Feedback / Suggestions

ಅಪಘಾತ ಪ್ರಕರಣ: 7

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ ಟಿ ಗಣಪತಿ (49)  ತಂದೆ : ದಿ. ಬಿ ಎಸ್ ತ್ರಿಯಂಬಕಯ್ಯ ವಾಸ:ಯಳಸೂರು ಮುಖ್ಯ ರಸ್ತೆ ಯಳಸೂರು ಗ್ರಾಮ & ಅಂಚೆ ಸಕಲೇಶಪುರ ತಾಲೂಕು ಹಾಸನ ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ: 04-05-2022  ರಂದು ಪಿರ್ಯಾದಿದಾರರು ತನ್ನ ಬಾಬ್ತು ಕೆಎ 13 ಪಿ 0897 ನೇ ಓಮ್ನಿ ಕಾರಿನಲ್ಲಿ ಸಹ ಪ್ರಯಾಣಿಕರೊಂದಿಗೆ ಉಜಿರೆ- ಚಾರ್ಮಾಡಿ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಕೆಎ 70 3986 ನೇ ಆಟೋರಿಕ್ಷಾ ವನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ವಾಹನದ ಸಹಪ್ರಯಾಣಿಕರಾದ ಪವಿತ್ರ ಎಂಬವರಿಗೆ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಆಟೋರಿಕ್ಷಾ ಚಾಲಕ ಲೋಕೆಶ್ ರವರಿಗೆ ಹಣೆಗೆ ಗುದ್ದಿದ ಗಾಯ, ಆಟೋರಿಕ್ಷಾದಲ್ಲಿ ಸಹಪ್ರಯಾಣಿಕರಾದ ಟಾಕಮ್ಮ ರವರಿಗೆ ಹೊಟ್ಟೆಗೆ ಗುದ್ದಿದ ಗಾಯ ಮತ್ತು ಅಶ್ಷಿನಿ ರವರಿಗೆ ಬಲಕಾಲಿನ ಮಣಿಗಂಟಿಗೆ ಗುದ್ದಿದ ಗಾಯ, ಮುಖಕ್ಕೆ ತರಚಿದ ಗಾಯವಾಗಿ ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 68/2022 ಕಲಂ; 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಆಶಿಕ್, ಪ್ರಾಯ 27 ವರ್ಷ, ತಂದೆ: ಇಸ್ಮಾಯಿಲ್, ವಾಸ: ಅರಿಯಡ್ಕ ಮನೆ, ಅರಿಯಡ್ಕ ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 04-05-2022 ರಂದು 11-15 ಗಂಟೆಗೆ ಆರೋಪಿ ಲಾರಿ ಚಾಲಕ ಅಬುಸಾಲಿ  ಎಂಬವರು KA-12-B-0518 ನೇ ನೋಂದಣಿ ನಂಬ್ರದ ಲಾರಿಯನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಉರ್ಲಾಂಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಮಹಮ್ಮದ್ ಸಿನಾನ್ ಎಂಬವರು ಸವಾರರಾಗಿ, ಮಹಮ್ಮದ್ ಆಸೀರ್ ಎಂಬವರನ್ನು ಸಹಸವಾರರನ್ನಾಗಿ  ಕುಳ್ಳಿರಿಸಿಕೊಂಡು ಅರಿಯಡ್ಕ ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-1318ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಸ್ಕೂಟರ್ ಸವಾರರು ಲಾರಿಯ ಚಕ್ರದಡಿಗೆ ಬಿದ್ದು, ಗಾಯಗಳಾಗಿ ಮಹಮ್ಮದ್ ಸಿನಾನ್ ರವರು ಸ್ಥಳದಲ್ಲಿ ಮೃತಪಟ್ಟಿದ್ದು, ಸಹಸವಾರ ಮಹಮ್ಮದ್ ಆಸೀರ್ ರವರಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಮಹಮ್ಮದ್ ಸಿನಾನ್ ರವರ ಮೃತ ದೇಹವು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿರುತ್ತದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  85/2022  ಕಲಂ: 279,  337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಯು.ಕೆ. ಮಹಮ್ಮದ್ ರಪೀಕ್, ಪ್ರಾಯ 44 ವರ್ಷ, ತಂದೆ: ಉಸ್ಮಾನ್, ವಾಸ: ಹುಣಸೆಕಟ್ಟೆ ಮನೆ, ಕಲ್ಲೇರಿ ಅಂಚೆ, ಕರಾಯ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 04-05-2022 ರಂದು 10-30 ಗಂಟೆಗೆ ಆರೋಪಿ ಲಾರಿ ಚಾಲಕ ಗಿರೀಶ್ ಕೆ.ಆರ್ ಎಂಬವರು  KA-19-B-5208 ನೇ ನೋಂದಣಿ ನಂಬ್ರದ ಲಾರಿಯನ್ನು ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಶಿವಗಿರಿ ಎಂಬಲ್ಲಿ ಕೋಟಿ ಚೆನ್ನಯ ಗರಡಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮುಂದಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಮಹಮ್ಮದ್ ಸಫ್ವಾನ್ ಎಂಬವರು ಸವಾರರಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-U-9282 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಮಹಮ್ಮದ್ ಸಫ್ವಾನ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಮೊಣಗಂಟಿಗೆ, ಎಡಕೈಯ ಬೆರಳುಗಳಿಗೆ, ತಲೆಗೆ, ಗುದ್ದಿದ ಹಾಗೂ ತರಚಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  86/2022  ಕಲಂ: 279,  337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಕಾಂತ ಬಾಬು ವಿ, ಪ್ರಾಯ 45 ವರ್ಷ, ತಂದೆ: ಸತ್ಯ ನಾರಾಯಣ ವಿ, ವಾಸ: ಸರಕಾರಿ  ಪ್ರಾಥಮಿಕ ಶಾಲಾ ಬಳಿ, ಪರ್ಲಡ್ಕ, ಪುತ್ತೂರು ಕಸ್ಬಾ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 03-05-2022 ರಂದು 13-30 ಗಂಟೆಗೆ ಆರೋಪಿ ಕಾರು ಚಾಲಕ KA-01-P-9533ನೇ ನೋಂದಣಿ ನಂಬ್ರದ ಕಾರನ್ನು ಬೊಳುವಾರು-ಪುತ್ತೂರು-ದರ್ಬೆ ಸಾರ್ವಜನಿಕ ಮುಖ್ಯ ಡಾಮಾರು ರಸ್ತೆಯಲ್ಲಿ ಬೊಳುವಾರು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸವಾ ಗ್ರಾಮದ ತಾಜಮಹಲ್‌ ಹೋಟೇಲ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರೊಂದಿಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಶೃತಿಕಾ ವಿ(11ವರ್ಷ)ರವರಿಗೆ ಕಾರು ಅಪಘಾತವಾಗಿ ರಸ್ತೆಗೆ ಬಿದ್ದ  ಶೃತಿಕಾ ವಿ ರವರಿಗೆ ಎಡಕಾಲಿನ ಪಾದಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಅಪಘಾತದ ನಂತರ ಆರೋಪಿ ಕಾರು ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೇ, ಪೊಲೀಸ್‌ ಠಾಣೆಗೆ ಮಾಹಿತಿ ನೀಡದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  87/2022  ಕಲಂ: 279,  337, ಐಪಿಸಿ & ಕಲಂ: 134(ಎ)& (ಬಿ) ಐಎಂವಿ ಕಾಯ್ದೆ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಿನೇಶ್  (28) ತಂದೆ: ದಿ. ಕಾಂತಪ್ಪ  ವಾಸ: ದೇರೋಡಿ ಮನೆ, ಕೋಡಿಂಬಾಳ ಗ್ರಾಮ ,ಕಡಬ ತಾಲೂಕು ರವರು ದಿನಾಂಕ:03.05.2022 ರಂದು ಅಗತ್ಯ ಕೆಲಸದ ನಿಮಿತ್ತ ಕಡಬ ಪೇಟೆಗೆ ಬಂದು ಸಾಮಾನುಗಳನ್ನು ಖರೀದಿಸಿ ನಂತರ ವಾಪಾಸ್ಸು ಮನೆಗೆ ಹೋಗುವರೇ ಕಡಬ ಪೇಟೆಯಲ್ಲಿರುವ ಅಶ್ವಿನಿ ಟ್ರೇಡರ್ಸ್ ಅಂಗಡಿ ಎದುರು ನಡೆದುಕೊಂಡು ಕಡಬ –ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ರಸ್ತೆಯ ಪಕ್ಕದ ಎಡಬದಿಯ ಕಚ್ಚಾ ಮಣ್ಣು ರಸ್ತೆಯ ಕಡೆಯಲ್ಲಿ ನಡೆದುಕೊಂಡು ಹೋಗುವಾಗ  ಅದೇ ರಸ್ತೆಯಲ್ಲಿ ಕಡಬ ಕಡೆಯಿಂದ ನೆಟ್ಟಣ ಕಡೆಗೆ  ಕೆ.ಎ-19 ಎಂ.ಬಿ-3284ನೇ ಓಮಿನಿ ಕಾರೊಂದರ ಆರೋಪಿತನಾದ ವಿಕ್ಟರ್ ಮಾರ್ಟೀಸ್ ಎಂಬಾತನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದಿದ್ದು ನಂತರ ಆತನನ್ನು ಅಲ್ಲಿದ್ದ ಸಾರ್ವಜನಿಕರು ಉಪಚರಿಸಿ ನೋಡಲಾಗಿ  ಪಿರ್ಯಾದುದಾರರಿಗೆ  ಎಡಕೈ ಮಣಿಗಂಟಿಗೆ ಮತ್ತು  ಬಲ ಕೈ ಬುಜಕ್ಕೆ ಗುದ್ದಿದ ಗಾಯವಾಗಿರುತ್ತದೆ ನಂತರ ತಕ್ಷಣ ಗಾಯಾಳುವನ್ನು ಆರೋಪಿತನ ಓಮಿನಿ ಕಾರು ವಾಹನದಲ್ಲಿಯೇ  ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಸೂಚಿಸಿದಂತೆ ಪಿರ್ಯಾದುದಾರರರ ತಮ್ಮ ಯಶವಂತ ಮತ್ತು ತಾಯಿಯವರು 108 ಅಂಬ್ಯಲೆನ್ಸ್ ವಾಹನದಲ್ಲಿ  ಪುತ್ತೂರು ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲು ಮಾಡಿರುವುದಾಗಿರುತ್ತದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 42/2022 ಕಲಂ. .279.337 IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ತಶ್ರೀಫ್ (17) ತಂದೆ: ಇಸ್ಮಾಯಿಲ್ , ಉಮ್ಮಿಕ್ಕಳ ಮನೆ, ಬೆಳ್ಳಾರೆ ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ 03.05.2022 ರಂದು ರಾತ್ರಿ ಅವರ ಸಂಬಂಧಿಕರ ಮನೆಯಾದ ಪೈಚಾರಿಗೆ ಹೋಗಿ ವಾಪಾಸು ಜೀಪ್ ನಂಬ್ರ KA21 Z 5102  ನೇದರಲ್ಲಿ ಸಂಬಂಧಿಕರಾದ ಮಿಸ್ತಾಹ್, ಮಹಮ್ಮದ್ ಸಲೀತ್, ನೌಶಾದ್ ಎಂಬವರ ಜೊತೆ ಸುಳ್ಯ- ಬೆಳ್ಳಾರೆ ರಸ್ತೆಯಲ್ಲಿ ಉಮ್ಮಿಕ್ಕಳ ಕಡೆಗೆ ಬರುತ್ತಿದ್ದು, ಸದ್ರಿ ಜೀಪನ್ನು ನೌಶಾದ್ ಎಂಬವರು ಚಲಾಯಿಸುತ್ತಿದ್ದು, ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ದರ್ಖಾಸು ರಬ್ಬರ್ ಫ್ಯಾಕ್ಟರಿ ಬಳಿ  ರಾತ್ರಿ ಸುಮಾರು 11:00  ಗಂಟೆಗೆ ತಲುಪಿದಾಗ ಚಾಲಕ ನೌಶಾದ್ ರವರು ಜೀಪನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಜೀಪು ರಸ್ತೆಯ ಎಡಮಗ್ಗುಲಿಗೆ ಹೋಗಿ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ  ಜೀಪಿನಲ್ಲಿದ್ದ  ಮಿಸ್ತಾಹ್ ಗೆ ತಲೆಯ ಎಡಭಾಗಕ್ಕೆ  ರಕ್ತಗಾಯವಾಗಿದ್ದು, ಪಿರ್ಯಾದಿದಾರರಿಗೆ ಹೊಟ್ಟೆಯ ಬಲಭಾಗಕ್ಕೆ ಗುದ್ದಿದ ನಮೂನೆಯ ಗಾಯವಾಗಿದ್ದು, ಮಹಮ್ಮದ್ ಸಲೀತ್ ರವರಿಗೆ ಗಾಯಗಳಾಗಿ , ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಅವರ ಸಂಬಂಧಿ ಅಬ್ದುಲ್ ಖಾದರ್ ರವರು ಕಾರೊಂದರಲ್ಲಿ ಕೆವಿಜಿ ಆಸ್ಪತ್ರೆ ಸುಳ್ಯಕ್ಕೆ  ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮಹಮ್ಮದ್ ಸಲೀತ್ ಮತ್ತು ಪಿರ್ಯಾದುದಾರರಿಗೆ ಹೊರರೋಗಿಚಿಕಿತ್ಸೆ ನೀಡಿ  ಕಳಹುಹಿಸಿಕೊಟ್ಟಿದ್ದು, ಬಾಲಕ ಮಿಸ್ತಾಹ್ ನಿಗೆ ಹಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ: 38/2022 ಕಲಂ 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚೇತನ್ ಕುಮಾರ್ ಪ್ರಾಯ 29 ವರ್ಷ, ತಂದೆ: ಗಂಗಾಧರ ಗೌಡ, ವಾಸ: ಚಿದ್ಗಲ್ ಮನೆ, ಬೆಳಿನೆಲೆ ಗ್ರಾಮ, ನೆಟ್ಟಣ, ಕಡಬ ತಾಲೂಕು, ದ.ಕ. ಜಿಲ್ಲೆ ರವರು ಅವರ ಬಾಬ್ತು ಮಿನಿ ಬಸ್ಸು ನಂಬ್ರ ಕೆಎ-12-ಬಿ-8410 ನೇಯದರಲ್ಲಿ ಚಾಲಕರಾಗಿ ಕಾರ್ಯಕ್ರಮದ ಬಾಡಿಗೆ ನಿಮಿತ್ತ ದಿನಾಂಕ 04.05.2022 ರಂದು ಸುಳ್ಯದಿಂದ ಆಲಂಕಾರಿಗೆ ಹೋದವರು ಅಲ್ಲಿಂದ ವಾಪಾಸ್ ಸಂಜೆ ಬೆಳ್ಳಾರೆ ಪೇಟೆಗೆ ಬಂದು ಜನರನ್ನು ಇಳಿಸಿ ಬಳಿಕ ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಮಿನಿಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಾ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಬೂಡು ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಸುಳ್ಯ ಕಡೆಯಿಂದ ಬೆಳ್ಳಾರೆ ಕಡೆಗೆ ಆರೋಪಿತ ಅಜ್ಮಲ್ ಎಂಬವರು ಕಾರು ನಂಬ್ರ ಕೆಎಲ್-60-7367 ನೇಯದನ್ನು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಿನಿ ಬಸ್ಸಿನ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಮತ್ತು ಮಿನಿ ಬಸ್ಸು ಜಖಂಗೊಂಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿ ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಹೋಗಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ: 39/2022 ಕಲಂ 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಂಜೀವ ಪ್ರಾಯ:39 ವರ್ಷ ತಂದೆ: ಕೊರಗ ಮುಗೇರ ವಿಳಾಸ: ಮಂಚಿ ಕಟ್ಟೆ ಮನೆ, ಪಂಬೆತ್ತಾಡಿ ಗ್ರಾಮ, ಕರಿಕಾಳ ಅಂಚೆ,ಸುಳ್ಯ ತಾಲೂಕು. ಹಾಲಿ ವಾಸ:ದಿ.ಕೆ.ಕೆ.ಸುಲೈಮಾನ್ ಪೈಝಿರವರ ಬಾಡಿಗೆ ಮನೆ, ಕಣಿಯೂರು ಮಸೀದಿ ಹಿಂಭಾಗ ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ರವರು ಕನ್ಯಾನ ಗ್ರಾಮದ ಕಣಿಯೂರು ಮಸೀದಿ ಹಿಂಭಾಗದಲ್ಲಿನ ದಿ||ಸುಲೈಮಾನ್ ಫೈಝಿ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡುಕೊಂಡಿರುವುದಾಗಿದೆ. ದಿನಾಂಕ:04-05-2022 ರಂದು ಎಂದಿನಂತೆ ಬೆಳಿಗ್ಗೆ 8.00 ಗಂಟೆಗೆ ಪಿರ್ಯಾಧಿದಾರರು ಮತ್ತು ಅವರ ಪತ್ನಿ ಕೂಲಿ ಕೆಲಸಕ್ಕೆಂದು ಹೋಗಿದ್ದು. ಅವರ ಮಗ ಕಾರ್ತಿಕನು ಔಷಧ ತರಲು ಹೋಗಿದ್ದು. ಮಗಳು ಮನೆಯಲ್ಲಿ ಒಬ್ಬಳೇ ಇದ್ದಳು. ಪಿರ್ಯಾಧಿದಾರರು ಮತ್ತು ಅವರ ಪತ್ನಿ ಸುಮಾರು 11.15 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದು. ಪಿರ್ಯಾಧಿದಾರರು ಮನೆಯ ಹಿಂಭಾಗ ಹೋದಾಗ ಅವರ ಪತ್ನಿ ಮನೆಯ ಒಳಗೆ ಹೋದವಳು ಜೋರಾಗಿ ಬೊಬ್ಬೆ ಹಾಕಿದಳು. ಕೂಡಲೆ ಪಿರ್ಯಾಧಿ ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ನಡುವಿನ ಕೋಣೆಯಲ್ಲಿ ಪಿರ್ಯಾಧಿದಾರರ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು. ಈಕೆ ಮೃತಪಡಲು ಕಾರಣವೇನೆಂದರೆ ಕಣಿಯೂರು ತಲೆಕ್ಕಿ ಎಂಬಲ್ಲಿಯ ಸಾಹುಲ್ ಹಮೀದ್@ಕುಟ್ಟ ಎಂಬಾತನನ್ನು ಪ್ರೀತಿಸುತ್ತಿದ್ದ ವಿಚಾರ ಪಿರ್ಯಾಧಿಗೆ ತಿಳಿದು ಮಗಳು ದೀರ್ಘ ಕಾಲ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಅವಳ ಮೊಬೈಲನ್ನು ಪರಿಶೀಲಿಸಲಾಗಿ ಮೊಬೈಲ್ ನಲ್ಲಿ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಎಂಬಾತನೊಂದಿಗೆ ಮಾತನಾಡುತ್ತಿರುವ ಪಿರ್ಯಾಧಿದಾರರು ಮಗಳ ಮೊಬೈಲ್ ನ್ನು ತೆಗೆದಿರಿಸಿ ಆಕೆಗೆ ಬುಧ್ಧಿವಾದ ಹೇಳಿದ್ದು ಸಾಹುಲ್ ಹಮೀದ್ ಹಾಗೂ ಆತನ ಅಣ್ಣನನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಆತನಿಗೆ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿರುತ್ತಾರೆ. ಆದರೂ ಕೂಡ ಸಾಹುಲ್ ಹಮೀದ್ ನು ಪದೇ ಪದೇ ಪಿರ್ಯಾಧಿದಾರರ ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯ ಪಿರ್ಯಾಧಿಯ ಮನೆಗೆ ಬಂದು ಮಗಳನ್ನು ಭೇಟಿಯಾಗಿ ಮಗಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಅಲ್ಲದೇ ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ನೀನು ಬಾ. ನೀನು ಬರುವುದಿಲ್ಲವಾದರೆ ಸಾಯಿ ಎಂದು ಸಾಹುಲ್ ಹಮೀದ @ ಕುಟ್ಟ ಹೇಳಿರುವುದನ್ನು ಮಗಳು ಪಿರ್ಯಾಧಿ ಹಾಗೂ ಅವರ ಪತ್ನಿಯ ಬಳಿ ಹೇಳಿಕೊಂಡಿದ್ದಳು. ಇದರಿಂದ ಮನನೊಂದು ದಿನಾಂಕ:04-05-2022ರಂದು ಬೆಳಿಗ್ಗೆ 08.00 ಗಂಟೆಯಿಂದ 11.15 ಗಂಟೆಯ ಮಧ್ಯದ ಅವಧಿಯಲ್ಲಿ ಪಿರ್ಯಾಧಿದಾರರ ಮನೆಯ ನಡುವಿನ ಕೋಣೆಯಲ್ಲಿರುವ ಮರದ ಅಡ್ಡಕ್ಕೆ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 68/2022 ಕಲಂ: ಕಲಂ:305 ಐಪಿಸಿ ಮತ್ತು ಕಲಂ: 3(2)(v), 3(2)(va) The SC & ST (Prevention of Atrocities) Amendment Act 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅನೂಪ್ ಸಿಂಗ್ (29) ತಮದೆ:ಬೀಚ್ ಸಿಂಗ್ ವಾಸ:ಲಕ್ಷ್ಮೀನಗರ ಮನೆ ಉಪ್ಪಿನಂಗಡಿ ಗ್ರಾಮ ಪುತ್ತುರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 03-05-2022ರಂದು ರಾತ್ರಿ 09.00 ಗಂಟೆಯಿಂದ 11.00 ಗಂಟೆಯ ಮದ್ಯದ ಅವಧಿಯಲ್ಲಿ  ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ರಾಗ್‌ ಜನರಲ್‌ ಸ್ಟೋರ್‌ ಬಳಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಗಂಡಸು ಆತನಿಗಿದ್ದ ಯಾವುದೋ  ಖಾಯಿಲೆಯಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದು ಮೃತ ವ್ಯಕ್ತಿಯು ಹೊರರಾಜ್ಯದವನಂತೆ ಕಂಡು ಬರುತ್ತಿದ್ದು  ಬಿಳಿ ಮೈಬಣ್ಣ, ಕೋಲು ಮುಖ ಸಪೂರ ಶರೀರದವನಾಗಿದ್ದು,  ಆತನು  ಕಪ್ಪು ಬಣ್ಣದ ಟೀಶರ್ಟ್‌ , ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದು ಆತನ ಬಳಿ ಜಿಯೋ ಕಂಪೆನಿಯ ಮೊಬೈಲ್‌ ಇರುತ್ತದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 08/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋಹನ್ ಡಿ ಯನ್    ಪ್ರಾಯ: 28 ವರ್ಷ, ತಂದೆ ; ನೇಮಣ್ಣ ಗೌಡ  ;ವಾಸ: ದೇರಾಜೆ  ಮನೆ ಬಲ್ಯ  ಗ್ರಾಮ ಕಡಬ ತಾಲೂಕು ನೀಡಿದ ದೂರಿನಂತೆ ದಿನಾಂಕ 03.05.2022 ರಂದು ಮನೆಯಲ್ಲಿ ರಾತ್ರಿ ಎಲ್ಲರು ಊಟ ಮುಗಿಸಿ ನಂತರ  ರಾತ್ರಿ 21-00 ಗಂಟೆಗೆ  ಸುಮಾರಿಗೆ  ಎಲ್ಲರು ಪತ್ಯೇಕ  ಬೇರೆ ಬೇರೆ ಕೊಠಡಿಯಲ್ಲಿ ಮಲಗಿಕೊಂಡಿದ್ದು  ದಿನಾಂಕ 04-05-2022 ರಂದು ಬೆಳಿಗ್ಗೆ 06-00 ಗಂಟೆಗೆ  ಪಿರ್ಯಾದುದಾರರ ತಾಯಿ ಎದ್ದು ಮನೆಯ ಕೆಲಸ ಮಾಡಿಕೊಂಡಿದ್ದು ಬೆಳಿಗ್ಗೆ 08-00 ಗಂಟೆಯಾದರು ಪಿರ್ಯಾದುದಾರರ ತಂದೆಯವರು ಮಲಗಿದ್ದ ರೂಮಿನಿಂದ ಹೋರಗೆ ಬಾರದೇ ಇರುವುದನ್ನು ಗಮನಿಸಿದ ತಾಯಿಯವರು ಎಬ್ಬಿಸಲು ರೂಮಿಗೆ ಹೋದಗ ಪಿರ್ಯಾದುದಾರರ ತಂದೆಯವರು ಮಲಗಿದ್ದ ಸ್ಥಿತಿಯಲ್ಲೆ ಇದ್ದು  ವಾಂತಿ ಮಾಡಿಕೊಂಡಿರುವುದನ್ನು ನೋಡಿ  ಮಲಗಿದ್ದ ಸ್ಥಿತಿಯಲ್ಲೆ ಮೃತಪಟ್ಟಿರುವುದು ಕಂಡು ಬಂದಿದ್ದು  ಅವರ ಪಕ್ಕದಲ್ಲಿ ನೀರಿನ ಬಾಟಲಿಯು ಕಂಡು ಬಂದಿದ್ದು ಅದರ ವಾಸನೆಯು ನೋಡಲಾಗಿ ಘಾಟು ವಾಸನೆ ಬರುತಿದ್ದು ಪಿರ್ಯಾದುದಾರರ ತಂದೆಯವರು  ದಿನಂ ಪ್ರತಿ ಕುಡಿತದ ಚಟವುಳ್ಳವರಾಗಿದ್ದು ಅರೋಗ್ಯದ ಸಮಸ್ಯೆವುಳ್ಳವರಾಗಿದ್ದು ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಸಹ ಗುಣಮುಖವಾಗದೇ ಇರುವುದರಿಂದ  ಅಲ್ಲದೆ ಯಾವುದೋ ವಿಚಾರಕ್ಕೆ ಮನನೊಂದು  ಜೀವನದಲ್ಲಿ ಜಿಗುಪ್ಸೆ ಗೊಂಡು ಯಾವುದೋ ವಿಷ ಪದಾರ್ಥ ವನ್ನು ಸೇವಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;15/2022 ಕಲಂ. 174 Crpc ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 05-05-2022 12:42 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080