ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತನಿಯಪ್ಪ, ಪ್ರಾಯ 55 ವರ್ಷ, ತಂದೆ: ದಿ|| ಪೊಡಿಯ ಮೇಸ್ತ್ರಿ, ವಾಸ:  ಸಂಸೆ ಟೀ ಎಸ್ಟೇಟ್‌ ಕ್ವಾಟ್ರಸ್‌, ಸಂಸೆ ಅಂಚೆ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಎಂಬವರ ದೂರಿನಂತೆ ದಿನಾಂಕ 03-09-2021 ರಂದು 15-45 ಗಂಟೆಗೆ ಆರೋಪಿ ಓಮ್ನಿ ಕಾರು ಚಾಲಕ ಅಬ್ದುಲ್ ಮಜೀದ್ ಎಂಬವರು KA-02-N-9742 ನೇ ನೋಂದಣಿ ನಂಬ್ರದ ಕಾರನ್ನು ಬೊಳುವಾರು-ದರ್ಬೆ ಸಾರ್ವಜನಿಕ ಮುಖ್ಯ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ನೆಹರೂ ನಗರ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಮುಖ್ಯ ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿದಾರರಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು ಬೋರಲಾಗಿ ರಸ್ತೆಗೆ ಬಿದ್ದು, ಮೂಗಿಗೆ ರಕ್ತಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  110/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಿಟ್ಟಿ ಟಿ ಜೆ (29) ತಂದೆ: ಡಿನ್ಸ್ ವಾಸ:  ಕಡೆಪಾಲ ಮನೆ, ಸಂಪಾಜೆ ಗ್ರಾಮ,ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಗಂಡ ತನ್ನ ಬಾಬ್ತು ಕೆಎ 19 ಇ 3754 ನೇ ಮೋಟಾರ್ ಸೈಕಲಿನಲ್ಲಿ  ಸಂಪಾಜೆ ಕಡೆಯಿಂದ ಕಡೆಪಾಲ ಮನೆ ಕಡೆಗೆ ಬರುತ್ತಿರುವ ಸಮಯ ದಿನಾಂಕ 03.09.2021 ರಂದು ಸಂಜೆ 6:00 ಗಂಟೆಗೆ  ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಡೆಪಾಲ ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಕೆಎ 21 ವೈ 4046 ನೇ ಮೋಟಾರ್ ಸೈಕಲನ್ನು ಅದರ ಸವಾರ ಧನುಷ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಆತನ ತೀರಾ ಬಲಬದಿ ತಪ್ಪು ಬದಿಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಗಂಡ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಉಂಟುಮಾಡಿದ ಪರಿಣಾಮ ಪಿರ್ಯಾದಿದಾರರ ಗಂಡ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕಾಲು ಮಣಿಗಂಟಿಗೆ ಹಾಗು ಬಲ ಕೈ ಮಣಿಗಂಟಿಗೆ, ಬಲ ಕೈ ಬೆರಳಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ,ಕ್ರ 65/2021 ಕಲಂ 279.337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: ದಿನಾಂಕ:04.09.2021 ರಂದು ರುಕ್ಮನಾಯ್ ಪೊಲೀಸು ಉಪನಿರೀಕ್ಷಕರು ಕಡಬ ಪೊಲೀಸ್‌ ಠಾಣೆರವರು  ಕೆಎ-19-ಜಿ-437 ನೇ ಬೊಲೆರೋ ಇಲಾಖಾ ಜೀಪಿನಲ್ಲಿ ಚಾಲಕನಾಗಿ ಹೆಚ್.ಜಿ -966 ನೇ ಚೇತನ್‌ ಕುಮಾರ್‌ ಎಂಬಾತನನ್ನು ಕರೆದುಕೊಂಡು ಹೊರಟು ಜೀಪಿನಲ್ಲಿ ಗೃಹ ರಕ್ಷಕ ಸಿಬ್ಬಂದಿಯಾದ ಹೆಚ್.ಜಿ 970ನೇ ಸತೀಶ್‌ ಎಂಬಾತನನ್ನು ಸಹ ಕುಳ್ಳಿರಿಸಿಕೊಂಡು ಠಾಣೆಯಿಂದ ಸಮಯ 09.30 ಗಂಟೆಗೆ ಹೊರಟು ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ  ಪುತ್ತೂರಿಗೆ ಹೋಗುತ್ತಿರುವಾಗ ಕಡಬ ಗ್ರಾಮದ ಕಳಾರ ಎಂಬಲ್ಲಿಗೆ ಸಮಯ 09.45 ತಲುಪಿದಾಗ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕೆಎ-21-ಎನ್‌-3887ನೇ ಬೊಲೆರೋ ಜೀಪೊಂದರ ಚಾಲಕನಾದ ಆರೋಪಿತನು ಎದುರು ಬರುತ್ತಿದ್ದ ಮೋಟಾರ್‌ ಸೈಕಲ್‌ನ್ನು ಓವರ್‌ ಟೇಕ್‌ ಮಾಡಿ ಅತಿವೇಗವಾಗಿ ಬರುತ್ತಿರುವುದನ್ನು ಕಂಡು ಇಲಾಖಾ ಜೀಪು ಚಾಲಕನು ಇಲಾಖಾ ಜೀಪನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದರೂ ಬೊಲೆರೋ ಜೀಪು ಚಾಲಕನಾದ ಆರೋಪಿನು ರಸ್ತೆಯ ತೀರಾ ಬಲಬದಿಗೆ ತೀವ್ರ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಇಲಾಖಾ ಜೀಪಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಅಪಘಾತವಾಗಿದ್ದು ಅಪಘಾತದಲ್ಲಿ ಎರಡು ವಾಹನಗಳು ಜಖಂಗೊಂಡಿರುತ್ತದೆ.ಅಪಘಾತದಲ್ಲಿ ಫಿರ್ಯಾದುದಾರರ  ಎಡ ಕೈ ರಟ್ಟೆಗೆ ,ಬಲ ಕೈ ಭುಜಕ್ಕೆ ಗುದ್ದಿದ ನೋವುಂಟಾಗಿದ್ದು,ಮೂಗಿಗೆ ಹಾಗೂ ಬಲ ಕೈ ಮಣಿಗಂಟಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ ಇಲಾಖಾ ಜೀಪು ಚಾಲಕನಾದ ಚೇತನ್‌ ಕುಮಾರ್‌ ಎಂಬಾತನಿಗೆ ಹಣೆಗೆ ಗುದ್ದಿದ ಗಾಯವಾಗಿರುತ್ತದೆ ಹಾಗು ಜೀಪಿನಲ್ಲಿ ಕುಳಿತುಕೊಂಡಿದ್ದ ಗೃಹರಕ್ಷಕ ಸಿಬ್ಬಂದಿಯಾದ ಸತೀಶ್‌ ಎಂಬಾತನಿಗೆ ಎರಡು ಹಲ್ಲುಗಳು ಮುರಿದಿರುತ್ತದೆ ಹಾಗೂ ತುಟಿಗೆ ರಕ್ತಗಾಯವಾಗಿರುತ್ತದೆ ಹಾಗೂ ಅಪಘಾತವನ್ನುಂಟು ಮಾಡಿದ ಕೆಎ-21-ಎನ್‌-3887ನೇ ಬೊಲೆರೋ ಚಾಲಕನಾದ ಆರೋಪಿತ ಶರತ್‌ ಎಂಬಾತನಿಗೆ ಹಣೆಗೆ ಮತ್ತು ಮೂಗಿಗೆ ರಕ್ತಗಾಯವಾಗಿರುತ್ತದೆ ಹಾಗೂ ಸದ್ರಿ ಬೊಲೆರೋ ಜೀಪು ವಾಹನದಲ್ಲಿದ್ದ ವರ್ಗಿಸ್‌ ಎಂಬವರಿಗೆ ಯಾವುದೇ ಗಾಯಗಳಾಗಿರುವುದು ಕಂಡು ಬಂದಿರುವುದಿಲ್ಲ. ಈ ಬಗ್ಗೆ ಕಡಬ ಠಾಣಾ ಅ ಕ್ರ  ನಂಬ್ರ: 70/2021 ಕಲಂ :  279.337.338 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:04-09-2021 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ.51/2021 ಕಲಂ:376 ಐಪಿಸಿ ಕಲಂ: 5,6 ಫೋಕ್ಸೋ ಕಾಯ್ದೆ. 2012ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ 04.09.2021 ರಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ   ಅಕ್ರ 66/2021 Sec  3 (1)(P) (q) SCST PA Amendment Act 2015 & us 506 rw 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೊಹಮ್ಮದ್ ಸಾಧಿಕ್ ಪ್ರಾಯ 42 ವರ್ಷ ತಂದೆ: ಇಬ್ರಾಹಿಂ ವಾಸ: ಬಾರೆಕಾಡು ಮನೆ ಲೋರಟ್ಟೊ ಪದವು ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಮಗನಾದ ಮಹಮ್ಮದ್ ಸಾವದ್ ದಿನಾಂಕ 04-09-2021 ರಂದು ಸಂಜೆ 4.30 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಬಾರೆಕಾಡಿನಲ್ಲಿರುವ ಕೋರೆಯಲ್ಲಿ ಇತರ ಮಕ್ಕಳ ಜೊತೆ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸದ್ರಿ ಕೋರೆಯಲ್ಲಿರುವ ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿರುವುದಾಗಿ  ಪಿರ್ಯಾಧಿದಾರರಿಗೆ ಸಂಜೆ 5.00 ಗಂಟೆಗೆ ಬಂದ ಕರೆಯಂತೆ ತುಂಬೆ ಫಾದರ ಮುಲ್ಲರ ಆಸ್ವತ್ರೆಗೆ ಬಂದು ನೋಡಲಾಗಿ ಮಗನಾದ ಮಹಮ್ಮದ್ ಸಾವದ್ ಮೃತಪಟ್ಟಿರುವದಾಗಿ ಕಂಡು ಬರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 30-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-09-2021 11:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080