ಅಪಘಾತ ಪ್ರಕರಣ: ೦2
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪದ್ಮನಾಭ (34), ತಂದೆ: ಅಣ್ಣು ನಾಯ್ಕ, ವಾಸ: ನೇರಳಪಲ್ಕೆ ಮನೆ, ಮೊಗ್ರು ಗ್ರಾ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 02-07-2022 ರಂದು ತನ್ನ ಬಾಬ್ತು ಕೆಎ 21 ಇಎ 7843 ನೇ ದ್ವಿಚಕ್ರ ವಾಹನದಲ್ಲಿ ದಿನೇಶ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಬಂದಾರು-ಪದ್ಮುಂಜ ರಸ್ತೆಯಲ್ಲಿ ಪದ್ಮುಂಜ ಕಡೆಗೆ ಸವಾರಿಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 6.30 ಗಂಟೆಗೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಕೊಪ್ಪದಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ಧಿಕ್ಕಿನಿಂದ ಅಂದರೆ ಪದ್ಮುಂಜ ಕಡೆಯಿಂದ ಬಂದಾರು ಕಡೆಗೆ ಕೆಎ 21 ಎನ್ 6088 ನೇ ಓಮಿನಿ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಮತ್ತು ಸಹ ಸವಾರ ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಪಿರ್ಯಾದಿದಾರರು ಬಲ ಕಾಲಿನ ಮೊಣಗಂಟಿಗೆ, ಬಲ ಕೈ ಯ ಕೋಲು ಕಾಲಿಗೆ ಗುದ್ದಿದ ರಕ್ತ ಗಾಯ, ಸಹಸವಾರ ದಿನೇಶರವರು ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಪುತ್ತೂರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 93/2022 ಕಲಂ: 279 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನೇಮಣ್ಣ ಹೆಚ್ (35) ತಂದೆ: ರುಕ್ಮಯ್ಯಗೌಡ ವಾಸ: ಕೆರೆನಡ್ಕ ಮನೆ ಪಿಲ್ಯ ಗ್ರಾಮ ಕಡಬ ತಾಲೂಕು ರವರು ದಿನಾಂಕ: 03-07-2022 ರಂದು ಅವರ ಬಾಬ್ತು KA 21 B 6853 ನೇ ಆಟೋರಿಕ್ಷಾದಲ್ಲಿ ಸಹ ಪ್ರಯಾಣಿಕರನ್ನಾಗಿ ಚಂದ್ರಶೇಖರ, ಸಾನ್ವಿ, ಶಕುಂತಳಾ ಎಂಬವರನ್ನು ಕುಳ್ಳಿರಿಸಿಕೊಂಡು ಕೊಕ್ಕಡ-ಧರ್ಮಸ್ಥಳ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ KA 18 N 4008 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಪಿರ್ಯಾದಿದಾರರಿಗೆ ಎಡ ಕಣ್ಣಿನ ಮೇಲ್ಭಾಗಕ್ಕೆ, ಬಲಕಾಲಿನ ಹಿಮ್ಮಡಿಗೆ ರಕ್ತಗಾಯ. ಚಂದ್ರಶೇಖರ್ ರವರಿಗೆ ಎಡಬದಿಯ ಹಣೆಗೆ ರಕ್ತಗಾಯ. ಸಾನ್ವಿ ಎಂಬವರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತಗಾಯ ಹಾಗೂ ಶಕುಂತಳಾ ರವರಿಗೆ ಹಣೆಗೆ, ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 94/2022 ಕಲಂ: 279 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆದಂ ಕುಂಞಿ, 60 ವರ್ಷ, ತಂದೆ: ದಿ|| ಅಹಮ್ಮದ್ ಕುಂಞಿ, ವಾಸ: ನೀಟಡ್ಕ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ರವರು ಸುಮಾರು 30 ವರ್ಷಗಳಿಂದ ರೈಟರ್ ಆಗಿ ಕೆಲಸ ಮಾಡಿಕೊಂಡಿರುವ ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ತೋಟದಲ್ಲಿರುವ ಕೃಷಿ ಬೆಳೆಗಳನ್ನು ಶೇಖರಿಸಿಡುವ ಗೋದಾಮಿನ ಬೀಗವನ್ನು ಹಾಕಿದ್ದು ದಿನಾಂಕ 15-06-2022 ರಂದು ಸಂಜೆ 6-00 ಗಂಟೆಯಿಂದ ದಿನಾಂಕ 03-07-2022 ರಂದು ಬೆಳಿಗ್ಗೆ 10-00 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮುರಿದು ಗೋದಾಮಿನಲ್ಲಿ 10 ಗೋಣಿ ಚೀಲಗಳಲ್ಲಿ ತುಂಬಿಸಿ ಹೊಲಿದು ಶೇಖರಿಸಿಟ್ಟ ಸುಮಾರು 250 ಕೆಜಿ ಕಾಳುಮೆಣಸನ್ನು ಕಳವು ಮಾಡಿದ್ದು ಕಳವಾದ ಕಾಳುಮೆಣಸಿನ ಅಂದಾಜು ಮೌಲ್ಯ ಈಗಿನ ಮಾರುಕಟ್ಟೆ ದರದಂತೆ ಕೆಜಿಯೊಂದಕ್ಕೆ ರೂ 475/- ರಂತೆ 250 ಕೆ.ಜಿ ಗೆ ರೂಪಾಯಿ 1,18,750/- ರೂಪಾಯಿ ಆಗಬಹುದು. ಕಾಳುಮೆಣಸನ್ನು ಕಳವು ಮಾಡಿದ ಆರೋಪಿಗಳು ಬಳಿಕ ಗೋದಾಮಿನ ಶೆಟರ್ ಬಾಗಿಲನ್ನು ಹಾಕಿ ಹಳೆಯ ಬೀಗವನ್ನು ಹೋಲುವ ಹೊಸ ಬೀಗವನ್ನು ಹಾಕಿರುವುದರಿಂದ ಕಳ್ಳತನ ಈ ವರೆಗೆ ಗಮನಕ್ಕೆ ಬಾರದೇ ಇದ್ದು, ಗೋದಾಮಿನ ಎದುರು ಕಾಳುಮೆಣಸು ಬಿದ್ದಿರುವುದನ್ನು ನೋಡಿ ಸಂಶಯಗೊಂಡು ಬೀಗವನ್ನು ಪರಿಶೀಲಿಸಿದ ವೇಳೆ ಹೊಸ ಬೀಗ ಹಾಕಿರುವುದನ್ನು ನೋಡಿ ಮಾಲಕರಿಗೆ ವಿಚಾರ ತಿಳಿಸಿ ಅವರ ಒಪ್ಪಿಗೆಯಂತೆ ಬೀಗವನ್ನು ಮುರಿದು ಶೆಟರ್ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಕಳ್ಳತನವಾದ ವಿಚಾರ ತಿಳಿದುಬಂದಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 53-2022 ಕಲಂ 454, 457, 380 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೃಷ್ಣಪ್ಪ ಗೌಡ, ಪ್ರಾಯ: 38 ವರ್ಷ, ತಂದೆ: ದಿ: ಗುಮ್ಮಣ್ಣ ಗೌಡ, ವಾಸ: ಬದ್ಯಾರು ಮನೆ, ನ್ಯಾಯತರ್ಪು ಗ್ರಾಮ, ನಾಳ ಅಂಚೆ, ಬೆಳ್ತಂಗಡಿ ತಾಲೂಕು ರವರ ಅಣ್ಣ ಕುಶಾಲಪ್ಪ ಗೌಡ(45) ಎಂಬವರಿಗೆ ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದು, 2 ಮಕ್ಕಳಿರುತ್ತಾರೆ. 10 ವರ್ಷಗಳ ಹಿಂದೆ ಸಾಂಸಾರಿಕ ಜೀವನದಲ್ಲಿ ವೈಮನಸ್ಸು ಬಂದು ಹೆಂಡತಿ ಬಿಟ್ಟು ಹೋಗಿ ತವರು ಮನೆಯಲ್ಲಿ ಇದ್ದು, ಪಿರ್ಯಾದಿದಾರರ ಮನೆಯಲ್ಲಿ ಪಿರ್ಯಾದಿದಾರರ ಅಣ್ಣ ಕುಶಾಲಪ್ಪ ಗೌಡ ಮತ್ತು ಅವರ ತಾಯಿಯವರು ಮಾತ್ರ ಇರುವುದಾಗಿದೆ. ಕುಶಾಲಪ್ಪ ಗೌಡರು ಮನೆಯಲ್ಲಿಯೇ ತೋಟದಲ್ಲಿ ಕೆಲಸ ಮಾಡಿ ಕೊಂಡಿದ್ದು, ಎಂದಿನಂತೆ ದಿನಾಂಕ: 02-07-2022 ರಂದು ಕೂಡ ಬೆಳಿಗ್ಗೆ 6-00 ಗಂಟೆಗೆ ತೋಟಕ್ಕೆ ಹೋದವರು ವಾಪಾಸು ಬಾರದೇ ಇದ್ದು, ಹುಡುಕಾಡುತ್ತಿರುವ ಸಂದರ್ಭ ದಿನಾಂಕ: 03-07-2022 ರಂದು 11-30 ಗಂಟೆಗೆ ತೋಟದ ಕರೆಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮೃತ ಕುಶಾಲಪ್ಪ ಗೌಡರವರು ತೋಕ್ಕೆ ಹೋದ ಸಂದರ್ಭ ಆಕಸ್ಮಿಕವಾಗಿ ಕರೆಯ ನೀರಿಗೆ ಕಾಲು ಜಾರಿ ಬಿದ್ದೋ ಅಥಾವಾ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 27/2022 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರವಿರಾಜ್ ಹೆಗ್ಡೆ ಬಿ ಪ್ರಾಯ: 37 ವಷ ತಂದೆ: ವಿಶ್ವನಾಥ ಹೆಗ್ಡೆ ವಾಸ: ಅಕ್ಷಯ ಜೈನರಗುರಿ ಬನ್ನೂರು ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು ಪಿರ್ಯಾದಿದಾರರಾದ ಎಂಬವರ ತಂದೆ ಬಿ ವಿಶ್ವನಾಥ ಹೆಗ್ಡೆ ಪ್ರಾಯ 75 ವರ್ಷ ಎಂಬವರು ದಿನಾಂಕ: 02-07-2022 ರಂದು ಸಾಯಂಕಾಲ ಸುಮಾರು 6:00 ಗಂಟೆಗೆ ಮನೆಯಲ್ಲಿ ವಾಂತಿ ಮಾಡುತ್ತಿದ್ದು ಆಕಸ್ಮಾತ್ ಅವರು ಅನಾರೋಗ್ಯಕ್ಕೆ ಇಡಾಗಿದ್ದವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 8 ಗಂಟೆಗೆ ಮೃತಪಟ್ಟಿರುತ್ತಾರೆ. ಪಿರ್ಯಾದಿದಾರರ ತಂದೆಯವರು ವೃದ್ಧಾಪ್ಯರಾಗಿದ್ದು ಅವರು ಹೃದಾಯಘಾತ ಅಥವಾ ಇನ್ನಾವುದೋ ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್: 15/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೃಷ್ಣನಾಯ್ಕ (65) ತಂದೆ: ದಿ, ಕೊರಗನಾಯ್ಕ ವಾಸ: ಬಿಲ್ಲರಮಜಲು ಮನೆ, ಕೊಲ್ಚಾರು ಅಂಚೆ, ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು ರವರ ಮಗ ಜಯಂತ (35) ಎಂಬಾತನು ಅಮ್ಚಿನಡ್ಕ ಎಂಬಲ್ಲಿರುವ ಮಧು ಮಲ್ಟಿಪ್ಲಸ್ ಫ್ಯಾಕ್ಟರಿಯಲ್ಲಿ ಲೈನ್ ಸೇಲ್ ಕೆಲಸಮಾಡಿಕೊಂಡಿದ್ದವನು ಎಂದಿನಂತೆ ದಿನಾಂಕ 02.07.2022 ರಂದು ಬೆಳಿಗ್ಗೆ 06:30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವನು ಸಂಜೆಯಾದರು ಮನೆಗೆ ಬಾರದೇ ಇದ್ದಾಗ, ಪಿರ್ಯಾದುದಾರರು ಆತನ ಮೊಬೈಲ್ ಪೋನ್ ಗೆ ಕರೆಮಾಡಿದಲ್ಲಿ ರಿಂಗ್ ಆಗಿದ್ದು, ಕರೆಯನ್ನು ಸ್ವೀಕರಿಸಿರುವುದಿಲ್ಲ, ನಂತರ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ಭಾವಿಸಿ, ಸಂಬಂಧಿಕರಿಗೆ ದೂರವಾಣಿ ಮೂಲಕ ಕರೆಮಾಡಿ ವಿಚಾರಿಸಿದಲ್ಲಿ ಜಯಂತನು ಬಂದಿರುವುದಿಲ್ಲ ಎಂದು ತಿಳಿಸಿದ್ದು, ಆತನ ಸ್ನೇಹಿತರ ಮನೆಗೆ ಹೋಗಿರಬಹುದು ಭಾವಿಸಿ ಪುನಃ ಬೆಳೆಗ್ಗೆ ಆತನ ಮೊಬೈಲ್ ಪೋನ್ ಗೆ ಕರೆಮಾಡಿದಲ್ಲಿ ಸ್ವೀಚ್ ಆಫ್ ಆಗಿದ್ದು, ನಂತರ ಪಿರ್ಯಾದುದಾರರ ಸಂಬಂಧಿಕರು ಜಯಂತನ ಸ್ಕೂಟಿಯು ಸುಳ್ಯ ತಾಲೂಕು ಕನಕಮಜಲು ಗ್ರಾಮದ ಆನೆಗುಂಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ನಿಂತಿರುವುದಾಗಿ ತಿಳಿಸಿದ್ದು, ಸದ್ರಿ ಸ್ಥಳಕ್ಕೆ ಪಿರ್ಯಾದುದಾರರು ಹೋಗಿ ನೋಡಲಾಗಿ ಜಯಂತನ ಸ್ಕೂಟಿಯಾಗಿದ್ದು, ನಂತರ ಸಂಬಂಧಿಕರೊಂದಿಗೆ ಜಯಂತನನ್ನು ಹುಡುಕಾಡಿದಲ್ಲಿ ದಿನಾಂಕ 03.07.2022 ರಂದು ಬೆಳಿಗ್ಗೆ 10:00 ಗಂಟೆಗೆ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಆನೆಗುಂಡಿಯ ಗುಡ್ಡಡ್ಕ ಎಂಬಲ್ಲಿರುವ ಅರಣ್ಯ ಇಲಾಖೆಯ ಕ್ವಾಟ್ರಸ್ ನ ಬಳಿಯಲ್ಲಿರುವ ಬಾವಿಯ ನೀರಿನಲ್ಲಿ ಮುಳುಗಿ ಕವುಚಿಬಿದ್ದ ಸ್ಥಿತಿಯಲ್ಲಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ದಟಿರುವುದಾಗಿ, ಜಯಂತನು ಬಿ,ಪಿ ಹಾಗೂ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುತ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ 28/2022 ಕಲಂ: 174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ