ಅಭಿಪ್ರಾಯ / ಸಲಹೆಗಳು

ಕೊಲೆ ಬೆದರಿಕೆ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಇಬ್ರಾಹಿಂ ಖಲೀಲ್ (24) ತಂದೆ: ಅಬ್ದುಲ್ ರಹಿಮಾನ್, ವಾಸ; ನಂದಾವರ ಮನೆ, ಸಜಿಪಮುನ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಅಬೂಬಕ್ಕರ್ ಸಿದ್ದಿಕ್, ಸುಜಯ್ ರಾಕಿಬ್ ಮತ್ತು ಸಿನಾನ್ ರೊಂದಿಗೆ ತುಂಬೆ ಬಿ.ಎ ಟಿಂಬರ್ & ಮ್ಯಾನ್ಯುಫ್ಯಾಕ್ಚರಿಂಗ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಸುಮಾರು 6 ದಿನಗಳಿಂದ ಸಿಮೆಂಟ್ ಶೀಟ್ ಹಾಕುವ ಕೆಲಸವನ್ನು ಮಾಡಿಕೊಂಡಿದ್ದು, ಈ ದಿನ ದಿನಾಂಕ: 02.06.2021 ರಂದು ಬೆಳಿಗ್ಗೆ 08.30 ಗಂಟೆಗೆ ಎಂದಿನಂತೆ ಎಲ್ಲರೂ ಕೆಲಸ ಮಾಡುತ್ತಿದ್ದ ಸಮಯ ಅಬೂಬಕ್ಕರ್ ಸಿದ್ದಿಕ್ (68) ಮತ್ತು ಪಿರ್ಯಾದಿದಾರರು ಫ್ಲೈವುಡ್ ಫ್ಯಾಕ್ಟರಿಯ ಮೇಲೆ ಸಿಮೆಂಟ್ ಶೀಟ್ ಹಾಕುತ್ತಿದ್ದ ಸಮಯ 11.30 ಗಂಟೆಗೆ  ಅಬೂಬಕ್ಕರ್ ಸಿದ್ದಿಕ್ ರವರು ಸಿಮೆಂಟ್ ಶೀಟ್ ನ ಮೇಲೆ ಕಾಲಿಟ್ಟಾಗ ಸಿಮೆಂಟ್ ಶೀಟ್ ನ ಮಧ್ಯ ಭಾಗ ತುಂಡಾಗಿ ಫ್ಲೈವುಡ್ ಫ್ಯಾಕ್ಟರಿಯ ಸ್ಟೀಮ್ ಪೈಪ್ ನ ಮೇಲೆ ಬಿದ್ದು, ಅವರ ಜೊತೆಯಲ್ಲಿ ಪಿರ್ಯಾದಿದಾರರು ಕೂಡಾ ಕೆಳಗೆ ಬಿದ್ದು, ಪಿರ್ಯಾದಿದಾರರ ಎಡಕೈಗೆ ಗುದ್ದಿದ ಗಾಯವಾಗಿರುವುದಾಗಿದೆ. ಅಬೂಬಕ್ಕರ್ ಸಿದ್ದಿಕ್ ರವರಿಗೆ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವುಂಟಾಗಿದ್ದು, ಪಿರ್ಯಾದಿದಾರರನ್ನು ಮತ್ತು ಅಬೂಬಕ್ಕರ್ ಸಿದ್ದಿಕ್ ರವರನ್ನು ಫ್ಲೈವುಡ್ ಫ್ಯಾಕ್ಟರಿಯ ಕೆಲಸದವರು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರು ಅಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಅಬೂಬಕ್ಕರ್ ಸಿದ್ದಿಕ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಸುಮಾರು 3.30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ  68-2021ಕಲಂ 304(ಎ) ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ದಿನಾಂಕ 02.06.2021  ರಂದು ಬೆಳಿಗ್ಗೆ  09.00 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂದಿನಗರ ಎಂಬಲ್ಲಿ ಬಿ.ಕೆ.ಸಿ ಜನರಲ್ ಸ್ಟೋರ್ ಅಂಗಡಿಯ ಮಾಲಕನಾದ  ಜಾಫರ್ ಎಂಬವರು ಮಾನ್ಯ ಜಿಲ್ಲಾ ದಂಡಾಧಿಕಾರಿಯವರು ಕೋವಿಡ್-19‌ ನಿಮಿತ್ತ ಜ್ಯಾರಿಗೊಳಿಸಿದ ಅದೇಶವನ್ನು ಉಲ್ಲಂಘಿಸಿ ತನ್ನ ಬಾಬ್ತು ಅಂಗಡಿಯ ಬಾಗಿಲನ್ನು ತೆಗೆದು ಪ್ಲಾಸ್ಟೀಕ್ ಮತ್ತು ಸ್ಟೀಲ್ ವಸ್ತುಗಳನ್ನು ಮಾರಾಟ ನಡೆಸಿ ಮಾನ್ಯ ಜಿಲ್ಲಾದಿಕಾರಿಯವರ ಅದೇಶ ಹಾಗೂ ರೋಗ ಪ್ರಸರಣೆ ಕಾಯ್ದೆಯಡಿ ಅಪರಾಧ ಎಸಗಿದ್ದು, ಈ ಬಗ್ಗೆ ಸುಳ್ಯ ಠಾಣಾ ಅ.ಕ್ರ 39/2021 ಕಲಂ: 269  ಐಪಿಸಿ & ಕಲಂ 5(4) THE KARNATAKA EPIDEMIC DISEASES ACT 2020ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-06-2021 10:44 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080