ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಸ್ ಮೊಹಮ್ಮದ್ ಅಶ್ರಫ್ ಪ್ರಾಯ 38 ತಂದೆ: ಮೊನು ಬ್ಯಾರಿವಾಸ: ಸಂಪಿಲ ಮನೆ, ಇರಾ ಗ್ರಾಮ ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ. ದಿನಾಂಕ 03-11-2022 ರಂದು KA-21-R-8456 ನೇ ಮೋಟಾರ್ ಸೈಕಲಿನಲ್ಲಿ ಹೇಮಂತ್ ಸವಾರನಾಗಿ ಹಾಗೂ ಪಿರ್ಯಾದಿದಾರರು ಸಹ ಸವಾರನಾಗಿ ಪಾಣೆ ಮಂಗಳೂರು ಎಸ್ ಎಸ್ ಹಾಲ್ನಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿ ವಾಪಾಸು ಮನೆ ಕಡೆಗೆ ಅದೇ ಮೋಟಾರ್ ಸೈಕಲಿನಲ್ಲಿ ಹೋಗುತ್ತಾ ಸಮಯ 14:00 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಆಲಡ್ಕ ಎಂಬಲ್ಲಿಗೆ ತಲುಪುತ್ತಾ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ಸವಾರಿ ಮಾಡುತಿದ್ದ ಮೋಟಾರ್ ಸೈಕಲ್ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ಎಸೆಯಲ್ಪಟ್ಟು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಮುಖಕ್ಕೆ, ಮೂಗಿಗೆ, ಹಣೆಗೆ, ಗುದ್ದಿದ ರಕ್ತ ಗಾಯವಾಗಿದ್ದು, ಬಳಿಕ ಪಿರ್ಯಾದಿದಾರರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಮೋಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 135/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎನ್. ಚಂದ್ರಶೇಖರ, ಪ್ರಾಯ 68  ವರ್ಷ, ತಂದೆ: ಬಿ ಕೃಷ್ಣಪ್ಪ ವಾಸ: ಗಿರಿಜಾ ಕ್ಲೀನಿಕ್ ಎದರು ರಸ್ತೆ, ನವರಂಗ ಟಾಕೀಸ್ ಹಿಂಬಾಗ, ದರ್ಬೆ ಪುತ್ತೂರು ತಾಲೂಕು ಎಂಬವರ ದೂರಿನಂತೆ.  ದಿನಾಂಕ 03-11-2022 ರಂದು 12:00 ಗಂಟೆಗೆ ಆರೋಪಿ ಮೋಟಾರ್ ಸೈಕಲ್‌ ಸವಾರ ಅಕ್ಷತ್‌ ರೈ ಎಂಬವರು  KL-14-J-9383 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಂಕ್ರಂಪಾಡಿ ಎಂಬಲ್ಲಿ ಸಾಯಿ ಭಗವಾನ್‌ ಪೆಟ್ರೋಲ್‌ ಪಂಪ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಎಡಬದಿಯಲ್ಲಿರುವ ಪೆಟ್ರೋಲ್‌ ಪಂಪ್‌ಗೆ ಯಾವುದೇ ಸೂಚನೆ ನೀಡದೇ ಒಮ್ಮೇಲೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮಗನಾದ  ಕೃಷ್ಣಪ್ರಸಾದ್‌ ಎನ್‌.ಸಿ ರವರು ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-21-S-3724ನೇ ನೋಂದಣಿ ನಂಬ್ರದ ಸ್ಕೂಟರಿಗೆ ಮೋಟಾರ್‌ ಸೈಕಲ್‌ ಅಪಘಾತವಾಗಿ, ಪಿರ್ಯಾದುದಾರರ ಮಗ ಕೃಷ್ಣಪ್ರಸಾದ್‌ ಎನ್‌.ಸಿ ರವರು ರಸ್ತೆಗೆ ಬಿದ್ದು, ತಲೆಗೆ, ಬಲಗೈಯ ಮೊಣಗಂಟಿಗೆ, ಮುಖಕ್ಕೆ ಗುದ್ದಿದ ಹಾಗು ತರಚಿದ ಗಾಯವಾಗಿ, ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಆರೋಪಿ ಸವಾರನಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಹೋಗಿರುತ್ತಾರೆ.  ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 169/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೇದರಿಕೆ ಪ್ರಕರಣ: ೦1

 

ಬಂಟ್ವಾಳನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಭಿಜಿತ್ ಪ್ರಾಯ 30 ವರ್ಷ ತಂದೆ: ಸುಂದರ ಜೆ ಟಿ ವಾಸ: 4-108/1 ಮೊರ್ಗನಾಡು ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು. ಎಂಬವರ ದೂರಿನಂತೆ. ಫಿರ್ಯಾದಿದಾರರು ಗೆಳೆಯ ರಾಜೇಶನ ಮೋಟಾರ ಸೈಕಲ್ ನಲ್ಲಿ ದಿನಾಂಕ 31-10-2022 ರಂದು ರಾತ್ರಿ 10.00 ಗಂಟೆಗೆ ಮನೆಗೆ ಹೋಗುವಾಗ ನರಿಕೊಂಬು ಗ್ರಾಮದ ಮೊರ್ಗನಾಡು ಜಂಕ್ಷನ್ ಬಳಿ ಸುಧೀರ ಎಂಬುವರ ತರಕಾರಿ ಅಂಗಡಿಯ ಸನಿಹ ಇರುವಾಗ ಫಿರ್ಯಾದಿದಾರರ ಪರಿಚಯದ ಪ್ರವೀಣ ಕುಮಾರ್ ಪಲ್ಲತ್ತಿಲ್ಲ @ ಅಜ್ಜಿಪುಳ್ಳಿ, ರಂಜಿತ್ @ ಟ್ರೋಫಿ, ಸುಧೀರ @ ಬೋಟು, ರಾಜೇಶ @ ಲಾರಾ ಹಾಗೂ ಪ್ರಕಾಶ ಕೋಡಿಮಜಲು ರವರು ಗುಂಪು ಸೇರಿ ಫಿರ್ಯಾದಿದಾರನ್ನು ತಡೆದು ನಿಲ್ಲಿಸಿ, ಆ ಸಮಯ  ಪ್ರವೀಣ ಆತನ ಕೈಯಲ್ಲಿದ ಬೀರ ಬಾಟಲಿಯಿಂದ ಫಿರ್ಯಾದಿದಾರರ ಮುಖಕ್ಕೆ ಹೊಡೆದಾಗ ರಂಜಿತನು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಆ ಸಮಯ ಫಿರ್ಯಾದಿದಾರರ ಗೆಳೆಯ ರಾಜೇಶ ತಡೆದಾಗ ಉಳಿದ ಆರೋಪಿಗಳು ಬೈಕಿನಿಂದ ಕೆಳಗೆ ಬೀಳಿಸಿ ಆತನ ಮೇಲೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಅಲ್ಲದೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಫಿರ್ಯಾದಿದಾರರಿಗೆ ಬೆದರಿಕೆ ಹಾಕಿರುತ್ತಾರೆ  ನಂತರ ಫಿರ್ಯಾದಿದಾರರು ತಮಗಾದ ಗಾಯಕ್ಕೆ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳನಗರ ಠಾಣಾ ಅ.ಕ್ರ: 107/2022 ಕಲಂ: 341, 143, 147, 323, 324, 504, 506 ಜೊತೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 01

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ  ಸೇವಾ ಪಾಂಡಪ್ಪ ಲಂಬಾಣಿ. ಪ್ರಾಯ:24 ವರ್ಷ.ತಂದೆ:ಪಾಂಡಪ್ಪ ಲಮಾಣಿ. ಹಾಲಿ ವಾಸ: ಆಸಿಂ ರವರ ಬಾಡಿಗೆ ಮನೆ, ಮೇನಾಲ. ನೆಟ್ಟಣಿಗೆ ಮುಡ್ನೂರು   ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಅಣ್ಣ 34 ವರ್ಷ ಪ್ರಾಯದ ರಾಮ ಪಾಂಡಪ್ಪ ಲಮಾಣಿರವರು ಈಶ್ವರಮಂಗಲದ ರಾಗಾಳಿ ಎಂಬಲ್ಲಿರುವ ಪುರುಷೋತ್ತಮ ಭಟ್ ರವರ ಮನೆಗೆ ದಿನಾಲು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ 6.00 ಗಂಟೆಗೆ ಮನೆಗೆ ಬರುತ್ತಿದ್ದು, ಸದ್ರಿಯವರಲ್ಲಿ ಮೊಬೈಲ್ ಇಲ್ಲದೇ ಇದ್ದು, ದಿನಾಂಕ 30.10.2022 ರಂದು ಬೆಳಿಗ್ಗೆ 08.00 ಗಂಟೆಗೆ ಪುರುಷೋತ್ತಮ ಭಟ್ ರವರ ಮನೆಗೆ ಕೆಲಸಕ್ಕೆ ಹೋದವರು ಸಂಜೆ 6.00 ಗಂಟೆಯಾದರೂ ಮನೆಗೆ ಬಾರದೇ ಇದ್ದುದ್ದರಿಂದ  ಫಿರ್ಯಾದಿದಾರರು ಪುರುಷೋತ್ತಮ ಭಟ್ ರವರಿಗೆ ಫೋನು ಮಾಡಿ ವಿಚಾರಿಸಿದಾಗ ಅವರು ರಾಮ ಪಾಂಡಪ್ಪ ಲಮಾಣಿರವರು ಮನೆಗೆ ಕೆಲಸಕ್ಕೆ ಬಂದಿರುವುದಿಲ್ಲವಾಗಿ ತಿಳಿಸಿದ್ದು. ಬಳಿಕ ಫಿರ್ಯಾದಿದಾರರು ಈಶ್ವರಮಂಗಲ ಪೇಟೆಯಲ್ಲಿ ಪರಿಚಯಸ್ಥರಲ್ಲಿ ವಿಚಾರಿಸಿಕೊಂಡಲ್ಲಿ ರಾಮ ಪಾಂಡಪ್ಪ ಲಮಾಣಿರವರ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದು, ಬಳಿಕ ಗದಗದಲ್ಲಿರುವ ಫಿರ್ಯಾದಿದಾರರ ಸಂಬಂಧಿಕರಿಗೆ ಫೋನು ಮಾಡಿ ವಿಚಾರಿಸಿದಾಗ ಕೂಡಾ ರಾಮ ಪಾಂಡಪ್ಪ ಲಮಾಣಿರವರು ಗದಗಕ್ಕೆ ಬಂದಿರುವುದಿಲ್ಲವಾಗಿ ತಿಳಿಸಿದ್ದು, ಬಳಿಕ ಗದಗದಲ್ಲಿರುವ ಫಿರ್ಯಾದಿದಾರರ ಅಕ್ಕ ಮತ್ತು ತಂಗಿ ಹಾಗೂ ಗೋವಾದಲ್ಲಿರುವ ಅಕ್ಕನಿಗೆ ರಾಮ ಪಾಂಡಪ್ಪ ಲಮಾಣಿರವರ ಬಗ್ಗೆ ತಿಳಿಸಿ ವಿಚಾರಿಲಾಗಿ ರಾಮ ಪಾಂಡಪ್ಪ ಲಮಾಣಿರವರು ಅಲ್ಲಿಗೆ ಬಂದಿರುವುದಿಲ್ಲವಾಗಿ ತಿಳಿಸಿದ್ದು, ನಂತರ ಫಿರ್ಯಾದಿದಾರರು ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಮತ್ತು ಧರ್ಮಸ್ಥಳದ ದೇವಸ್ಥಾನದ ವಠಾರದಲ್ಲಿ ನನ್ನ ರಾಮ ಪಾಂಡಪ್ಪ ಲಮಾಣಿರವರ ಭಾವಚಿತ್ರವನ್ನು ತೋರಿಸಿ ವಿಚಾರಿಸಲಾಗಿ ರಾಮ ಪಾಂಡಪ್ಪ ಲಮಾಣಿರವರ ಬಗ್ಗೆ ಯಾವುದೇ  ಮಾಹಿತಿ ದೊರಕಲಿಲ್ಲ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 99/2022 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 02

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೊಹಮ್ಮದ್ ಜುನೈದ್ (27) ತಂದೆ: ದಿ| ಅಬೂಬಕ್ಕರ್ ವಾಸ:ಅರಬ್ಬಿಗುಡ್ಡೆ ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ, ಪಿರ್ಯಾದಿದಾರರ ತಂದೆ ಅಬೂಬಕ್ಕರ್ ರವರು ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡುತ್ತಿದ್ದರು. ದಿನಾಂಕ:03-04-2022 ರಂದು ಬೆಳಗ್ಗಿನ ಜಾವ 4.30 ಗಂಟೆಗೆ ಪಿರ್ಯಾದಿದಾರರ ತಂದೆ ವಾಂತಿ ಮಾಡುವ ಶಬ್ದ ಕೇಳಿ ಪಿರ್ಯಾದಿದಾರರ ಅಣ್ಣ ಖಲಂದರ್ ರವರು ಹೋಗಿ ವಿಚಾರಿಸಿದಾಗ ವಿಷ ಕುಡಿದಿರುವುದಾಗಿ ತಿಳಿಸಿದ್ದು, ಕೂಡಲೇ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅಲ್ಲಿಗೆ ಕರೆದುಕೊಂಡು ಹೋಗಿ ಬಳಿಕ ಅಲ್ಲಿಂದ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:04-11-2022 ರಂದು ಬೆಳಿಗ್ಗೆ 4.30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 39-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ದೀಪಾಕುಮಾರಿ ಪ್ರಾಯ:31 ವರ್ಷ ತಂದೆ: ಯಶೋಧರ  ವಾಸ: ಚಾರ್ಮಾಡಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದು ಕೂಲಿ ಕೆಲಸಕ್ಕೆಂದು ಹೋದವರು ಸಂಜೆ ಮನೆಗೆ ಬರುವಾಗ ಅಮಲು ಪಧಾರ್ಥ ಸೇವಿಸುವ ಚಟವನ್ನು ಹೊಂದಿದ್ದು ಈ ಬಗ್ಗೆ ಪಿರ್ಯಾದಿದಾರರು ಗಂಡನಲ್ಲಿ ಇಷ್ಟೊಂದು ಅಮಲು ಪದಾರ್ಥ ಸೇವಿಸುತ್ತೀರಿ ಎಂದು ಕೇಳಿದಾಗ ನನಗೆ ಸಾಲದ ಕಿರಿಕಿರಿ ತುಂಬಾ ಆಗುತ್ತಿದ್ದು ಸಿ ಎ ಬ್ಯಾಂಕ್ ಕಕ್ಕಿಂಜೆಯಲ್ಲಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿಯಲ್ಲಿ ಕೃಷಿ ಸಾಲವಿದ್ದು ಈ ಸಾಲವನ್ನು ತೀರಿಸಲಾಗದೆ ಮನನೊಂದಿರುವುದಾಗಿ ಪಿರ್ಯಾದಿದಾರರಲ್ಲಿ ಆಗಾಗ ತಿಳಿಸಿದ್ದು ಹೀಗಿರುವಾಗ ದಿನಾಂಕ: 31-10-2022 ರಂದು ಕೂಲಿ ಕೆಲಸಕ್ಕೆ ಹೋದವರು ಸಂಜೆ 7.00 ಗಂಟೆಗೆ ಮನೆಗೆ ಬಂದವರು ಸ್ನಾನ ಮಾಡಿ ಊಟ ಮಾಡುವ ಎಂದು ಪಿರ್ಯಾದಿದಾರರು ತನ್ನ ಗಂಡನಲ್ಲಿ ಕೇಳಿದ್ದು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯ ಅಂಗಳಕ್ಕೆ ತೆರಳಿದ್ದು ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರು ಮನೆಯ ಅಂಗಳಕ್ಕೆ ತೆರಳಿ ನೋಡಿದಾಗ ಯಶೋಧರ ರವರ ಬಾಯಿಯಿಂದ ನೀಲಿ ಬಣ್ಣದ ಯಾವುದೋ ವಿಷದ ಹುಡಿಯು ಬಾಯಿಯಲ್ಲಿ ಕಂಡು ಬಂದು ಗಾಟು ವಾಸನೆ ಬರುತ್ತಿದ್ದನ್ನು ನೋಡಿ ಪಿರ್ಯಾದಿದಾರರು ಬೊಬ್ಬೆ ಹೊಡೆಯುವುದನ್ನು ನೋಡಿ ನೆರೆಯ ರವೀಂದ್ರ & ಶಂಕರ ರವರು ಬಂದು ಉಪಚರಿಸಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈಧ್ಯರು ಪರೀಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು. ದಿನಾಂಕ: 04-11-2022 ರಂದು ಮೃತ ಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯು ಡಿ ಆರ್   63/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-11-2022 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080