ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಲತೀಫ್ ಪ್ರಾಯ : 45 ವರ್ಷ ತಂದೆ: ದಿ|| ಅಬ್ದುಲ್ ರಹಿಮಾನ್ ವಾಸ: ಮೈಂದಾಳ ಸೂರಗುಡ್ಡೆ, ನಾವೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ದಿನಾಂಕ 03-09-2021 ರಂದು ತನ್ನ ಬಾಬ್ತು ಆಟೋರಿಕ್ಷಾದಲ್ಲಿ ಬಿ.ಸಿರೋಡ್ ಕಡೆಯಿಂದ ಅಜಿಲಮೊಗರು ಕಡೆಗೆ ಹೋಗುತ್ತಾ ಬೆಳಿಗ್ಗೆ 9:00 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಕಡವಿನ ಬಾಗಿಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಮಣಿಹಳ್ಳ ಕಡೆಯಿಂದ KA-05-MA-8541 ನೇ ಜೀಪನ್ನು ಅದರ ಸವಾರ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಎದುರಿನಿಂದ ಅಂದರೆ  ಅಜಿಲಮೊಗರು ಕಡೆಯಿಂದ ಬರುತ್ತಿದ್ದ KA-19-EM-3148 ನೇ ಆಕ್ಟೀವ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ಸವಾರ ಅಬ್ಬಾಸ್ ರವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಕೈಕಾಲುಗಳಿಗೆ, ಬೆನ್ನಿಗೆ ತರಚಿದ ಹಾಗೂ ಗುದ್ದಿದ ರಕ್ತಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಗಾಯಾಳು ಅಬ್ಬಾಸ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 87/2021  ಕಲಂ 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ವಿಟ್ಲ ಪೊಲೀಸ್‌ ಠಾಣೆಯಲ್ಲಿ  ಕಲಂ: 363 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕರು ಪುತ್ತೂರು ನಗರ ಠಾಣೆ ರವರಿಗೆ ದಿನಾಂಕ: 03-09-2021 ರಂದು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜೂಜು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾಳಿ ನಡೆಸಿ ಆರೋಪಿ ಕುಶಾಲಪ್ಪ ಗೌಡ ಎಂಬವರನ್ನು ಮತ್ತು ಕೋಳಿ ಅಂಕಕ್ಕೆ ಬಳಸಿದ 10 ಕೋಳಿಗಳನ್ನು,  ಎರಡು ಬಾಳು, ಕಪ್ಪುದಾರ,  ಹಾಗೂ  ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಯಿತು. ಕೃತ್ಯಕ್ಕೆ ಬಳಸಿದ 10 ಕೋಳಿಗಳ ಅಂದಾಜು ಮೌಲ್ಯ ರೂ: 2,200/- ಮತ್ತು ಆಟೋರಿಕ್ಷಾದ ಮೌಲ್ಯ 50,000/- ಆಗಬಹುದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 67/2021 ಕಲಂ: 87 KP ACT ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಸುನೀತಾ ಪ್ರಾಯ 35 ಗಂಡ ಸಂತೋಷ್ ವಾಸ ಕಲ್ಕಾರು ಪಾದೆಮಾರು ಮನೆ  ಮೇರಮಜಲು ಗ್ರಾಮ ಬಂಟ್ವಾಳ ತಾಲೂಕು ರವರ ಗಂಡ ಕಂಕನಾಡಿ  ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ಕೆಲವು ತಿಂಗಳಿನಿಂದ ಕೋವಿಡ್ ಇದ್ದ ಕಾರಣ ಕೆಲಸ ಇಲ್ಲದೇ ಮನೆಯಲ್ಲಿರುವುದಾಗಿದೆ. ಪಿರ್ಯಾದುದಾರರು ಸುಮಾರು 1 ವರ್ಷ ದ  ಹಿಂದೆ ಬ್ಯಾಂಕಿನಲ್ಲಿ  ಸಾಲ ಪಡೆದು ಹೊಸ ಮನೆಯನ್ನು ಕಟ್ಟಿಸಿದ್ದು ಬ್ಯಾಂಕಿನ ಸಾಲ ಕಟ್ಟಲು ಕೆಲಸ ಇಲ್ಲದ ಕಾರಣ ಬೇಸರ ಮಾಡಿಕೊಂಡು ಮನೆಯಲ್ಲಿದ್ದವರು ಈ ಮೊದಲು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಆ ಸಮಯ ಪಿರ್ಯಾದುದಾರರು ಸಮಾಧಾನಪಡಿಸಿರುತ್ತಾರೆ. ಇತ್ತೀಚಿಗೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದುದ್ದರಿಂದ ನಾನು ಸಾಯುತ್ತೆನೆ ಬದುಕುವುದಿಲ್ಲ ಎಂದು ಹೇಳುತ್ತಿದ್ದು ಮಾನಸಿಕವಾಗಿ ತೀವ್ರ ನೊಂದಿರುತ್ತಾರೆ. ದಿನಾಂಕ 03.09.2021 ರಂದು ಬೆಳಿಗ್ಗೆ ಪಿರ್ಯಾದುದಾರರು ಮತ್ತು ಸಂತೋಷ್ ರವರು ಫರಂಗೀಪೇಟೆ ಹೋಗಿ ಮನೆಗೆ ಸಾಮಾನು ತೆಗೆದುಕೊಂಡು ಮಧ್ಯಾಹ್ನ 1.00 ಗಂಟೆಗೆ ಮನೆಗೆ ಬಂದಿದ್ದು .ಪಿರ್ಯಾದುದಾರರು ಮತ್ತು ಮಕ್ಕಳು ಮಧ್ಯಾಹ್ನ ಊಟ ಮಾಡುತ್ತಿರುವ ಸಮಯ ಪಿರ್ಯಾದುದಾರರ ಗಂಡ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದು ಸಮಯ 3.30 ಗಂಟೆಗೆ  ಪಿರ್ಯಾದುದಾರರ ತಾಯಿ ಹೊರಗೆ  ಕೆಲಸ ಮಾಡುತ್ತಿರುವಾಗ  ಮನೆಯ ಬಾವಿಯಲ್ಲಿ ಸದ್ದು ಕೇಳಿಸಿದ ಬಗ್ಗೆ ತಿಳಿಸಿದ್ದು  ಕೂಡಲೇ ಪಿರ್ಯಾದುದಾರರು ಹೋಗಿ ಬಾವಿಯಲ್ಲಿ ನೋಡಲಾಗಿ ಪಿರ್ಯಾದುದಾರರ ಗಂಡ ಬಾವಿಯಲ್ಲಿ ನೀರಿನ ಮೇಲೆ ಬಂದಿದ್ದು ಕೂಡಲೇ ಹಗ್ಗ  ಹಾಕಿ ಅವರನ್ನು ಮೇಲೆ ಎತ್ತುಲು ಪ್ರಯತ್ನಿಸಿದಾಗ ನೀರಿನ ಅಡಿಗೆ ಹೋದವರು ವಾಪಸ್ಸು ಮೇಲೆ ಬಂದಿರುವುದಿಲ್ಲ .ಪಿರ್ಯಾದುದಾರರ ಗಂಡ  ಜೀವನದಲ್ಲಿ  ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 31/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ದಮಯಂತಿ ಪ್ರಾಯ :42 ವರ್ಷ, ಗಂಡ; ಕುಶಾಲಪ್ಪ ಗೌಡ,  ವಾಸ: ಬೀರಂತಡ್ಕ ಮನೆ, ಕುಂತೂರು ಗ್ರಾಮ. ಕಡಬ ತಾಲೂಕು ರವರ ಗಂಡನಾದ ಕುಶಾಲಪ್ಪಗೌಡ ಅಮಲು ಪದಾರ್ಧ ಸೇವಿಸಿಕೊಂಡು ಮನೆಯಲ್ಲಿ ಬೊಬ್ಬೆ ಹಾಕುತ್ತಿದ್ದು ಪಿರ್ಯಾದಿದಾರರು ಹಾಗೂ ಮಕ್ಕಳು ರಾತ್ರಿ ಊಟ ಮಾಡಿ 11.00 ಗಂಟೆಗೆ ಊಟ ಮಾಡಿ ಮಲಗಿಕೊಂಡಿದ್ದು ಕುಶಾಲಪ್ಪಗೌಡರವರು ಮನೆಯ ವಠಾರದಲ್ಲಿ ಸುತ್ತಾಡಿಕೊಂಡಿರುತ್ತಾರೆ ದಿನಾಂಕ:03.09.2021 ರಂದು ಫಿರ್ಯಾದಿದಾರರು ಮತ್ತು ಮಕ್ಕಳು ಬೆಳಗ್ಗೆ ಚಹಾ ಕುಡಿದು ನಂತರ  ಸಮಯ 08.30 ಗಂಟೆಗೆ ಮನೆಯ ಸಮೀಪ ಇರುವ ತರಕಾರಿ ಕೃಷಿ ಜಾಗಕ್ಕೆ ಹೋದಾಗ ಒಂದು ಗೇರು ಮರದ ಕೊಂಬೆಗೆ ಕುಶಾಲಪ್ಪಗೌಡರವರು ಹಗ್ಗದಿಂದ  ನೇಣು ಬಿಗಿದುಕೊಂಡು ನೇತ್ತಾಡುತ್ತಿದ್ದವರನ್ನು ಕೆಳಗಿಸಿ ನೋಡಿದಾಗ ಕುಶಾಲಪ್ಪಗೌಡರವರು ಮೃತಪಟ್ಟಿರುವುದಾಗಿರುತ್ತದೆ ಮೃತ ಕುಶಾಲಪ್ಪಗೌಡರವರು ಅಮಲು ಪದಾರ್ಥ ಸೇವನೆ ಮಾಡಿಕೊಂಡು ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡಿರುವುದಾಗಿರುತ್ತದೆ ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 18/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಂಜುನಾಥ ಕೆ ಜೆ(16)ತಂದೆ:ಜಯಪ್ರಕಾಶ್ ನಾಯಕ್‌ ವಾಸ: ಕಾಯರ್‌ ತೋಡಿ ಮನೆ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರ ತಂದೆ ಜಯಪ್ರಕಾಶ್ ನಾಯಕ್‌ ರವರು ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ:31.08.2021ರಂದು ಹೊಟ್ಟೆ ನೋವು ಎಂದು ಹೇಳಿಕೊಂಡು ಸುಳ್ಯದ ಅಶ್ವಿನಿ ಸ್ಕ್ಯಾನಿಂಗ್‌ ಸೆಂಟರ್‌ನಲ್ಲಿ ಸ್ಕ್ಯಾನಿಂಗ್‌ ಮಾಡಿಸಿ ಎಸ್‌ವಿಎಂ ಆಸ್ವತ್ರೆಯ ವೈದ್ಯಾಧಿಕಾರಿಯವರಲ್ಲಿ ತೋರಿಸಿದಾಗ ವೈದ್ಯಾದಿಕಾರಿಯವರು ಗ್ಯಾಸ್ಟೀಕ್‌ನಿಂದಾಗಿ ಹೊಟ್ಟೆ ನೋವು ಬಂದಿರುತ್ತದೆಂದು ತಿಳಿಸಿ ಔಷದಿ ನೀಡಿದ್ದು, ದಿನಾಂಕ: 02.09.2021 ರಂದು ರಾತ್ರಿ ಊಟ ಮಾಡಿ ಮಲಗಿದ ಬಳಿಕ ಸಮಯ ಸುಮಾರು 11:30 ಗಂಟೆಗೆ ತಂದೆಯವರು ಉಸಿರಾಡಲು ತೊಂದರೆಯಾಗುತ್ತಿರುವುದಾಗಿ ತಿಳಿಸಿದಂತೆ ಕೂಡಲೇ ಚಿಕಿತ್ಸೆ ಬಗ್ಗೆ ಸುಳ್ಯದ ಜ್ಯೋತಿ ಆಸ್ವತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾದಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ  ಸುಳ್ಯದ ಕೆ ವಿ ಜಿ ಮೆಡಿಕಲ್‌ ಕಾಲೇಜ್ ಆಸ್ವತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾದಿಕಾರಿಯವರು ಚಿಕಿತ್ಸೆ ನೀಡಿದ್ದು ದಿನಾಂಕ:03.09.2021 ರಂದು ಸಮಯ ಸುಮಾರು 00:20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದು,  ಮೃತ ಜಯಪ್ರಕಾಶ್‌ ರವರು ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಆರ್‌ 36/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 04-09-2021 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080