ಅಪಘಾತ ಪ್ರಕರಣ: ೦4
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಯಶೋಧರ ಪ್ರಾಯ: 31 ವರ್ಷ ತಂದೆ: ದಿ/ಗಿರಿಯಪ್ಪ ಪೂಜಾರಿ, ವಾಸ:ಕೊಂಬರ ಬೈಲು ಮನೆ, ಪಂಜಿಕಲ್ಲು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 02-12-2022 ರಂದು ಅಗತ್ಯ ಕೆಲಸದ ನಿಮಿತ್ತ ಮೋಟಾರ್ ಸೈಕಲಿನಲ್ಲಿ ಬಂಟ್ವಾಳ ಕಡೆಗೆ ಹೋಗುತ್ತಿದ್ದಾಗ ಅವರ ಎದುರಿನಿಂದ ಒಂದು ಮೋಟಾರ್ ಸೈಕಲ್ ನಂಬ್ರ KA-19-EE-0317 ನೇಯದನ್ನು ಅದರ ಸವಾರ ಕಡೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ ರೋಡ್ ಕಡೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆಗೆ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ತಲುಪುವಾಗ ಬಂಟ್ವಾಳ ಪೇಟೆಯ ಕಡೆಯಿಂದ ಕಾರ್ ನಂಬ್ರ KA-19-P-1784 ನೇಯದನ್ನು ಅದರ ಚಾಲಕರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಬಿ.ಸಿ ರೋಡ್ - ಕಡೂರು ರಾಸ್ಟ್ರೀಯ ಹೆದ್ದಾರಿ ರಸ್ತೆಗೆ ಅಡ್ಡ ವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೋಟಾರ್ ಸೈಕಲ್ ಸವಾರರು ರಸ್ತೆಗೆ ಬಿದ್ದು ಎಡ ಕಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದಲ್ಲದೆ ಬಲಕಾಲಿಗೆ ತರಚಿದ ಹಾಗೂ ಬೆನ್ನಿಗೆ ತರಚಿದ ಹಾಗೂ ಗುದ್ದಿದ ಗಾಯವಾಗಿದ್ದು ಚಿಕತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಪ್ರಥಮ ಚಿಕಿತ್ಸೆ ಕೊಡಿಸಿ ಹಚ್ಚಿನ ಚಿಕಿತ್ಸೆಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 151/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್ ರಝಾಕ್, ಪ್ರಾಯ 44 ವರ್ಷ, ತಂದೆ: ಆದಂ ಬ್ಯಾರಿ ವಾಸ: ಪೊರ್ಕಳ ಮನೆ, ಪುತ್ತಿಲ ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 01-12-2022 ರಂದು ಆರೋಪಿ ಕಾರು ಚಾಲಕ ಅಬ್ದುಲ್ ರಶೀದ್ ಎಂಬವರು KA-70-M-3849 ನೇ ನೋಂದಣಿ ನಂಬ್ರದ ಕಾರನ್ನು ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಉರ್ಲಡ್ಕ ಎಂಬಲ್ಲಿ ಮಸೀದಿ ಬಳಿ ನೀಲಗಿರಿ-ಬಾಜಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳದಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮಗ ಮುಹಮ್ಮದ್ ರಫೀದ್ (11ವ)ರವರ ಬಲಕಾಲಿನ ಪಾದದ ಮೇಲೆ ಕಾರಿನ ಚಕ್ರವು ಹಾದು ಹೋಗಿ ಚರ್ಮ ಹಾಗೂ ಮಾಂಸ ಕಿತ್ತು ಹೋದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಅಪಘಾತ ಕಾರಿನಲ್ಲಿ ಕರೆತಂದು ಪುತ್ತೂರು ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 183/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೇಶವ ಕೆ, ಪ್ರಾಯ:44 ವರ್ಷ, ತಂದೆ: ದಿ. ಕೊರಗ, ವಾಸ: ಕುಂಬ್ರ ಮನೆ, ಒಳಮೊಗ್ರು ಗ್ರಾಮ, ಪುತ್ತೂರು ತಾಲೂಕು ರವರು ಸಂಪ್ಯದಲ್ಲಿರುವ ಶ್ರೀ ರಾಮ ಗ್ಯಾರೆಜ್ ನಲ್ಲಿ ಪೈಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 01.12.2022 ರಂದು ಸಂಜೆ ಗ್ಯಾರೆಜ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವರೇ, ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಶ್ರೀ ವೆಂಕಟೇಶ್ವರ ಸಾ ಮಿಲ್ ನ ಎದುರು ರಸ್ತೆ ಬದಿಯಲ್ಲಿ ನಿಂತುಕೊಂಡಿರುವ ಸಮಯ ಪುತ್ತೂರು ಕಡೆಯಿಂದ ಸಂಟ್ಯಾರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಮೋಟಾರು ಸೈಕಲ್ ಅನ್ನು ಅದರ ಸವಾರನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸುಮಾರು 10 ಅಡಿ ದೂರ ಡಾಮಾರು ರಸ್ತೆಗೆ ಬಿದ್ದಿದ್ದು, ಅಷ್ಟರಲ್ಲಿ ಅಲ್ಲೇ ಸಮೀಪದಲ್ಲಿದ್ದ ಟಯರ್ ಅಂಗಡಿಯ ಮಾಲೀಕರಾದ ಅರುಣ್ ರೈ ಮತ್ತು ಇತರ ಸಾರ್ವಜನಿಕರು ಪಿರ್ಯಾದಿದಾರರನ್ನು ಎಬ್ಬಿಸಿ ಉಪಚರಿಸಿರುತ್ತಾರೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಬಲ ಕೋಲು ಕಾಲಿಗೆ, ಬಲ ಕೈ ರಟ್ಟೆಗೆ ಗುದ್ದಿದ ಗಾಯ ಹಾಗೂ ಬಲ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಡಿಕ್ಕಿಯನ್ನುಂಟು ಮಾಡಿದ ಮೋಟಾರು ಸೈಕಲ್ ಅನ್ನು ನೋಡಲಾಗಿ ಸದ್ರಿ ಮೋಟಾರು ಸೈಕಲ್ ನಂಬರ್ KA21EC8813 ಆಗಿದ್ದು, ಚಾಲಕನ ಹೆಸರನ್ನು ಕೇಳಲಾಗಿ ಅಬ್ದುಲ್ ಶಮೀರ್ ಎಂಬುದಾಗಿ ತಿಳಿದು ಬಂದಿರುತ್ತದೆ. ಪಿರ್ಯಾದಿದಾರರಿಗೆ ಡಿಕ್ಕಿಯನ್ನುಂಟು ಮಾಡಿದ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ : 106/2022 ಕಲo: 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವೆಂಕಪ್ಪ ಗೌಡ ಪ್ರಾಯ 42 ವರ್ಷ,ತಂದೆ: ದಿ. ಗೋಪಣ್ಣ ಗೌಡ, ವಾಸ: ಚೌಕಿ ಮಠ ಮನೆ, ಸವಣೂರು ಗ್ರಾಮ, ಕಡಬ ತಾಲೂಕು, ದ.ಕ. ಜಿಲ್ಲೆ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 21 ಇಸಿ 0345 ನೇದರಲ್ಲಿ ದಿನಾಂಕ 01.12.2022 ರಂದು ಕಡೆಗೆ ಪರಣೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದು ಕಡಬ ತಾಲೂಕು ಸವಣೂರು ಗ್ರಾಮದ ಕನ್ನಡಕುಮೇರಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಮೋಟಾರು ಸೈಕಲನ್ನು ಅದರ ಸವಾರನು ಅಜಾಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಸ್ಕೀಡ್ ಆಗಿ ಸವಾರನ ಹತೋಟಿ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಯ ಎಡ ಬದಿ ಮಣ್ಣು ರಸ್ತೆಗೆ ಸವಾರ ಹಾಗೂ ಸಹ ಸವಾರ ಮಗುಚಿ ಬಿದ್ದರು. ಕೂಡಲೇ ಪಿರ್ಯಾದಿದಾರರು ತನ್ನ ಮೋಟಾರ್ ಸೈಕಲನ್ನು ರಸ್ತೆ ಬದಿ ನಿಲ್ಲಿಸಿ ಮೋಟಾರು ಸೈಕಲ್ ಸವಾರ ಮತ್ತು ಸಹ ಸವಾರರನ್ನು ಎಬ್ಬಿಸಿ ಆರೈಕೆ ಮಾಡಿ ನೋಡಲಾಗಿ ಸವಾರ ಪಿರ್ಯಾದಿದಾರರ ಪರಿಚಯದ ದೇವಿ ಪ್ರಸಾದ್ ಮತ್ತು ಆತನ ಚಿಕ್ಕಪ್ಪ ಕುಶಾಲಪ್ಪ ಗೌಡ ಎಂಬವರಾಗಿದ್ದು, ಮೋಟಾರ್ ಸೈಕಲ್ ಸವಾರ ದೇವಿ ಪ್ರಸಾದನಿಗೆ ಹಣೆಗೆ , ಕೈಗಳಿಗೆ ತರಚಿದ ಗಾಯ ಮತ್ತು ಬೆನ್ನಿಗೆ ರಕ್ತಗಾಯವಾಗಿದ್ದು, ಸಹ ಸವಾರ ಕುಶಾಲಪ್ಪ ಗೌಡ ರವರಿಗೆ ಸೊಂಟಕ್ಕೆ , ಎದೆಗೆ ಮತ್ತು ಬೆನ್ನಿಗೆ ಗುದ್ದಿದ ನಮೂನೆಯ ಗಾಯ ಹಾಗೂ ಕಾಲಿಗೆ ತರಚಿದ ನಮೂನೆಯ ಗಾಯಗಳಾಗಿರುತ್ತದೆ. ಅಪಘಾತಕ್ಕೊಳಗಾದ ಮೋಟಾರು ಸೈಕಲ್ ನಂಬ್ರ ನೋಡಲಾಗಿ ಕೆಎ-21-ಇಸಿ-9160 ಆಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ CR NO: 97/2022 ಕಲಂ 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಭವಾನಿ, ಪ್ರಾಯ: 38 ವರ್ಷ, ಗಂಡ: ವಸಂತ ಗೌಡ, ವಾಸ: ಹಳೆಗೇಟು ಮನೆ, ನಾವೂರು ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು, ರವರು ಸುಮಾರು 7 ವರ್ಷಗಳ ಹಿಂದೆ ಬಂಟ್ವಾಳ ತಾಲೂಕು, ದೇವಸ್ಯ ಮುಡೂರು ಗ್ರಾಮದ, ಪೊಸಲಾಯಿ ಎಂಬಲ್ಲಿ ಶಿವಪ್ಪ ನಾಯ್ಕ್ ಎಂಬವರಿಂದ ಸರ್ವೆ ನಂಬ್ರ 2-1 ರಲ್ಲಿನ 77 ಸೆಂಟ್ಸ್ ಜಮೀನನ್ನು ಖರೀಧಿಸಿದ್ದು, ಈ ಜಮೀನಿನಲ್ಲಿ ಫಿರ್ಯಾಧಿದಾರರು ಅಡಿಕೆ ಕೃಷಿ ಮಾಡಿಕೊಂಡಿರುತ್ತಾರೆ. ಎರಡು ವರ್ಷಗಳ ಹಿಂದೆ ಜಮೀನಿಗೆ ಬೇರೆಯವರು ಅತಿಕ್ರಮ ಪ್ರವೇಶ ಮಾಡದಂತೆ ಕಬ್ಬಿಣದ ಗೇಟನ್ನು ಅಳವಡಿಸಿರುತ್ತಾರೆ. ದಿನಾಂಕ: 02.12.2022 ರಂದು ಫಿರ್ಯಾಧಿದಾರರು ತನ್ನ ಗಂಡ ಹಾಗೂ ಕೆಲಸದಾಳು ಧರ್ಣಪ್ಪರವರೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿರುವ ಸಮಯ ಸಂಜೆ 4:15 ಗಂಟೆಯ ಸುಮಾರಿಗೆ ತೋಟದ ಮೇಲಿಂದ ಅಂದರೆ ಜಮೀನಿಗೆ ಕಬ್ಬಿಣದ ಗೇಟು ಅಳವಡಿಸಿದ ಸ್ಥಳದಲ್ಲಿ ಜೋರಾಗಿ ಶಬ್ದ ಬರುತ್ತಿರುವುದನ್ನು ಕೇಳಿ ಫಿರ್ಯಾಧಿದಾರರು ತನ್ನ ಗಂಡ ಮತ್ತು ಕೆಲಸದಾಳುವಿನೊಂದಿಗೆ ಏನೆಂದು ನೋಡಲು ಅಲ್ಲಿಗೆ ಹೋದಾಗ ಪರಿಚಯದ ಚಂದ್ರಶೇಖರ ಶೆಟ್ಟಿ, ಕುಲದೀಪ್ ಹಾಗೂ ಹಸಿರು ಶಾಲು ಧರಿಸಿದ್ದ ಇತರ ಕೆಲವು ಮಂದಿ ಫಿರ್ಯಾಧಿದಾರರು ಅಳವಡಿಸಿದ್ದ ಕಬ್ಬಿಣದ ಗೇಟನ್ನು ಮುರಿದು ಪಿಕ್ಅಪ್ ವಾಹನಕ್ಕೆ ತುಂಬಿಸಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 94/2022 ಕಲಂ: 447, 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಡಿ ನಾಗಪ್ಪ ಗೌಡ ಪ್ರಾಯ: 76 ವರ್ಷ ತಂದೆ: ದಿ|| ಕೊರಗಪ್ಪ ಗೌಡ ವಾಸ: ದೋಳ್ಪಾಡಿ ಮನೆ ದೋಳ್ಪಾಡಿ ಗ್ರಾಮ ಕಡಬ ತಾಲೂಕು ರವರಿಗೆ ಮೂರು ಜನ ಗಂಡು ಮಕ್ಕಳು ಮತ್ತು ಎರಡು ಜನ ಹೆಣ್ಣು ಮಕ್ಕಳಿರುತ್ತಾರೆ ಗಂಡು ಮಕ್ಕಳ ಪೈಕಿ ದೇವರಾಜ ಎಂಬಾತನು ಕೊನೆಯವನಾಗಿದ್ದು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದೇವರಾಜನಿಗೆ ಕಾಣಿಯೂರು ಗ್ರಾಮದ ನಾವೂರು ಎಂಬಲ್ಲಿನ ಅನಿತಾ ಎಂಬವಳನ್ನು 13 ವರ್ಷಗಳ ಹಿಂದೆ ವಿವಾಹವಾಗಿರುತ್ತದೆ ದೇವರಾಜನಿಗೆ ಇಬ್ಬರು ಮಕ್ಕಳಿದ್ದು ದೇವರಾಜನು ಅಮಲು ಪದಾರ್ಥ ಸೇವಿಸಿ ಆಗಾಗ ಪತ್ನಿ ಅನಿತಾಳೊಂದಿಗೆ ಜಗಳ ಮಾಡುತಿದ್ದು ಪಿರ್ಯಾದುದಾರರು ಹಲವು ಬಾರಿ ಮನೆಗೆ ಹೋಗಿ ಬುದ್ದಿವಾದ ಹೇಳಿರುತ್ತಾರೆ.ದಿನಾಂಕ:28.11.2022 ರಂದು ರಾತ್ರಿ 09.00 ಗಂಟೆಗೆ ದೇವರಾಜನ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿರುವ ವಿಷಯವನ್ನು ದೇವರಾಜನ ಮಗನಾದ ವಂಶಿತ್ (11) ಎಂಬಾತನು ಪಿರ್ಯಾದುದಾರರಿಗೆ ತಿಳಿಸಿರುತ್ತಾನೆ. ನಂತರ ಪಿರ್ಯಾದುದಾರರು ದೇವರಾಜನ ಮನೆಗೆ ಹೋಗಿ ನೋಡಲಾಗಿ ದೇವರಾಜನು ವಿಪರೀತವಾಗಿ ಅಮಲು ಪದಾರ್ಥವನ್ನು ಸೇವಿಸಿದ್ದು ಮನೆಯಲ್ಲಿ ಆತನ ಪತ್ನಿಯಾದ ಅನಿತಾಳೊಂದಿಗೆ ಗಲಾಟೆ ಮಾಡುತ್ತಿರುತ್ತಾನೆ. ಬಳಿಕ ಪಿರ್ಯಾದುದಾರರು ಮಗ ದೇವರಾಜನಿಗೆ ಬಿದ್ದಿಮಾತು ಹೇಳಿ ಮನೆಗೆ ಬಂದಿರುತ್ತಾರೆ. ದಿನಾಂಕ:29.11.2022 ರಂದು ಸಂಜೆ ಸಮಯ ಪಿರ್ಯಾದುದಾರರು ದೇವರಾಜನ ಮನೆಗೆ ಹೋದಾಗ ಮನೆಯಲ್ಲಿದ್ದ ಸೊಸೆ ಅನಿತಾಳು ಮನೆಯಲ್ಲಿ ಗಂಡ ಇಲ್ಲವಾಗಿದ್ದು ಬೆಳಗ್ಗೆ 10.30 ಗಂಟೆಗೆ ನನಗೆ ಫೋನ್ ಮಾಡಿದ ಬಳಿಕ ಈ ತನಕ ಮನೆಗೆ ಬಂದಿರುವುದಿಲ್ಲ ಹಾಗೂ ಫೋನ್ ಕೂಡ ಮಾಡಿರುವುದಿಲ್ಲ ಎಂದು ತಿಳಿಸಿರುತ್ತಾಳೆ ಬಳಿಕ ಪಿರ್ಯಾದುದಾರರು ಮಕ್ಕಳಾದ ಯೇಸುದಾಸ್ ಮತ್ತು ದೇವದಾಸ್ ಹಾಗೂ ಊರವರಾದ ದೀಕ್ಷೀತ್, ಮಹಾಬಲೇಶ್ವರ ,ಪುರಂದರ, ಉದಯರವರೊಂದಿಗೆ ದೋಳ್ಪಾಡಿ ಪರಿಸರದಲ್ಲಿ ಮತ್ತು ಎಲ್ಲಾ ಕಡೆಗಳಲ್ಲಿ ಹುಡುಕಾಟ ಮಾಡಿದಾಗ ದೇವರಾಜನು ಪತ್ತೆಯಾಗಿರುವುದಿಲ್ಲ ದಿನಾಂಕ:02.12.2022 ರಂದು ಮದ್ಯಾಹ್ನ 01.30 ಗಂಟೆಗೆ ಪಿರ್ಯಾದುದಾರರ ಮಗ ದೇವರಾಜನ ಮೃತ ದೇಹವು ಕಡಬ ತಾಲೂಕು ದೊಲ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿರುವುದಾಗಿ ಪಿರ್ಯಾದುದಾರರ ಅಣ್ಣನ ಸೊಸೆ ವಿಷಯ ತಿಳಿಸಿದ್ದು ಅದರಂತೆ ಪಿರ್ಯಾದುದಾರರು ಕೊಜಂಬಾಡಿ ಅರಣ್ಯ ಪ್ರದೇಶಕ್ಕೆ ಸಮಯ 02.00 ಗಂಟೆಗೆ ಹೋಗಿ ನೋಡಿದಾಗ ಅರಣ್ಯ ಪ್ರದೇಶದಲ್ಲಿ ದೇವರಾಜನ ಮೃತದೇಹವು ಕವಚಿ ಬಿದ್ದುಕೊಂಡಿರುತ್ತದೆ ಈ ಬಗ್ಗೆ ಕಡಬ ಪೊಲೀಸು ಠಾಣೆ ಯುಡಿಆರ್ ನಂ:36/2022.ಕಲಂ:174 (3) (iv) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕವಿತಾ ಮಣಿ ಎ, ಬಿ (36) ಗಂಡ: ಸೋಮಶೇಖರ ಗೌಡ ವಾಸ: ಪರಿವಾರಕಾನ ಮನೆ, ಅರಂಬೂರು ಪೋಸ್ಟ್ ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು ರವರ ಗಂಡ ಸೋಮಶೇಖರ ಗೌಡ (47) ಎಂಬಾತನು ಮಾನಸೀಕ ಖಿನ್ನತೆಗೆ ಒಳಗಾಗಿದ್ದವನು ದಿನಾಂಕ 02.12.2022 ರಂದು ಪಿರ್ಯಾದುದಾರರ ಮನೆಯಲ್ಲಿದ ಸಮಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪರಿವಾರಕಾನ ಎಂಬಲ್ಲಿರುವ ತಮ್ಮ ಮನೆಯ ಹಿಂಬದಿಯ ಗುಡ್ಡ ಜಾಗದಲ್ಲಿರು ಗೇರು ಮರದ ಕೊಂಬೆಗೆ ಹಾಗೂ ತನ್ನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದವನ್ನು ಕಂಡು ಪಿರ್ಯಾದುದಾರರು ಜೀವ ಇರಬಹುದೆಂದು ಭಾವಿಸಿ ವಾಹನ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಸೋಮಶೇಖರ ನ್ನು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂ: 50/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.