ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಕ್ಷ್ಮೀ ನಾರಾಯಣ ಕೆ.ಎಸ್‌, ಪ್ರಾಯ 39 ವರ್ಷ, ತಂದೆ: ಕೇಶವ ಆಚಾರಿ, ವಾಸ: 3-98/6, ಮಾವಿನಕಟ್ಟೆ  ಮನೆ, ಕುರಿಯ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರವರು ದಿನಾಂಕ 04-08-2021ರಂದು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ: ಕೆಎ-21-ಬಿ-1612ನೇದರಲ್ಲಿ ಉಮೇಶ, ಶೇಖರ ಪೂಜಾರಿಯವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪರ್ಪುಂಜ ಕಡೆಯಿಂದ ಪುತ್ತೂರು ಕಡೆಗೆ ಮಾಣಿ-ಮೈಸೂರು ಹೆದ್ದಾರಿ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಮಯ ಬೆಳಿಗ್ಗೆ 8-00 ಗಂಟೆಗೆ ಆರ್ಯಾಪು ಗ್ರಾಮದ ಸೆಂಟ್ಯಾರು ಎಂಬಲ್ಲಿಗೆ ತಲುಪಿದಾಗ ಪುತ್ತೂರು ಕಡೆಯಿಂದ ಕುಂಬ್ರ ಕಡೆಗೆ ಬೊಲೆರೋ ನಂಬ್ರ: ಕೆಎ-52-ಎಂ-1717ನೇದನ್ನು ಅದರ ಚಾಲಕ ಅಶ್ರಫ್‌ ರವರು ಅಜಾಗರೂಕತೆ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾಬ್ತು ಆಟೋ ರಿಕ್ಷಾಕ್ಕೆ ಮತ್ತು ಆಟೋ ರಿಕ್ಷಾದ ಹಿಂದುಗಡೆಯಿಂದ ಗಂಗಾಧರ್‌ರವರು ಗಣೇಶ್‌ ರವರನ್ನು ಸಹ ಸವಾರನನ್ನಾಗಿ  ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಆಕ್ಟಿವಾಕ್ಕೆ ಢಿಕ್ಕಿ ಹೊಡೆದು ಆಟೋ ರಿಕ್ಷಾವು ಮಗುಚಿ ರಸ್ತೆಯ ಎಡ ಬದಿಗೆ ಬಿದ್ದಿದ್ದು, ಆಕ್ಟಿವಾ ಮತ್ತು ಅದರಲ್ಲಿದ್ದ ಸವಾರ ಮತ್ತು ಸಹ ಸವಾರ ಕೂಡಾ ರಸ್ತೆಗೆ ಬಿದ್ದಿದ್ದು, ಅದೇ ಸಮಯ ಅಲ್ಲಿ ಸೇರಿದ ಸಾರ್ವಜನಿಕರು ರಿಕ್ಷಾವನ್ನು ಮೇಲೆತ್ತಿ ರಿಕ್ಷಾದೊಳಗೆ ಸಿಲುಕಿಕೊಂಡಿದ್ದ ಫಿರ್ಯಾದಿದಾರರು, ಉಮೇಶ್ ಮತ್ತು ಶೇಖರ್‌ರವರನ್ನು ಮೇಲೆತ್ತಿ ಉಪಚರಿಸಿ ನೋಡಿದಾಗ ಫಿರ್ಯಾದಿದಾರರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಉಮೇಶ್‌ರ ಬಲ ಬದಿಯ ಹುಬ್ಬಿಗೆ ರಕ್ತ ಗಾಯ, ಬಲ ಕಾಲಿನ ಮೊಣಗಂಟಿಗೆ ತರಚಿದ ಹಾಗೂ ಕುತ್ತಿಗೆಗೆ ಗುದ್ದಿದ ರೀತಿಯ ನೋವು ಮತ್ತು ಶೇಖರ್‌ರವರಿಗೆ ಕೋಲು ಕಾಲಿಗೆ ತರಚಿದ ಗಾಯವಾಗಿರುತ್ತದೆ. ಆಕ್ಟಿವಾದ ನೋಂದಣಿ ನಂಬ್ರ ಕೆಎ-21-ಇಎ-7503 ಆಗಿದ್ದು, ಗಂಗಾಧರ್‌ರವರ ಬಲ ಕಾಲಿನ ತೊಡೆಗೆ, ಬಲ ಭುಜಕ್ಕೆ ಅಂಗೈಗೆ ಮತ್ತು ಮುಖಕ್ಕೆ ರಕ್ತ ಗಾಯ ಮತ್ತು ಗಣೇಶ್‌ರವರ ಬಲ ಕಾಲಿನ ತೊಡೆ ಮುರಿತವಾಗಿದ್ದು, ಅಪಘಾತವುಂಟು ಮಾಡಿದ ಬೊಲೆರೋ ವಾಹನದ ನೋಂದಣಿ ನಂಬ್ರ ಕೆಎ-51-ಎಮ್-1717 ಆಗಿದ್ದು, ಬೊಲೆರೋ ವಾಹನದ ಚಾಲಕ ಅಶ್ರಫ್‌ರವರಿಗೆ ಯವುದೇ ಗಾಯವಾಗಿರದೇ ಇದ್ದು, ಗಾಯಾಳುಗಳಾದ ಫಿರ್ಯಾದಿದಾರರನ್ನು ಹಾಗೂ ಉಮೆಶ್‌ರವರನ್ನು ಚಿಕಿತ್ಸೆಯ ಬಗ್ಗೆ ರಿಕ್ಷಾವೊಂದರಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಗಳನ್ನಾಗಿ ದಾಖಲಿಸಿಕೊಂಡಿದ್ದು, ಗಂಗಾಧರ್‌ ಹಾಗೂ ಗಣೇಶ್‌ರವರನ್ನು ಚಿಕಿತ್ಸೆಯ ಬಗ್ಗೆ ಆಂಬುಲೆನ್ಸ್‌ ನಲ್ಲಿ ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದು, ಅಪಘಾತಕ್ಕೊಳಗಾದ ಆಟೋ ರಿಕ್ಷಾ ಮತ್ತು ಆಕ್ಟಿವಾ ಹಾಗೂ ಅಪಘಾತವುಂಟು ಮಾಡಿದ ಬೊಲೆರೋ ವಾಹನಗಳು ಜಖಂಗೊಂಡಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ ಅ.ಕ್ರ 65/2021 u/s 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀನಿವಾಸ, ಪ್ರಾಯ: 27 ವರ್ಷ, ತಂದೆ: ಸೆಲ್ವ ಕುಮಾರ್, ವಾಸ: ಕಡಮಕಲ್ಲು ಎಸ್ಟೇಟ್‌‌,ಕಡಮಕಲ್ಲು ಅಂಚೆ, ಗಾಳಿಬೀಡು ಗ್ರಾಮ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮದ ಕಡಮಕಲ್ಲು ಎಸ್ಟೇಟ್‌‌ನಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿಕೊಂಡಿದ್ದು, ದಿನಾಂಕ 04-08-2021 ರಂದು ಪಿರ್ಯಾದಿದಾರರು ಮತ್ತು  ಅವರ ತಂದೆ ಕೆಲಸಕ್ಕೆ ಹೋದ ಸಮಯ ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯಕ್ಕೆ ನೆರೆಮನೆಯ ಶ್ರೀನಿವಾಸನು ಪಿರ್ಯಾದಿದಾರರ ಅಜ್ಜಿಗೆ ಅಸೌಖ್ಯವಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಕೂಡಲೇ ಮನೆಗೆ ಬಂದಾಗ ಅಜ್ಜಿ ಐಲೆಂಡಮ್ಮ, ಪ್ರಾಯ: 70 ವರ್ಷ ಎಂಬವರು ಅಸೌಖ್ಯದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಪಿರ್ಯಾದಿದಾರರು ಮತ್ತು ನೆರೆಮನೆಯವರಾದ ಶ್ರೀನಿವಾಸ ಮತ್ತು ಪ್ರಸಾದ್‌ ಕೆ.ಎಂ. ಎಂಬವರೊಂದಿಗೆ ಬೊಲೆರೋ ವಾಹನ ನಂಬ್ರ ಕೆಎ 12-ಎನ್‌‌-5798 ನೇದ್ದರಲ್ಲಿ ಐಲೆಂಡಮ್ಮರವರನ್ನು ಚಿಕಿತ್ಸೆಯ ಬಗ್ಗೆ ಕೊಲ್ಲಮೊಗ್ರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಾಗ ಸುಮಾರು 11.00 ಗಂಟೆಗೆ ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಕಲ್ಮಕಾರು ಪೇಟೆಯಿಂದ ಸ್ವಲ್ಪ ಮುಂದೆ ಬರುತ್ತಿದ್ದಂತೆ ಚಾಲಕ ಶ್ರೀನಿವಾಸನು ಬೊಲೆರೋ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ  ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇರುವ ಹೊಳೆಗೆ ಬಿದ್ದಿರುತ್ತಾರೆ. ಕೂಡಲೇ ಪಿರ್ಯಾದಿದಾರರು ಮತ್ತು ಜೊತೆಯಲ್ಲಿದ್ದ ಶ್ರೀನಿವಾಸ ಮತ್ತು ಪ್ರಸಾದ್‌ ಕೆ.ಎಂ ರವರು ಕೂಡಲೇ ವಾಹನದಿಂದ ಇಳಿದು ಅಜ್ಜಿಯನ್ನು ಮೂವರೂ ಸೇರಿ ಹೊರ ತೆಗೆದು ಆಂಬ್ಯುಲೆನ್ಸ್‌‌ ನ್ನು ಬರ ಹೇಳಿ ಅಜ್ಜಿ ಐಲೆಂಡಮ್ಮರವರನ್ನು ಆಂಬ್ಯುಲೆನ್ಸ್ ‌‌‌ನಲ್ಲಿ ಕೊಲ್ಲಮೊಗ್ರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಕೊಲ್ಲಮೊಗ್ರು ಆಸ್ಪತ್ರೆಯ ವೈದ್ಯಾಧಿಕಾರಿಯವರು ಪರೀಕ್ಷಿಸಿ  11.30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತದಲ್ಲಿ ಪಿರ್ಯಾದಿದಾರರ ಕತ್ತಿನ ಹಿಂಭಾಗಕ್ಕೆ ಗುದ್ದಿದ ಗಾಯ ಹಾಗೂ ಪ್ರಸಾದ್‌ ಕೆ.ಎಂ. ರವರಿಗೆ ಬಲ ಕೈ ಅಂಗೈ ಹಿಂಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ಬೊಲೆರೋ ವಾಹನವು ಜಖಂಗೊಂಡಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ  ಅ,ಕ್ರ 55/2021 ಕಲಂ; 279,337,304(a) ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-08-2021 09:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080