ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಸೈಪುದ್ದೀನ್ ಪ್ರಾಯ : 23 ವರ್ಷತಂದೆ: ಸಲೀಂವಾಸ: ಅಮ್ಮೆಮಾರ್ ಮನೆ,  ಪುದು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 02-09-2021 ರಂದು ಸಮಯ ಸುಮಾರು 14:15 ಗಂಟೆಗೆ  ಬಂಟ್ವಾಳ ತಾಲೂಕು  ಬಿ ಮೂಡಾ ಗ್ರಾಮದ  ತಲಪಾಡಿ ಮಸೀದಿ ಬಳಿ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ  ಬಿ.ಸಿ.ರೋಡ್ ಕಡೆಯಿಂದ KA 19 MB 6250 ನೇ ಟಿಪ್ಪರ್ ಲಾರಿಯನ್ನು ಅದರ  ಚಾಲಕ ಅತೀ ವೇಗ ಅಜಾಗರೂಕಯತೆ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಹೆದ್ದಾರಿ ಯಿಂದ ಹಳೆ ರಸ್ತೆ ಕಡೆಗೆ ಒಮ್ಮಲೇ ತಿರುಗಿಸಿದಾಗ ಮಂಗಳೂರು ಕಡೆಯಿಂದ ಬರುತ್ತಿದ್ದ KA 20 EH 7009 ನೇ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿ ಬೈಕ್ ಸವಾರರುಗಳು ಬೈಕ್ ನೊಂದಿಗೆ ರಸ್ತೆಗೆ ಬಿದ್ದು  ಮೋಟರ್ ಸೈಕಲ್ ಸವಾರ  ಹರ್ಷದ್ ರವರಿಗೆ  ಎಡಕೈಗೆ ,ದವಡೆಗೆ,ಮುಖಕ್ಕೆ, ಹಲ್ಲುಗಳಿಗೆ ಗಾಯವಾಗಿದ್ದು,ಸಹಸವಾರ ಹಝೀಮ್ ರವರಿಗೆ  ತಲೆಗೆ  ರಕ್ತಗಾಯ ಕೈಕಾಲುಗಳಿಗೆ ತರಚಿದ ಗಾಯಗಳಾಗಿ.ಗಾಯಾಳುಗಳು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 86/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 02.09.2021 ರಂದು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ 79/2021 u/s 04, 06 ಪೋಕ್ಸೊ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:02-09-2021 ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ ಕೆ ರವರು  ಸಿಬ್ಬಂದಿರವರುಗಳೊಂದಿಗೆ ಸಮಯ ರಾತ್ರಿ 08-30 ಗಂಟೆಯ ಸಮಯಕ್ಕೆ ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ಕೆ.ಎ. 18 ಸಿ 3170 ನೇ  ನೊಂದಣಿ ಸಂಖ್ಯೆಯ TATA-ACE ವಾಹನವನ್ನು ಪರಿಶೀಲಿಸಿದಾಗ ವಾಹನದ ಹಿಂಬದಿಯಲ್ಲಿ 1 ಕೋಣ 2 ಎಮ್ಮೆಗಳನ್ನು   ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ಸದ್ರಿ ಜಾನುವಾರುಗಳನ್ನು ಸಾಗಟ ಮಾಡಲು ಪರವಾನಿಗೆಯ ಬಗ್ಗೆ ವಿಚಾರಿಸಲಾಗಿ ಆರೋಪಿಗಳು ಯಾವುದೇ ದಾಖಲಾತಿಗಳನ್ನು ಹಾಜರು ಪಡಿಸಿರುವುದಿಲ್ಲ. ಸದ್ರಿ ಜಾನುವಾರುಗಳನ್ನು ಆರೋಪಿಗಳು ಕೊಂದು ಮಾಂಸಮಾಡಿ ಅದರ ಮಾಂಸವನ್ನು ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಜಾನುವಾರು ಸಾಗಾಟ ಮಾಡುವುದು ಕಂಡು ಬಂದಿರುವುದರಿಂದ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 50/2021 ಕಲಂ:5,7,11  ಕರ್ನಾಟಕ ಗೋ ಹತ್ಯೆ ನಿಷೇಧಕಾಯಿದೆ ಮತ್ತು ಜಾನುವಾರು  ಸಂರಕ್ಷಣಾ  ಕಾಯಿದೆ -2020 ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರೀಶ ಪ್ರಾಯ 36 ವರ್ಷ ತಂದೆ ಸೀನ ಪೂಜಾರಿ ವಾಸ ಪೊಯ್ಯಮೂಲೆ ಮನೆ,ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಾಯಿ ಭವಾನಿ ಪ್ರಾಯ 65 ವರ್ಷ ರವರು ಸುಮಾರು 2 ವರ್ಷಗಳಿಂದ ಯಾರ ಜೊತೆಯಲು ಮಾತನಾಡದೆ ಒಬ್ಬರೆ ಒಂಟಿಯಾಗಿರುತ್ತಿದ್ದರು. ದಿನಾಂಕ 01.09.2021 ರಂದು ರಾತ್ರಿ 10.00 ಗಂಟೆಗೆ ಊಟ ಮಾಡಿ ಅವರು ಮಲಗುವ ಕೋಣೆಯಲ್ಲಿ ಮಲಗಿರುತ್ತಾರೆ, ಮಧ್ಯ ರಾತ್ರಿ ಸಮಯ ಸುಮಾರು 12.00 ಗಂಟೆಗೆ ಪಿರ್ಯಾಧಿದಾರರ ತಾಯಿ ಹೊರಗೆ ಹೋಗಿ ವಾಂತಿ ಮಾಡುವ ಶಬ್ದ ಕೇಳಿ ಪಿರ್ಯಾಧಿಯ ತಂದೆ ಪಿರ್ಯಾಧಿಯನ್ನು ಎಬ್ಬಿಸಿದ್ದು ಹೋಗಿ ನೋಡಲಾಗಿ ತಾಯಿ ಯಾವುದೋ ವಿಷ ಪದರ್ಥ ಸೇವಿಸಿ ವಾಂತಿ ಮಾಡುತ್ತಿರುವಂತೆ ಕಂಡು ಬಂದಿರುತ್ತದೆ, ಕೂಡಲೇ ವಾಹನ ಒಂದರಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಿನಾಂಕ 02.09.2021 ರಂದು ಮಧ್ಯ ರಾತ್ರಿ ಸಮಯ ಸುಮಾರು 01.00 ಗಂಟೆಗೆ ಕರೆದುಕೊಂಡು ಹೋಗಿದ್ದು ಪರಿಕ್ಷೀಸಿದ ವೈದ್ಯರು ಚಿಕಿತ್ಸೆ ನೀಡಿ ಬಳಿಕ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಂತೆ ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಸಮಯ ಸುಮಾರು 03.00 ಗಂಟೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು ಬೆಳಗಿನ ಜಾವ ಸಮಯ ಸುಮಾರು 07.26 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಪಿರ್ಯಾಧಿದಾರರ ತಾಯಿ ಭವಾನಿಯವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 24/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-09-2021 10:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080