ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್ ರಫೀಕ್ ಪ್ರಾಯ 55 ವರ್ಷ. ತಂದೆ: ದಿ|| ಅಬ್ದುಲ್ ರಹಿಮಾನ್, ವಾಸ: ಶಾದ್ ಮಂಜಿಲ್, ಪಿಚಂಡಿಕಲ್ಲು, ಗುರುವಾಯನಕೆರೆ ಅಂಚೆ, ಕುವೆಟ್ಟು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 02-08-2022 ರಂದು KA-19-B-7917 ನೇ ಬಸ್ಸಿನ ಚಾಲಕನಾಗಿ ಬಿ.ಸಿ.ರೋಡ್ ಬಸ್ಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದುಕೊಂಡು ಮೂರ್ಜೆ ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಪಿಲಿಮೊಗ್ರು ಗ್ರಾಮದ ಬಿಲ್ಲಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಪುಂಜಾಲಕಟ್ಟೆ ಕಡೆಯಿಂದ ವಾಮದಪದವು ಕಡೆಗೆ KA-19-MF-8115 ನೇ ಕಾರನ್ನು ಅದರ ಚಾಲಕ ಸಿರಾಜುದ್ದೀನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಎಡ ಬದಿ ಬಂಡೆಗೆ ಡಿಕ್ಕಿ ಹೊಡೆದು ಎಡಮಗ್ಗುಲಾಗಿ ವಾಲಿಕೊಂಡಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕ ಶಾಹೀಲ್ ಶೆಟ್ಟಿ ಎಂಬವರಿಗೆ ಮೂಗಿಗೆ ಗುದ್ದಿದ ಗಾಯ ಹಾಗೂ ಕಣ್ಣಿನ ಬಳಿ ತರಚಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 84/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುಬ್ರಹ್ಮಣ್ಯ ಪ್ರಸಾದ್ ಬಿ.ಜಿ. ಪ್ರಾಯ 42 ತಂದೆ: ಗಣಪತಿ ಭಟ್ ವಾಸ: ಮೆಸ್ಕಾಂ ಆಫೀಸ್  ಬಿ.ಸಿ.ರೋಡ್ ಬಂಟ್ವಾಳ ರವರು ಮೆಸ್ಕಾಂ ಕಂಪೆನಿಯ ಸಹಾಯಕ ಇಂಜಿನಿಯರ್ ಆಗಿದ್ದು ದಿನಾಂಕ 03.08.2022 ರಂದು ಬಂಟ್ವಾಳ ತಾಲೂಕು ತುಂಬೆ ಗ್ರಾಮದ ಬೊಳ್ಳಾರಿ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಮೆಸ್ಕಾಂ ಕಂಪೆನಿಗೆ ಸಂಭಂದಪಟ್ಟ ವಿದ್ಯುತ್ ಕಂಬಕ್ಕೆ  KA 70 2920 ನೇ ನಂಬರಿನ ಗೂಡ್ಸ್ ಆಟೋ ಚಾಲಕನು  ತುಂಬೆಯಿಂದ ಬೊಳ್ಳಾರಿ ಕಡೆಗೆ ಅತೀ ವೇಗ ಅಜಾಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಜಖಂಗೊಂಡು ಮೆಸ್ಕಾಂ ಕಂಪೆನಿಗೆ ಸುಮಾರು 36030/- ರೂಪಾಯಿ ನಷ್ಟ ಸಂಭವಿಸಿದ್ದು ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 85/2022 ಕಲಂ 279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್ ಅಶ್ರಫ್ ಪ್ರಾಯ 24 ವರ್ಷ. ತಂದೆ: ಇಬ್ರಾಹೀಂ, ವಾಸ: 3-83, ಬರ್ಕಟಾ ಮನೆ, ಕಾವಳಪಡೂರು ಗ್ರಾಮ, ಕಾರಿಂಜೆ ಅಂಚೆ, ಬಂಟ್ವಾಳ ತಾಲೂಕು ರವರು ದಿನಾಂಕ 03-08-2022 ರಂದು ಅಗತ್ಯ ಕೆಲಸದ ನಿಮಿತ್ತ ಸ್ಕೂಟರಿನಲ್ಲಿ ಮದ್ವ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ  ಅಂದರೆ ಬೆಳ್ತಂಗಡಿ ಕಡೆಯಿಂದ KA-18-C-5959 ನೇ ಈಚರ್ ಲಾರಿಯನ್ನು ಅದರ ಚಾಲಕ ಶ್ರೀನಿವಾಸ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಓವರ್ ಟೇಕ್ ಮಾಡಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ  KA-19-EP-7356 ನೇ ಸ್ಕೂಟರಿಗೆ ಲಾರಿಯ ಎಡಬದಿಯ ಹಿಂಬದಿ ತಾಗಿದ ಪರಿಣಾಮ  ಸ್ಕೂಟರ್ ಸವಾರಿಣಿ ಮತ್ತು ಸಹಸವಾರಿಣಿ ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಸವಾರಿಣಿ ಅಸ್ಮಾ ರವರಿಗೆ ಮೈಕೈಗೆ ತರಚಿದ ಗಾಯವಾಗಿದ್ದು, ಸಹಸವಾರಿಣಿ ತಾಯಿ ಲತೀಫಾರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಅಸ್ಮಾ ರವರನ್ನು ಒಳರೋಗಿಯಾಗಿ ದಾಖಲಿಸಿದ್ದು ಲತೀಫಾರವರು ತೀವ್ರ ಸ್ವರೂಪದ ಗಾಯಗೊಂಡವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 86/2022 ಕಲಂ: 279, 337, 304(ಎ) ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗೋವಿಂದ ರಾಜ್ ಶರ್ಮ ಕೆ.ಎಂ ಪ್ರಾಯ 32 ವರ್ಷ ತಂದೆ:ಗಣಪತಿ ಭಟ್ ವಾಸ:ಕೇಕನಾಜೆ ಮಠ ಗಣೇಶ ಕೃಪಾ ಮನೆ ಅಳಿಕೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ದಿನಾಂಕ:02.08.2022 ರಂದು ಬೆಳಿಗ್ಗೆ ಅಗತ್ಯ ಕೆಲಸದ ನಿಮಿತ್ತ ಪುತ್ತೂರಿನಿಂದ ಸಕಲೇಶಪುರಕ್ಕೆ ತನ್ನ ಬಾಬ್ತು ಕೆಎ.21.ಝಡ್.2694ನೇ ಕಾರಿನಲ್ಲಿ ಸದ್ರಿಯವರು ಕೆಲಸ ಮಾಡುವ ಪುತ್ತೂರು ವಿವೇಕಾನಂದ ಕಾಲೇಜಿನ ಸಿಬ್ಬಂದಿ ಓಂಕಾರ ಪ್ರಸಾದ ರವರನ್ನು ಕುಳ್ಳಿರಿಸಿಕೊಂಡು ಹೋಗಿ  ಅಲ್ಲಿ ಕೆಲಸ ಮುಗಿಸಿ ವಾಪಸ್ಸು ಓಂಕಾರ ಪ್ರಸಾದ ರವರೊಂದಿಗೆ ಹೊರಟು ಬೆಂಗಳೂರು ಮಂಗಳೂರು ರಾ. ಹೆ 75ರಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಾ ಸಂಜೆ 5.15 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಕೆ.ಎಸ್.ಆರ್.ಟಿ.ಪಿ ಬಸ್ ನಂಬ್ರ ಕೆಎ.57.ಎಫ್.3891ನೇದನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ಬಲ ಭುಜಕ್ಕೆ, ಬಲ ಕಾಲಿನ ತೊಡೆಗೆ, ಎಡ ಕೈ ಕೋಲು ಕೈಗೆ, ಎಡ ಕೈ ತಟ್ಟಿಗೆ ಗುದ್ದಿದ ನೋವಾಗಿದ್ದು,  ಹಾಗೂ ಕಾರಿನಲ್ಲಿದ್ದ ಸಹ ಪ್ರಯಾಣಿಕ ಓಂಕಾರ ಪ್ರಸಾದ ರವರಿಗೆ ಎಡ ಭುಜಕ್ಕೆ ಗುದ್ದಿದ ನೋವು ಹಾಗೂ ಹಣೆಗೆ, ಮೂಗಿಗೆ, ಗಲ್ಲಕ್ಕೆ ಬಲ ಕಣ್ಣಿನ ಬಳಿ, ಬಲ ಕೈ ತಟ್ಟಿಗೆ ತರಚಿದ ಗಾಯವಾಗಿರುತ್ತದೆ. ಅಲ್ಲದೇ ಕಾರು ಸಹ ಜಖಂಗೊಂಡಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 85/2022 ಕಲಂ:  279,337 ಭಾದಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ನಿಕಿಲ್‌ ಎನ್‌. ಪ್ರಾಯ 31 ವರ್ಷ, ತಂದೆ: ಭೋಜ ನಾಯ್ಕ್‌ , ವಾಸ: ಮಾನಕ ಮನೆ ನೆಲ್ಲಿಕಟ್ಟೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು  ರವರು ಅವರ ಅಕ್ಕ ನಿಶಾ ಶೈಲೇಶ್‌ರವರ ಮಾಲಿಕತ್ವದ ಕೆಎ 01 ಇಯು 4671 ನೇ ದ್ವಿಚಕ್ರ ವಾಹನವನ್ನು ಉಪಯೋಗಿಸುತ್ತಿದ್ದು, ದಿನಾಂಕ 01.08.2022 ರಂದು ರಾತ್ರಿ ಪಿರ್ಯಾದಿದಾರರು ಮನೆಯ ಎದುರು ನಿಲ್ಲಿಸಿದ್ದು, ರಾತ್ರಿ ಸುಮಾರು 12.00 ಗಂಟೆಯವರೆಗೆ ವಾಹನವು ಪಿರ್ಯಾದಿದಾರರು ನಿಲ್ಲಿಸಿದ್ದ  ಸ್ಥಳದಲ್ಲಿಯೇ ಇದ್ದು, ದಿನಾಂಕ 02.08.2022 ರಂದು ಬೆಳಿಗ್ಗೆ ಸುಮಾರು 07.00 ಗಂಟೆಗೆ ಎದ್ದು ನೋಡಿದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ . ಬಳಿಕ ಪಿರ್ಯಾದಿದಾರರು ಮನೆಯ ಪರಿಸರ ಹಾಗೂ ಪುತ್ತೂರು ಪೇಟೆಯಲ್ಲಿ ಸಂಚರಿಸಿ ವಾಹನದ ಪತ್ತೆಗೆ ಪ್ರಯತ್ನಿಸಿದ್ದು ಪತ್ತೆಯಾಗಿರುವುದಿಲ್ಲ. ಪಿರ್ಯಾದಿದಾರರ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ದಿನಾಂಕ 02.08.2022 ರ 12.00 ಗಂಟೆಯಿಂದ ಬೆಳಿಗ್ಗೆ 07.00 ಗಂಟೆಯ ಮಧ್ಯಕಾಲದಲ್ಲಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ ರೂ 20,000/- ಆಗಬಹುದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 68/2022 ಕಲಂ: 379 ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬೂಬಕ್ಕರ್ ಸಿದ್ದಿಕ್ ತಂದೆ ಹಸನಬ್ಬಮಸೀದಿ ಬೆಟ್ಟು ಮನೆ ಪುದು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 02.08.2022 ರಂದು ತಂಗಿ ಜುಬೈದಾಳ ಮನೆಯಲ್ಲಿ ಮದುವೆ ರಿಸೆಪ್ಶನ್ ಕಾರ್ಯಕ್ರಮ ಮುಗಿಸಿ ಅಲ್ಲಿಯೇ ಇದ್ದ ಸಮಯ  ಸಂಜೆ ತಂಗಿ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು ಮನೆಗೆ ಹೋಗಲು ಮನೆಯ ಕಾಂಪೌಂಡು ಗೇಟು ಬಳಿ ನಿಂತಿಕೊಂಡಿದ್ದು ಆ ಸಮಯ ಗೇಟು ಬಳಿ ಜೋರು ಜೋರು ಬೊಬ್ಬೆ ಮಾತು ಕೇಳಿದ್ದು ಪಿರ್ಯಾದುದಾರರು ಹೋಗಿ ನೋಡಲಾಗಿ ಪಿರ್ಯಾದುದಾರರ ತಂದೆಯೊಡನೆ ತೌಸೀರ್ ಯಾನೆ ತೌಚಿ, ರಫೀಕ್, ಸಿರಾಜ್ ಕುಂಜತ್ಕಲ ಇಸ್ತಿಕಾರ್, ಯಾನೆ ಇಸ್ತಿ, ಮಹಮ್ಮದ್ ನಿಸ್ವಾನ್ ,ರಮೀಜ್ ಕಲಾಯಿ ರವರು  ಜೋರು ಮಾತನಾಡುತ್ತಿದ್ದು ಆ ಸಮಯದಲ್ಲಿ ಪಿರ್ಯಾದುದಾರರನ್ನು ಉದ್ದೇಶಿಸಿ ತೌಸೀರ್ ನು ಬೈದು ಹೋಂಡಾ ಆಕ್ಟೀವಾದಲ್ಲಿದ್ದ ತಲವಾರಿನಂತಹ ಯಾವುದೋ  ಆಯುಧದಿಂದ ಪಿರ್ಯಾದುದಾರರಿಗೆ ಕಡಿಯಲು ಬಂದಿದ್ದು ಆ ಸಮಯ ಪಿರ್ಯಾದುದಾರರು ಎಡ ಕೈಯ್ಯನ್ನು ಅಡ್ಡ ಹಿಡಿದಾಗ ಎಡಕೈ ಕೋಲು ಕೈಗೆ ಕಡಿದಿದ್ದು ಆ ಸಮಯ ಆತನ ಜೊತೆಯಲ್ಲಿ ಬಂದವರು “ಅವನನ್ನು ಬಿಡಬೇಡ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಅಷ್ಟರಲ್ಲಿ ಸಂಬಂದಿಕರು ಬರುವುದನ್ನು ಕಂಡು ನೀನು ಇವತ್ತು ಬಚಾವು ಆದೆ ನಿನ್ನನ್ನು  ಜೀವ ಸಹಿತ ಬದುಕಲು ಬಿಡುವುದಿಲ್ಲ .ಎಂದು ಬೆದರಿಕೆ ಹಾಕಿ ಅವರೆಲ್ಲರು ಬಂದ ಆಟೋ ರಿಕ್ಷಾ ಮತ್ತು ಹೋಂಡಾ ಆಕ್ಷೀವಾದಲ್ಲಿ ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  56-2022 ಕಲಂ143,147,148,447,504,506,324 149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪೊಲೀಸ್ ಉಪ ನೀರೀಕ್ಷಕರು ಕಡಬ ಪೊಲೀಸ್‌ ಠಾಣೆ ರವರು ದಿನಾಂಕ 03.08.2022 ರಂದು ವಿಶೇಷ ಕರ್ತವ್ಯದಲ್ಲಿ ಸಿಬ್ಬಂದಿಗಳೊಂದಿಗೆ ಕಡಬ ತಾಲೂಕು ಕೊಯಿಲಾ ಗ್ರಾಮದ ಗಂಡಿ ಬಾಗಿಲು ಆನೆಗುಂಡಿ ಎಂಬಲ್ಲಿರುವಾಗ ಕೊಯಿಲಾ ಕಡೆಯಿಂದ ಹಿರೇಬಂಡಾಡಿ ಕಡೆಗೆ ಆರೋಪಿತರು ಕೆ.ಎ-20 ಬಿ-3993 ಪಿಕಪ್‌ ವಾಹನದಲ್ಲಿ ಜಾನುವಾರುವನ್ನು ತುಂಬಿಸಿಕೊಂಡು ಬರುತ್ತಿದ್ದನ್ನು ನೋಡಿ ಪಿಕಪ್‌ ವಾಹನವನ್ನು ಅನುಮಾನಗೊಂಡು ನಿಲ್ಲಿಸಿದಾಗ ಪಿಕಪ್‌ ವಾಹನದ ಚಾಲಕನಾದ ಆರೋಪಿತನಾದ ನಜೀರ್‌ ಎಂಬಾತನು ಪಿಕಪ್‌ ವಾಹನವನ್ನು ನಿಲ್ಲಿಸದೇ ಮುಂದೆ ಚಲಾಯಿಸಿಕೊಂಡು ಹೋಗಿದ್ದು ನಂತರ ಪಿರ್ಯಾದುದಾರರು ಪಿಕಪ್‌ ವಾಹನವನ್ನು ಬೆನ್ನತ್ತಿ ನಿಲ್ಲಿಸಿದಾಗ ಪಿಕಪ್‌ ವಾಹನದಲ್ಲಿ ಒಂದು ಜಾನುವಾರುವನ್ನು ಯಾವುದೇ ಸಂರಕ್ಷಣೆ ಮಾಡದೆ ಹತ್ಯೆ ಮಾಡುವ ಸಲುವಾಗಿ ಯಾವುದೇ ಪರವಾನಗಿ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿರುತ್ತದೆ ನಂತರ ಪಿಕಪ್‌ ವಾಹನ ಮತ್ತು ಜಾನುವಾರುವನ್ನು ಪಿರ್ಯಾದುದಾರರು ಪಂಚರ ಸಮಕ್ಷಮದಲ್ಲಿ ಮಹಜರು ಮುಖೇನಾ ಸ್ವಾದೀನಪಡಿಸಿಕೊಂಡು ಕಡಬ ಪೊಲೀಸ್‌‌ ಠಾಣಾ ಅ.ಕ್ರ 68/2022 ಕಲಂ: ಕಲಂ:4.5.12 ಕರ್ನಾಟಕ ಜಾನುವಾರು ಹತ್ಯ ಸಂರಕ್ಷಾ ಕಾಯ್ದೆ 2020 ಮತ್ತು ಕಲಂ: 66(1).192(A) ಇಂಡಿಯನ್‌ ಮೋಟಾರ್‌ ವೆಹಿಕಲ್‌ ಆಕ್ಟ್‌ 1988. ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-08-2022 11:41 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080