ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೈದರಾಲಿ ಸಿ.ಎಮ್ ಪ್ರಾಯ:31 ವರ್ಷ, ತಂದೆ: ಉಮ್ಮರ್ ಸಿ.ಎಮ್ ವಾಸ: ಮರುವಂತಿಲ  ಮನೆ,  ಬಂಟ್ರಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ: 31.10.2021 ರಂದು ತನ್ನ ಬಾಬ್ತು ಬಾಡಿಗೆ ಆಟೋರಿಕ್ಷಾದಲ್ಲಿ ಪೆರಾಬೆ ಎಂಬಲ್ಲಿಗೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗಿ ನಂತರ ಪ್ರಯಾಣಿಕರನ್ನು ಬಿಟ್ಟು ಪುನಃ ಕಡಬ ಕಡೆಗೆ ಬರುವರೇ ಪೆರಾಬೆಯಿಂದ ಕಡಬ ಕಡೆಗೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿರುವಾಗ ಕಡಬ ತಾಲೂಕು ಕುಂತೂರು ಗ್ರಾಮ ಕುಂತೂರು ಪದವು ಎಂಬಲ್ಲಿಗೆ ಸಮಯ ಸಂಜೆ 05.30 ಗಂಟೆಗೆ ತಲುಪಿದಾಗ ಪಿರ್ಯಾದುದಾರರ ಎದುರುಗಡೆಯಿಂದ KA-21 EB-8208ನೇ ಮೋಟಾರ್‌ ಸೈಕಲ್‌ನಲ್ಲಿ ಸವಾರನೊಬ್ಬನು ಹೋಗುತ್ತಿರುವಾಗ ರಸ್ತೆಯಲ್ಲಿ  ಕಾಡು ಪ್ರಾಣಿಯೊಂದು ಅಡ್ಡ ಬಂದರಿಂದ ಸವಾರನು ತೀರಾ ಅಜಾಗರೂಕತೆಯಿಂದ ಮೋಟಾರ್‌ ಸೈಕಲ್‌ನ್ನು  ರಸ್ತೆಯ ಎಡಬದಿಗೆ ಚಲಾಯಿಸಿದ ಪರಿಣಾಮ ಸವಾರನು  ಮೊಟಾರ್‌ ಸೈಕಲ್‌ ಸಮೇತಾ ರಸ್ತೆಯ ಬದಿಯಲ್ಲಿರುವ ನೀರು ಹರಿಯುವ ಕಣಿಗೆ ಬಿದ್ದದ್ದನ್ನು ಕಂಡ ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸವಾರನನ್ನು ಉಪಚರಿಸಿ ನೋಡಲಾಗಿ ಸವಾರನು ಹಸೈನಾರ್‌  ಎಂಬಾತನಾಗಿದ್ದು ಆತನಿಗೆ ಸೊಂಟಕ್ಕೆ ಗುದ್ದಿದ ಗಾಯ ಮತ್ತು ತರಚಿದ ಗಾಯವಾಗಿರುತ್ತದೆ  ನಂತರ ಪಿರ್ಯಾದುದಾರರು ರಸ್ತೆಯಲ್ಲಿ ತನ್ನ ಆಟೋ ರಿಕ್ಷಾ ವಾಹನದಲ್ಲಿಯೇ ಕಡಬ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ವಾಹನದಲ್ಲಿ  ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೊಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 91/2021 ಕಲಂ. 279.337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ  ಬಿ ಹಸೈನಾರ್, ಪ್ರಾಯ 48 ವರ್ಷ, ತಂದೆ: ಅಬ್ದುಲ್ ರಹಿಮಾನ್, ವಾಸ: 1-31, ಭಕ್ತಕೋಡಿ ಮನೆ, ಸರ್ವೆ ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 01-11-2021 ರಂದು 19-30 ಗಂಟೆಗೆ ಆರೋಪಿ ಮೋಟಾರು ಸೈಕಲ್ ಸವಾರ ಹೊನ್ನಪ್ಪರವರು KA-21-K-7675ನೇ ನೋಂದಣಿ ನಂಬ್ರದ ಮೋಟಾರು ಸೈಕಲಿನಲ್ಲಿ ಪ್ರಥ್ವಿಕ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮುಂಡೂರು-ಮುಕ್ರಂಪಾಡಿ ರಸ್ತೆಯಲ್ಲಿ ಮುಂಡೂರು ಕಡೆಯಿಂದ ಮುಕ್ರಂಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಮೋಟಾರು ಸೈಕಲನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಉರುವಲು ಕಟ್ಟಿಗೆಯ ಲೋಡ್ ಹೊಂದಿದ್ದ ಲಾರಿಯನ್ನು ಫಿರ್ಯಾದಿದಾರರು ರಸ್ತೆ ಬದಿಯಲ್ಲಿ ನಿಲ್ಲಿಸಿ ದುರಸ್ಥಿ ಮಾಡುತ್ತಿದ್ದ ಕೆಎ-21-5956ನೇ ಲಾರಿಯ ಹಿಂಭಾಗಕ್ಕೆ  ಅಪಘಾತವಾಗಿ ಹೊನ್ನಪ್ಪರವರ ಮೂಗಿಗೆ ಹಾಗೂ ಮೇಲ್ತುಟಿಗೆ ಮತ್ತು ಪ್ರಥ್ವಿಕ್ ರವರ ಎಡ ಕಣ್ಣಿನ ಬಳಿ ರಕ್ತಗಾಯವಾದವರನ್ನು ಅಬ್ದುಲ್ ರಜಾಕ್ ರವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಪುತ್ತೂರು ಸಂಚಾರ ಠಾಣೆ  ಅ.ಕ್ರ:  133/2021 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ ಎಸ್,ಪ್ರಾಯ: 50 ವರ್ಷ, ಗಂಡ:   ಎನ್ ಎಲ್ ಈಶ್ವರ ವಾಸ: ಪುರ್ಲು ಮಕ್ಕಿ  ಮನೆ, ಗುತ್ತಿಗಾರು   ಗ್ರಾಮ, ಸುಳ್ಯ ತಾಲೂಕು, ದ.ಕ ಜಿಲ್ಲೆ   ಎಂಬವರ ದೂರಿನಂತೆ ದಿನಾಂಕ: 25.10.2021 ರಂದು ಸಂಜೆ 7:00 ಗಂಟೆಯ ಸಮಯಕ್ಕೆ ವಳಲಂಬೆ ಕುವ್ವೆಕೋಡಿಯ ಸೋಮಪ್ಪ ಗೌಡ ಮತ್ತು ಅವನ ಮಗನಾದ ವೇಣುಗೋಪಾಲ ಎಂಬವರು ಪಿರ್ಯಾದಿಯವರ ತೋಟದಿಂದ ಕಳ್ಳತನ ಮಾಡಿದ ಸುಮಾರು 5000 ಹಣ್ಣಡಿಕೆಗಳನ್ನು ಗುತ್ತಿಗಾರು ಗ್ರಾಮದ ಅಡಿಕೆ ವ್ಯಾಪಾರಿ ಮೂಸ ಕುಂಞರವರು ತಮಗೆ ಮಾರಾಟ ಮಾಡಿದ ಬಗ್ಗೆ ತಿಳಿಸಿರುತ್ತಾರೆ. ತದನಂತರ ದಿನಾಂಕ: 26-10-2021 ರಂದು ಇದೇ ತೋಟದಿಂದ ಸುಮಾರು 2000 ಹಣ್ಣಡಿಕೆಗಳನ್ನು ಕಳ್ಳತನ ಮಾಡಿದ್ದು, ಪಿರ್ಯಾದಿದಾರರು ನೋಡಿ ಸದ್ರಿಯವರನ್ನು ತಡೆದು ನಿಲ್ಲಿಸಲು ನೋಡದಾಗ ಅವರು “ಹತ್ತಿರ ಬಂದರೆ ಕಡಿದು ಕೊಲ್ಲುವುದಾಗಿ ಬೆದರಿಕೆ ಒಡ್ಡಿ ಹಣ್ಣಡಿಕೆಗಳನ್ನು ತೆಗೆದುಕೊಂಡು ಹೋಗಿದ್ದು. ಪುನಃ ದಿನಾಂಕ: 27-10-2021 ರಂದು ರಾತ್ರಿ 8:00 ಗಂಟೆಗೆ ಸುಮಾರು 3000 ಹಣ್ಣಡಿಕೆಗಳನ್ನು ಹಿಮಕರವರ ಓಮ್ನಿ ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಪಿರ್ಯಾದಿದಾರರು ಮತ್ತು ಅವರ ಗಂಡ ಎನ್ ಎಲ್ ಈಶ್ವರರವರು ವಿಚಾರಿಸಿದಾಗ ಈ ಮೂವರು ಮಾರಕಾಸ್ತ್ರಗಳಿಂದ ಬೆದರಿಕೆ ಒಡ್ಡಿರುತ್ತಾರೆ. ಮತ್ತು ಅಡಿಕೆ ಕೊಯ್ಯುವ ಕತ್ತಿಯಿಂದ ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಲು ಯತ್ನಿಸಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ : 78-2021 ಕಲಂ: 379, 506  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಪ್ಪಿನಂಗಡಿ ಪೊಲೀಸ್ ಠಾಣೆ :ದಿನಾಂಕ :02-11-2021 ರಂದು  ಬಂಟ್ವಾಳ ತಾಲೂಕು ಬಿಳಿಯೂರು ಎಂಬಲ್ಲಿರುವ ವಿಷ್ಟು ಮೂರ್ತಿ  ಶಾಮಿಯಾನ  ಎಂಬ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ  ದಾಳಿ ನಡೆಸಿದಾಗ ಸದ್ರಿ  ಅಂಗಡಿಯಲ್ಲಿದ್ದ  ವ್ಯಕ್ತಿ  ಓಡಿ ಹೋಗಿದ್ದು ವಿಷ್ಟುಮೂರ್ತಿ ಶ್ಯಾಮಿಯಾನದ ಶೆಟರ್ ನ  ಬಳಿ ಹುಡುಕಾಡಿದಾಗ ಒಂದು ಕಪ್ಪು ತೊಟ್ಟೆಯಲ್ಲಿ ನೋಡಲಾಗಿ ಅದರಲ್ಲಿ 90 ಎಂ.ಎಲ್ ನ ಮೈಸೂರ್ ಲ್ಯಾನ್ಸರ್ ಎಂದು ಬರೆದ ಲೇಬಲ್ ಇರುವ ಸಾಚೇಟ್ ಪ್ಯಾಕೇಟ್ 48 ಪ್ಯಾಕೇಟ್ ಗಳಿದ್ದು  ಇದರ ಒಟ್ಟು ಮೌಲ್ಯ 1,686.24ರೂ ಆಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 124/2021 ಕಲಂ:32 ಕರ್ನಾಟಕ ಅಬಕಾರಿ ಕಾಯ್ದೆ   ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಮೋದ ಯು ಡಿ (30) ತಂದೆ: ದೇರಣ್ಣ ಗೌಡ ವಾಸ: ಉಳುವರು ಮನೆ, ಅರಂತೋಡು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ ದೇರಣ್ಣಗೌಡ (55) ಎಂಬವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಕುಡಿತದ ಚಟವನ್ನು ಸಹ ಹೊಂದಿದ್ದವರು  ದಿನಾಂಕ 24.10.2021 ರಂದು ಬೆಳಗ್ಗೆ 04.00 ಗಂಟೆಯ ತಮ್ಮ ಬಾಬ್ತು ಮನೆಯಾದ ಸುಳ್ಯ ತಾಲೂಕು ಅರಂತೋಡು ಗ್ರಾಮದ ಉಳುವರು ಎಂಬಲ್ಲಿಂದ ಮನೆಬಿಟ್ಟು ಹೋದವರನ್ನು ಪಿರ್ಯಾದುದಾರರ ಚಿಕ್ಕಪ್ಪನ ಮಗ ಚೇತನ್ ಮತ್ತು ಇತರರು ಹುಡುತ್ತಿರುವ ಸಮಯ ದಿನಾಂಕ 02.11.2021 ರಂದು  ಬೆಳಿಗ್ಗೆ 11:00 ಗಂಟೆಗೆ ಸುಳ್ಯ ತಾಲೂಕು ತೋಡಿಕಾನ ಗ್ರಾಮದ ಕೊಕ್ಕೊ ಕೂಪಿನ ಬಳಿಯಲ್ಲಿ ದೇರಣ್ಣಗೌಡರ  ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿದೆ, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಯುಡಿಆರ್ ನಂ: 49/2021 ಕಲಂ: 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪರಮೇಶ್ವರ ಪ್ರಾಯ :26 ವರ್ಷ ತಂದೆ; ಲಿಂಗಪ್ಪ ಶೆಟ್ಟಿಗಾರ್ ವಾಸ;  ಕುಜಿಂಗೇರಿ  ಮನೆ, ತಾಳಿಪಾಡಿ ಗ್ರಾಮ,ಪುನರೂರುಮಂಗಳೂರು ತಾಲೂಕು  ಎಂಬವರ ದೂರಿನಂತೆ ಪಿರ್ಯಾದುದಾರರ  ತಂದೆ ಪ್ರಾಯಸ್ಥರಾಗಿದ್ದು ಮನೆಯಲ್ಲಿಯೇ ಇದ್ದವರು ದಿನಾಂಕ: 01-11-2021 ರಂದು ಬೆಳಿಗ್ಗೆ 8.00 ಗಂಟೆಗೆ ತುಂಬೆ ಮಜಿ ಎಂಬಲ್ಲಿರುವ ಪಿರ್ಯಾದುದಾರರ ಅಮ್ಮನ ಅಕ್ಕನ ಮನೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟು ಹೋಗಿದ್ದವರು. ದಿನಾಂಕ:02.11.2021 ರಂದು ಬೆಳಿಗ್ಗೆ 10.30 ಗಂಟೆಗೆ ವಾಪಾಸು ಮನೆಗೆ ಬರುವರೇ ಸಂಬಂದಿ ಸುಮತಿರವರ ಜೊತೆ ನಡೆದುಕೊಂಡು ಬರುತ್ತಿರುವಾಗ ತುಂಬೆ ಗ್ರಾಮದ ಮಜಿ ಶಾಲೆ ಹತ್ತಿರ ತಲುಪಿದಾಗ ಪಿರ್ಯಾದುದಾರರ ತಂದೆಯವರು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದವರನ್ನು ಒಂದು ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿದವರನ್ನು ವೈಧ್ಯರು ಪರೀಕ್ಷೀಸಿ 11.20 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿ ದೊಡ್ಡಮ್ಮನ ಮಗನಾದ ರಾಜೇಶರವರು ಪಿರ್ಯಾದುದಾರರಿಗೆ 11.20 ಗಂಟೆಗೆ ಫೋನ್ ಮಾಡಿ ತಿಳಿಸಿರುವುದಾಗಿದೆ. ಪಿರ್ಯಾದುದಾರರು ಕೂಡಲೇ ಮನೆಯಿಂದ ಹೊರಟು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದು ನೋಡಿದಾಗ ತಂದೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 45-2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-11-2021 01:12 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080