ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ಬಾದ್‌ ಶಾ ಕೆ.ಯು ಪ್ರಾಯ 30ವರ್ಷ, ತಂದೆ: ಉಸ್ಮಾನ್ಪಾಯಿಝೀ ವಾಸ: 1-242/1, ಮಸೀದಿ ಬಳಿ, ಬಡಗ ಮಿಜಾರ್‌, ಮಿಜಾರು ಗ್ರಾಮ, ಮಂಗಳೂರು ಎಂಬವರ ದೂರಿನಂತೆ ದಿನಾಂಕ 03-03-2022 ರಂದು 15-55 ಗಂಟೆಗೆ ಆರೋಪಿ ರಿಕ್ಷಾ ಚಾಲಕ ನವೀನ್ ಎಂಬವರು KA-21-C-1945ನೇ ನೋಂದಣಿ ನಂಬ್ರದ ಅಟೋರಿಕ್ಷಾದಲ್ಲಿ ಆಹಿಲ್‌ (9), ಶಾರದಾ, ದೀಕ್ಷ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಹಾಲಿಂಗೆಶ್ವರ ದೇವಸ್ಥಾನ-ಕೊಂಬೆಟ್ಟು ಸಾರ್ವಜನಿಕ ರಸ್ತೆಯಲ್ಲಿ ಕೊಂಬೆಟ್ಟು ಕಡೆಯಿಂದ ಮಹಾಲಿಂಗೆಶ್ವರ ದೇವಸ್ಥಾನ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬ ಗ್ರಾಮದ ಮಹಾಲೀಂಗೆಶ್ವರ ಐಟಿಐ ಕಾಲೇಜು ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್‌ ಹಾಕಿದಾಗ ಅಟೋ ರಿಕ್ಷಾ ಮುಗುಚಿ ಬಿದ್ದು ಜಾರಿಕೊಂಡು ಹೋಗಿ, ಪಿರ್ಯಾದುದಾರರಾದ ಮುಹಮ್ಮದ್‌ ಬಾದ್‌ಶಾ ಕೆ.ಯು ರವರು ಚಾಲಕರಾಗಿ ಇರ್ಷಾದ್‌ ಅಹಮ್ಮದ್‌ ಎಂಬವರನ್ನು ಕುಳ್ಳಿರಿಸಿಕೊಂಡು ಮಹಾಲಿಂಗೆಶ್ವರ ದೇವಸ್ಥಾನ ಕಡೆಯಿಂದ ಕೊಂಬೆಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-MJ-0928ನೇ ನೋಂದಣಿ ನಂಬ್ರದ ಕಾರಿನ ಮುಂಬಾಗದ ಬಲ ಮೂಲೆಗೆ ಅಪಘಾತವಾಗಿ ನಿಂತಿದ್ದು, ಅಪಘಾತದ ಪರಿಣಾಮದಿಂದ, ಆರೋಪಿ ಅಟೋರಿಕ್ಷಾ ಚಾಲಕ ನವೀನ್‌ ರವರಿಗೆ ಹಿಂಬದಿ ತಲೆಯ ಗಾಯ ಮತ್ತು ಆಹಿಲ್‌ ರವರಿಗೆ ಬಲ ಭುಜಕ್ಕೆ ಗುದ್ದಿದ ನೋವಾಗಿ, ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಟೋರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಶಾರದ, ದೀಕ್ಷ ಮತ್ತು ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಿಲ್ಲ.ಈ ಬಗ್ಗೆ ಪೊಲೀಸ್ ಪುತ್ತೂರು ಸಂಚಾರ ಠಾಣೆ  ಅ.ಕ್ರ:  38/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೇಲ್ವೆಂದ್ರ ಕುಮಾರ್ ಪ್ರಾಯ 22 ವರ್ಷ, ತಂದೆ: ಪರಮಶಿವಂ ವಾಸ: 1-153/1 ಸಿಆರ್‌ಸಿ ಕಾಲೋನಿ, ಬೆತ್ತೋಡಿ, ಸುಂಕದಕಟ್ಟೆ ಅಂಚೆ, ಐತ್ತೋರ್‌ ಗ್ರಾಮ, ಕಡಬ ಎಂಬವರ ದೂರಿನಂತೆ ದಿನಾಂಕ 03-03-2022 ರಂದು 18-00 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಜೋಸ್ ಮ್ಯಾಥ್ಯು ಎಂಬವರು KA-21-Q-7234ನೇ ನೋಂದಣಿ ನಂಬ್ರದ ಸ್ಕೂಟರನ್ನು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ  ಹೆದ್ದಾರಿಯ ಎಡ ಬಾಗದ ಮಣ್ಣು ರಸ್ತೆಯಿಂದ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ಪಿರ್ಯಾದುದಾರರಾದ ಸೆಲ್ವೇಂದ್ರ ಕುಮಾರ್ ರವರು ಮಂಗಳೂರು ಕಡೆಯಿಂದ ಕಡಬ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EC-1916ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಎರಡೂ ವಾಹನಗಳ ಸಮೇತ ರಸ್ತೆಗೆ ಬಿದ್ದು, ಆರೋಪಿ ಸ್ಕೂಟರ್ ಸವಾರ ಜೋಸ್ ಮ್ಯಾಥ್ಯು  ರವರಿಗೆ ತಲೆಗೆ ರಕ್ತವಾಗಿ ಚಿಕಿತ್ಸೆಯ ಬಗ್ಗೆ ಒಂದು ಆಂಬ್ಯೂಲೇನ್ಸ್ ನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ. ಪಿರ್ಯಾದುದಾರರಿಗೆ ಎಡ ಮೊಣ ಕೈ, ಬಲ ಮೊಣ ಕಾಲಿಗೆ ಹಾಗೂ ದೇಹದ ಅಲ್ಲಲ್ಲಿ ಗುದ್ದಿದ, ತರಚಿದ ನೋವಾಗಿದ್ದು ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  39/2022 ಕಲಂ: 279,337ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಪ್ರಸಾದ ಪ್ರಾಯ 40 ವರ್ಷ ತಂದೆ:ವೆಂಕಪ್ಪ ಮೂಲ್ಯ ವಾಸ:ಕಡಂಬು ಮನೆ, ವಿಟ್ಲ ಪಡ್ನೂರು ಗ್ರಾಮ ಬಂಟ್ವಾಳ ತಾಲೂಕುಎಂಬವರ ದೂರಿನಂತೆ ದಿನಾಂಕ: 03-03-2022 ರಂದು ಫಿರ್ಯಾದುದಾರರು ಬಂಟ್ವಾಳ ತಾಲೂಕು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಹಿಂಬದಿ ಸನ್ನಿಧಿ ಹಾರ್ಡ್‌ವೇರ್ ಗೆ ಪೈಂಟ್ ಖರೀದಿಸಲು ಬಂದಾಗ ಸಮಯ 07-45 ಗಂಟೆಗೆ ಅಂಗಡಿಯ ಮುಂಭಾಗದ ಮಂಗಳೂರು–ವಿಟ್ಲ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ವಿಟ್ಲ ಕಡೆಗೆ ಎರಡು ಆಕ್ಟಿವಾ ವಾಹನದ ಮಧ್ಯೆ  ಅಪಘಾತವಾಗಿ ಆಕ್ಟಿವಾ ಸವಾರ ರಸ್ತೆಗೆ ಎಸೆಯಲ್ಪಟ್ಟದ್ದನ್ನು ಫಿರ್ಯಾದುದಾರರು ತಕ್ಷಣ ಹೋಗಿ ನೋಡಲಾಗಿ ಎಸೆಯಲ್ಪಟ್ಟ ವ್ಯಕ್ತಿಯ ಬಲ ಬದಿಯ ಎದೆ ಭಾಗಕ್ಕೆ ಮತ್ತು ಬಲಕಿವಿಯ ಭಾಗಕ್ಕೆ ಹಾಗೂ ದೇಹದ ಇತರ ಭಾಗಗಳಿಗೆ ರಕ್ತ ಗಾಯವಾಗಿದ್ದು ಕೂಡಲೇ ವಾಹನವೊಂದರಲ್ಲಿ ಸರಕಾರಿ ಆಸ್ಪತ್ರೆ ವಿಟ್ಲಕ್ಕೆ ಕೊಂಡೊಯ್ದು ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 36/2022  ಕಲಂ: 279,337   ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಮನ್ಸೂರ್ (30) ತಂದೆ:ಇಸ್ಮಾಯಿಲ್ವಾಸ: ಮೇಗಿನ ಮನೆ, ಚಾರ್ಮಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 03-03-2022 ರಂದು ಸಮಯ ಸುಮಾರು ಬೆಳಿಗ್ಗೆ 10.15 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಮಹಾವೀರ ಸೂಪರ್‌ ಮಾರ್ಕೆಟ್‌ ಬಳಿ ಪಾದಚಾರಿ ಫಾರೂಕ್‌ ಎಂಬವರು ರಸ್ತೆ ದಾಟುತ್ತಿರುವಾಗ ಧರ್ಮಸ್ಥಳ ಕಡೆಯಿಂದ ಉಜಿರೆ ಜಂಕ್ಷನ್‌ ಕಡೆಗೆ ಕೆಎ 21 ಇಬಿ 8071 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಾದಚಾರಿಗೆ ಢಿಕ್ಕಿಹೊಡೆದನು ಪರಿಣಾಮ ಪಾದಚಾರಿ ಫಾರೂಕ್‌ರವರು  ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ, ಎದೆಗೆ ಗುದ್ದಿದ ಗಾಯ ಎರಡು ಕೈಗಳಿಗೆ ತರಚಿದ ಗಾಯಾವಾಗಿದ್ದು,  ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಗೆ ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 39/2022 ಕಲಂ; 279,337ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ರಹಿಮಾನ್, ಪ್ರಾಯ: 38 ವರ್ಷ, ತಂದೆ: ಹಸೈನಾರ್, ವಾಸ: ಮುಳಿಯಡ್ಕ ಮನೆ, ಒಳಮೊಗ್ರು  ಗ್ರಾಮ, ಕುಂಬ್ರ ಅಂಚೆ,  ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ: 19.02.2022 ರಂದು ಸುಮಾರು 5 ಗಂಟೆ ಸಮಯಕ್ಕೆ ಸುಳ್ಯ ತಾಲೂಕು ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗೌರವ ಗಾರ್ಡನ್ ಹೋಟೆಲ್ ನ ಸುಮಾರು 200 ಮೀಟರ್ ದೂರದಲ್ಲಿ ರಸ್ತೆ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುವ ರಾಜ್ಯ ಹೆದ್ದಾರಿ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಬಿಳಿಬಣ್ಣದ ಓಮ್ನಿಕಾರೊಂದು ಅದರ ಚಾಲಕನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಮತ್ತು ಕಾಲುಗಳು ಸಂಪೂರ್ಣವಾಗಿ ಜಖಂಗೊಂಡು ಮತ್ತು ದೇಹದ ಇತರ ಭಾಗಗಳಿಗೂ ಗುದ್ದಿದ ಗಾಯವಾಗಿದ್ದು, ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಉಪಚರಿಸಿ ವಾಹನವೊಂದರಲ್ಲಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ  ಅ.ಕ್ರ ನಂಬ್ರ  : 26-2022 ಕಲಂ: 279, 337, 338  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 25.07.2021 ರಂದು ಪ್ರಕರಣದ ಸಂತ್ರಸ್ಥ ಬಾಲಕಿಯು ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಆಕೆಯ  ಬಾವನು ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಕ್ರಿಯೆ ನಡೆಸಿರುತ್ತಾನೆ. ತದ ನಂತರ ದಿನಾಂಕ:05.08.2021 ರಂದು ಆರೋಪಿಯ ಮನೆಗೆ ಹೋಗಿದ್ದ ವೇಳೆಯಲ್ಲಿ ಫಿರ್ಯಾದಿದಾರರ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿದೆ. ಈ ಬಗ್ಗೆ ದಿನಾಂಕ: 03.03.2022ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 14/2022 ಕಲಂ: 4 & 6 ಫೋಕ್ಸೋ ಕಾಯ್ದೆ & 376 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಪೊಲೀಸ್ ಠಾಣೆ : ಪ್ರಕರಣದ ಸಂತ್ರಸ್ಥ ಬಾಲಕಿಯು 9ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಂದೆಯ ಗೆಳೆಯ ಹಾಗೂ ಚಿಕ್ಕಂದಿನಿಂದಲೂ ಪರಿಚಯವಿರುವ ಆರೋಪಿಯು ಸಂತ್ರಸ್ಥ ಬಾಲಕಿಯನ್ನು ಶಾಲೆಗೆ ಆತನ ಬಾಬ್ತು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದು, ಅದರಂತೆ ದಿನಾಂಕ 19.12.2021 ರಂದು ಆರೋಪಿಯು ಆತನ ಬಾಬ್ತು ಬೈಕಿನಲ್ಲಿ ಕರೆದುಕೊಂಡು ಹೋಗಿ ಮರಳಿ ನಂತರ ಮನೆಕಡೆಗೆ ಬರುತ್ತಾ ಹೊಸದಾಗಿ ಕಟ್ಟಿಸಿದ ವಾಸವಿಲ್ಲದ ಮನೆಗೆ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಕರೆದುಕೊಂಡು ಹೋಗಿ ಪುಸಲಾಯಿಸಿ ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿದೆ. ಅಲ್ಲದೆ ಆರೋಪಿ ಇದೇ ರೀತಿ  3-4 ಬಾರಿ ರಾತ್ರಿ ಸಮಯ ಪಿರ್ಯಾದಿದಾರರನ್ನು ಬೈಕಿನಲ್ಲಿ ಅದೇ ಮನೆಗೆ ಕರೆದುಕೊಂಡು ಹೋಗಿ ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಕ್ರೀಯೆಯನ್ನು ನಡೆಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 15/2022 ಕಲಂ: 376 IPC  ಕಲಂ 4,6 ಪೋಕ್ಸೋ ಕಾಯ್ದೆ 2012 ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಂಬವರ ದೂರಿನಂತೆ ಪಿರ್ಯಾದುದಾರರು ರಜತಾದ್ರಿ ವಸತಿ ಗೃಹದಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ;02-03-2022 ರಂದು  ಸಮಯ  ಸುಮಾರು 17.47 ಗಂಟೆಗೆ ಬೆಂಗಳೂರಿನ ಶ್ರೀಮತಿ  ಗೋಮತಿ  ಪ್ರಾಯ:45 ವರ್ಷ ಎಂಬವರು  ರಜತಾದ್ರಿ ವಸತಿ ಗೃಹದ ಕೊಠಡಿ ಸಂಖ್ಯೆ 149 ರಲ್ಲಿ ರೂಮ್ ಪಡೆದುಕೊಂಡಿರುತ್ತಾರೆ. ದಿನಾಂಕ;03-03-2022 ರಂದು ಸಂಜೆ ಸಮಯ ಸುಮಾರು 17.30 ಗಂಟೆಗೆ ಶ್ರೀಮತಿ  ಗೋಮತಿ  ರವರು ಉಳಿದುಕೊಂಡ ರೂಮ್ ನ ಬಾಗಿಲು ತೆರೆಯದಿದ್ದಾಗ ಪಿರ್ಯಾದುದಾರರು ಹಾಗೂ  ಕೆಲಸ ಮಾಡುವ ಪುನೀತ್ ಮತ್ತು ಉಮೇಶ ರವರೊಂದಿಗೆ ಬಾಗಿಲು  ಬಡೇದಾಗ ರೂಮ್ ನ ಒಳಗಿನಿಂದ  ಯಾವುದೇ ಮಾತುಗಳು ಕೇಳಿಬಂದಿರುವುದಿಲ್ಲ. ತಕ್ಷಣ ಪಿರ್ಯಾದುದಾರರು ಮತ್ತು  ಇತರ ಕೆಲಸದಾಳುಗಳಿಗೆ ಮಾಹಿತಿ ನೀಡಿ ನಂತರ ಹೆಸರು ವಿಳಾಸ ತಿಳಿದುಬಂದ ಕಾರಣ ಮೃತರ ಗಂಡ ಶ್ರೀನಿವಾಸರಿಗೆ ಮಾಹಿತಿ ನೀಡಿ ಅವರ ಒಪ್ಪಿಗೆ ಪಡೆದು ಬಾಗಿಲನ್ನು ಹೊಡೆದು ಒಳ ಹೊಕ್ಕಿ ನೋಡಿದಾಗ ಸದ್ರಿ  ಮೃತೆ ಮಹಿಳೆಯು  ನಸು ಹಳದಿ ಬಣ್ಣದ ವೇಲ್ ನಿಂದ  ಕೊಠಡಿಯಲ್ಲಿರುವ ಫ್ಯಾನ್ ನಿಗೆ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಯು ಡಿ ಆರ್ 14/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-03-2022 03:19 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080