ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 2

ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿರ್ಯಾದಿದಾರರ ಹೆಸರು:ಅಬ್ದುಲ್ ಲತೀಫ್ (46), S/o  ಬಿ. ಮಹಮ್ಮದ್ R/o SMS ಮಂಜಿಲ್ ಅಭಯ ಆಸ್ಪತ್ರೆ ಹತ್ತಿರ ಜೈನ್ ಪೇಟೆ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 02-01-2022 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ  ಗುರುವಾಯನ ಕೆರೆ ಅಭಯ ಆಸ್ಪತ್ರೆಯ ಹತ್ತಿರ ಇರುವ ತನ್ನ ಬಾಬ್ತು  ಎಸ್‌ ಎಂ ಎಸ್‌ ಶಾಮಿಯಾನ ಅಂಗಡಿಯಲ್ಲಿ ಇರುವಾಗ ಅಪಘಾತದ ಶಬ್ದ ಕೇಳಿ ಅಂಗಡಿಯ ಎದುರು ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ಹೋದಾಗ ಪರಿಚಯದ ಚಂದ್ರ ಕುಮಾರ್‌ ಎಂಬವರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಅವರನ್ನು ಅಲ್ಲಿಗೆ ಬಂದ ನಾರಾಯಣ್‌ ಶೆಟ್ಟಿ ಮತ್ತು ಇತರರೊಂದಿಗೆ  ಉಪಚರಿಸಿದಾಗ ಅವರಿಗೆ ಗುದ್ದಿದ ಗಾಯವಾಗಿದ್ದು, ಕೂಡಲೇ  ಅಂಬುಲೆನ್ಸ್‌ ನಲ್ಲಿ ಉಜಿರೆ ಎಸ್‌ ಡಿ ಎಂ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು, ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ  2/2022 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ  ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿರ್ಯಾದಿದಾರರ ಹೆಸರು:ಅಂಗಾರ  (77), S/o  ಬೈದು ಬಡೆಕಾರಮನೆ ಕೊಕ್ಕಡ ಗ್ರಾಮ  ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 01-01-2022 ರಂದು ಪಿರ್ಯಾದುದಾರರು ನೆಲ್ಯಾಡಿಗೆ ಹೋದವರು ಪೆರಿಯಶಾಂತಿ-ಕೊಕ್ಕಡ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ಸಮಯ ಸುಮಾರು ಸಂಜೆ 5:30 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಪಟ್ಲಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿಯ ಹಿಂದಿನಿಂದ ಅಂದರೆ ಪೆರಿಯಶಾಂತಿ ಕಡೆಯಿಂದ ಒಂದು ವಾಹನವನ್ನು ಅದರ ಚಾಲಕ ದುಡುಕುತನದಿಂದ  ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಅಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಅಲ್ಲೇ ಬರುತ್ತಿದ್ದ ದಯಾನೀಶ್‌ ಮತ್ತು ಇತರರು ಉಪಚರಿಸಿ ನೋಡಿದಾಗ ಅವರಿಗೆ ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಒಂದು ವಾಹನದಲ್ಲಿ ಕಳುಹಿಸಿಕೊಟ್ಟಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತ ನಡೆಸಿದ ವಾಹನವನ್ನು ಅದರ ಚಾಲಕ ನಿಲ್ಲಿಸದೆ, ಗಾಯಾಳುವನ್ನು ಉಪಚರಿಸದೆ ವಾಹನ ಸಮೇತ ಪರಾರಿಯಾಗಿದ್ದು. ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ  3/2022 ಕಲಂ 279,337 ಐ.ಪಿ.ಸಿ & 134(A)&(B) r/w 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಿಂನ್ಸಿ  ಪ್ರಾಯ  38 ವರ್ಷ ಗಂಡ: ಸುನಿಲ್ ಪಿಂಟೋ ವಾಸ: ನ್ಯೂಚಿಲ ಮನೆ  ನಡ ಗ್ರಾಮ  ಬೆಳ್ತಂಗಡಿ  ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ ಸಿ ಎಸ್ ವರ್ಗಿಸ್ ರವರು ಕಡಬ ತಾಲೂಕು ಶಿರಾಡಿ ಗ್ರಾಮದ ಉಗ್ರಾಣಿಗುತ್ತು ಎಂಬಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದು ಪಿರ್ಯಾದುದಾರರ ತಂದೆ ಅವರ ಸ್ವಂತ ಜಮೀನಿನಲ್ಲಿ ರಬ್ಬರ್ ಕೃಷಿ ಮಾಡಿ ಜೀವನ ನಡೆಸುತ್ತಿದ್ದು ಪಿರ್ಯಾದುದಾರರ ಮನೆಗೂ ಕೂಡಾ ಬರುತ್ತಿರಲಿಲ್ಲ ಸುಮಾರು ಎರಡು ವರ್ಷಗಳ ಹಿಂದೆ ಪಿರ್ಯಾಧಿದಾರರ ತಂದೆಯವರಿಗೆ ಹಾವು ಕಚ್ಚಿ ಅಸೌಖ್ಯವಾದ ಸಮಯದಲ್ಲಿ ಪಿರ್ಯಾದುದಾರರ ಮನೆಗೆ ಬಂದವರು ಗುಣಮುಖರಾದ ಮೇಲೆ ಸ್ವಂತ ಮನೆಯಾದ ಶಿರಾಡಿಗೆ ಬಂದು ವಾಸವಾಗಿದ್ದು ಯಾವಾಗಲೋ ಒಮ್ಮೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದು ಹೀಗಿರುತ್ತಾ ಸುಮಾರು ಒಂದು ತಿಂಗಳ  ಹಿಂದೆ ಪಿರ್ಯಾದುದಾರರ ಚಿಕ್ಕಪ್ಪ ನಾದ ಸನ್ನಿ ಮತ್ತು ದೊಡ್ಡಪ್ಪನಾದ ಜೋಸೆಫ್ ರವರು ದೂರವಾಣಿ ಕರೆಮಾಡಿ ತಂದೆಯವರು ಸುಮಾರು ಸಮಯದಿಂದ ಮನೆಯಲ್ಲಿ ಕಾಣುತ್ತಿಲ್ಲ   ಎಲ್ಲಿಗೆ ಹೋಗಿರುತ್ತಾರೆ ಎನ್ನುವ ವಿಷಯ ನಮಗೆ ತಿಳಿದಿರುವುದಿಲ್ಲ ಹೀಗಿರುತ್ತಾ ಪಿರ್ಯಾದುದಾರರು ಮತ್ತು ಪಿರ್ಯಾದುದಾರರ ಗಂಡ ತಂದೆಯ ಮನೆಗೆ ಬಂದು ನೋಡಿದಾಗ ತಂದೆಯವರು ಮನೆಯಲ್ಲಿರದೇ ಇದ್ದು ಮನೆಗೆ ಬೀಗ ಹಾಕಿದ್ದು ಮನೆಯ ಸುತ್ತ ಮುತ್ತ ಹುಡುಕಾಡಿದಲ್ಲಿ ಅವರು ಪತ್ತೆಯಾಗದೇ ಇದ್ದು ಸಂಬಂದಿಕರ ಮನೆಯಲ್ಲಿ ನನ್ನ ತಂಗಿಯ ಮನೆಯಲ್ಲಿ ಹಾಗೂ ತಾಯಿಯಲ್ಲಿ ವಿಚಾರಿಸಿದಲ್ಲಿ ಪಿರ್ಯಾದುದಾರರ ತಂದೆಯವರು ಪತ್ತೆಯಾಗದೇ ಇದ್ದು ದಿನಾಂಕ:01-12-2021 ರಂದು ಮನೆಯಿಂದ ಹೋದವರು ಮನೆಗೆ ಬಾದರೇ ಕಾಣೆಯಾಗಿರುತ್ತಾರೆ ಈ ಬಗ್ಗೆ ಪಿರ್ಯಾದುದಾರರ ತಂದೆಯವರ ಬಗ್ಗೆ ತಂಗಿ ತಾಯಿ ,ಸಂಬಂದಿಕರಲ್ಲಿ ಹಾಗೂ  ಊರಿನವರಲ್ಲಿ ವಿಚಾರಿಸಿದಲ್ಲಿ  ಈತನಕ ಫಿರ್ಯಾಧಿದಾರರ ತಂದೆ ಪತ್ತೆಯಾಗದೇ ಇರುವುದರಿಂದ, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 02/2022  ಕಲಂ  ಗಂಡಸು ಕಾಣೆ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ: 02-01-2022 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 03/2022  ಕಲಂ 448.354.506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : ದಿನಾಂಕ: 02-01-2022 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 02/2022 ಕಲಂ: 143,147,448,504,323,354,506 ಜೊತೆಗೆ 149 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ  02.01.2022 ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 01/2022 ಕಲಂ: 75 ಜೆಜೆ ಆ್ಯಕ್ಟ್ 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲವ ಕುಮಾರ, 34 ವರ್ಷ, ತಂದೆ: ದಿ|| ಮಾಧವ ಗೌಡ, ವಾಸ: ಬಾಂಜಿಕೋಡಿ ಮನೆ, ಐವರ್ನಾಡು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರ ಅಣ್ಣ ಅರುಣ ಕುಮಾರನು ಸುಮಾರು 7 ವರ್ಷಗಳಿಂದ ಆತನ ಪತ್ನಿ ವನಜಾಳ ಜೊತೆ ಹಳೆನೇರಂಕಿ ಎಂಬಲ್ಲಿ ಮಾಸ್ಟರ್ ಪ್ಲಾನರಿಯವರ ಪ್ಲಾಂಟ್ ನಲ್ಲಿ ಕೂಲಿ ಕೆಲಸ ಮಾಡುತ್ತಾ ಅಲ್ಲಿಯೇ ವಾಸವಿದ್ದು, ದಿನಾಂಕ 31-12-2021 ರಂದು ಬಾಂಜಿಕೋಡಿ ಮನೆಗೆ ಬಂದಿದ್ದ ಅರುಣ ಕುಮಾರ್ ಸಂಜೆ 4-00 ಗಂಟೆಗೆ ಪಿರ್ಯಾದಿದಾರರು ಮೊಬೈಲ್ ರೀ-ಚಾರ್ಜ್ ಮಾಡುವ ಸಲುವಾಗಿ ಐವರ್ನಾಡಿಗೆ ಹೋಗಿ ಮರಳಿ ಸಂಜೆ 5-00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ಇಲ್ಲದೇ ಇದ್ದು ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಅರುಣ ಕುಮಾರನ ಪತ್ತೆಯ ಬಗ್ಗೆ ಪ್ರಯತ್ನಿಸುತ್ತಿದ್ದಂತೆ ದಿನಾಂಕ 02-01-2022 ರಂದು ಬೆಳಗ್ಗೆ 07-00 ಗಂಟೆಗೆ ಅರುಣ ಕುಮಾರನ ಮೃತದೇಹವು ಮನೆ ಸಮೀಪದ ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 01/2022ಕಲಂ 174 ಸಿಆರ್ ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಶ್ಮಿನ್ ಸಿಕ್ವೇರಾ ಪ್ರಾಯ 42 ವರ್ಷ ಗಂಡ: ಸುರೇಶ್ ನಾವಡ ವಾಸ: ಬಿ 303,ಪೂರ್ವ ವೆಸ್ಟಂಡ್ ಕೂಡ್ಲುಗೇಟ್ ಬೊಮ್ಮನ ಹಳ್ಳಿ, ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರ  ಪತಿ ಸುರೇಶ್ ನಾವಡ ಪ್ರಾಯ 43 ವರ್ಷ ರವರು ಬೇಂಗಳೂರು ಐ ಬಿ ಎಂ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 23-12-2021 ರಂದು ಪಿರ್ಯಾದಿದಾರರು ತನ್ನ ಗಂಡ ಮತ್ತು ಮಕ್ಕಳೊಂದಿಗೆ ತನ್ನ ತಾಯಿ ಮನೆಯಾದ ಪಾವಂಜೆಗೆ ಬಂದಿದ್ದು ಈ ದಿನ ದಿನಾಂಕ 02-01-2022 ರಂದು ಬೆಳಿಗ್ಗೆ 05.30ಗಂಟೆಗೆ  ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿಗೆ ಹೋಗುವರೇ ಪಾವಂಜೆಯಿಂದ ತನ್ನ ಬಾಬ್ತು ಕೆ.ಎ 41 ಎನ್ 6613 ನೇ ಐ 20 ಕಾರನ್ನು ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ 07-20 ಗಂಟೆಗೆ  ಕಡಬ ತಾಲೂಕು ಶಿರಾಡಿ  ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ತಲುಪಿದಾಗ ಏನೋ ಒಂದು ಶಬ್ದ ಕೇಳಿ ಕಾರನ್ನು ರಸ್ತೆ  ಬದಿಯಲ್ಲಿ ನಿಲ್ಲಿಸಿ ಕಾರಿನಿಂದ ಇಳಿಯುತ್ತಿರುವ  ಸಮಯ ರಸ್ತೆ ಬದಿಯ ಅಭಯಾರಣ್ಯದಿಂದ ಒಂದು ಮರವು ಪಿರ್ಯಾದುದಾರರ ಗಂಡನ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಪಿರ್ಯಾದುದಾರರ ಗಂಡ ಅಲ್ಲೇ ರಸ್ತೆಗೆ ಬಿದ್ದು ಮೃತಪಟ್ಟಿರುವುದಾಗಿದೆ ಕಾರ್ ಸಂಪೂರ್ಣ ಜಖಂ ಗೊಂಡಿದ್ದು  ಕಾರಿನಲ್ಲಿದ್ದ ಪಿರ್ಯಾದಿ ಮತ್ತು ಎರಡು ಮಕ್ಕಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ  .ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 01/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-01-2022 10:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080