ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್‌ ನಿಜಾಮುದ್ದೀನ್‌(24)ತಂದೆ:ಅಬ್ದುಲ್‌ ರಹಿಮಾನ್‌ ವಾಸ: ಜೋಗಿಬೆಟ್ಟು ಮನೆ ಬುಡೋಳಿ ಅಂಚೆ ಪೆರಾಜೆ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:03.05.2021 ರಂದು ಸಂಜೆ 18:00 ಗಂಟೆಗೆ ಗಡಿಯಾರದಲ್ಲಿನ ಮೆಡಿಕಲ್‌ ಶಾಪ್‌ನಿಂದ ಔಷಧಿ ತೆಗೆದುಕೊಂಡು ಮನೆಗೆ ರಸ್ತೆಯ ಬದಿಯಲ್ಲಿ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಜೋಗಿ ಬೆಟ್ಟು ಎಂಬಲ್ಲಿ ನಡೆದುಕೊಂಡು ಬರುತ್ತಿರುವಾಗ ಮಾಣಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕೆಎ-19-ಹೆಚ್‌ಡಿ-0283ನೇ ದ್ವಿ ಚಕ್ರ ವಾಹನಕ್ಕೆ ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿ ನಂಬ್ರ ಕೆಎ-40-ಎ-2955 ನೇದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ತನ್ನ ವಾಹನವನ್ನು ರಸ್ತೆಯ ಬಲ ಬದಿಗೆ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್‌ ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಎಸೆಯಲ್ಪಟ್ಟದ್ದನ್ನು ಕಂಡ ಪಿರ್ಯಾಧಿದಾರರು ಕೂಡಲೇ ಸ್ಥಳಕ್ಕೆ ಹೋಗಿ ಸ್ಕೂಟರ್‌ ಸವಾರನನ್ನು ನೋಡಲಾಗಿ ಪರಿಚಯದ ಶರೀಪ್‌ ಕೆ (39) ಆಗಿದ್ದು, ಆತನ ತಲೆಗೆ, ಎಡ ಕೈ, ಎಡ ಕಾಲಿಗೆ ರಕ್ತ ಗಾಯವಾಗಿರುತ್ತದೆ. ಗಾಯಳುವನ್ನು ಪಿರ್ಯಾಧಿ,ಆತನ ಸ್ನೇಹಿತರು ಹಾಗೂ ಲಾರಿಯ ಚಾಲಕ ಉಪಚರಿಸಿದ್ದು. ಲಾರಿಯ ಚಾಲಕನ ಹೆಸರು ಸೂರಜ್‌ ಎಂದು ತಿಳಿದಿರುತ್ತದೆ ಅಪಘಾತದಲ್ಲಿ ಲಾರಿಯ ಎದುರಿನ ಬಲ ಬದಿ ಜಖಂಗೊಂಡಿರುತ್ತದೆ ಹಾಗೂ ಸ್ಕೂಟರ್‌ ಅಪಘಾತದಿಂದ ಸಂಪೂರ್ಣ ಜಖಂಗೊಂಡಿರುತ್ತದೆ. ಕೂಡಲೇ ಸ್ಥಳಕ್ಕೆ ಆ್ಯಂಬುಲೆನ್ಸ್‌ ಒಂದನ್ನು ಬರಮಾಡಿಕೊಂಡು ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಹೋದಾಗ ಗಾಯಾಳು ಮೊಹಮ್ಮದ್‌ ಶರೀಪ್‌ ಮೃತಪಟ್ಟಿರುವ ಬಗ್ಗೆ ವೈದ್ಯಾದಿಕಾರಿಯವರು ದೃಢಪಢಿಸಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 66/2021  ಕಲಂ:279 ,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ ಸುರೇಶ್ ಪ್ರಾಯ 42 ವರ್ಷ ತಂದೆ: ಅಂಗಾರಪ್ಪ ಗೌಡ ವಾಸ: ಕೆಮ್ಮಾರ ಮನೆ ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 03.05.2021 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-21-ಎಲ್-8131 ನೇದರಲ್ಲಿ ತನ್ನ ಪತ್ನಿ ನಳಿನಿ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಪೆರ್ಲಂಪಾಡಿಯಿಂದಾಗಿ ಪುತ್ತೂರಿಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಸಮಯ ಬೆಳಿಗ್ಗೆ 10.00 ಗಂಟೆಗೆ ಮಾಡ್ನೂರು ಗ್ರಾಮದ ಕಾವು ಈಶ್ವರ ಮಂಗಲ ಕ್ರಾಸ್ ನಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಕುಂಬ್ರ ಕಡೆಯಿಂದ ಸುಳ್ಯ ಕಡೆಗೆ ಕಾರು ನಂಬ್ರ ಕೆಎ-20 ಎಂಡಿ-3691 ನೇದನ್ನು ಅದರ ಚಾಲಕ ಪ್ರತೀಕ್ ಎಂಬವರು ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದುದರಿಂದ  ಪಿರ್ಯಾದಿದಾರರು ಮತ್ತು ಅವರ ಪತ್ನಿ ನಳಿನಿರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದವರನ್ನು ವಾಹನ ಚಾಲಕರು ಮತ್ತು ಇತರರು ಬಂದು ಉಪಚರಿಸಿದ್ದು, ಅಪಘಾತದಿಂದ ಪಿರ್ಯಾದಿದಾರರ ಪತ್ನಿ ನಳಿನಿರವರಿಗೆ ಬಲಕಾಲಿನ ತೊಡೆಯ ಬಳಿ ರಕ್ತಗಾಯ ಹಾಗೂ ಶರೀರದ ಇತರ ಕಡೆಗಳಿಗೆ ತರಚಿದ ಗಾಯ ಹಾಗೂ ಬಲಕಾಲಿನ ಪಾದಕ್ಕೆ ಗುದ್ದಿದ ಗಾಯವಾಗಿದವರನ್ನು ಚಿಕಿತ್ಸೆ ಬಗ್ಗೆ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾಋರನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿ, ನಳಿನಿರವರನ್ನು ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 38/21 ಕಲಂ: 279,337  ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಾಂತ ಕುಮಾರ್ ಎಂ, ಪ್ರಾಯ 33 ವರ್ಷ, ತಂದೆ: ಮಲ್ಲಯ್ಯ ವಾಸ: # 490/1, ಕಲ್ಕುಣಿ, ಮಳವಳ್ಳಿ ತಾಲೂಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ 01-05-2021 ರಂದು 14-00 ಗಂಟೆಗೆ ಆರೋಪಿ ಲಾರಿ ಚಾಲಕ ಪಿ. ಖಾದರ್‌ವಾಲಿ ಖಾನ್‌ ಎಂಬವರು AP-21-TX-8999 ನೇ ನೋಂದಣಿ ನಂಬ್ರದ ಲಾರಿಯಲ್ಲಿ 23.385 MT  ತೂಕದ 6 PGL COILS ಗಳನ್ನು ತುಂಬಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪೆರ್ನೆ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಲಾರಿಯು ಚಾಲಕನ ಹತೋಟಿ ತಪ್ಪಿ ಮಗುಚಿ ಬಿದ್ದು, ಅಪಾಘತ ಘಟಿಸಿ ಲಾರಿ ಹಾಗೂ ಅದರಲ್ಲಿದ್ದ ಸೊತ್ತುಗಳು ಜಖಂಗೊಂಡಿದ್ದು, ಲಾರಿ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  80/2021 ಕಲಂ: 279 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಉಷಾ ಎಮ್ ಕೆ (57)ಗಂಡ; ರವೀಂದ್ರವಾಸ; ನೇರ್ತಾನೆ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರ ಗಂಡ ರವೀಂದ್ರ (60) ಎಂಬವರು ಸುಮಾರು 40 ವರ್ಷಗಳಿಂದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದು,  ಪಿರ್ಯಾದುದಾರರು ಕೂಡಾ 3 ವರ್ಷಗಳಿಂದ ಅದೇ ಬ್ಯಾಂಕಿನಲ್ಲಿ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವುದಾಗಿದೆ, ಈ ದಿನ ದಿನಾಂಕ: 03-05-2021 ರಂದು ಪಿರ್ಯಾದುದಾರರ ಗಂಡ  ಬೆಳಿಗ್ಗೆ 7.45 ಗಂಟೆ ಸಮಯಕ್ಕೆ ಮನೆಯಿಂದ ಬ್ಯಾಂಕಿನ ಕೆಲಸದ ನಿಮಿತ್ತ ಹೋಗಿದ್ದು ಬೆಳಿಗ್ಗೆ ಸುಮಾರು 9.00 ಗಂಟೆ ಸಮಯಕ್ಕೆ ಪಿರ್ಯಾದುದಾರರಿಗೆ  ದೂರವಾಣಿ ಮೂಲಕ  ಕರೆಮಾಡಿ ನಾನು ಮನೆಗೆ ಬರುವುದಿಲ್ಲ  ಹೋಟೆಲ್ ನಲ್ಲಿ ಚಾ ಕುಡಿಯುತ್ತೇನೆ ಬ್ಯಾಂಕಿನಿಂದ ಯಾರಾದರೂ ಮನೆಗೆ ಬಂದರೆ ಬ್ಯಾಂಕಿನ ಡ್ರಾಯರ್ ನ ಕೀಯನ್ನು ಕೊಟ್ಟು ಕಳುಹಿಸುವಂತೆ ತಿಳಿಸಿರುತ್ತಾರೆ. ಮನೆಗೆ ಯಾರು ಬಾರದೇ ಇದ್ದುದ್ದರಿಂದ ಪಿರ್ಯಾದುದಾರರ ತಮ್ಮ ಸಚಿನ ಮನೆಗೆ ಬಂದಾಗ ಬ್ಯಾಂಕಿನ ಡ್ರಾಯರ್ ನ ಕೀಯನ್ನು  ಅವನಲ್ಲಿ ಕೊಟ್ಟು ಕಳುಹಿಸಿರುತ್ತೇನೆ. ಪಿರ್ಯಾದುದಾರರು  ಹಲವು ಬಾರಿ ಗಂಡನಿಗೆ ಕರೆಮಾಡಿದರೂ ಸ್ವೀಕರಿಸದೇ ಇದ್ದುದ್ದರಿಂದ ಸಂಶಯಗೊಂಡು ಬ್ಯಾಂಕಿನ ಸಿಬ್ಬಂದಿ ಶಶಿಧರ ಎಂಬವರಿಗೆ ಗಂಡನ ಬಗ್ಗೆ ವಿಚಾರಿಸಿದಾಗ ಗೊತ್ತಿಲ ಎಂಬುದಾಗಿ ತಿಳಿಸಿದ್ದು ನಂತರ ಪಿರ್ಯಾದುದಾರರಿಗೆ  ಬ್ಯಾಂಕ್ ಸಿಬ್ಬಂದಿಯವರು ಸಂಜೆ ಸುಮಾರು 4.30 ಗಂಟೆ ಸಮಯಕ್ಕೆ ನಿಮ್ಮ ಗಂಡ ರವೀಂದ್ರರು ಯಾವೂದೊ ವಿಷ ಪದಾಥ  ಸೇವಿಸಿ ಬ್ಯಾಂಕಿನ ಹಾಲನ ಕಬ್ಬಿಣದ ರಾಡ್ ಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:31/2021 ಕಲಂ:174(iii)(iv)  ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-05-2021 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080