ಮುಖ್ಯ ರಸ್ತೆಗೆ ಬಂದು ರಸ್ತೆಯಲ್ಲಿ ತೀರ ಅಜಾಗರೂಕತೆಯಿಂದ ತನ್ನ ಮೊಟಾರ್ ಸೈಕಲ್ ನ್ನು ತಿರುಗಿಸಿಕೊಂಡು ಬಂದು ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಪಿರ್ಯಾದುದಾರರ ಕಾರಿಗೆ ಡಿಕ್ಕಿಯನ್ನುಂಟು ಮಾಡಿದ್ದು ಪಿರ್ಯಾದುದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ತಕ್ಷಣ ಕಾರನ್ನು ನಿಲ್ಲಿಸಿ ಕಾರಿನಿಂದ ಕೆಳಗಿಳಿದು ನೋಡಲಾಗಿ ಮೋಟಾರ್ ಸೈಕಲ್ ಸವಾರನು ಕಾರಿನ ಮುಂಬಾಗ ರಸ್ತೆಗೆ ಬಿದ್ದುಕೊಂಡಿದ್ದು ನಂತರ ಆತನನ್ನು ಉಪಚರಿಸಿ ನೋಡಲಾಗಿ ಆತನ ಬಲ ಕಾಲಿಗೆ ರಕ್ತಗಾಯ ಹಾಗೂ ಇತರೆ ಸಣ್ಣ ಪುಟ್ಟಗಾಯವಾಗಿರುತ್ತದೆ. ನಂತರ ಪಿರ್ಯಾದುದಾರರು ಹಾಗೂ ಇತರರು ಉಪಚರಿಸಿ ಹೆಸರು ಕೇಳಲಾಗಿ ಹೇಮಂತ ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 41/2022 ಕಲಂ. 279. 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮುಖೇಶ ಪ್ರಾಯ 23 ವರ್ಷ ತಂದೆ: ರಮೇಶ ಕುಲಾಲ್ ವಾಸ: ಮನೆ ನಂಬ್ರ 1-102 ಕಡಂಬಳಿಕೆ ಮನೆ ಬಿ ಕಸಗಾ ಗ್ರಾಮ ಬಂಟ್ವಾಳ ತಾಲೂಕು ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾಧಿದಾರರು ದಿನಾಂಕ 27-04-2022ರಂದು ರಾತ್ರಿ 8-30 ಗಂಟೆಗೆ ತನ್ನ ಬಾಬ್ತು KA 19 HH 8075 ನೇದರ ಮೋಟಾರ ಸೈಕಲ್ ಯನ್ನು ಬಿ ಕಸಬಾ ಗ್ರಾಮದ ಮಣಿಹಳ್ಳ ರಿಕ್ಷಾ ಪಾರ್ಕಿಂಗನಲ್ಲಿ ನಿಲ್ಲಿಸಿ ಸಮೀಪದಲ್ಲೇ ಇದ್ದ ಮನೆಗೆ ಡೆಕೋರೇಶನ್ ಸೆಟ್ಟಿಂಗ್ ಹೋಗಿದ್ದು, ನಂತರ ರಾತ್ರಿ 11.00 ಗಂಟೆಯ ವೇಳೆಗೆ ಹಿಂತಿರುಗಿ ಬಂದು ನೋಡಲಾಗಿ ಸದ್ರಿ ಸ್ಥಳದಲ್ಲಿ ನಿಲ್ಲಿಸಿದ ಮೋಟಾರ ಸೈಕಲ್ ಕಾಣೆಯಾಗಿರುತ್ತದೆ. ಎಲ್ಲಾ ಕಡೆ ಹುಡುಕಾಡಿದಲ್ಲಿ ಸದ್ರಿ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲ, ಇದರಿಂದ ಪಿರ್ಯಾಧಿದಾರರಿಗೆ ಸುಮಾರು ಅಂದಾಜು ಮೌಲ್ಯ 100000 ರೂ (1 ಲಕ್ಷ ರೂಪಾಯಿ) ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 47/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋನಪ್ಪ ಗೌಡ ಪ್ರಾಯ: 58 ವರ್ಷ ತಂದೆ: ದಿ ರಾಮಣ್ಣ ಗೌಡ ವಾಸ: ಲಕ್ಷ್ಮೀ ನಿವಾಸ ಎಲಿಕಾ ಮನೆ ನರಿಮೊಗರು ಗ್ರಾಮ ಪುತ್ತೂರು ತಾಲೂಕು ಎಂಬವರು ದಿನಾಂಕ: 01-05-2022 ರಂದು 19:45 ಗಂಟೆ ಸಮಯಕ್ಕೆ ಮನೆಯಿಂದ ತರಕಾರಿ ತರಲು ಮುಕ್ವೆಗೆ ಪಿರ್ಯಾದಿದಾರರ ಬಾಬ್ತು ಕೆ.ಎ 21 ಪಿ 6275 ನೇ ಓಮಿನಿ ಕಾರಿನಲ್ಲಿ ಹೊರಟು ರಾತ್ರಿ 20:00 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮುಕ್ವೆ ಜಂಕ್ಷನ್ ಬಳಿ ತಲುಪಿದಾಗ ಮುಕ್ವೆ ಜಂಕ್ಷನ್ ನಲ್ಲಿ ಒಂದು ಆಕ್ವೀವಾ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅದರ ಹತ್ತಿರ 5 ರಿಂದ 6 ಜನ ಯುವಕರು ನಿಂತುಕೊಂಡು ಮಾತನಾಡುತ್ತಿದ್ದು ಆ ಸಮಯ ಅವರು ರಸ್ತೆಯಲ್ಲಿ ಇದ್ದುದನ್ನು ಕಂಡು ಪಿರ್ಯಾದಿದಾರರು ಹಾರ್ನ್ ಹಾಕಿದ್ದು, ಆಗ ಅವರು ಅಲ್ಲಿಂದ ರಸ್ತೆ ಬಿಟ್ಟು ತೆರಳದೇ ಇದ್ದಾಗ ಪಿರ್ಯಾದಿದಾರರು ಓಮಿನಿಯನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋದಾಗ ಅವರೆಲ್ಲರೂ ಪಿರ್ಯಾದಿದಾರರ ಓಮಿನಿ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಏನು ನೀನು ನಮ್ಮನ್ನು ವಾಹನದ ಅಡಿಗೆ ಹಾಕುತ್ತೀಯಾ ? ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಮುಖ ಪರಿಚಯದ ಆಸೀಫ್, ಸಿರಾಜ್, ಹಕೀಂ ರವರ ಮಗ ಝೀಯಾಲ್ ಹಾಗೂ ಇತರರು ಸೇರಿ ಕೈಯಿಂದ ಫಿರ್ಯಾದಿದಾರರ ತಲೆಗೆ,ಕೆನ್ನೆಗೆ ಹಾಗೂ ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದು ರಸ್ತೆಗೆ ದೂಡಿ ಹಾಕಿದ್ದು, ಅಲ್ಲದೇ ನಿನ್ನ ಕಾರನ್ನು ಸುಟ್ಟು ಹಾಕುವುದಾಗಿ ಬೆದರಿಸಿರುತ್ತಾರೆ. ಆ ಸಮಯ ಫಿರ್ಯಾದಿದಾರರು ಬೊಬ್ಬೆ ಹಾಕಿದನ್ನು ಕೇಳಿಸಿಕೊಂಡ ಸಮೀಪದ ಅಂಗಡಿಯವರು ಫಿರ್ಯಾದಿದಾರರ ಬಳಿಗೆ ಬರುವುದನ್ನು ನೋಡಿ ಆರೋಪಿಗಳು ಅಲ್ಲಿಂದ ಹೊರಟು ಹೋಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 28/2022 ಕಲಂ: 143,147,341,504,323 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು ಪುತ್ತೂರು ನಗರ ಠಾಣೆ ರವರು ದಿನಾಂಕ: 02.05.2022 ರಂದು ಸಿಬ್ಬಂದಿಗಳ ಜೊತೆ ಬಂಟ್ವಾಳ ತಾಲೂಕು, ಕೆದಿಲ ಗ್ರಾಮದ, ಸತ್ತಿಕಲ್ಲು-ಸರೋಳಿ ಬೈಲು ಎಂಬಲ್ಲಿ ಮನೆಯ ಬಳಿ ಶೆಡ್ ಒಂದರಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರೋಪಿ ಮಹಮ್ಮದ್ ರಿಫಾಜ್ ಪ್ರಾಯ 22 ವರ್ಷ ಎಂಬವರನ್ನು ಫಿರ್ಯಾದಿದಾರರು ಸಿಬ್ಬಂದಿಗಳ ಸಹಾಯದಿಂದ ಹಿಡಿದಿದ್ದು, ಇನ್ನೊಬ್ಬ ಆರೋಪಿ ಅಬ್ದುಲ್ ಸತ್ತಾರ್ ಪ್ರಾಯ 21 ವರ್ಷ ಎಂಬವನು ಪರಾರಿಯಾಗಿದ್ದು ಆರೋಪಿಯ ಶೆಡ್ ನ್ನು ಪಂಚರ ಸಮಕ್ಷಮ ಪರಿಶೀಲಿಸಿ ಶೆಡ್ ನಲ್ಲಿದ್ದ ತಲಾ 1 ಕೆಜಿಯ 18 ಮಾಂಸದ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕಟ್ಟಿದ ಕಟ್ಟುಗಳು, 50 ಕೆ.ಜಿ ಗೋಮಾಂಸ ಹಾಗೂ ಅಲ್ಲಿಯೇ ಬಳಿಯಲ್ಲಿದ್ದ ಒಂದು ಪ್ಲಾಸ್ಟಿಕ್ ಕಡಾಯಿಯಲ್ಲಿ ಗೋವಿನ ಕೈಕಾಲು ಹಾಗೂ ಬಿಳಿ ಬಣ್ಣದ ಪ್ಲಾಸ್ಟಿಕ್ ಬಕೇಟ್ ನಲ್ಲಿ ಗೋವಿನ ತಲೆ ಹಾಗೂ ಬಾಲ ಸಮೇತ ಇದ್ದ ದನದ ಚರ್ಮ, ಕಬ್ಬಿಣದ ಚೂರಿ -6, ಮಾಂಸವನ್ನು ತುಂಡು ಮಾಡಲು ಉಪಯೋಗಿಸಿದ ಮರದ ತುಂಡುಗಳು-2 ,ಕತ್ತಿಗಳು-2 , ಪ್ಲಾಸ್ಟಿಕ್ ಚಾಪೆ , ಪ್ಲಾಸ್ಟಿಕ್ ಬಕೆಟ್-1 , ತೂಕ ಮಾಪಕ-1 , ಹಾಗೂ ಸ್ವಲ್ಪ ಪ್ಲಾಸ್ಟಿಕ್ ಕವರ್ ಗಳನ್ನು ಹಾಗೂ ನೈಲಾನ್ ಹಗ್ಗ-2, ವಶಪಡಿಸಿಕೊಳ್ಳಲಾಯಿತು. ಸ್ವಾದೀನ ಪಡಿಸಿಕೊಂಡ 68 ಕೆ.ಜಿ ಗೋಮಾಂಸದ ಅಂದಾಜು ಮೌಲ್ಯ ರೂ 13,600/-- ಸ್ವಾದೀನ ಪಡಿಸಿದ ತೂಕ ಮಾಪಕದ ಅಂದಾಜು ಮೌಲ್ಯ ರೂ 500/- , ಸ್ವಾಧೀನ ಪಡಿಸಿದ ಚೂರಿಗಳ ಒಟ್ಟು ಮೌಲ್ಯ ರೂ 600/- ಹಾಗೂ ಸ್ವಾಧೀನ ಪಡಿಸಿದ ಕತ್ತಿಗಳ ಅಂದಾಜು ಮೌಲ್ಯ ರೂ 400 /- ಆಗಬಹುದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 29/2022 ಕಲಂ: 4,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಆದ್ಯಾದೇಶ 2020. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆನಂದ ಪೂಜಾರಿ ಪ್ರಾಯ 65 ವರ್ಷ ತಂದೆ: ದಿ. ಬಾಬು ಪೂಜಾರಿ ವಾಸ: ಹಗೀರಿ ಮನೆ ಸಾಲೆತ್ತೂರು ಗ್ರಾಮ ಬಂಟ್ವಾಳ ತಾಲೂಕು ರವರ ತಮ್ಮನಾದ ಉಮೇಶ ಪೂಜಾರಿ ಪ್ರಾಯ 60 ವರ್ಷ ತಂದೆ: ದಿ. ಬಾಬು ಪೂಜಾರಿ ವಾಸ: ಕಾಯರ್ ಮಾರ್ ಮನೆ ಅಮ್ಟಾಡಿ ಗ್ರಾಮ ಬಂಟ್ವಾಳ ತಾಲೂಕು ದಿನಾಂಕ: 01-05-2022 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ, ಶವವು ಬಂಟ್ವಾಳ ಸರಕಾರಿ ಆಸ್ವತ್ರೆ ಶವ ಶೈತ್ಯಾಗಾರದಲ್ಲಿ ಇರಿಸಿರುವುದಾಗಿ ತಮ್ಮ ಉಮೇಶ ಪೂಜಾರಿಯ ಮಗನಾದ ಪ್ರಜ್ವಲ್ ನು ಈ ದಿನ ದಿನಾಂಕ 02-05-2022 ರಂದು ಬೆಳಿಗ್ಗೆ 6.45 ಗಂಟೆಗೆ ಪಿರ್ಯಾಧಿದಾರರಿಗೆ ತಿಳಿಸಿದಂತೆ, ಪಿರ್ಯಾಧಿದಾರರು ಆಸ್ವತ್ರೆಗೆ ಬಂದು ಶವವನ್ನು ನೋಡಿರುವುದಾಗಿದೆ. ಪಿರ್ಯಾಧಿದಾರರ ತಮ್ಮನು ಕೃಷಿ ಕೆಲಸ ಮಾಡಿಕೊಂಡು, ಶರಬು ಸೇವಿಸುವ ಅಬ್ಯಾಸವನ್ನು ಹೊಂದಿರುತ್ತಾನೆ, ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದು, ಆ ಸಮಯ ತಮ್ಮನ್ನು ತನ್ನ ಹೆಂಡತಿ ಹಾಗೂ ಮಕ್ಕಳ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದನು, ಪಿರ್ಯಾಧಿದಾರರು ತಮ್ಮನ ಮರಣದ ಬಗ್ಗೆ ಕೇಳಿ ತಿಳಿದಾಗ, ನಿನ್ನೆ ರಾತ್ರಿ ತಮ್ಮ ಉಮೇಶನು ರಾತ್ರಿ 9.00 ಗಂಟೆಗೆ ಮನೆಗೆ ಬಂದಿದ್ದು ಆಗ ತನ ಹೆಂಡತಿ ಅನ್ನ ಬಡಿಸಿ ಆತನ ಮುಂದೆ ಇಟ್ಟಿಲ್ಲವೆಂಬ ಕಾರಣಕ್ಕೆ ಜಗಳವಾಡಿದ್ದು, ಆನಂತರ ತಮ್ಮನು ಮನೆಯಿಂದ ಹೊರಗಡೆ ಹೋದವನು ಹುಡುಕಾಡಿದಲ್ಲಿ ರಾತ್ರಿ 10.00 ಗಂಟೆಗೆ ತಮ್ಮನ್ನು ಕೊಟ್ಟಿಗೆಯಲ್ಲಿ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಕೊಂಡಿದ್ದು ಕಂಡು ಬಂದು ಜೀವ ಇತ್ತೆಂಬ ಕಾರಣಕ್ಕೆ ತುಂಬ್ಯೆ ಫಾದರ್ ಮುಲ್ಲರ್ ಆಸ್ವತ್ರೆಗೆ ಕರೆದುಕೊಂಡು ಬಂದಿದ್ದು, ಇಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 17-2022 ಕಲಂ: 174 (3) & (4) ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀ ಹರೀಶ್ ಶೆಟ್ಟಿ ಪ್ರಾಯ:36 ವರ್ಷ ತಂದೆ: ವೆಂಕಪ್ಪ ಶೆಟ್ಟಿ, ವಾಸ: ಜೋಡುಸ್ಥಾನ ಮನೆ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ರವರು ಧರ್ಮಸ್ಥಳ ಗ್ರಾಮದ ನೇತ್ರಾವತಿ ವಸತಿ ಗೃಹದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ: 02-05-2022 ರಂದು ಬೆಳಗ್ಗೆ 09.30 ಗಂಟೆಗೆ ಸಮಯಕ್ಕೆ ಶ್ರೀ ಕ್ಷೇತ್ರದ ಸಂಚಾರಿ ಉಸ್ತುವಾರಿ ಸಿಬ್ಬಂದಿಯಾದ ಶೀನಪ್ಪ ಗೌಡರು ಧರ್ಮಸ್ಥಳ ಗ್ರಾಮದ ನೇತ್ರಾವತಿ ವಸತಿ ಗೃಹದ ಕಟ್ಟಡಡದ ಬಲ ಭಾಗದ ಗ್ಯಾಲರಿ ಬಳಿ ಅಪರಿಚಿತ ಗಂಡಸಿನ ಮೃತ ದೇಹವು ಇರುತ್ತದೆ ಎಂಬುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಸುಮಾರು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಗಂಡಸು ವ್ಯಕ್ತಿಯು ಸ್ಟ್ರೀಟ್ ಲೈಟ್ ಕಂಬಕ್ಕೆ ತಾಗಿಕೊಂಡು ಕೌಚಿ ಬಿದ್ದುಕೊಂಡಿರುವುದು ಕಂಡು ಬಂದಿದ್ದು ಸದ್ರಿ ವ್ಯಕ್ತಿಯು ಶ್ರೀ ಕ್ಷೇತ್ರಕ್ಕೆ ಬಂದವನು ಯಾವುದೋ ಕಾರಣದಿಂದ ಮೃತಪಟ್ಟಿರಬಹುದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 26/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಮೇಶ, 49 ವರ್ಷ, ತಂದೆ: ಬಿ.ಎಂ ಗೋವಿಂದ ವಾಸ: ಬೆಳಾರುಂಡಿ ಮನೆ, ನಂಜನಗೂಡು ತಾಲೂಕು ಮೈಸೂರು ಜಿಲ್ಲೆ ರಮೇಶ, 49 ವರ್ಷ, ತಂದೆ: ಬಿ.ಎಂ ಗೋವಿಂದ ವಾಸ: ಬೆಳಾರುಂಡಿ ಮನೆ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ ರವರು ನೀಡಿದ ದೂರಿನಂತೆ ಪಿರ್ಯಾದಿದಾರರು ಸುಮಾರು 1 ತಿಂಗಳಿನಿಂದ ಅವರ ಅಣ್ಣ ವೆಂಕಟೇಶ ಎಂಬವರ ಬಾಬ್ತು ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಮಡ್ತಿಲ ಪಡ್ಪು ಎಂಬಲ್ಲಿರುವ ಹಂದಿ ಸಾಕಣಿಕೆ ಫಾರ್ಮ್ ನಲ್ಲಿ ಹಾಗೂ ಬೆಳ್ಳಾರೆಯಲ್ಲಿರುವ ಹಂದಿ ಮಾಂಸ ಮಾರಾಟದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಸುಮಾರು 1 ವಾರದ ಹಿಂದೆ ಪಿರ್ಯಾದಿದಾರರ ಚಿಕ್ಕಮ್ಮನ ಮಗಳು ಲಕ್ಷ್ಮಮ್ಮ ಎಂಬವರ ಮಗ ಶರತ್, 31 ವರ್ಷ ತಂದೆ: ನಾಗರಾಜು ಎಂಬಾತನು ಇದೇ ಫಾರ್ಮ್ ಗೆ ಕೆಲಸಕ್ಕೆ ಬಂದಿರುತ್ತಾನೆ. ಶರತ್ ನಿಗೆ ಮದ್ಯ ಸೇವನೆಯ ಚಟ ಇರುತ್ತದೆ. ದಿನಾಂಕ 01-05-2022 ರಂದು ಬೆಳಗ್ಗೆ ಎಂದಿನಂತೆ ಶರತ್ ನು ಹಂದಿ ಮಾಂಸ ಮಾರಾಟ ಮಾಡಲು ಸುಳ್ಯದ ವಿಷ್ಣು ಸರ್ಕಲ್ ಬಳಿ ಇರುವ ಮಾಂಸ ಮಾರಾಟದ ಅಂಗಡಿಗೆ ಹೋದವನು ರಾತ್ರಿ 9-30 ಗಂಟೆಗೆ ವಿಪರೀತ ಮದ್ಯ ಸೇವನೆ ಮಾಡಿಕೊಂಡು ಮಡ್ತಿಲ ಪಡ್ಪು ಎಂಬಲ್ಲಿನ ಫಾರ್ಮ್ ನ ಬಳಿ ಇರುವ ಬಿಡಾರಕ್ಕೆ ಬಂದು ಊಟ ಮಾಡದೇ ಹಾಗೆಯೇ ಮಲಗಿರುತ್ತಾನೆ. ದಿನಾಂಕ 02.05.2022 ರಂದು ಬೆಳಿಗ್ಗೆ 4-00 ಗಂಟೆಗೆ ಶರತ್ ಶೌಚಾಲಯದಲ್ಲಿ ಬಿದ್ದುಕೊಂಡಿರುವುದನ್ನು ಕಂಡು ಆತನನ್ನು ನೀರು ಕುಡಿಸಿ ಉಪಚರಿಸಿ ಮಧ್ಯದ ನಶೆಯಿಂದ ಬಿದ್ದಿರಬಹುದೆಂಬುದಾಗಿ ಭಾವಿಸಿ ಪುನಃ ಬಿಡಾರಕ್ಕೆ ಕರೆದುಕೊಂಡು ಹೋಗಿ ಮಲಗಿಸಿದ್ದು, ಆ ಬಳಿಕ ಪಿರ್ಯಾದುದಾರರು ಬೆಳ್ಳಾರೆಯ ಅಂಗಡಿಗೆ ಹಾಗೂ ವೆಂಕಟ ಸ್ವಾಮಿ ಮತ್ತು ರವಿಕುಮಾರ್ ಸುಳ್ಯದಲ್ಲಿರುವ ಮಾಂಸ ಮಾರಾಟದ ಅಂಗಡಿಗೆ ಹೋಗಿದ್ದು, ಬಿಡಾರದಲ್ಲಿ ಮಲಗಿದ್ದ ಶರತ್ ಅಪರಾಹ್ನ 2-30 ಗಂಟೆಗೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು, ಶರತ್ ನು ಮದ್ಯದ ನಶೆಯಿಂದ ಶೌಚಾಲಯದಲ್ಲಿ ಬಿದ್ದು ದೇಹದ ಒಳಗೆ ಗುದ್ದಿದ ನೋವು ಉಂಟಾಗಿ ಅಥವಾ ಇನ್ಯಾವುದೋ ಕಾಯಿಲೆಯಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 17/2022 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ