ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ಅಬ್ದುಲ್‌ ಸಮದ್‌ ಪ್ರಾಯ  37 ವರ್ಷ ತಂದೆ. ಕೆ ಮೊಹಮ್ಮದ್‌ ವಾಸ:  ನಡು ಮನೆ, ಉರುವಾಲು ಗ್ರಾಮ ಮತ್ತು ಅಂಚೆ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:03-10-2021ರಂದು ಬೆಳಿಗ್ಗೆ 10.00ಗಂಟೆಯಿಂದ ದಿನಾಂಕ: 04.10.2021ರಂದು ಮದ್ಯಾಹ್ನ 12-00ಗಂಟೆಯ ಮದ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು  ಉರುವಾಲು ಗ್ರಾಮದ  ನಡುಮನೆ ಎಂಬಲ್ಲಿ ಪಿರ್ಯಾದಿದಾರರ ಮನೆಯ ಮುಂಬಾಗಿಲಿಗೆ ಹಾಕಲಾದ ಸೆಂಟ್ರಲ್‌ ಲಾಕ್‌ ನ್ನು ಯಾರೋ ಕಳ್ಳರು ಯಾವುದೋ ಆಯುದದಿಂದ ಮೀಟಿ  ಮನೆಯೊಳಪ್ರವೇಶಿಸಿ ಪಿರ್ಯಾದಿದಾರರ ತಮ್ಮ  ಅಬ್ದುಲ್‌ ಸಲಾಂ ಎಂಬಾತನ ಬೆಡ್‌ ರೂಂ ನಲ್ಲಿದ್ದ ಗೊದ್ರೆಜ್‌ ನ ಬೀಗವನ್ನು ಮುರಿದಿರುವುದಲ್ಲದೆ, ಸದ್ರಿ  ಗೋದ್ರೆಜ್‌ ನ ಲಾಕರ್‌ನ  ಬೀಗವನ್ನು  ಮುರಿದು ಲಾಕರ್‌ ನಲ್ಲಿರಿಸಿದ್ದ  ಪಿರ್ಯಾದಿದಾರರ  ನಾದಿನಿ ಝಿಕ್ರಾ ರವರ ಬಾಬ್ತು  ಒಟ್ಟು 208 ಗ್ರಾಮ್‌ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಒಟ್ಟು ಮೌಲ್ಯ ರೂ.728000./- ಆಗಿರುತ್ತದೆ.ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ ಕ್ರ 100/2021 ಕಲಂ:454,457,380  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಎಲಿಯಮ್ಮ ,ಪ್ರಾಯ;30ವರ್ಷ ಗಂಡ;ಪಿ ಡಿ ಪ್ರಸಾದ್, ವಾಸ; ಪೂಜಾರಿ ಬೆಟ್ಟು ಮನೆ ಬಂಗಾಡಿ ಅಂಚೆ ಇಂದಬೆಟ್ಟು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ  ಪಿರ್ಯಾದಿದಾರರಿಗೆ ಮತ್ತು ಅವರ ಮಾವನಾದ ಪಿ ಡಿ ಪೌಲೋಸ್ ಹಾಗೂ ಅವರ ಅಣ್ಣನಾದ ಪಿ ಡಿ ರೋಕಿ ಇವರಿಗೆ 15 ವರ್ಷಗಳಿಂದ ಜಾಗದ ತಕರಾರು ಇದ್ದು,ಇದೇ ವಿಚಾರದಲ್ಲಿ ದಿನಾಂಕ 03.10.2021ರಂದು ಬೆಳಿಗ್ಗೆ  ಸುಮಾರು 11.00 ಗಂಟೆಗೆ ವಿವಾದಿತ ಜಾಗದಲ್ಲಿ ಪಿರ್ಯಾಧಿದಾರರ ಮಾವನಾದ ಪಿ ಡಿ ರೋಕಿಯವರ ಮಗ ಪ್ರವೀಣ ಎಂಬಾತನು ತನ್ನ ಜೀಪನ್ನು ಆ ಕಡೆಯಿಂದ ಈ ಕಡೆಗೆ ಚಾಲಾಯಿಸುತ್ತಿದ್ದು,ಆಗ ಅಲ್ಲಿದ್ದ ಪಿರ್ಯಾದಿದಾರರ ಹಾಗೂ ಪಿರ್ಯಾಧಿದಾರರ  ಗಂಡನ ತಮ್ಮನಾದ ಲಾರೆನ್ಸ್ ರವರ ಹೆಂಡತಿಯಾದ ಅಲ್ವಿಯರನ್ನು ನೋಡಿ “ಈ ರಸ್ತೆಗೆ ಅಡ್ಡ ನಿಂತರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ”ಎಂದು ಹೇಳಿ ಪಿರ್ಯಾದಿದಾರರನ್ನು ಮತ್ತು ಅಲ್ವಿಯನ್ನು ಕೈಯಿಂದ ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಎಂದು ಜೀವ ಬೇದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 85/2021, ಕಲಂ:504,323,506,354 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ರೀಟಾ ಡಿಸೋಜ @ ರೀಟಾ ಮಿಸ್ಕಿತ್  ,ಪ್ರಾಯ;59ವರ್ಷ ಗಂಡ;ಫ್ರಾನ್ಸಿಸ್ ಡಿಸೋಜ, ವಾಸ; ಲಾಯಿಲ್  ಅಂಚೆ ಮತ್ತು  ಗ್ರಾಮ ಬೆಳ್ತಂಗಡಿ ತಾಲೂಕು. ಎಂಬವರ ದೂರಿನಂತೆ, ಪಿರ್ಯಾದಿದಾರರಿಗೆ ಸಂಬಂದ ಪಟ್ಟ ಜಾಗದಲ್ಲಿ ಎದ್ರಿದಾರರ ಜಮೀನೊಳಗೆ ಪ್ರವೇಶಿಸಿ ತೊಂದರೆ ನೀಡದಂತೆ ಆರೋಪಿಗೆ ತಡೆಯಾಜ್ಚೆ ಇದ್ದರು ಆರೋಪಿಗಳು ತನ್ನ ಅರಪಾಧಿಕ ಕೃತ್ಯಗಳನ್ನು ಮುಂದುವರೆಸಿ ದಿನಾಂಕ 03.10.2021ರಂದು ರಾತ್ರಿ ಸುಮಾರು 09 ಗಂಟೆಯಿಂದ 09;30ರ ಸಮಯದಲ್ಲಿ ತನ್ನೊಂದಿಗೆ 15 ಜನ ಗೂಂಡಾ ಜನರೊಂದಿಗೆ ತನ್ನ ಜಮೀನಿನ ಒಳಗೆ ಅಕ್ರಮ ಪ್ರವೇಶ ಮಾಡಿ ಜಮೀನಿಗೆ ಸುತ್ತ ಅಳವಡಿಸಿದ ಕಲ್ಲು ಕಂಬ ಮತ್ತು ತಂತಿ ಬೇಲಿಯನ್ನು ತುಂಡು ಮಾಡಿ ನಾಶ ಪಡಿಸಿ ಜಮೀನಿನಲ್ಲಿ ಅಳವಡಿಸಿದ ಸಿಸಿ ಕ್ಯಾಮರ ವನ್ನು ಹೊಡೆದು ಹಾನಿ ಮಾಡಿ ಜಮೀನಿನಲ್ಲಿ ನೆಟ್ಟಿದ್ದ ಸುಮಾರು 15 ತೆಂಗಿನ ಗಿಡ. 18 ಬಾಳೆಗಿಡ ಕಿತ್ತು ನಾಶಪಡಿಸಿರುತ್ತಾರೆ. ಸಿಸಿ ಕ್ಯಾಮರ ವನ್ನು ಕದ್ಯೋಯ್ದ ಬಗ್ಗೆ ಮತ್ತು ಹಾನಿ ಮಾಡಿರುವುದರಿಂದ ಸುಮಾರು ರೂ 30000 ನಷ್ಟವಾಗಿದ್ದು ಬೇಲಿ,ತೆಂಗು ಬಾಳೆಗಿಡ ನಾಸ ಪಡಿಸಿದ್ದರಿಂದ ರೂ ಸುಮಾರು 100000 ನಷ್ಡವಾಗಿರುತ್ತದೆ. ಒಟ್ಟು ಸುಮಾರು 130000 ರೂ ಮೌಲ್ಯದ ಸೊತ್ತು ಹಾನಿಯಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 86/2021, ಕಲಂ:143,147,447,427,379 r/w 149, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಮಿನಾ ಪ್ರಾಯ: 34 ವರ್ಷ ಗಂಡ: ಹನೀಫ್ ವಾಸ: ಬೊಳ್ಳಾಯಿ ಕರ್ಮಾರ್ ಮನೆ, ಸಜೀಪ ಮೂಡ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ತನ್ನ ಗಂಡ ಹನೀಫ್ ರವರು ಅಮಲು ಪದಾರ್ಥ ಸೇವನೆ ಮಾಡುವ ಚಟವುಳ್ಳರಾಗಿದ್ದು, ಜೊತೆಯಲ್ಲಿ ಅಸ್ತಮಾ ಖಾಯಿಲೆಗೆ ತುತ್ತಾಗಿದ್ದರು. ಇತ್ತೀಚೆಗೆ ಅಮಲು ಪದಾರ್ಥ ಸೇವನೆ ಮಾಡುವ ಚಟವನ್ನು ಬಿಟ್ಟು ಮಾನಸಿಕ ಖಾಯಿಲೆಗೆ ತುತ್ತಾಗಿ ಜಿಗುಪ್ಸೆಗೊಂಡಿದ್ದು, ದಿನಾಂಕ: 04.10.2021 ರಂದು 10:00 ಗಂಟೆಗೆ ಪಿರ್ಯಾದಿದಾರರು ಬೀಡಿ ಕೊಡಲು ಬೀಡಿ ಬ್ಯಾಂಚ್ ಗೆ ಹೋಗುವ ಮನೆಯಲ್ಲಿ ಪಿರ್ಯಾದಿಯ ಗಂಡ ಇದ್ದು, ಬೀಡಿ ಕೊಟ್ಟು ವಾಪಾಸು ಮನೆಗೆ ಬರುವಾಗ ಮನೆಯ ಕೋಣೆಯ ಒಳಗಡೆ ಫ್ಯಾನ್ ಗೆ ನೈಲಾನ್ ಹಗ್ಗದ ಸಹಾಯದಿಂದ ಕುತ್ತಿಗೆಗೆ ನೇಣು ಬಿಗಿದು ನೇತಾಡುವುದನ್ನು ಕಂಡು ನೆರೆಕರೆಯವರು ಬಂದು ನೇಣಿನಿಂದ ಕೆಳಗಿಳಿಸಿದಾಗ ಉಸಿರಾಟವಿದ್ದು, ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರದುಕೊಂಡು ಬಂದು ವೈದ್ಯಾಧಿಕಾರಿಯವರಲ್ಲಿ ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಯುಡಿಆರ್ ನಂಬರ್  35/2021   ಕಲಂ 174 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ದೇವಸ್ಯ ಎಂ ಪಿ ಪ್ರಾಯ:53 ವರ್ಷ ತಂದೆ; ದಿ/ ಪೌಲೋಸ್ ಎಂ ವಿ ವಾಸ; ಮೈಪಾನ್ ರೋಸ್ ಗಾರ್ಡನ್  ಬೆರ್ಕಳ ಕುಕ್ಕಳ ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ಅವರ ತಮ್ಮ ಸುನಿಲ್ (44) ಎಂಬಾತನು ಸುಮಾರು ಒಂದು ವಾರದ ಹಿಂದೆ ಅಸೌಖ್ಯದಿಂದ  ಬಳಲುತ್ತಿದ್ದವನನ್ನು  ತಮ್ಮ ತೋಮಸ್ ಹಾಗೂ ನೆರೆಯವರು ಸೇರಿ ಚಿಕಿತ್ಸೆಯ ಬಗ್ಗೆ ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರಗೆ ಒಳರೋಗಿಯಾಗಿ ದಾಖಲಿಸಿ ಗುಣಮುಖನಾಗಿ ಮನೆಗೆ ಬಂದಿರುತ್ತಾನೆ. ತಮ್ಮ ಸುನಿಲ್  ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು  ಹೊಂದಿದ್ದು. ದಿನಾಂಕ:04-10-2021 ರಂದು ಬೆಳಿಗ್ಗೆ 10.30 ಗಂಟೆಗೆ ತಮ್ಮ ಸುನೀಲ್ ಪಿರ್ಯಾದುದಾರರಿಗೆ ಕರೆಮಾಡಿ  ನನಗೆ ಅನಾರೋಗ್ಯ ಕಂಡುಬಂದಿದ್ದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ  ಮೇರೆಗೆ  ಪಿರ್ಯಾದುದಾರರ ತಮ್ಮನ ಮನೆಗೆ ಬಂದಾಗ ಬಾಗಿಲು ತೆರೆದುಕೊಂಡಿದ್ದು ಡೈನಿಂಗ್ ಹಾಲ್ ನ ದಕ್ಷಿಣದ ಬದಿಯಲ್ಲಿ  ಪೈಬರ್ ಚೇರ್ ನಲ್ಲಿ ಕುಳಿತಸ್ಥಿತಿಯಲ್ಲಿ  ಕಂಡುಬಂದಿದ್ದು ಎಬ್ಬಿಸಲು ಭುಜವನ್ನು ಹಿಡಿದು ಅಲುಗಾಡಿಸಿದಾಗ  ಯಾವುದೇ ಪ್ರತಿಕ್ರಿಯೆ ಕಂಡು ಬಾರದೇ ಇದ್ದು ತಮ್ಮನು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  48/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-10-2021 11:12 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080