ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಕಾಂತ್ ಭಟ್, ಪ್ರಾಯ 38 ವರ್ಷ, ತಂದೆ: ದಿ.ನಾರಾಯಣ ಭಟ್ ವಾಸ: ಸುಬ್ರಹ್ಮಣ್ಯೇಶ್ವರ ದೇವಾಸ್ಥಾನದ ಹತ್ತಿರ, ಬೆಳ್ಳಿಪ್ಪಾಡಿ ಗ್ರಾಮ, ಕೊಡಿಂಬಾಡಿ ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 03-02-2022 ರಂದು ಆರೋಪಿ ಹೆಸರು ಮತ್ತು ನೋಂದಣಿ ನಂಬ್ರ ತಿಳಿದು ಬಾರದ ಮಿನಿಗೂಡ್ಸ್ ವಾಹನ ಚಾಲಕ, ಮಿನಿ ಗೂಡ್ಸ್ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು  ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಬೋಳ್ಳಾರು ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬೇರೆ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಶ್ರೀಕಾಂತ್ ಭಟ್ ರವರು ಸವಾರರಾಗಿ ನೆಕ್ಕಿಲಾಡಿ ಕಡೆಯಿಂದ ಬಿಳಿಯೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EC-1731ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನ ಬಲಭಾಗಕ್ಕೆ ಮಿನಿಗೂಡ್ಸ್ ವಾಹನದ ಬಲಭಾಗವು ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಯ ಎಡಭಾಗದ ಆಳಜಾಗಕ್ಕೆ ಬಿದ್ದು, ಪಿರ್ಯಾದುದಾರರಿಗೆ ಬಲ ಕೋಲು ಕಾಲಿಕಾಲಿಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ದಾಖಲಾದವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  21/2022 ಕಲಂ: 279,338ಐಪಿಸಿ & 134(A&B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ 323 ಐಪಿಸಿ ಮತ್ತು 3(i)(s) SC/ST PA Ammendment  Act -2015  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರೇಮ ಪ್ರಾಯ: 42 ವರ್ಷ ಗಂಡ: ಹರೀಶ ಪಿ ವಿ ವಾಸ: ಪೂಜಾರಿಕೋಡಿ ಮನೆ ನಾಲ್ಕೂರು ಗ್ರಾಮ ಸುಳ್ಯ ತಾಲೂಕು  ರವರ ಗಂಡ  ವಕೀಲ ವೃತ್ತಿ ಮಾಡುತ್ತಿರುವುದಾಗಿದೆ. ಅವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ ಎರಡನೇಯವಳು ನಿಹಾರಿಕಾ ಪ್ರಾಯ 12 ವರ್ಷ ವಾಗಿದ್ದು, ನಿಹಾರಿಕಳು 6 ನೇ ತರಗತಿಗೆ ಮಂಗಳೂರಿನ ಮುಡಿಪು ನವೋದಯ ಶಾಲೆಗೆ ಆಯ್ಕೆ ಆಗಿದ್ದು ಕಳೆದ ಒಂದು ವರ್ಷದಿಂದ  ONELINE  ಮೂಲಕ ತರಗತಿ ನಡೆಯುತ್ತಿರುವುದಾಗಿದೆ.  ದಿನಾಂಕ 02-02-2022 ರಂದು ಮಂಗಳೂರು ನವೋದಯ ಶಾಲೆಯಿಂದ ದಿನಾಂಕ 09-02-2022 ರಂದು ಶಾಲೆ ಪ್ರಾರಂಭ ವಾಗುವುದಾಗಿ ಮಾಹಿತಿ ಬಂದಿರುತ್ತದೆ. ಈ ವಿಷಯವನ್ನು  ಮನೆಯಲ್ಲಿ ಆಕೆಗೆ ತಿಳಿಸಿದರಿಂದ  ಆಕೆಯು ಮನೆ ಬಿಟ್ಟು ಹೋಗಬೇಕೆಂದು ಬೇಸರದಿಂದ  ಇದ್ದಳು. ದಿನಾಂಕ 03-02-2022 ರಂದು  ಮನೆಯಲ್ಲಿ ಎಲ್ಲಾರು ಬೆಳಗ್ಗಿನ ತಿಂಡಿ ಮುಗಿಸಿ  ನಿಹಾರಿಕಳ ತಂದೆ  ಬೆಳಿಗ್ಗೆ 08-30 ಕಚೇರಿಗೆ ಹೋಗಿದ್ದು  ಆಗ ನಿಹಾರಿಕಳು  ಮನೆಯ ಮಹಡಿಯಲ್ಲಿರುವ ರೂಮ್‌ಗೆ ಹೋದಳು. ಪಿರ್ಯಾದಿದಾರರು  8-45 ಗಂಟೆಗೆ  ಮಹಡಿ ಮೇಲೆ ಹೋದಾಗ ಚೂಡಿದಾರ ಸಾಲನ್ನು ಪ್ಯಾನ್‌ಗೆ  ಹಾಕಿ  ಕುತ್ತಿಗೆ ನೇಣು ಬಿಗಿದು ನೇತಾಡಿಕೊಂಡಿದ್ದು  ತಕ್ಷಣವೇ  ಪಿರ್ಯಾದಿದಾರರು ಬೊಬ್ಬೆ ಹೋಡೆದಾಗ  ಅವರ ಮಾವ   ಹಗ್ಗ ಬಿಡಿಸಿ ಕೂಡಲೇ ಒಂದು ಕಾರಿನಲ್ಲಿ  ಗುತ್ತಿಗಾರು ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ  ವೈದ್ಯಾಧಿಕಾರಿಯವರು  ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ UDR  03-2022 ಕಲಂ:  174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುನೀಲ್  (30) ತಂದೆ-  ನಾರಾಯಣ ಪೂಜಾರಿ  ವಾಸ: ಶ್ರೀ ಗಣೇಶ್ ಪ್ರಸಾದ್ ಕೂಡ್ಯೆ ಮನೆ, ಸುಲ್ಕೇರಿ  ಗ್ರಾಮ,           ಬೆಳ್ತಂಗಡಿ ತಾಲೂಕು  ರವರು ಅಳದಂಗಡಿ ಅರ್ವ ಬಾರ್ ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದು ಈ ಬಾರ್ ನ ಪುಡ್ ಸೆಕ್ಷನ್ ನ್ನು ದಿನೇಶ್ ಶೆಟ್ಟಿ ಎಂಬವರು ನಡೆಸುತ್ತಿದ್ದು ಅವರು ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ಕೆಂಚಾರಿಬೆಟ್ಟು ಜಾನ್ ಡಿಸೋಜಾ ರವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು ದಿನಾಂಕ 03.02.2022 ರಂದು ಮದ್ಯಾಹ್ನ 12.00 ಗಂಟೆಯಿಂದ ಬಾರ್ ಗೆ ಬಾರದೇ ಇದ್ದು ರಾತ್ರಿ 08-00 ಗಂಟೆಯಾದರೂ ಬಾರದೇ, ದೂರವಾಣಿ ಕರೆ ಸ್ವೀಕರಿಸಿದೇ ಇದ್ದಾಗ ಪಿರ್ಯಾದಿದಾರರು ಅವರ ಗೆಳೆಯ ಶರತ್ ನೊಂದಿಗೆ ರಾತ್ರಿ 08-00 ಗಂಟೆಗೆ ಅವರ ಬಾಡಿಗೆ ಮನೆಗೆ ಬಂದು ಮನೆ ಮಾಲೀಕ ಜಾನ್ ರವರ ಮಗ ಜೋವಿನ್ ರವರ ಜೊತೆ ಬಾಡಿಗೆ ಮನೆಯನ್ನು ನೋಡಲಾಗಿ ಎದುರು ಮತ್ತು ಹಿಂಭಾಗದ ಚಿಲಕ ಹಾಕಿಕೊಂಡಿದ್ದು ಹಿಂಭಾಗದ ಕಿಟಕಿ ಸರಿಸಿ ನೋಡಲಾಗಿ ದಿನೇಶ್ ಶೆಟ್ಟಿಯವರು ಮನೆಯ ಹಿಂಭಾಗದ ಕೋಣೆಯಲ್ಲಿ ಮಹಡಿಯ ಕಬ್ಬಿಣದ ರಾಡ್ ಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬೀಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದು ಮೃತನ ಸಂಬಂದಿ  ದಿನೇಶ್ ಶೆಟ್ಟಿ ಮತ್ತು ಇತರರ ಜೊತೆ ಹಿಂಬಾಗದ ಚಿಲಕವನ್ನು ಸರಿಸಿ ಒಳಗೆ ಹೋಗಿ ನೋಡಲಾಗಿ ದಿನೇಶ್ ಶೆಟ್ಟಿಯವರು ಮೃತಪಟ್ಟಿರುವುದು ದೃಡಪಟ್ಟಿರುತ್ತದೆ, ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 02-2022 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-02-2022 10:53 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080