ಅಪಘಾತ ಪ್ರಕರಣ: ೦6
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಆಕಾಶ ವೈ ಪ್ರಾಯ 21 ವರ್ಷ ತಂದೆ:ಫಕೀರ್ ಮೂಲ್ಯ ವಾಸ:ಶ್ರೀನಿಲಯ ,ವಿನಾಯಕ ನಗರ ಬಲ್ನಾಡು ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ:05-02-2022 ರಂದು ತನ್ನ ಬಾಬ್ತು ಕೆಎ-21-ಇಬಿ-1547ನೇ ಮೋಟಾರು ಸೈಕಲ್ನ್ನು ಮೆಲ್ಕಾರನಲ್ಲಿರುವ ತನ್ನ ಗೆಳೆಯನ ,ಮನಗೆ ಹೋಗುವರೇ ಪಿರ್ಯಾಧಿ ಸವಾರಿ ಮಾಡಿಕೊಂಡು ಹೊಗುತ್ತಿರುವಾಗ ಮದ್ಯಾಹ್ನ 1.15 ಗಂಟೆಯೆ ಸಮಯಕ್ಕೆ ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಕುಕ್ಕರೆಬೆಟ್ಟು ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿದಾರರ ಎದುರಿನಿಂದ ಹೋಗುತ್ತಿದ್ದ ಮಾರುತಿ ಬ್ರಿಝಾ ಕಾರು ನಂಬ್ರ ಕೆಎ-21-ಝಡ್-2732ನೇದನ್ನು ಅದರ ಚಾಲಕಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಯಾವುದೇ ಸೂಚನೆ ನಿಡದೆ ರಸ್ತೆಯ ಬಲಬದಿಗೆ ತಿರುಗಿಸಿ ಪಿರ್ಯಾಧಿಯ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ್ದು. ಪರಿಣಾಮ ಪಿರ್ಯಾಧಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡ ಕೈ ಮುಂಗೈ, ಎಡಕೋಲು ಕಾಲಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾಧಿದಾರರನ್ನು ಅವರ ತಂದೆ ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 23/2022 ಕಲಂ: 279,337 ಬಾಧಂಸಂ ಮತ್ತು 134 ಎ&ಬಿ ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್ ಖಾದರ್ ಪ್ರಾಯ 31 ವರ್ಷ ತಂದೆ ಮಹಮ್ಮದ್ ವಾಸ ನಾರ್ಶ ಮನೆ ಬಾರೆಬೆಟ್ಟು ಅಂಚೆ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ರವರ ತಮ್ಮ ಅಬ್ದುಲ್ ರಶೀದ್ ದಿನಾಂಕ 05.02.2022 ರಂದು ತನ್ನ ಮನೆಯಿಂದ ಕೆಲಸದ ನಿಮಿತ ಪುತ್ತೂರು ಕಡೆಗೆ ಹೋಗಲು ಅವನ ಬಾಬ್ತು ಕೆಎ 21 ಎಸ್ 8604 ನಂಬ್ರ ಮೋಟಾರ್ ಸೈಕಲ್ ನಲ್ಲಿ ಬೊಳಂತ್ತೂರು- ಕಲ್ಲಡ್ಕ ಸಾರ್ವಜನಿಕ ರಸ್ತೆಯಲ್ಲಿ ಬೊಳಂತ್ತೂರು ಕಡೆಯಿಂದ ಕಲ್ಲಡ್ಕ ಕಡೆಗೆ ಹೋಗುವಾಗ ಬಂಟ್ವಾಳ ತಾಲೂಕು ಬೊಳಂತ್ತೂರು ಗ್ರಾಮದ ದಂಡೆಮಾರು ಕ್ರಾಸ್ ಬಳಿ ತಲುಪಿಗಾದ ಬೊಳಂತ್ತೂರು ಕಡೆಯಿಂದ ಕೆಎ-37-ಎಂ-5178 ನಂಬ್ರ ಕಾರನ್ನು ಅದರ ಚಾಲಕ ಅಬ್ದುಲ್ ರಜಾಕ್ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಹಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮಲ್ಲೇ ದಂಡೆಮಾರು ಕಡೆಗೆ ತಿರುಗಿಸಿ ಕಾರಿನ ಸೈಡ್ ನ ಭಾಗದಿಂದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ್ದು. ನಂತರ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಎಡ ಕೋಲು ಕೈಗೆ ಹಾಗೂ ಎಡ ಸೊಂಟದ ಬಳಿ ಗುದ್ದಿದ ಗಾಯವಾಗಿರುತ್ತದೆ ಗಾಯಾಳು ಅಬ್ದುಲ್ ರಶೀದ್ ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜ್ವನಿ ಆಸ್ಪತ್ರಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 24/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೈಕಲ್ ಡಿ ಸೋಜಾ (58) ತಂದೆ: ಜಾಕೋಬ್ ಬೋನ್ ಡಿಸೋಜಾ ವಾಸ: ಕುರಿಯಾರು ಮನೆ. ಈದು ಗ್ರಾಮ, ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 05.02.2022 ರಂದು ಬೆಳಗ್ಗಿನ ಜಾವ 00.40 ಗಂಟೆಯಿಂದ 03.45 ಗಂಟೆಯ ಮದ್ಯೆ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ರಾಮೆರಗುತ್ತು ಎಂಬಲ್ಲಿ ಗುರುವಾಯನಕೆರೆ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಯಾವುದೋ ಒಂದು ವಾಹನವನ್ನು ಅದರ ಚಾಲಕ ತಿರುವು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಬೈಕ್ ನಂಬ್ರ KA.19.W.8560 ನೇಯದಕ್ಕೆ ರಭಸದಿಂದ ಡಿಕ್ಕಿ ಹೊಡೆದು ವಾಹನದೊಂದಿಗೆ ಪರಾರಿಯಾಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಲಾರೆನ್ಸ್ ಮತ್ತು ಸಹಸವಾರ ಮ್ಯಾಥ್ಯು ಜಾನ್ ರವರಿಗೆ ತಲೆಗೆ, ಕೈಕಾಲುಗಳಿಗೆ ತೀವ್ರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೆನ್ಸ್ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ತೀವ್ರ ಗಾಯಗೊಂಡ ಬೈಕ್ ಸವಾರ ಲಾರೆನ್ಸ್ ರವರು ಮೃತಪಟ್ಟಿದ್ದು, ಮ್ಯಾಥ್ಯು ಜಾನ್ ರವರು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕಡೆಗೆ ಹೋಗಿರುವುದಾಗಿದೆ ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 08-2022 ಕಲಂ :279, 337, 304(A)ಐಪಿಸಿ ಮತ್ತು ಕಲಂ 134 (A)(B) R/W;187 IMV Act ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ತೋಮಸ್ ಎ.ಜೆ ಪ್ರಾಯ 52 ವರ್ಷ ತಂದೆ:ಜೋಸೆಫ್ ಎ,ಪಿ ವಾಸ:ಅರಕ್ಕಲ್ ಮನೆ ಮೈರಕಟ್ಟೆ ಬಿಳಿಯೂರು ಗ್ರಾಮ ಬಂಟ್ವಾಳ ತಾಲೂಕು ಹಾಲಿ ವಾಸ:ಶಿಬು ಜೇಕಬ್ ರವರ ಬಾಡಿಗೆ ಮನೆ ಗಾಂಧೀ ಮೈದಾನ ಬಳಿ ನೆಲ್ಯಾಡಿ ಗ್ರಾಮ ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 04-02-2022 ರಂದು ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪೆಡರಲ್ ಬ್ಯಾಂಕ್ ನ ಎದುರು ಪಿರ್ಯಾದಿದಾರರ ಮಗಳು ಅಲಿನಾ ತೋಮಸ್ ರವರು ಹೋಂಡಾ ಆಕ್ಟಿವಾ ಕೆಎ: 21 ಡಬ್ಲ್ಯು 9937 ನೇದರಲ್ಲಿ ತನ್ನ ತಾಯಿ ಜೆನಿ ತೋಮಸ್ ರವರನ್ನು ಕುಳ್ಳಿರಿಸಿಕೊಂಡು ಆಕ್ಟಿವಾ ವಾಹನವನ್ನು ಸವಾರಿ ಮಾಡಿಕೊಂಡು ನೆಲ್ಯಾಡಿ ಪೇಟೆ ಕಡೆಗೆ ಹೋಗುತ್ತಿದ್ದಾಗ, ಆರ್ಲ ಕಡೆಯಿಂದ ನೆಲ್ಯಾಡಿ ಕಡೆಗೆ ಕೆಎ21 ಇಎ 0499ನೇ ಪಲ್ಸರ್ ಮೋಟಾರು ಸೈಕಲನ್ನು ಅದರ ಸವಾರನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬರುತ್ತಾ ಒಂದು ವಾಹನವನ್ನು ಓವರ್ ಟೇಕ್ ಮಾಡಿ ಎದುರು ಬರುವ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಮೋಟಾರು ಸೈಕಲನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಮಗಳು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಹೊಂಡಾ ಆಕ್ಟಿವಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಗಳು ಮತ್ತು ಹೆಂಡತಿ ಹೊಂಡಾ ಆಕ್ಟಿವಾ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಹಸವಾರಳಾದ ಜೆನಿ ತೋಮಸ್ ರ ಬಲಕೈ ರಟ್ಟೆಯಲ್ಲಿ ಮೂಳೆ ಮುರಿತದ ಗಾಯ ಹಾಗೂ ರಕ್ತ ಗಾಯವಾಗಿರುವುದಲ್ಲದೆ, ಅಲೀನ ತೋಮಸ್ ರವರ ಎರಡೂ ಕೈಗಳಿಗೆ ಮತ್ತು ಹಣೆಗೆ ತರಚಿದ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಮೋಟಾರು ಸೈಕಲ್ ಸವಾರನಿಗೂ ಅಲ್ಪ ಸ್ವಲ್ಪ ಗಾಯವಾಗಿದ್ದು ಎರಡೂ ವಾಹನಗಳು ಜಖಂಗೊಂಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ 25/2022 ಕಲಂ:279,337,338 ಭಾದಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ತನಸೇಖರನ್ ಸಿ, ಪ್ರಾಯ 42 ವರ್ಷ, ತಂದೆ: ದಿ|| ಚಂದ್ರಬೋಸ್, ವಾಸ: 36, ರಂಗನಾಥಪುರು, ಎವಾಡಿಪಟ್ಟಿ ಅಂಚೆ, ಪೆರಿಯಕುಲಂ ತಾಲೂಕು, ಥೇನಿ ಜಿಲ್ಲೆ, ತಮಿಳುನಾಡು ರಾಜ್ಯ ರವರು ನೀಡಿದ ದೂರಿನಂತೆ ದಿನಾಂಕ 05-02-2022 ರಂದು ಆರೋಪಿ ಕಾರು ಚಾಲಕ ರಕ್ಷಿತ್ ಎಂಬವರು KA-19-MF-3352ನೇ ನೋಂದಣಿ ನಂಬ್ರದ ಕಾರಿನಲ್ಲಿ ಕಾರ್ತಿಕ್, ಸಂತೋಷ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಬಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ತನಸೇಖರನ್. ಸಿ ಎಂಬವರು ಬೊಳ್ಳಾರು ಪೇಟ್ರೋಲ್ ಪಂಪ್ ಕಡೆಯಿಂದ ಮೈರಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ, KA-01-MK-7079ನೇ ನೋಂದಣಿ ನಂಬ್ರದ ಬೋರ್ ವೆಲ್ ವಾಹನದ ಹಿಂಭಾಗದ ಬಲಭಾಗಕ್ಕೆ ಕಾರಿನ ಎಡಭಾಗವು ಅಪಘಾತವಾಗಿ, ಕಾರಿನಲ್ಲಿದ್ದ ಪ್ರಯಾಣಿಕರಾದ ಕಾರ್ತಿಕ್ ಎಂಬರಿಗೆ ಗಂಭೀರ ಗಾಯ, ಸಂತೋಷ್ ಎಂಬವರಿಗೆ ಗಾಯಗಳಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 23/2022 ಕಲಂ: 279,337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪಿರ್ಯಾದಿದಾರರು: ಚೇತನ್ ಕುಮಾರ್ L ತಂದೆ:ಲಕ್ಷ್ಮಣ K ವಾಸ: ಕಾಪಿನಬಾಗಿಲು ಮನೆ ಕೌಕ್ರಾಡಿ ಗ್ರಾಮ ಕಡಬ ತಾಲೂಕ ರವರು ದಿನಾಂಕ: 12-01-2022 ರಂದು ಶಾಲೆ ಮುಗಿಸಿ ಅವರಿಗೆ ನೋಡಿ ಪರಿಚಯ ಇರುವ ವ್ಯಕ್ತಿಯೊಬ್ಬರ ನೋಂದಣಿ ನಂಬ್ರ ತಿಳಿದಿರದ ಮೋಟಾರ್ ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮನೆ ಕಡೆ ಹೋಗುವರೇ ಕೊಕ್ಕಡ ಪೇಟೆ ಕಡೆಗೆ ಬರುತ್ತಾ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ಪೇಟೆಯಲ್ಲಿರುವ ಅನುಗ್ರಹ ಕಾಂಪ್ಲೆಕ್ಸ್ ಬಳಿ ತಲುಪುತ್ತಿದ್ದಂತೆ ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ KA 04 AA 9664 ನೇ ಕಾರನ್ನು ಅದರ ಚಾಲಕ ಜೇಕಬ್ ಎಂಬವರು ಒಮ್ಮೆಲೆ ದುಡುಕತನದಿಂದ ಚಲಾಯಿಸಿ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅದರ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ಮೊಣಕಾಲಿಗೆ ಗುದ್ದಿದ ಗಾಯ ಬಲ ಮೊಣಕೈ ಗೆ ತರಚಿದ ಗಾಯ ಹಾಗೂ ಸವಾರನಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ, ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಅ.ಕ್ರ 19/2022 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಮೋಹಿನಿ ಪ್ರಾಯ;55 ವರ್ಷ, ಗಂಡ;ಕೃಷ್ಣಪ್ಪ ಗುಡಿಗಾರ, ವಾಸ; ಕಿಚ್ಚಿನಡ್ಕ ಮನೆ ಸವಣಾಲು ಗ್ರಾಮ ಬೆಳ್ತಂಗಡಿ ತಾಲೂಕು ರವರ ತಮ್ಮನಾದ ಪುರಂದರ ಎಂಬಾತನು ಅವಿವಾಹಿತನಾಗಿದ್ದು, ಎಲೆಕ್ರ್ಟೀಷನ್ ಕೆಲಸ ಮಾಡಿಕೊಂಡಿದ್ದು ವಿಪರೀತ ಅಮಲು ಪಧಾರ್ಥ ಸೇವನೆ ಮಾಡುವ ಅಬ್ಯಾಸವುಳ್ಳವನಾಗಿರುತ್ತಾನೆ. ಪಿರ್ಯಾದಿದಾರರ ಮನೆಯಲ್ಲಿಯೆ ಇರುವುದಾಗಿದೆ. ಈತನು ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಅಮಲು ಪದಾರ್ಥ ಸೇವನೆ ಮಾಡಲು ಹಣವಿಲ್ಲದೆ ಇದ್ದುದರಿಂದ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಪಿರ್ಯಾದಿದಾರರು ಮತ್ತು ಅವರ ಗಂಡ ತೋಟಕ್ಕೆ ಕೆಲಸಕ್ಕೆ ಹೋದ ಸಮಯ ದಿನಾಂಕ 05.02.2022ರಂದು ಬೆಳಿಗ್ಗೆ 08;00 ಗಂಟೆಯಿಂದ 10;00 ಗಂಟೆಯ ಮದ್ಯದ ಅವಧಿಯಲ್ಲಿ ಅವರ ಬಾಬ್ತು ತೋಟದಲ್ಲಿ ಗೇರುಬೀಜ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ UDR NO 03/2022 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.