ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪುರುಷ.ಎನ್.ಸಾಲಿಯಾನ್ 55 ವರ್ಷ ತಂದೆ: ನಾರಾಯಣ ಅಮಿನ್ ವಾಸ: ನೆತ್ರಕೆರೆ ಮನೆ, ಕಳ್ಳಿಗೆ  ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 01-12-2021 ರಂದು KA-19-AD-2587 ನೇ ಖಾಸಾಗಿ ಬಸ್ಸಿನಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಾ ಬಂಟ್ವಾಳ ತಾಲೂಕು ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿಗೆ ತಲುಪಿದಾಗ ಬಸ್ಸನ್ನು ಅದರ ಚಾಲಕ ನದೀಮ್ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಪವನ್ ಎಂಬವರು ಬಸ್ಸಿನ ಹಿಂಭಾಗದ ಬಾಗಿಲಿನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಹಣೆಗೆ, ಕೆನ್ನೆಗೆ, ಮುಖಕ್ಕೆ, ಮೈಕೈಗೆ ಗುದ್ದಿದ ಹಾಗೂ ರಕ್ತ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 132/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ   ರಾಜೇಶ್ ಕೆ ಪ್ರಾಯ ವರ್ಷ ತಂದೆ: ಪಿ.ವಿ ಕುಂಞ ರಾಮನ್ ಸಹಾಯಕ ಇಂಜಿನೀಯರ್ ಕಾ ಮತ್ತು ಪಾ ಶಾಖೆ ಪುತ್ತೂರು ನಗರ ಪುತ್ತೂರು ರವರು ನೀಡಿದ ದೂರಿನಂತೆ ದಿನಾಂಕ: 02.12.2021 ರಂದು ಬೆಳಿಗ್ಗೆ 4.30 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಕೆಎ 19 ಎಬಿ 0563 (ಟಾಟಾ 407)ನೇ ವಾಹನದ ಚಾಲಕನಾದ ಜನಾರ್ಧನ ಎಂಬವರು  ಮೆಸ್ಕಾಂ ಇಲಾಖೆಯ ಹೈ ಟೆನ್ಸನ್ ವಿದ್ಯುತ್ ಕಂಬಕ್ಕೆ  ಡಿಕ್ಕಿ ಹೊಡೆದು  ವಿದ್ಯುತ್ ಕಂಬವನ್ನು ಸಂಪೂರ್ಣ ಜಖಂ ಗೊಳಿಸಿರುತ್ತಾರೆ. ಇದರಿಂದಾಗಿ ಮೆಸ್ಕಾಂ ಇಲಾಖೆಗೆ 45,000/- ರೂ ನಷ್ಟ ಉಂಟು ಮಾಡಿರುತ್ತಾನೆ. ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಸಂಭವಿಸಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಿರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 103/2021  ಕಲಂ: 279, 427 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಸ್ಮಾಯಿಲ್ ಕೆ. ಪ್ರಾಯ:21 ವರ್ಷ, ತಂದೆ: ಆದಂ, ವಾಸ: ಕೈಕಾರ ಮನೆ, ಒಳಮೊಗ್ರು ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ: 02.12.2021 ರಂದು ಅವರ ಬಾಬ್ತು ಆಟೋರಿಕ್ಷಾ ನಂಬ್ರ ಕೆಎ-21-ಸಿ-0134 ನೇದರಲ್ಲಿ ಪುತ್ತೂರಿಗೆ ಬಾಡಿಗೆಗೆ ಹೋದವರು ಬಳಿಕ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗುವರೇ ಆಟೋರಿಕ್ಷಾವನ್ನು ಪುತ್ತೂರಿನಿಂದ ಪಾಣಾಜೆಗೆ ಹೋಗುವ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕಾಪಿಕಾಡ್ ಕ್ರಾಸ್ ತಲಪುತ್ತಿರುವಂತೆ ಎದುರಿನಿಂದ ಅಂದರೆ ಪಾಣಾಜೆ ಕಡೆಯಿಂದ ಸೆಂಟ್ಯಾರು ಕಡೆಗೆ ಲಾರಿಯನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಆಟೋರಿಕ್ಷಾಗೆ ಎದುರಿನಿಂದ ಢಿಕ್ಕಿಯನ್ನುಂಟು ಮಾಡಿದ ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾದಲ್ಲಿ ಸಿಲುಕಿಕೊಂಡ ಫಿರ್ಯಾದಿದಾರರನ್ನು ಅಲ್ಲಿ ಸೇರಿದ ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ನೋಡಲಾಗಿ, ಫಿರ್ಯಾದಿದಾರರ ಎಡ ಕಣ್ಣಿನ ಮೇಲ್ಭಾಗ ಗುದ್ದಿದ ಗಾಯ ಹಾಗೂ ಬಲ ಭುಜಕ್ಕೆ ಗುದ್ದಿದ ಗಾಯವಾಗಿದ್ದಲ್ಲದೇ ಫಿರ್ಯಾದಿದಾರರ ಆಟೋರಿಕ್ಷಾ ಸಂಪೂರ್ಣ ಜಖಂ ಗೊಂಡಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 107/2021 ಕಲo: 279, 337 ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪುತ್ತೂರು ನಗರ ಪೊಲೀಸ್‌ ಠಾಣಾ ಸಹಾಯಕ ಪೊಲೀಸ್‌ ಉಪನಿರೀಕ್ಷಕರು ದಿನಾಂಕ: 02.12.2021 ರಂದು ಕೆಎ,19.ಜಿ.418 ನೇ ಇಲಾಖಾ ಬೈಕಿನಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 09.20 ಗಂಟೆಗೆ ಪುತ್ತೂರು ತಾಲೂಕು, ಪುತ್ತೂರು ಕಸಬಾ ಗ್ರಾಮದ, ಪುತ್ತೂರು ಬಸ್ ನಿಲ್ದಾಣದ ಬಳಿ, ತಲುಪುತ್ತಿದ್ದಂತೆ ಸುಮಾರು 6-7  ಮಂದಿ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಪರಸ್ಪರ ದೂಡಾಡಿಕೊಂಡು, ಹೊಯಿ ಕೈ ನಡೆಸುತ್ತಾ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿರುವುದು ಕಂಡು ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಕಲಹವನ್ನುಂಟು ಮಾಡಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಂಭವ ಇರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ  ಹೋಗಿ ಸದ್ರಿ ಸುಮಾರು 6-7  ವ್ಯಕ್ತಿಗಳ ಹೆಸರು ವಿಳಾಸ ತಿಳಿಯಲಾಗಿ 1) ಎಂ ಹ್ಯಾರೀಸ್‌  ಜೆಡೆಕಲ್ಲು ಕಾಲೇಜು 2) ಮೊಹಮ್ಮದ್‌ ಅದಿಲ್‌ ಜೆಡೆಕಲ್ಲು ಕಾಲೇಜು  3) ಇರ್ಫಾನ್‌ ಜೆಡೆಕಲ್ಲು ಕಾಲೇಜು 4) ಮೊಹಮ್ಮದ್‌ ಮುಸ್ತಾಫ ಜೆಡೆಕಲ್ಲು ಕಾಲೇಜು 5) ಮೊಹಮ್ಮದ್‌ ಅಸ್ಪಾಕ್‌ 6) ನಿತೇಶ್‌ ಮತ್ತು ಇತರರು ಇರುವುದುದಾಗಿದೆ.  ಘಟನೆಯ ಕುರಿತು  ಸಾರ್ವಜನಿಕರಲ್ಲಿ ವಿಚಾರಿಸಲಾಗಿ ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ವಿಚಾರದಲ್ಲಿ ತಕರಾರು ನಡೆದು ಜಗಳ ಮಾಡಿಕೊಂಡಿರುವುದಾಗಿದೆ ಎಂದು ತಿಳಿಸಿರುತ್ತಾರೆ. ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಕಲಹವನ್ನುಂಟು ಮಾಡಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡಿರುತ್ತಾರೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 102/2021   ಕಲಂ: 160 ಐ.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಶ್ವನಾಥ.ಜಿ, ಪ್ರಾಯ; 45 ವರ್ಷ ತಂದೆ; ದುಗ್ಗಣ್ಣ ಗೌಡ ವಾಸ; ಜೈ ಕಿಸಾನ್ ನಿವಾಸ, ಕಡಿರುದ್ಯಾವರ  ಗ್ರಾಮ ಬೆಳ್ತಂಗಡಿ ತಾಲೂಕು ರವರ ಜೊತೆಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಚಂದನ್ ರಿಷಿದೇವ್(31)  ಎಂಬಾತನು ಇಂದಬೆಟ್ಟು ಗ್ರಾಮದ ಪಿಚಲಾರು ಎಂಬಲ್ಲಿರುವ ರೂಮ್‌ನಲ್ಲಿ ವಾಸ್ತವ್ಯವಿರುವುದಾಗಿದೆ. ಈತನು ಮೂಲತಃ ಬಿಹಾರದವನಾಗಿದ್ದು, ದಿನಾಂಕ:01.12.2021 ರಂದು ದಿಡುಪೆಯಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ಎಂದಿನಂತೆ ಇಂದಬೆಟ್ಟುವಿನಲ್ಲಿರುವ ರೂಮಿಗೆ ಬಂದಿರುತ್ತಾನೆ. ಈತನಿಗೆ ಕುಡಿತದ ಚಟ ಇದ್ದು ಯಾವುದೋ ವೈಯಕ್ತಿಕ ವಿಚಾರದಲ್ಲಿ ಮನನೊಂದು ದಿನಾಂಕ: 01.12.2021 ರಂದು 21.30 ಗಂಟೆಯಿಂದ ದಿ:02.12.2021 ರಂದು 07.00 ಗಂಟೆಯ ಮಧ್ಯದ ಅವಧಿಯಲ್ಲಿ  ಬೆಳ್ತಂಗಡಿ  ತಾಲೂಕು   ಇಂದಬೆಟ್ಟು   ಗ್ರಾಮದ ಪಿಚಲಾರು ಎಂಬಲ್ಲಿ ತನ್ನ ರೂಮಿನಲ್ಲಿ ವಿದ್ಯುತ್ ಸರ್ವಿಸ್ ವಯರ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ: 38/2021 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಹೊನ್ನಮ್ಮ   ಪ್ರಾಯ 52 ವರ್ಷ, ಗಂಡ ;ಮತ್ತಾಯಿ   , ವಾಸ: ಉಳಿಪ್ಪು   ಮನೆ ಕುಟ್ರುಪ್ಪಾಡಿ  ಗ್ರಾಮ ಕಡಬ ತಾಲೂಕು ರವರ ಗಂಡನಾದ ಮೃತ ಮತ್ತಾಯಿ ಎಂಬುವರು  ಕಡಬದಲ್ಲಿ ಹಲವು ಕಡೆ ಕೂಲಿ ಕೆಲಸ ಮಾಡಿಕೊಂಡು ಇದ್ದು ಅದರಿಂದ ಸಿಕ್ಕ ಮೊತ್ತವನ್ನು ತನ್ನ ಕುಡಿತ ಮತ್ತು ಇತರ ಅಗತ್ಯಕ್ಕೆ ಬಳಸುತ್ತಿದ್ದು ವಿಪರೀತ ಮದ್ಯವ್ಯಸನಿಯಾಗಿದ್ದು ಮನೆಗೆ ಸರಿಯಾಗಿ ಹೋಗದೇ ಇದ್ದು  ಹಲವು ಬಾರಿ ಪಿರ್ಯಾದುದಾರರ ಮಗ ಸನು ಲಾರೆನ್ಸ್ ರವರು ಮನೆಗೆ ಕರೆತಂದು ಮನೆಯಲ್ಲಿರುವಂತೆ ತಿಳಿ ಹೇಳಿದರೂ ಕೇಳದೆ ಕಡಬ ಪೇಟೆಯಲ್ಲಿ ಬಸ್ ಸ್ಟಾಂಡ್ ಹೀಗೆ ಹಲವು ಕಡೆಗಳಲ್ಲಿ ಮಲಗುತ್ತಿದ್ದು ಪಿರ್ಯಾದುದಾರರು ದಿನಾಂಕ 03.12.2021 ರಂದು ಸಂಜೆ 03-00 ಗಂಟೆಗೆ ವಾಟ್ಸಾಪ್ ನಲ್ಲಿ ಬಂದ  ಮೇಸೇಜ್ ನೋಡಿ ಕಡಬದ ಪಾಳು ಬಿದ್ದ ಕಟ್ಟಡದ ಕೋಣೆಯಲ್ಲಿ ಸುಟ್ಟು ಕರಕಲಾದ ವ್ಯಕ್ತಿಯು ಮಲಗಿದ್ದ ಸ್ಥಿತಿಯಲ್ಲಿ ಮೃತ ಪಟ್ಟ ವ್ಯಕ್ತಿಯನ್ನು ನೋಡಿ  ತನ್ನ ಗಂಡ ಮತ್ತಾಯಿಯವರಂತೆ ಕಂಡು ಬಂದಿದ್ದು ಕೂಡಲೇ  ಪಿರ್ಯಾದುದಾರರು ಕಡಬ ಕ್ಕೆ ಬಂದು ಪಾಳು ಬಿದ್ದ ಬಂಗಲೆಯಲ್ಲಿ ಬೆಂಕಿಯಿಂದ ಸುಟ್ಟು ಮಲಗಿದ ಸ್ಥಿತಿಯಲ್ಲಿ ಇದ್ದ ವ್ಯಕ್ತಿಯನ್ನು ನೋಡಿ  ಮೃತ ಪಟ್ಟ ವ್ಯಕ್ತಿಯು ಪಿರ್ಯಾದುದಾರರ ಗಂಡ ಮತ್ತಾಯಿಯವರೆಂದು  ದೃಢಪಡಿಸಿಕೊಂಡಿದ್ದು   ಪಿರ್ಯಾದುದಾರರ ಗಂಡ  ಮತ್ತಾಯಿಯವರು ತುಂಬ ಮದ್ಯ ಸೇವನೆ ಮಾಡಿ ಮಲಗಿದ್ದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡವಾಗಿ ಅಥಾವ  ಬೀಡಿ ಸೇವನೆ ಮಾಡಿದ ಸಮಯ  ಆಕಸ್ಮಿಕ ಬೆಂಕಿ ಅವಘಡ ಸಂಬವಿಸಿ ಅಥಾವ ಇನ್ನವೂದೋ ರೀತಿಯಲ್ಲಿ ಬೆಂಕಿ ಅವಘಡ ಸಂಭವಿಸಿ  ಮೈ ಸುಟ್ಟು ಮೃತಪಟ್ಟಿರುವುದಾಗಿದೆ ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 28/2021 ಕಲಂ: 174 (3) (4) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಾಣಿ ಕುಮಾರಿ (40) ಗಂಡ: ಮೋನಪ್ಪ ನಾಯ್ಕ್ ವಾಸ: ಪರಿವಾರಕಾನ ಮನೆ ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ಎಂಬವರ ಮಗಳು ಶ್ರೀಮತಿ ಅಶಿಕಾ (20) ಎಂಬವರನ್ನು ಸುಮಾರು  ಒಂದುವರೆ  ವರ್ಷಗಳ ಹಿಂದೆ  ಪುತ್ತೂರು ತಾಲೂಕು  ಬನ್ನೂರು ಗ್ರಾಮದ ಕಂಜೂರು ದಿ. ನಾರಾಯಣ ನಾಯಕ್ ರವರ ಮಗ  36 ವರ್ಷ ಪ್ರಾಯದ ಭಾಸ್ಕರ ಪ್ರಭು ಎಂಬವರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಮಾಡಿಕೊಟ್ಟ ನಂತರ ಗಂಡ ಹೆಂಡತಿ ಅನ್ಯೋನ್ಯತೆಯಿಂದ ಇದ್ದು, ಅವರಿಗೆ  ಸುಮಾರು 6 ತಿಂಗಳ ಪ್ರತಿಕ್‌ ಪ್ರಭು ಎಂಬ ಗಂಡು  ಮಗು ಇರುತ್ತದೆ. ಫಿರ್ಯಾದಿದಾರರ  ಮಗಳು   ಶ್ರೀಮತಿ ಅಶಿಕಾ ಸುಮಾರು 5 ವರ್ಷಗಳಿಂದ ಮಾಸಿಕ ಖಾಯಿಲೆಯಿಂದ ಬಳಲುತ್ತಿದ್ದು,  ಈ ಖಾಯಿಲೆಯಿಂದಾಗಿ ಆಕೆ ಅನೇಕ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾಳೆ. ಅಲ್ಲದೇ ಅವಳ ಈ ಖಾಯಿಲೆಗೆ ಜಾಷಧಿ ಸೇವಿಸಿದರೂ ಖಾಯಿಲೆ ಗುಣ ಮುಖವಾಗದೇ ಇದ್ದುದರಿಂದ ಇದೇ ಖಾಯಿಲೆ ಉಲ್ಬಣಗೊಂಡು ಈ ದಿನ ದಿನಾಂಕ: 02.12.2021 ರಂದು ಮದ್ಯಾಹ್ನ 01.00 ಗಂಟೆಯಿಂದ ಸಂಜೆ 05.30 ಗಂಟೆಯ ಮಧ್ಯಾವದಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ: 30/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 03-12-2021 11:05 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080