ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇಬ್ರಾಹಿಂ ಬಾತಿಷ, ಪ್ರಾಯ 31 ವರ್ಷ, ತಂದೆ: ಬಿ ಇಸ್ಮಾಯಿಲ್, ವಾಸ: ಶಾಂತಿನಗರ ಮನೆ, ಚಿಕ್ಕಮುಡ್ನೂರು ಅಂಚೆ ಮತ್ತು ಗ್ರಾಮ,  ಪುತ್ತೂರು ಎಂಬವರ ದೂರಿನಂತೆ ದಿನಾಂಕ 02-11-2021 ರಂದು 16-00 ಗಂಟೆಗೆ ಆರೋಪಿ ಜೀಪು ಚಾಲಕ ಚಂದ್ರ ಕುಮಾರ್‌ ಸಿ ಎಂಬವರು KA-20-M-1151 ನೇ ನೋಂದಣಿ ನಂಬ್ರದ ಜೀಪನ್ನು ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ, ಅಪ್ಸಾ, ತಸ್ಲೀಮಾ, ರಾಫಿಯಾ, ಸಜಾರವರು ಪ್ರಯಾಣಿಕರಾಗಿದ್ದುಕೊಂಡು, ಪುತ್ತೂರು ಕಡೆಯಿಂದ ಸರ್ವೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-MC-3746 ನೇ ನೋಂದಣಿ ನಂಬ್ರದ ಕಾರನ್ನು ಇಂಡಿಕೇಟರ್‌ ಹಾಕಿ, ಸೂಚನೆಯನ್ನು ನೀಡಿ ಪೆಟ್ರೋಲ್‌ ಪಂಪ್‌ ಕಡೆ ತಿರುಗಿಸಿ ಚಲಾಯಿಸಿ ಹೋಗುತ್ತಿದ್ದ ಕಾರಿಗೆ ಅಪಘಾತವಾಗಿ, ಕಾರು ಜಖಂಗೊಂಡಿರುತ್ತದೆ..ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  134/2021 ಕಲಂ: 279  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಫಿರ್ಯಾದಿದಾರರಾದ ಶ್ರೀಮತಿ ಮುಮ್ತಾಜ್‌, ಪ್ರಾಯ: 30 ವರ್ಷ, ಗಂಡ: ಅಬ್ದುಲ್ ಮಜೀದ್, ವಾಸ: ಮೈಂದನಡ್ಕ ಮನೆ, ಪಡುವನ್ನೂರು ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ 02.11.2021ರಂದು ದಿನಸಿ ಖರೀದಿಸಲೆಂದು ಸದ್ರಿಯವರ ತಾಯಿ ಮನೆಯಿಂದ ಬೆಳಿಗ್ಗೆ ಸಮಯ 11.45 ಗಂಟೆಗೆ ಹೊರಟು ರಾಯಲ್ ಗ್ರಾಸರಿ ದಿನಸಿ ಅಂಗಡಿಗೆ ಹೋಗಿ ಸಾಮಾನು ಖರೀದಿಸಿ ವಾಪಾಸು ತಾಯಿ ಮನೆಗೆ ಹೊರಟು ಬರುವ ಸಮಯ ಫಿರ್ಯಾದಿದಾರರ ಅಣ್ಣ ಅಬ್ದುಲ್ ಬಶೀರ್‌ ರವರು ಕೆಲಸ ಮುಗಿಸಿ ಮನೆಗೆ ಹೊರಟವರು ಫಿರ್ಯಾದಿದಾರರನ್ನು ನೋಡಿ ಸದ್ರಿಯವರು ಸವಾರಿ ಮಾಡುತ್ತಿದ್ದ ಕೆಎ-21-ಬಿ-1823 ನೇ ಸುಝುಕಿ ಆಕ್ಸೆಸ್ ಸ್ಕೂಟರನ್ನು ನಿಲ್ಲಿಸಿದಾಗ ಫಿರ್ಯಾದಿದಾರರು ಸದ್ರಿ ಸ್ಕೂಟರಿನಲ್ಲಿ ಹತ್ತಿ ಕುಳಿತುಕೊಂಡು ಫಿರ್ಯಾದಿದಾರರ ಅಣ್ಣ ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುತ್ತಾ ರಾಷ್ಟ್ರೀಯ ಹೆದ್ದಾರಿಯಿಂದ ಕವಲೊಡೆದು ಮೊಟ್ಟೆತ್ತಡ್ಕ ಕ್ಕೆ ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 12.00 ಗಂಟೆಗೆ ಸಂಪ್ಯದಮೂಲೆ ಎಂಬಲ್ಲಿ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯ ಬಲ ಬದಿಯಿಂದ ಎರಡು ನಾಯಿಗಳು ಏಕಾಏಕಿಯಾಗಿ ರಸ್ತೆಯ ಎಡ ಬದಿಗೆ ಓಡಿಕೊಂಡು ಬರುತ್ತಿರುವುದನ್ನು ಕಂಡು ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಫಿರ್ಯಾದಿದಾರರ ಅಣ್ಣ ಸ್ಕೂಟರನ್ನು ರಸ್ತೆಯ ಎಡ ಬದಿಗೆ ತಿರುಗಿಸಿ ಒಮ್ಮೆಲೆ  ಬ್ರೇಕ್ ಹಾಕಿದಾಗ ಸ್ಕೂಟರಿನ ಹಿಂಬದಿಯಲ್ಲಿದ್ದ ಫಿರ್ಯಾದಿದಾರರು ಹತೋಟಿ ತಪ್ಪಿ ರಸ್ತೆಗೆ ಬಿದ್ದು, ಎಡ ಕೋಲು ಕೈಗೆ ಗುದ್ದಿದ ರೀತಿಯ ಗಾಯವಾಗಿದ್ದು, ಫಿರ್ಯಾದಿದಾರನ್ನು ಅಣ್ಣ ಅಬ್ದುಲ್ ಬಶೀರ್, ಮಹಮ್ಮದ್ ಮುಸ್ತಾಫ, ಹಾಗೂ ಹರ್ಷದ್.ಪಿ ರವರು ಉಪಚರಿಸಿದ್ದು, ಬಳಿಕ ಫಿರ್ಯಾದಿದಾರರು ಮನೆಗೆ ಹೋಗಿ ನೋಡಿದಾಗ ಎಡ ಕೈಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಫಿರ್ಯಾದಿದಾರರ ಅಣ್ಣ ಫಿರ್ಯಾದಿದಾರರನ್ನು ಕಾರಿನಲ್ಲಿ ಚಿಕಿತ್ಸೆಯ ಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಚಿಕಿತ್ಸೆ ನೀಡಿ, ಫಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅಕ್ರ 97/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ :03-11-2021 ರಂದು ಸಮಯ    ಬೆಳಿಗ್ಗೆ   ಸುಮಾರು 10.30 ಗಂಟೆಗೆ  ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ  ಅಜಿಕುರಿ ಬಳಿ  ನೇತ್ರಾವತಿ  ನದಿಯಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದಾರೆ ಎಂಬ  ಖಚಿತ ಮಾಹಿತಿಯಂತೆ ಧರ್ಮಸ್ಥಳ ಪೊಲೀಸ್‌ ಉಪ ನಿರೀಕ್ಷಕರಾದ  ಚಂದ್ರಶೇಖರ ಕೆ  ರವರು  ಸಿಬ್ಬಂದಿಗಳೊಂದಿಗೆ   ಸ್ಥಳಕ್ಕೆ  ಹೋಗಿ  ನೋಡಿದಾಗ  ಒಬ್ಬ ವ್ಯಕ್ತಿ ನದಿಯಿಂದ  ದೋಣಿ ಮುಖಾಂತರ  ಮರಳನ್ನು ತೆಗೆದು ಕಂಡುಬಂದ ಮೇರೆಗೆ  ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ  ಧಾಳಿ ಮಾಡಿದಾಗ ಮರಳು ತೆಗೆಯುತ್ತಿದ್ದಾತನು ನದಿಯಲ್ಲಿ ಈಜಿ ಆಚೆ ದಡಕ್ಕೆ ಹೋಗಿ ಓಡಿ ಪರಾರಿ ಆಗಿರುತ್ತಾನೆ. ಓಡಿ ಹೋದನ ಹೆಸರು ಹಕೀಂ  ಎಂಬುದಾಗಿ ತಿಳಿದು ಬಂತು. ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ನದಿಯಿಂದ   ಕಳವು ಮಾಡಿ ಅಕ್ರಮವಾಗಿ  ಸಂಗ್ರಹಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ಮುಂದಿನ ಕ್ರಮದ ಬಗ್ಗೆ ಪಂಚರ ಸಮಕ್ಷಮ  ಪರಿಶೀಲಿಸಲಾಗಿ  ನದಿಯಲ್ಲಿ  ಮರಳು ತೆಗೆಯಲು ಬಳಸಿದ ಒಂದು ದೋಣಿಯಿದ್ದು  ಅದರಲ್ಲಿ ಸುಮಾರು ನೂರು ಬುಟ್ಟಿಯಷ್ಟು ಮರಳು ಇರುವುದು  ಕಂಡುಬಂತು ದೋಣಿಯ  ಅಂದಾಜು ಮೌಲ್ಯ 80,000/-  (ಎಂಭತ್ತು ಸಾವಿರ) ರೂ  ಹಾಗೂ ಮರಳಿನ ಅಂದಾಜು ಮೌಲ್ಯ 2000/- ಆಗಬಹುದು . ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಅಕ್ರ 67/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:03-11-2021 ರಂದು ಸಮಯ    ಬೆಳಿಗ್ಗೆ   ಸುಮಾರು 06.30 ಗಂಟೆಗೆ  ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಹೊಸಕಾಪು ಮೃತ್ಯುಂಜಯ   ಹೊಳೆಯಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದಾರೆ ಎಂಬ  ಖಚಿತ ಮಾಹಿತಿಯಂತೆ    ಧರ್ಮಸ್ಥಳ ಪೊಲೀಸ್‌ ಉಪ ನಿರೀಕ್ಷಕರಾದ  ಕೃಷ್ಣಕಾಂತ ಪಾಟೀಲ್‌  ರವರು  ಸಿಬ್ಬಂದಿಗಳೊಂದಿಗೆ   ಸ್ಥಳಕ್ಕೆ  ಹೋಗಿ  ನೋಡಿದಾಗ  ಇಬ್ಬರು ವ್ಯಕ್ತಿಗಳು  ಹೊಳೆಯಿಂದ ದೋಣಿ ಮುಖಾಂತರ  ಮರಳನ್ನು ತೆಗೆದು ಟಿಪ್ಪರ್‌  ಲಾರಿಗೆ ಲೋಡ್‌ ಮಾಡುತ್ತಿರುವುದು ಕಂಡುಬಂದ ಮೇರೆಗೆ  ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ  ಧಾಳಿ ಮಾಡಿದಾಗ ಮರಳು ತೆಗೆಯುತ್ತಿದ್ದ  ಇಬ್ಬರು ಓಡಿ ಪರಾರಿ ಆಗಿರುತ್ತಾರೆ.   ಓಡಿ ಹೋದವರ ಹೆಸರು ರಾಧಾಕೃಷ್ಣ ಹಾಗೂ ಸುನಿಲ್‌ ಎಂಬುದಾಗಿ ತಿಳಿದು ಬಂತು. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಹೊಳೆಯಿಂದ  ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ಅವುಗಳನ್ನು ಮುಂದಿನ ಕ್ರಮದ ಬಗ್ಗೆ ಪಂಚರ ಸಮಕ್ಷಮ  ಪರಿಶೀಲಿಸಲಾಗಿ ಹೊಳೆಯಲ್ಲಿ  ಮರಳು ತೆಗೆಯಲು ಬಳಸಿದ ಎರಡು ದೋಣಿಗಳಿದ್ದು ಇವುಗಳ ಅಂದಾಜು ಮೌಲ್ಯ 80,000/- (ಎಂಭತ್ತು ಸಾವಿರ) ರೂ  ಆಗಬಹುದು , ಹೊಳೆಯ  ತೀರದಲ್ಲಿ   ಕೆಎ 21 ಬಿ-5997 ನೇ  ನೋಂದಣಿ ಸಂಖ್ಯೆಯ  ಈಚರ್‌ ಟಿಪ್ಪರ್‌ ಲಾರಿ ಒಂದು ಇದ್ದು ಇದರ ಅಂದಾಜು ಮೌಲ್ಯ ಸುಮಾರು 7,000,00/- ರೂ (ಏಳು ಲಕ್ಷ) ಆಗಬಹುದು ಇದರಲ್ಲಿ ಮರಳು ಇರುವುದಿಲ್ಲ .ಅದರ ಪಕ್ಕದಲ್ಲಿ ಇನ್ನೊಂದು ಟಾಟಾ ಕಂಪನಿಯ ಟಿಪ್ಪರ್‌ ಲಾರಿ ನಿಂತಿದ್ದು ಅದರ ನೋಂದಣಿ ಸಂಖ್ಯೆ ಕೆಎ 21-9585 ಆಗಿರುತ್ತದೆ. ಇದರ ಅಂದಾಜು ಮೌಲ್ಯ ಸುಮಾರು 3,000,00/- ರೂ (ಮೂರು ಲಕ್ಷ) ಆಗಬಹುದು ,ಇದರಲ್ಲಿ ಸುಮಾರು  ಒಂದು ಯುನಿಟ್‌ ನಷ್ಟು ಮರಳು ತುಂಬಿರುವುದು ಕಂಡುಬರುತ್ತದೆ. ಮರಳಿನ ಅಂದಾಜು ಮೌಲ್ಯ ಸುಮಾರು ರೂ 2000 ಆಗಬಹುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಅಕ್ರ 66-2021 ಕಲಂ 379 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಂಜಿನಿ ಗಂಡ: ಮಧುಸೂದನ್ ಆಚಾರ್ಯ ವಾಸ: ಕರಾವಳಿ ಸೈಟ್ ರಾಮನಗರ ಮನೆ, ಬೆಂಜನಪದವು ಅಂಚೆ, ಕಳ್ಳಿಗೆ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಲಾರೆನ್ಸ್ ಡಿಸೋಜಾರವರೊಂದಿಗೆ ಕಳೆದ 4 ವರ್ಷಗಳಿಂದ ಹೋಟೇಲ್ ನಡೆಸಿಕೊಂಡು ಬಂದಿದ್ದು, ಅವರಿಗೆ ರೂ.8,50,000/- ಹಣ ನೀಡಲು ಬಾಕಿಯಿರುತ್ತದೆ. ದಿನಾಂಕ:02-11-2021 ರಂದು ಸಂಜೆ 6.45 ಗಂಟೆಗೆ ಲಾರೆನ್ಸ್ ಡಿಸೋಜಾರವರು ಹಣ ಕೇಳಲು ಪಿರ್ಯಾದಿದಾರರ ಮನೆಗೆ ಬಂದಿದ್ದು, ಹಣದ ವಿಚಾರವಾಗಿ ಮಾತನಾಡುತ್ತಿರುವಾಗ ಪಿರ್ಯಾದಿದಾರರ ಅಕ್ಕನ ಮಕ್ಕಳಾದ ಜ್ಯೋತಿ ಪಲ್ಲವಿ ಮತ್ತು ಸುಜಲ್ ಮತ್ತು ತಂಗಿಯ ಮಗನಾದ ಮನನ್ ಮನೆಯ ಒಳಗೆ ಬಂದು ಲಾರೆನ್ಸ್ ಡಿಸೋಜಾರವರನ್ನು ಉದ್ದೇಶಿಸಿ “ಯಿ ದಾಯೆಂಬೆ ಬತ್ತಿನಿ ಇಡೆಗ್” ಎಂದು ತುಳುವಿನಲ್ಲಿ ಕೇಳುತ್ತಾ ಲಾರೆನ್ಸ್ ರವರ ಶರ್ಟ್ ಕಾಲರ್ ಹಿಡಿಯಲು ಹೋದಾಗ ಪಿರ್ಯಾದಿದಾರರು ಅಡ್ಡಬಂದಿದ್ದು,  ಆಗ ಪಿರ್ಯಾದಿದಾರರನ್ನು ದೂಡಿ ಹಾಕಿ  ಲಾರೆನ್ಸ್ ರವರಿಗೆ ಹೊಡೆದಿರುತ್ತಾರೆ. ಆಗ ಲಾರೆನ್ಸ್ ಮನೆಯಿಂದ ಹೊರಗೆ ಹೋಗಿದ್ದು, ಪಿರ್ಯಾದಿದಾರರು ನಾನು ನನ್ನ ಮನೆಗೆ ಕರೆದಿದ್ದು, ನೀವು ಯಾರು ಕೇಳುವುದಕ್ಕೆ ಎಂದು ಕೇಳಿದಕ್ಕೆ ಪಿರ್ಯಾದಿದಾರರಿಗೆ ಹೊಡೆದಿರುತ್ತಾರೆ. ಬಳಿಕ ಜ್ಯೋತಿ ಪಲ್ಲವಿ ಪಿರ್ಯಾದಿದಾರರ ಅಕ್ಕನಾದ ಸರಸ್ವತಿಗೆ ಕರೆ ಮಾಡಿ ಅವಳಿಗೆ ಹೊಡೆಯುತ್ತಿರುವುದಾಗಿ ತಿಳಿಸಿದ್ದು, ಬಳಿಕ ಸರಸ್ವತಿ,ಪುಷ್ಪಾ ಮತ್ತು ಪಿರ್ಯಾದಿದಾರರ ಮಗಳಾದ ಅನಿಶಾ ಬಂದಿದ್ದು, ಅನಿಶಾಳು ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗೆ ಹಾಕಿರುತ್ತಾಳೆ. ಬಳಿಕ ಜ್ಯೋತಿ ಪಲ್ಲವಿ, ಮನನ್ ಮತ್ತು ಅನಿಶಾ ಪಿರ್ಯಾದಿದಾರರನ್ನು ಹಿಡಿದುಕೊಂಡಿದ್ದು, ಪುಷ್ಪಾ ಮರದ ಸೊಂಟೆಯಿಂದ ಹೊಡೆದಿದ್ದು, ಸರಸ್ವತಿ ಮತ್ತು ಮನನ್ ಹೊಟ್ಟೆಗೆ ತುಳಿದಿರುತ್ತಾರೆ. ಮನನ್ ಕೈಯಲ್ಲಿ ಚೂರಿಯಿದ್ದು ಪಿರ್ಯಾದಿದಾರರಿಗೆ ಚುಚ್ಚಲು ಬಂದಾಗ ಪಿರ್ಯಾದಿದಾರರು ಕೈ ಹಿಡಿದಿದ್ದು, ಇದರಿಂದ ಪಿರ್ಯಾದಿದಾರರ ಬಲಕೈಯ ಕಿರುಬೆರಳಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ತಪ್ಪಿಸಿಕೊಂಡು ಮನೆಯ ಒಳಗೆ ಹೋಗಿ ಬಾಗಿಲು ಹಾಕಿದಾಗ ಮನನ್ ಬಾಗಿಲಿಗೆ ತುಳಿದು ಒಳಗೆ ಬಂದು ಮತ್ತೆ ಪಿರ್ಯಾದಿದಾರರಿಗೆ ಹೊಡೆದಿರುತ್ತಾರೆ. ಆ ಸಮಯ ಪಿರ್ಯಾದಿದಾರರ ಗಂಡ ಹೊರಗೆ ನಿಂತು ಹೊಡೆಯಿರಿ ಅವಳಿಗೆ ಸಾಯಿಸಿ ಅವಳನ್ನು ಎಂದು ಹೇಳುತ್ತಿದ್ದರು. ಬಳಿಕ ನೆರೆ ಮನೆಯವರು ಹೊಡೆಯುವುದನ್ನು ತಡೆದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 127/2021  ಕಲಂ:143, 147, 148, 504, 323, 324, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂದೇವ್ ಸಿಂಗ್  ಪ್ರಾಯ 43 ವರ್ಷ ತಂದೆ:ದಿ” ರಾಮದನಿ ಸಿಂಗ್ ,ವಾಸ ;ಸಜಾನ್ ಗ್ರಾಮ.ಚಂದೂರು ಅಂಚೆ ಪುಲ್ಮಾ ಜಿಲ್ಲೆ ಜಾರ್ಕಾಂಡ್  ರಾಜ್ಯ ಎಂಬವರ ದೂರಿನಂತೆ ಉತ್ತರ ಭಾರತದ ಝಾರ್ಖಂಡ್ ನಿವಾಸಿ ಸಂದೇವ್ ಸಿಂಗ್ ರವರು ಇತರರಾದ ದೇವ್ ಸಿಂಗ್ ಕುಮಾರ್ ಹಾಗೂ ಇತರರೊಂದಿಒಗೆ ಕಡಬ ತಾಲೂಕು ಕಡಬ ಗ್ರಾಮದ ಕಳಾರ ಎಂಬಲ್ಲಿ ಪ್ರಕಾಶ ಡಿಸೋಜಾ ಎಂಬವರ ಜೊತೆಯಲ್ಲಿ ಕಟ್ಟಡ ನಿರ್ಮಾಣದ ಕೂಲಿಕೆಲಸ ವನ್ನು ಮಾಡಿಕೊಂಡಿದ್ದು, ಸಂಜೆ ಸಮಯ ಉತ್ತರ ಭಾರತದ ಎಲ್ಲರೂ ಭೇಟಿಯಾಗುತ್ತಿದ್ದು, ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿಯೇ ವಾಸ್ತವ್ಯ ಇದ್ದು, ದಿನಾಂಕ.31.10.2021ರಂದು ನಾನು ವಾಸ್ತವ್ಯ ಇರುವ ಕಟ್ಟಡಕ್ಕೆ ದೇವ್ ಸಿಂಗ್ ಕುಮಾರ್ ಬಂದಿದ್ದು, ಬಳಿಕ ನಾವು ಇತರರು ಸಮೀಪದ ಬಾರ್ ನಲ್ಲಿ ಮದ್ಯ ಸೇವಿಸಿ ಕಟ್ಗಟಡದ ಮೊದಲ ಮಹಡಿಯಲ್ಲಿ ಮಲಗಿದ್ದು, ದಿನಾಂಕ.01.11.2021ರಂದು ಬೆಳಿಗ್ಗೆ 05.45 ಗಂಟೆಗೆ ನಾನು ಎದ್ದು ನೋಡಿದಾಗ ದೇವ್ ಸಿಂಗ್ ಕುಮಾರ್ ಮಹಡಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗೆ ಕಡಬ ಸರ್ಕಾರಿ ಆಸ್ಪತ್ರೆಗೆ, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಿನಾಂಕ.01.11.2021ರಂದು ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಈ ದಿನ ದಿನಾಂಕ.03.11.2021ರಂದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 06.15 ಗಂಟೆಗೆ ಮೃತಪಟ್ಟಿರುವುದಾಗಿದೆ. ದಿನಾಂಕ.31.10.2021ರಂದು ರಾತ್ರಿ ನಿರ್ಮಾಣ ಹಂತದ ಕಟ್ಟಡದ ಮಹಡಿಯಲ್ಲಿ ಮಲಗಿದ್ದ ದೇವ್ ಸಿಂಗ್ ಕುಮಾರ್ ನು ನಿದ್ದೆಯಲ್ಲಿ ಹೊರಳಾಡಿದ ಸಮಯ ಅಥವಾ ಮೂತ್ರ ವಿಸರ್ಜನೆಗೆ ತೆರಳಿದ ಸಮಯ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 25/2021 ಕಲಂ: 174 (3)ಮತ್ತು 4  ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-11-2021 10:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080