ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುನಿಲ್‌ಕುಮಾರ್‌ ಪ್ರಾಯ 28 ವರ್ಷ ತಂದೆ:ಕೃಷ್ಣ್‌ ನಾಯ್ಕ್‌ ವಾಸ:ಅಲಂಗಾರು ಮನೆ, ವಿಟ್ಲ ಕಸಬ ಗ್ರಾಮ  ಬಂಟ್ವಾಳ ತಾಲೂಕು ರವರು ದಿನಾಂಕ:02-04-2021 ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ನಾಲ್ಕು ಮಾರ್ಗ ಜಂಕ್ಷನ್‌ ಬಳಿ ಜ್ಯೋತಿ ಚಿಕನ್‌ ಸೆಂಟರ್‌ನ ಎದುರು ತನ್ನ ಬಾಬ್ತು KA-19-HB-6778ನೇ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ರಸ್ತೆಯ ಎಡ ಬದಿಯಲ್ಲಿ ಬರುತ್ತಿರುವ ಸಮಯ KA-19-MH-9310ನೇ ಕಾರನ್ನು ಅದರ ಚಾಲಕ ಪುಷ್ಪರಾಜ ಎಂಬವರು ಒಳ ರಸ್ತೆಯಿಂದ ಏಕಾಏಕಿ ಮುಖ್ಯ ರಸ್ತೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾಧಿದಾರರ ಮೊಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಎಡ ಕೋಲು ಕೈಗೆ ಮತ್ತು ಎಡ ಕಾಲಿನ ಮೊಣಗಂಟಿಗೆ ,ಗಾಯಗಳು ಉಂಟಾಗಿ ವಿಟ್ಲ ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 47/2021  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅರುಣ್ ಪಾಯಸ್ (36) ತಂದೆ:ವಿಕ್ಟರ್ ಪಾಯಸ್,  ವಾಸ: ಜೋಡುಹಳ್ಳ ಮನೆ  ,ಲಾಯಿಲಾ  ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ 03-04-2021 ರಂದು ಅವರ  ಕೆಎ 20 ಎನ್ 9165 ನೇ ಬೊಲೆರೋ ಜೀಪಿನಲ್ಲಿ ತನ್ನ  ತಾಯಿ ಸ್ಟೆಲ್ಲಾ ಪೆರ್ನಾಂಡೀಸ್ ,ತಂದೆ ವಿಕ್ಟರ್ ಪಾಯಸ್, ಅಕ್ಕ ಲವೀನಾ ಮೋರಸ್ , ಮಗ ಜೋಸ್ಟನ್ ಪಾಯಸ್, ಅಣ್ಣನ  ಮಗಳು ಮೇಲಿಸಾ ಪಾಯಸ್ ರವರನ್ನು ಕರೆದುಕೊಂಡು ತನ್ನ  ಮನೆಯಿಂದ  ಬೆಳ್ತಂಗಡಿ ತಾಲೂಕು  ಪಿಲ್ಯ ಗ್ರಾಮದಲ್ಲಿ ಬೇಬಿ ಪಂಡಿತರ ಮನೆಗೆ ನಾಟಿ ವೈದ್ಯರ ಬಳಿ ಜೌಷದಿ ಪಡೆಯಲು ಹೋಗಿ ಜೌಷದಿ ಪಡೆದು ವಾಪಾಸು ಅವರ ಮನೆ ಕಡೆ ಹೋಗುತ್ತಾ ಬೆಳ್ತಂಗಡಿ ತಾಲೂಕು ಪಿಲ್ಯ ಗ್ರಾಮದ ಗುಡ್ ಪ್ಯೂಚರ್ ಶಾಲೆಯ ಮುಂಭಾಗದಲ್ಲಿ ಹಾದುಹೋಗುವ  ಕಾರ್ಕಳ ಬೆಳ್ತಂಗಡಿ ರಸ್ತೆಯಲ್ಲಿ ಹೋಗುತ್ತಾ ಪಿರ್ಯದಿದಾರರ  ಎದುರಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಕಾರ್ಕಳ ಕಡೆಗೆ ಕೆಎ 35 ಎಂ 6683 ನೇ ಮಾರುತಿ 800 ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ವಾಹನದಲಿದ್ದ, ವಿಕ್ಟರ್ ಪಾಯಸ್, ಅಕ್ಕ ಲವೀನಾ ಮೋರಸ್ ,  ಜೋಸ್ಟನ್ ಪಾಯಸ್, ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಲ್ಲದೇ  ಡಿಕ್ಕಿಹೊಡೆದ ಮಾರುತಿ 800 ಕಾರಿನಲ್ಲಿದ್ದ ಕಾರಿನ ಚಾಲಕ ರವಿ ಮತ್ತು ಗಂಗಾ  ತೀವ್ರ ಗಾಯಗಳಾಗಿದ್ದು ಮತ್ತು ಅದರಲ್ಲಿದ್ದ ಹುಡುಗಿ ಗಾಯಗೊಂಡಿದ್ದು  ಅವರನ್ನು ಅಲ್ಲಿದ್ದ ಸಾರ್ವಜನಿಕರ ಜೊತೆ ಉಪಚರಿಸಿ ಖಾಸಗಿ ಅಂಬ್ಯುಲೆನ್ಸ್  ಒಂದರಲ್ಲಿ ಮತ್ತು ಪಿರ್ಯಾದಿದಾರರ  ವಾಹನದಲ್ಲಿದವರನ್ನು ಖಾಸಗಿ ವಾಹನವೊಂದರಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರಗೆ ಕೊಂಡುಹೋಗಿದ್ದು , ಪಿರ್ಯಾದಿದಾರರ ವಾಹನದಲ್ಲಿದ್ದವರು  ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ, ಅಲ್ಲದೇ  ಮಾರುತಿ 800 ಕಾರಿನ ಚಾಲಕ ರವಿ ಮತ್ತು ಹೆಂಗಸು ಗಂಗಾರವರನ್ನು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಕಾರಿನ ಚಾಲಕ ರವಿ ಎಂಬವರು ಮೃತಪಟ್ಟಿರುತ್ತಾರೆ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ  24-21 ಕಲಂ 279, 337, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಿನೇಶ್ ಶೆಟ್ಟಿ  ಪ್ರಾಯ: 37  ವರ್ಷ ತಂದೆ  ಗೋಪಾಲ ಶೆಟ್ಟಿ ವಾಸ ; ಕಳಾರ  ಮನೆ ಗ್ರಾಮ; ಕಡಬ  ಗ್ರಾಮ ಕಡಬ ತಾಲೂಕು ನೀಡಿದ ದೂರಿನಂತೆ ದಿನಾಂಕ: 02.04.2021 ರಂದು ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನಡೆದ ಏಕಾಹ ಭಜನಾ ಕಾರ್ಯಕ್ರಮಕ್ಕೆ ಪಿರ್ಯಾದುದಾರರು ತನ್ನ ಮಾವನ ಮಗ ಚೇತನ್ ಕೆ ಪ್ರಾಯ 12 ವರ್ಷ ಎಂಬವರನ್ನು ಕರೆದುಕೊಂಡು ಬಂದಿದ್ದು ದೇವಸ್ಥಾನಕ್ಕೆ ಹೋಗಿ ಕಡಬ ತಾಲೂಕು, ಕೋಡಿಂಬಾಳ ಗ್ರಾಮದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಕಡಬ –ಉಪ್ಪಿನಂಗಡಿ ರಾಜ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ಕಚ್ಚಾ ಮಣ್ಣು ರಸ್ತೆಯಲ್ಲಿ ಪಿರ್ಯಾದಿ ಹಾಗೂ ಚೇತನ್ ನಿಂತುಕೊಂಡಿರುವಾಗ ಮೋಟಾರ್ ಸೈಕಲ್ ಸವಾರನೊಬ್ಬ ತೀರ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಚ್ಚಾ  ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಚೇತನ್‌ನಿಗೆ ಡಿಕ್ಕಿ ಹೊಡೆದ ಪರಿಣಾಮ ಚೇತನ್ ಕಚ್ಚಾ ಮಣ್ಣು ರಸ್ತೆಗೆ ಬಿದ್ದಿದ್ದು ಅಷ್ಟರಲ್ಲಿ ಪಿರ್ಯಾದುದಾರರು ಹಾಗೂ ಸಂಜೀವ ರೈ ಮತ್ತು ಜಗನ್ನಾಥ ರೈ ಸೇರಿ ಉಪಚರಿಸಿ ನೋಡಲಾಗಿ ಚೇತನ್ ರವರಿಗೆ ಬಲಕಾಲಿನ ಮಣಿಗಂಟಿಗೆ, ಬಲ ಕೈಯ ತಟ್ಟಿನ ಬಳಿ ತೆರಚಿದ ಗಾಯವಾಗಿದ್ದು ಡಿಕ್ಕಿ ಉಂಟುಮಾಡಿದ ಬೈಕ್ ನಂಬ್ರ ನೋಡಲಾಗಿ  KA-21,EA-3486 ನೇ ಆಗಿದ್ದು ಸವಾರನ ಹೆಸರು ಕೇಳಲಾಗಿ ಲೋಕೇಶ್ ಎಂಬುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 28/2021  ಕಲಂ 279 337 IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋಹನ್ ಗೌಡ (39),ತಂದೆ: ತಿಮ್ಮಪ್ಪ ಗೌಡ, ವಾಸ: ಜನನಿ ಮನೆ,ಮಾಣಿಬೆಟ್ಟು, ಕಾವಳಪಡೂರು ಗ್ರಾಮ, ವಗ್ಗ ಅಂಚೆ, ಬಂಟ್ವಾಳ ತಾಲೂಕು ರವರು ಬಂಟ್ವಾಳ ತಾಲೂಕು, ಕೊಡಂಬೆಟ್ಟು ಗ್ರಾಮದ ಮಜಲು ಎಂಬಲ್ಲಿ ಅಡಿಕೆ ತೆಂಗು ಕೃಷಿ ಇರುವ 90 ಸೆಂಟ್ಸ್ ಕೃಷಿ ಜಮೀನು ಇದ್ದು ಈ ತೋಟದ ಮೂಲಕ ಆರೋಪಿ ಕಾಂತಪ್ಪ ಪೂಜಾರಿ  ಎಂಬಾತನು ಆತನ ಮನೆಗೆ ಶ್ಯಾಮ್ ಭಟ್ ಎಂಬವರ ಕೆರೆಯಿಂದ ನೀರು ತೆಗೆದುಕೊಂಡು ಹೋಗುತ್ತಿದ್ದು, ದಿನಾಂಕ: 26.03.2021 ರಂದು ಆತನು ತೋಟದ ಮೂಲಕ ಹಾದು ಹೋಗುತ್ತಿರುವಾಗ ಫಿರ್ಯಾಧಿದಾರರ ಕೃಷಿ ತೋಟದಲ್ಲಿರುವ ಸ್ಪಿಂಕ್ಲರ್ ಗಳನ್ನು ತೆಗೆದು ಬಿಸಾಡುತ್ತಿರುವುದನ್ನು ಕಂಡು ಫಿರ್ಯಾಧಿದಾರರು ಆತನಲ್ಲಿ ಸ್ಪಿಂಕ್ಲರ್ ಗಳನ್ನು ಯಾಕೆ ತೆಗೆದು ಬಿಸಾಡಿದ್ದಿರಿ, ಮುಂದಕ್ಕೆ ಹೀಗೆ ಮಾಡಿದರೆ ತೋಟದಲ್ಲಿ ನಿಮಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿದಾಗ ಆರೋಪಿಯು ಏನು ಮಾತನಾಡದೇ ಅಲ್ಲಿಂದ ಹೋಗಿರುತ್ತಾನೆ. ದಿನಾಂಕ: 27.03.2021 ರಂದು  ಫಿರ್ಯಾಧಿದಾರರು ಕೃಷಿ ತೋಟದಲ್ಲಿ ಅಡಿಕೆ ಹಾಗು ತೆಂಗಿಗೆ ನೀರು ಹಾಯಿಸುತ್ತಿರುವ ಸಮಯ ಕಾಂತಪ್ಪ ಪೂಜಾರಿ ರವರು ಕತ್ತಿಯನ್ನು ಹಿಡಿದುಕೊಂಡು ತೋಟಕ್ಕೆ ಅಕ್ರಮ ಪ್ರವೇಶ ಮಾಡಿಕೊಂಡು ಬಂದು ಅವಾಚ್ಯ ಶಬ್ದದಿಂದ ಬೈದು ಆತನ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾಧಿದಾರರ ಬಲ ಕೈ ಮುಂಗೈ ಹಾಗೂ ಮಣಿಗಂಟಿಗೆ ಕಡಿದ ಪರಿಣಾಮ ಕೈಗೆ ರಕ್ತಗಾಯವಾಗಿದ್ದು, ಫಿರ್ಯಾಧಿದಾರರು ಈ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 17/2021 ಕಲಂ: 447, 324, 504 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಯಾನಂದ ಎ ಪ್ರಾಯ:44 ವರ್ಷ ತಂದೆ: ದಿ/ ಬಾಬು ಗೌಡ ವಾಸ: ಅರ್ಬಿ ಮನೆ ತೋಟತ್ತಾಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಮ್ಮ ಸುರೇಶ ಎಂಬವನು ದಿನಾಂಕ:03-04-2021 ರಂದು ಪಿರ್ಯಾದುದಾರರಿಗೆ ದೂರವಾಣಿ ಕರೆಮಾಡಿ ದಿನಾಂಕ;02/04/2021 ರಂದು ಮಧ್ಯಾಹ್ನ ಪಿರ್ಯಾದುದಾರರ ಅಣ್ಣ ಗಂಗಯ್ಯ ಗೌಡ (56) ಎಂಬವರು ಮನೆಯಲ್ಲಿ  ಅತ್ತಿಗೆಯಲ್ಲಿ ಬಾಡಿಗೆ ಇದೆ ಎಂಬುದಾಗಿ ಹೇಳಿ ಮನೆಯಿಂದ ಹೋದವರು ಇಲ್ಲಿವರೆಗೆ ಬಂದಿರುವುದಿಲ್ಲ ಎಂದು ತಿಳಿಸಿದಂತೆ ಪಿರ್ಯಾದುದಾರರು ಹಾಗೂ ಅವರ ತಮ್ಮ ಸುರೇಶ ಹಾಗೂ ಊರಿನವರು ಸೇರಿ ಹುಡುಕಾಡುತ್ತಿರುವಾಗ ತೋಟತ್ತಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ಪಿರ್ಯಾದುದಾರರ ಅಣ್ಣ ಗಂಗಯ್ಯ ಗೌಡ ರವರ ಆಟೋ ರಿಕ್ಷಾ ನಿಂತಿರುತ್ತದೆ ಎಂಬುದಾಗಿ ಬಂದ ಮಾಹಿತಿಯಂತೆ ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ತಮ್ಮ ಸುರೇಶ ಹಾಗೂ ಸ್ಥಳಿಯರು ಸೇರಿ ಹುಡುಕಾಡುತ್ತಿರುವಾಗ  ಡೆನ್ನಿ ಪಿ ಡಿ ಎಂಬವರ ಅಡಿಕೆ ತೋಟದ ಒಂದು ಬದಿಯಲ್ಲಿ  ಪಿರ್ಯಾದುದಾರರ ಅಣ್ಣ ಗಂಗಯ್ಯ ಗೌಡ ರವರು ಮಗುಚಿ ಮಲಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದ್ದು ಪಿರ್ಯಾದುದಾರರು ಮಗುಚಿ ನೋಡಿದಾಗ ಅವರು ಮೃತಪಟ್ಟಿರುವುದು ಖಚಿತಗೊಂಡಿರುತ್ತದೆ. ಅಲ್ಲದೇ ಮೃತ ದೇಹವು ಅರೆನಗ್ನ ಸ್ಥಿತಿಯಲ್ಲಿದ್ದು ಅದರ  ತಲೆ ಕಾಲು ಬೆರಳಿಗೆ ರಕ್ತಗಾಯವಾಗಿರುವುದು ಕಂಡುಬರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:26/2021 ಕಲಂ:174(iii)&(iv) ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-04-2021 11:01 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080