ಅಪಘಾತ ಪ್ರಕರಣ: ೦3
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಮೇಶ್(32) ತಂದೆ:ಅಣ್ಣಯ್ಯ ನಾಯ್ಕ್, ವಾಸ: ನಾರ್ಕೋಲ್ ಜಡ್ಡು, ಕಜಿಕೆ ಮನೆ, ನಾರ್ಕೋಲ್ ಜಡ್ಡು ಗ್ರಾಮ ಮತ್ತು ಅಂಚೆ, ಕೊಕ್ಕರ್ಣೆ, ಉಡುಪಿ ತಾಲೂಕು ಮತ್ತು ಜಿಲ್ಲೆ ರವರು ದಿನಾಂಕ: 03-07-2021 ರಂದು ಕಿಲ್ಲೂರು ಕಡೆಯಿಂದ ಲಾಯಿಲ ಕಡೆಗೆ ಕೆಎ20 ಎಬಿ 0654 ನೇ ಲಾರಿಯನ್ನು ಚಾಲನೆ ಮಾಡಿಕೊಂಡು ಬರುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಪುತ್ರಬೈಲು ಬ್ರಿಡ್ಜ್ ಬಳಿ ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಅಂದರೆ ಲಾಯಿಲ ಕಡೆಯಿಂದ ಕಿಲ್ಲೂರು ಕಡೆಗೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ನಂಬ್ರ ಕೆಎ 70 ಹೆಚ್ 5622 ನೇದನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ವಾಹನ ಜಖಂಗೊಂಡಿದ್ದು, ಸವಾರ ವರುಣ್ ರವರಿಗೆ ಬಲಕಾಲು, ಬಲಕೈಗೆ ತರಚಿದ ಗಾಯ ಹಾಗೂ ಎಡಕಣ್ಣಿನ ಕೆಳಗೆ ಹಾಗೂ ಎಡ ಭುಜಕ್ಕೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 51/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಂಜೀವ ಮೂಲ್ಯ ಪ್ರಾಯ : 72 ವರ್ಷ ತಂದೆ : ದಿ|| ರಾಮ ಮೂಲ್ಯ ವಾಸ: 2-77(1) ಮಿತ್ತಕೋಡಿ ಮನೆ ಕುರ್ನಾಡು ಗ್ರಾಮ ಮುಡಿಪು ಅಂಚೆ ಬಂಟ್ವಾಳ ತಾಲೂಕು ರವರು ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 03.07.2021 ರಂದು ಬೋಳಂತ್ತೂರು ನಲ್ಲಿ ಕೆಲಸ ಮುಗಿಸಿ ವಾಪಾಸ್ಸು ಮನೆ ಕಡೆಗೆ ತನ್ನ ಮಗ ಜಯರಾಜ ರವರ ಬಾಬ್ತು KA 19 D 4932 ನೇ ಆಟೋರಿಕ್ಷಾ ದಲ್ಲಿ ಪ್ರಯಾಣಿಸುತ್ತಾ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ನಾಡಾಜೆ ಎಂಬಲ್ಲಿಗೆ ತಲುಪಿದಾಗ ಮಂಚಿ ಕಡೆಯಿಂದ KA 02 AB 384 ನೇ ಖಾಸಗಿ ಭವಾನಿ ಬಸ್ಸನ್ನು ಅದರ ಚಾಲಕ ಅತಿ ವೇಗ ಆಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ KA 19 D 4932 ನೇ ಆಟೋ ರಿಕ್ಷಾದ ಹಿಂಬದಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾವು ಮಗುಚಿ ಬಿದ್ದು ಅಪಘಾತವಾಗಿದ್ದು , ಅಪಘಾತದಲ್ಲಿ ಪಿರ್ಯಾದಿದಾರರ ಮೂಗಿಗೆ, ಬಲಕಣ್ಣಿನ ಬಳಿ , ಮುಖಕ್ಕೆ ಗುದ್ದಿದ ಗಾಯ ವಾಗಿದ್ದು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆ ಅ ಕ್ರ: 58/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೋನಿ ಜಾರ್ಜ್ (57) ತಂದೆ: ಎಂ ಜಾರ್ಜ್ ವಾಸ:ಆರ್ಲ ಮನೆ ಕೊಣಾಲು ಗ್ರಾಮ ಕಡಬ ತಾಲೂಕು ಎಂಬವರು ದಿನಾಂಕ 03.07.2021 ರಂದು ತನ್ನ ಮನೆ ಕಡೆಗೆ ಹೋಗಲು ಕಡಬ ತಾಲೂಕು ಕೊಣಾಲು ಗ್ರಾಮದ ಆರ್ಲ ಜಂಕ್ಷನ್ ನಲ್ಲಿ ಆರ್ಲ - ಪಾಂಡಿಬೆಟ್ಟು ರಸ್ತೆ ಬದಿಯಲ್ಲಿ ನಿಂತುಕೊಂಡು ಇರುವಾಗ ಅಲ್ಲಿಗೆ ಸ್ಕೂಟಿಯಲ್ಲಿ ಬಂದ ಪರಿಚಯದ ಉಮೇಶ ಎಂಬಾತನು ತನ್ನ ಸ್ಕೂಟಿ ನಂಬ್ರ ಕೆಎ70ಹೆಚ್5737 ನೇದನ್ನು ತಂಗಮ್ಮಳ ಬಳಿ ನಿಲ್ಲಿಸಿ ತನ್ನ ಸ್ಕೂಟಿಯಲ್ಲಿ ತಂಗಮ್ಮಳನ್ನು ಹಿಂಬದಿ ಸವಾರಳಾಗಿ ಕುಳಿತುಕೊಳ್ಳಲು ಹೇಳಿ ತಂಗಮ್ಮಳು ಸ್ಕೂಟಿಯ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಸ್ಕೂಟಿಯನ್ನು ಏಕಾಏಕಿಯಾಗಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಒಮ್ಮಲೇ ಮುಂದಕ್ಕೆ ಚಲಾಯಿಸಿದ ಪರಿಣಾಮ ತಂಗಮ್ಮಳು ಸ್ಕೂಟಿಯಿಂದ ಹಿಮ್ಮುಖವಾಗಿ ಡಾಮಾರು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ ಉಂಟಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕೊಂಡು ಹೋದಲ್ಲಿ, ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 62/2021 ಕಲಂ:279 337 IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ನವಾಝ್, ಪ್ರಾಯ: 28 ವರ್ಷ, ತಂದೆ: ಟಿ ಎಚ್ ಇಬ್ರಾಹಿಂ, ವಾಸ: ಕುದ್ರಡ್ಕ ಮನೆ ತಣ್ಣೀರುಪಂಥ ಗ್ರಾಮ ಬೆಳ್ತಂಗಡಿ ತಾಲೂಕು ರವರು ಎಂದಿನಂತೆ ದಿನಾಂಕ: 03.07.2021 ರಂದು ಕೂಡಾ ವ್ಯಾಪಾರ ಮುಗಿಸಿ ಮನೆಗೆ ಬಂದು ವ್ಯಾಪಾರದಿಂದ ಬಂದ ಹಣವನ್ನು ಬೆಡ್ ರೂಮ್ ನಲ್ಲಿನ ಗೊದ್ರೆಜ್ ನಲ್ಲಿಟ್ಟು ರಾತ್ರಿ 11.00 ಗಂಟೆಗೆ ಊಟ ಮಾಡಿ ಮಲಗಿದ್ದು, ದಿನಾಂಕ: 04.07.2021 ರಂದು ಬೆಳಿಗ್ಗೆ 07.00 ಗಂಟೆಗೆ ಎದ್ದು ಹೊರಗಡೆ ಹೋಗುವ ಸಮಯ ಮನೆಯ ಹಿಂಬದಿ ಬಾಗಿಲು ತೆರೆದುಕೊಂಡಿದ್ದು ನೋಡಿದಾಗ ಅದರ ಚಿಲಕವು ಮುರಿದು ಬಿದ್ದಿದ್ದನ್ನು ಕಂಡು ಇದರಿಂದ ಅನುಮಾನ ಗೊಂಡ ಪಿರ್ಯಾದಿದಾರರು ಮನೆಯ ಒಳಗೆ ಬಂದಾಗ ಅಡುಗೆ ಮನೆಯಲ್ಲಿ ಗೋದ್ರೆಜ್ ನಲ್ಲಿ ಹಣ ಇಟ್ಟಿದ್ದ ಪೆಟ್ಟಿಗೆ ಬಿದ್ದುಕೊಂಡಿದ್ದು ಮನೆಯರವರಲ್ಲಿ ಈ ವಿಚಾರವನ್ನು ತಿಳಿಸಿ ಬೆಡ್ ರೂಮ್ ನಲ್ಲಿ ಇಟ್ಟಿದ್ದ ಗೋದ್ರೆಜ್ ನ್ನು ನೋಡಲಾಗಿ ಅದರ ಬಾಗಿಲು ತೆರೆದುಕೊಂಡಿದ್ದು ಪರಿಶೀಲಿಸಲಾಗಿ ಪಿರ್ಯಾದಿದಾರರು ರಾತ್ರಿ ವ್ಯಾಪಾರ ಮುಗಿಸಿಕೊಂಡು ಬಂದು ಇಟ್ಟಿದ್ದ 20000 ರೂಪಾಯಿ ಹಾಗೂ ಅದೇ ರೂಮ್ ನಲ್ಲಿ ಮಲಗಿದ್ದ ಪಿರ್ಯಾದಿದಾರರ ತಂಗಿ ಫಾತಿಮತ್ ಜೋಹರಾ ಎಂಬವರ ಎರಡು ಕಾಲಿನಲ್ಲಿ ಇದ್ದ ಚಿನ್ನದ ಕಾಲು ಚೈನ್ ಕೂಡಾ ಇರಲಿಲ್ಲ. ಪಿರ್ಯಾದಿದಾರರು ಹಾಗೂ ಮನೆಯವರೆಲ್ಲರೂ ಮಲಗಿದ್ದ ಸಮಯ ಯಾರೋ ಕಳ್ಳರು ಬಾಗಿಲಿನ ಹಿಂಬದಿ ಚಿಲಕ ಮುರಿದು ಮನೆಯೊಳಗೆ ಬಂದು ಮನೆಯ ಬೆಡ್ ರೂ ಮ್ ನ ಗೋದ್ರೆಜ್ ನಲ್ಲಿ ಇದ್ದ ನಗದು ಹಣ ಹಾಗೂ ಪಾತಿಮತ್ ಜೋಹರಾ ರವರ ಕಾಲಿನಿಂದ ಚಿನ್ನ ಚೈನ ನನ್ನು ಯಾವುದೋ ಸಾದನದಿಂದ ಕತ್ತರಿಸಿ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ನಗದು ಹಾಗೂ ಚಿನ್ನದ ಒಟ್ಟು ಮೌಲ್ಯ ಸುಮಾರು 1 ಲಕ್ಷ ರೂಪಾಯಿ ಆಗಬಹುದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ಅಕ್ರ: 40/2021 ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦1
ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಅಬೂಬಕ್ಕರ್ ಸಿದ್ದಿಕ್ (43) ತಂದೆ: ದಿ/ ಕೆ ಮಹಮ್ಮದ್ ವಾಸ: ನ್ಯೂ ಸ್ಟಾರ್ ಮಂಜಿಲ್, ಪಡ್ಡಂದಡ್ಕ ಹೊಸಂಗಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಂಗಿ ಜುಲೈಕಾ ಇವರು ಮದುವೆಯಾಗಿ ಗಂಡನನ್ನು ಬಿಟ್ಟು, ಪಡ್ಡಂದಡ್ಕ ಎಂಬಲ್ಲಿ ತಾಯಿಯ ಮನೆಯಲ್ಲಿರುತ್ತಾರೆ. ಅವಳ ನಡತೆ ಸರಿಯಿಲ್ಲ ಮತ್ತು ಅವಳು ಬೇರೆನೆ ಇರಬೇಕು ಎಂದು ಇವರೊಳಗೆ ಮಾತು ಕತೆ ರಾಜಿ ಸಂದಾನ ಈ ಹಿಂದೆ ಆಗಿರುತ್ತದೆ. ಹೀಗಿರುತ್ತಾ ದಿನಾಂಕ: 03.07.2021 ರಂದು ಪಿರ್ಯಾದಿದಾರರು ಪಡ್ಡಂದಡ್ಕದಲ್ಲಿರುವ ಅವರ ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ, ಆರೋಪಿಗಳು ಕೆ ಎ 20 ಎನ್ 6738 ನೇ ಆಲ್ಟೋ ಕಾರಿನಲ್ಲಿ ಬಂದು, ಪಿರ್ಯಾದಿದಾರಿಗೆ ಕಾರನ್ನು ಅಡ್ಡ ನಿಲ್ಲಿಸಿ, ಕಾರಿನಿಂದ ಆರೋಪಿಗಳೆಲ್ಲರೂ ಇಳಿದು, ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಬಾರಿ ರಾಜಿ ಪಂಚಾಯಿತಿ ಮಾಡುತ್ತೀಯಾ ಎಂದು ಹೇಳಿ, ಜುಲೈಕಾ, ಸಾನಿಯತ್, ಆಯಿಷಾ ಇವರು ಪಿರ್ಯಾದಿದಾರರಿಗೆ ಹೊಡೆದಿದ್ದಲ್ಲದೇ, ಅನ್ಸರ್ ಎಂಬವರು ಕಾಲಿನಿಂದ ತುಳಿದು, ಕೈಯಿಂದ ಹೊಡೆದು, ಮುಂದಕ್ಕೆ ನೀನು ಈ ವಿಚಾರದಲ್ಲಿ ಕೈ ಹಾಕಿದರೆ ನಿನ್ನನ್ನು ಕಾರಿನ ಅಡಿಗೆ ಹಾಕಿ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 42 -2021 ಕಲಂ: 341, 323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ. ಶ್ರೀಮತಿ ಪ್ರೇಮ(35) ಗಂಡ: ಚಂದ್ರ ಶೇಖರ ರೈ ಹಾಲಿ ವಾಸ:ಪುಣ್ಚತ್ತಾರು ಮನೆ, ಪುಣ್ಚತ್ತಾರು ಗ್ರಾಮ, ಕಡಬ ತಾಲೂಕು. ಖಾಯಂ ವಾಸ: ಸಮಾಧಿ ಪೊಗ್ಗೋಳಿ ಮನೆ, ಮುರುಳ್ಯ ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ 04-07-2021 ರಂದು ಪುಣ್ಚತ್ತಾರು ಎಂಬಲ್ಲಿ ಹರಿಯುವ ಬೈತ್ತಡ್ಕ ಹೊಳೆಗೆ ಬಟ್ಟೆ ತೊಳೆಯಲು ಹೋಗಿದ್ದು, ಆ ವೇಳೆ ಪಿರ್ಯಾದುದಾರರ ಜೊತೆ ಹೋಗಿದ್ದ ಸುಮಾರು ಒಂದೂವರೆ ವರ್ಷ ಪ್ರಾಯದ ಮಗು ಗ್ರೀಷ್ಮಾಳು ಹೊಳೆ ಬದಿ ನೀರಿನಲ್ಲಿ ಆಟವಾಡುತ್ತಿರುವ ವೇಳೆ ಮಗು ಗ್ರೀಷ್ಮಾಳು ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ದವಳನ್ನು ಮಗುವಿನ ತಂದೆ ಚಂದ್ರಶೇಖರ ರೈ ಹಾಗೂ ಇತರರು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಮಗು ಗ್ರೀಷ್ಮಾಳನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 17/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.