ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 2

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ 353, 499, 500, r/w 34 ಐಪಿಸಿ,ಕಲಂ: 3(1),(Q) SC/ST Amandment Act -2015   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ 02-07-2021 ರಂದು ಪೊಲೀಸ್ ಉಪನಿರೀಕ್ಷಕರು ಸುಬ್ರಹ್ಮಣ್ಯ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಜೊತೆ ನಾಲ್ಕೂರು ಗ್ರಾಮದ ಮಲ್ಲಾರ ಎಂಬಲ್ಲಿ ನಡುಗಲ್ಲು ಹರಿಹರ ಪಲ್ಲತಡ್ಕ ರಸ್ತೆಯಯಲ್ಲಿ ನಿಂತುಕೊಂಡಿದ್ದ ಸಮಯ  ನಡುಗಲ್ಲು ಕಡೆಯಿಂದ ಇನೋವಾ ವಾಹನವೊಂದು ಬಂದಿದ್ದು ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಚಾಲಕನು ನಿಲ್ಲಿಸಿದ್ದು ಇನೋವಾ ವಾಹನವನ್ನು  ಪಂಚರ ಸಮಕ್ಷಮ ಪರಿಶಿಲಿಸಲಾಗಿ  ಇನೋವಾ ವಾಹನದಲ್ಲಿ ಹಿಂದುಗಡೆ ಸೀಟಿನ  ಅಡಿಯಲ್ಲಿ 9 ಮದ್ಯ ತುಂಬಿದ  ಮದ್ಯದ ಬಾಕ್ಸ್ ಗಳು, ಇದ್ದು ಕೇಳಲಾಗಿ ನಾವು ಸುಳ್ಯದ ಗಾಂದಿ ನಗರದ ಪ್ರಕಾಶ್ ವೈನ್ ಶಾಪ್ ನಿಂದ ಖರೀದಿಸಿ ಮಾರಾಟ ಮಾಡಿ ಲಾಭ ಗಳಿಸುವರೇ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ ಮೇರೆಗೆ ಇನೋವಾ ವಾಹನದ ನಂಬರ್‌‌ನ್ನು ಪರಿಶೀಲಿಸಲಾಗಿ KA 19 MJ 7203 ನೇ ಆಗಿದ್ದು ವಾಹನವನ್ನು ಚಲಾಯಿಸುತ್ತಿದ್ದ ಚಾಲಕ ಮತ್ತು  ಇತರರ ಹೆಸರು ವಿಳಾಸ  ಕೇಳಲಾಗಿ  ಚಾಲಕನು   ಕಾರು ತನ್ನದೇ ಎಂದು ತನ್ನ ಹೆಸರು 1.ಶರತ್ ಪ್ರಾಯ 24 ವರ್ಷ 2.  ಕರುಣಾಕರ ಪ್ರಾಯ 21 ವರ್ಷ 3. ಹವೀನ್ ಪ್ರಾಯ 22 ವರ್ಷ 4.  ಮನು ಪಿ ಪ್ರಾಯ 24 ವರ್ಷ ಎಂಬುದಾಗಿ ತಿಳಿಸಿದ ಮೇರೆಗೆ ಸದ್ರಿ ಬಾಕ್ಸ್ ನಲ್ಲಿದ್ದ  ಮದ್ಯವನ್ನು  ಬಾಕ್ಸ್ ತೆರೆದು ನೋಡಲಾಗಿ  ಒಂದು ಬಾಕ್ಸ್ ನಲ್ಲಿ 180 ಎಂ.ಎಲ್ ನ  48 ಸ್ಯಾಚೆಟ್ ಗಳಿದ್ದು  ಒಟ್ಟು 9 ಬಾಕ್ಸ್ ಗಳಲ್ಲಿ 432 ಸ್ಯಾಚೆಟ್ ಗಳಿರುವುದು  ಕಂಡು ಬಂದಿರುತ್ತದೆ. ಮದ್ಯ ಸಾಗಾಟ ಮಾಡುವರೇ ಉಪಯೋಗಿಸಿದ ಕಾರಿನ ಬೆಲೆ ರೂ 6,00,000/  ಲಕ್ಷ ಆಗಬಹುದು.  ಈ ಮದ್ಯದ ಸ್ಯಾಚೆಟ್  ನ  ಒಂದರ ಬೆಲೆ ರೂ 80/ ಆಗಿದ್ದು  ಒಟ್ಟು ಬೆಲೆ ರೂ  34,560/  ಆಗಬಹುದು. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ ಅ.ಕ್ರ: 41-2021 U/s 32,34,38 (A),43 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸತೀಶ ಬಿ ಪ್ರಾಯ 30 ವರ್ಷ ತಂದೆ ಸೋಂಪ ಬಿಳಿಯಾರು ಮನೆ ಅರಂತೋಡು ಗ್ರಾಮ ಸುಳ್ಯ ತಾಲೂಕು ರವರ ತಂದೆ ಸೋಂಪ (58)  ಎಂಬವರು  ಮದ್ಯಪಾನ ಮಾಡುವ ಅಬ್ಯಾಸವಿದ್ದು ಕೆಲಸವಿಲ್ಲದೇ ಮಾನಸಿಕವಾಗಿ ನೊಂದಿದ್ದು ದಿನಾಂಕ 01.07.2021 ರಂದು ರಾತ್ರಿ 20.00 ಗಂಟೆಗೆ ನನ್ನ ತಂದೆಯವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸುಳ್ಯ ತಾಲೂಕು ಅರಂತೋಡು ಗ್ರಾಮದ ಕುರುಂಜಿಮನೆ ರೋಶನ್‌ರವರ ಮನೆಗೆ ಹೋಗಿದ್ದು ದಿನಾಂಕ 02.07.2021 ಸಮಯ ಬೆಳಿಗ್ಗೆ 07.00 ರಂದು ರೋಶನ್  ರವರ ಚಿಕ್ಕಪ್ಪ ಬಾಲಚಂದ್ರರವರು ಪಕ್ಕದ ಕೊಟ್ಟಿಗೆಯಲ್ಲಿ ಹೋಗಿ ನೋಡಿದಾಗ ಪಿರ್ಯಾದಿದಾರರ ತಂದೆಯವರು ಕೊಟ್ಟಿಗೆಯ ಅಡ್ಡಕ್ಕೆ ಬಟ್ಟೆಯಿಂದ ನೇಣು ಬಿಗಿದು ಕೊಂಡು ನೇತಾಡುವ ಸ್ಥಿತಿಯಲ್ಲಿದ್ದುದನ್ನು ನೋಡಿ ಪಿರ್ಯಾದದಾರರಿಗೆ ತಿಳಿಸಿದ್ದು ಹೋಗಿ ನೋಡಿದ್ದು ಮೃತ ಪಟ್ಟಿರುತ್ತಾರೆ. ಪಿರ್ಯಾದಿದಾರರ ತಂದೆಯವರು ಮಾನಸಿಕವಾಗಿ ಅಸ್ವಸ್ಥರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 25/2021 ಕಲಂ 174ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-07-2021 01:10 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080