ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭವಾನಿಶಂಕರ್‌ ,ಪ್ರಾಯ  48 ವರ್ಷ,  ತಂದೆ: ಸುಬ್ಬಪ್ಪ ಗೌಡ, ಮಲ್ಲಿಗೆ ಮಜಲು  ಮನೆ, ಸುಬ್ರಹ್ಮಣ್ಯ ಗ್ರಾಮ, ಕಡಬ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ  03-04-2022  ರಂದು ಮದ್ಯಾಹ್ನ 12-15 ಗಂಟೆ ಸಮಯ ಹೊಟೇಲ್‌ನಲ್ಲಿ ಗ್ರಾಹಕರು ಯಾರು ಇಲ್ಲದೇ ಇದ್ದುದರಿಂದ ಹೊಟೇಲ್‌ನ ಎದುರುಗಡೆ ನಿಂತುಕೊಂಡಿದ್ದಾಗ ಕುಮಾರಧಾರ ಕಡೆಯಿಂದ  ಸುಬ್ರಹ್ಮಣ್ಯ  ದೇವಸ್ಥಾನದ  ಕಡೆಗೆ ಒಂದು ದ್ವಿಚಕ್ರ ವಾಹನವನ್ನು ಅದರ ಸವಾರ  ಚಲಾಯಿಸಿಕೊಂಡು ಬಂದು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ವಲ್ಲೀಶ ಸಭಾ ಭವನದ ಕಡೆ ಬಲಕ್ಕೆ ತಿರುಗಿಸುತ್ತಿದ್ದಾಗ ಹಿಂದುಗಡೆಯಿಂದ ಒಂದು ನೀಲಿ ಬಣ್ಣದ ಕಾರನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ದ್ವಿಚಕ್ರ ವಾಹನ ಸವಾರರು ವಾಹನದಿಂದ ಎಸೆಯಲ್ಪಟ್ಟು ಕಾಂಕ್ರೀಟ್‌ ರೋಡ್‌ ಮೇಲೆ ಬಿದ್ದಿದ್ದು, ಪಿರ್ಯಾದಿದಾರರು ಅಲ್ಲಿಗೆ ಕೂಡಲೇ ಓಡಿ ಹೋಗಿ ನೋಡಿದಾಗ ಅವರಿಗೆ ಎರಡು ಕಾಲಿಗೆ ಹಾಗೂ ತಲೆಗೆ ತೀವ್ರ ತರದ  ಗಾಯವಾಗಿದ್ದು, ಅವರು ಕುಲ್ಕುಂದದ ನಿವಾಸಿ ಪೆರ್ಗಡೆ ಗೌಡ ಎಂಬವರಾಗಿದ್ದು, ಅವರನ್ನು ಅರೈಕೆ ಮಾಡಿ  ಒಂದು ಅಂಬುಲೇನ್ಸ್‌ ತರಿಸಿ ಕಡಬ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿದ್ದು, ಬಳಿಕ ಅಲ್ಲಿನ ವೈದ್ಯಾಧಿಕಾರಿಗಳು ಪರೀಕ್ಷಿಸಿ  ಮದ್ಯಾಹ್ನ  ಸುಮಾರು 01-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಡಿಕ್ಕಿ ಹೊಡೆದ ಕಾರಿನ ನಂಬ್ರ ನೋಡಲಾಗಿ ಕೆಎ 51 ಎಂಎನ್‌ 0063 ಆಗಿದ್ದು, ಚಾಲಕನ ಹೆಸರು ಕಿಶೋರ್‌ ಎಂಬುದಾಗಿ ಹಾಗೂ ದ್ವಿಚಕ್ರ ವಾಹನದ ನಂಬ್ರ ನೋಡಲಾಗಿ ಕೆಎ 21 ಯು 3722 ಕಂಡು ಬಂದಿರುತ್ತದೆ.  .ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ   ಅ.ಕ್ರ ನಂಬ್ರ 43/2022 ಕಲಂ 279,304(a) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

 • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಿದ್ದು ಮಡಿವಾಳ     (65), ತಂದೆ; ಈಶ್ವರ ಮಡಿವಾಳ              ವಾಸ; ಕಿಲಾರ     ಮನೆ,   ಅಂಡಿಂಜೆ  ಗ್ರಾಮ ಬೆಳ್ತಂಗಡಿ  ಎಂಬವರ ದೂರಿನಂತೆ ಫಿರ್ಯಾದಿದಾರರ ಹೆಂಡತಿ   ಶ್ರೀಮತಿ  ಜಿನ್ನಮ್ಮ(56)       ಎಂಬವರು   ಸುಮಾರು  3- 4 ವರ್ಷಗಳಿಂದ  ಮಾನಸಿಕ ಖಿನ್ನತೆಗೆ  ಒಳಪಟ್ಟು ಮಂಗಳೂರು ಪಾಧರ್  ಮುಲ್ಲರ್ಸ್   ಆಸ್ಪತ್ರೆಯಿಂದ  ಚಿಕಿತ್ಸೆ ಪಡೆಯುತ್ತಿದ್ದರು.  ದಿನಾಂಕ: 03-04-2022 ರಂದು  ಮಧ್ಯಾಹ್ನ 11:30  ಗಂಟೆಯಿಂದ 12:00 ಗಂಟೆಯ  ಮದ್ಯ  ಅವಧಿಯಲ್ಲಿ  ಮಾನಸಿಕ ಖಿನ್ನತೆಯಿಂದ  ಬೆಳ್ತಂಗಡಿ  ತಾಲೂಕು ಅಂಡಿಂಜೆ   ಗ್ರಾಮದ   ಕಿಲಾರ ದ ವಾಸ್ತವ್ಯದ  ಮನೆಯ  ಮಹಡಿಯ  ಅಡ್ಡಕ್ಕೆ  ಹಾಕಿದ  ಕಬ್ಬಿಣದ ರಾಡಿಗೆ  ಇಸ್ತ್ರೀ ಪೆಟ್ಟಿಗೆ ಗೆ  ಅಳವಡಿಸುವ   ವಯರ್ ನಿಂದ  ಕುತ್ತಿಗೆಗೆ ನೇಣು  ಬಿಗಿದು   ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 08-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾವುರ  ಪ್ರಾಯ: 48 ವರ್ಷ,ತಂದೆ ; ಧಿ. ಪಕೀರ ;ವಾಸ: ಮಜ್ಜಗುಡ್ಡೆ ಮನೆ ಕಡಬ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರಿಗೆ ಇಬ್ಬರು ಮಕ್ಕಳಿದ್ದು ಮೊದಲನೆಯ ಮಗ ನಿತೇಶ್ ಪ್ರಾಯ 18 ವರ್ಷ  ಎಂಬುವರು ತಾಂತ್ರಿಕ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ 03.04.2022 ರಂದು  ಮದ್ಯಾಹ್ನ ನಿತೇಶ್ ಆತನ ಸ್ನೇಹಿತರಾದ ಚಿರಂಜೀವಿ ಹರೀಶ್ ಶ್ರೀಧರ ಎಂಬುವರ ಜೋತೆಯಲ್ಲಿ ಕುಮಾರಧಾರ ನದಿ ನೀರಿನಲ್ಲಿ ಸ್ನಾನ ಮಾಡುವರೇ ಕಂಗುಳೆ ಎಂಬಲ್ಲಿ ಹೋಗಿದ್ದು  ಮದ್ಯಾಹ್ನ 15-20 ಗಂಟೆಗೆ ಚಿರಂಜೀವಿ ಎಂಬವರು ದೂರವಾಣಿ ಕರೆ ಮಾಡಿ  ನಿತೇಶ್ ಮದ್ಯಾಹ್ನ 15-15 ಗಂಟೆಗೆ  ಕಂಗೊಳೆ ಎಂಬಲ್ಲಿ ಕುಮಾರಧಾರ ನದಿ ನೀರಿನಲ್ಲಿ ಮುಳುಗಿರುವುದಾಗಿ  ತಿಳಿಸಿದ್ದು ಆ ಕೂಡಲೇ ಪಿರ್ಯಾದುದಾರರು  ನದಿ ದಡಕ್ಕೆ ಹೋಗಿ  ನೆರೆಕರೆಯವರನ್ನು ಬರಹೇಳಿ ನಂತರ  ನೆರೆಕರೆಯವರಾದ ದಯಾನಂದ ಗೌಡ ಮತ್ತು ಮುರುಳಿಯವರು ನದಿ ನೀರಿನಲ್ಲಿ ಹುಡುಕಾಡಿದಲ್ಲಿ ಮೃತ ದೇಹವು ಮದ್ಯಾಹ್ನ 15-45 ಗಂಟೆಗೆ ದೊರೆತ್ತಿರುವುದಾಗಿದೆ  ನಿತೇಶ್ ಎಂಬುವರು ಕುಮಾರಧಾರ ನದಿ ನೀರಿನಲ್ಲಿ ಸ್ನಾನ ಮಾಡುತ್ತಿರುವಾಗ  ಅಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ಮೇಲಕ್ಕೆ ಬರಲಾಗದೇ ಉಸಿರುಗಟ್ಟಿ ಮೃತ ಪಟ್ಟಿರುವುದಾಗಿದ್ದು. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;14/2022 ಕಲಂ. 174 Crpc   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ನಳಿನಿ  ಪ್ರಾಯ; 39 ವರ್ಷ ಗಂಡ; ಶ್ರೀಧರ ಗೌಡ ವಾಸ; ಅತ್ಯಾರ ಮನೆ ಕೊಯ್ಯೂರು  ಗ್ರಾಮ ಬೆಳ್ತಂಗಡಿ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡನಾದ ಶ್ರೀಧರ ಗೌಡ ಎಂಬಾತನು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 03.04.2022ರಂದು ಅಪರಾಹ್ನ  ಸುಮಾರು 03ಗಂಟೆ ವೇಳೆಗೆ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಬಜಿಲ ಮನೆಯ ವಾಸಿ ನೆರೆಯ ಹಾಗೂ ಸಂಬಂದಿಕರಾಧ ಚಂದಪ್ಪ ಗೌಡ ರವರ ಮನೆಯ ಬಳಿಯ ನೀರಿನ ಟ್ಯಾಂಕಿಯನ್ನು ಸ್ವಚ್ಯಮಾಡಲು ಹೋಗಿದ್ದರು. ಸಂಜೆಯಾದರು ತನ್ನ ಗಂಡ ಬಾರದ ಕಾರಣ ಚಂದಪ್ಪ ಗೌಡರವರ ಮನೆಗೆ ಹೋಗಿ ಅವರ ಮಗ ಚೇತನನಲ್ಲಿ ವಿಚಾರಿಸಿದಾಗ ಆತನು ಕೆಲಸ ಮಾಡುತ್ತಿರುವ ನೀರಿನ ಟ್ಯಾಂಕನ ಬಳಿ ಸಂಜೆ ಸುಮಾರು 06 ಗಂಟೆಗೆ ಹೋಗಿ ನೋಡಿದಾಗ ಪಿರ್ಯಾದಿದಾರರ ಗಂಡನು ಟ್ಯಾಂಕಿಯ ನೀರಿನಲ್ಲಿ ಅರ್ಧ ಮುಳುಗಿದ್ದು, ಕಂಡು ಬೊಬ್ಬೆ ಹೊಡೆದಾಗ ನೆರೆಕೆರೆಯವರು ಹಾಗೂ ಪಿರ್ಯಾದಿದಾರರು ದಾವಿಸಿ ನೋಡಿ ಪಿರ್ಯಾದಿದಾರರ ಗಂಡನನ್ನು ನೀರಿನ ಟ್ಯಾಂಕಿನಿಂದ ಮೇಲಕ್ಕೆತ್ತಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತಂದಿದ್ದು ವೈದ್ಯಾದಿಕಾರಿಗಳು  ಪರೀಕ್ಸಿ ಶ್ರೀಧರ ಗೌಡನು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ: 12/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-04-2022 11:19 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080