ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಗುಲಾಬಿ ಪ್ರಾಯ 42 ವರ್ಷ ಗಂಡ: ರಮೇಶ್ ನಾಯ್ಕ ವಾಸ: ನಡ್ತಂಡ ಮನೆ, ಹೇಡ್ಯ, ಕಡಿರುದ್ಯಾವರ ಗ್ರಾಮ ಬೆಳ್ತಂಗಡಿ ತಾಲೂಕು  ರವರು ದಿನಾಂಕ: 05-03-2021 ರಂದು ತನ್ನ ಮಗ ಸುದರ್ಶನ್ ಎಂಬವರ ಬಾಬ್ತು ಕೆಎ 21 ಜೆ 9800 ನೇ ಮೋಟಾರು ಸೈಕಲ್ ನಲ್ಲಿ ಸಹ ಸವಾರಳಾಗಿ ಕುಳಿತುಕೊಂಡು ಮೋಟಾರು ಸೈಕಲ್ ನ್ನು ಸುದರ್ಶನ್ ರವರು ಸೋಮಂತಡ್ಕ ಕಡೆಯಿಂದ ಉಜಿರೆ ಕಡೆಗೆ  ಸವಾರಿ ಮಾಡಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್ ಬಳಿ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಸೋಮಂತಡ್ಕ ಕಡೆಗೆ ಕೆಎ 19 ಎಫ್ 3103 ನೇ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಬಲ ಭಾಗದ  ಹಿಂಬದಿ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮತ್ತು ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದುದರಿಂದ ಪಿರ್ಯಾದಿದಾರರಿಗೆ ತಲೆಗೆ, ಬಲ ಕೈಗೆ ಗುದ್ದಿದ ರಕ್ತಗಾಯ, ಸುದರ್ಶನ್ ರವರಿಗೆ ಬಲ ಕಣ್ಣಿಗೆ, ಹಣೆಗೆ, ಮೂಗಿಗೆ, ಮುಖಕ್ಕೆ ತೀವ್ರ ರಕ್ತಗಾಯಗೊಂಡು ಪಿರ್ಯಾದಿದಾರರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಹಾಗೂ ಸುದರ್ಶನ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 18/2021, ಕಲಂ; 279,337, 338 ಭಾದಂಸಂ.  ಮತ್ತು ಕಲಂ: 134(ಎ)(ಬಿ) ಜೊತೆಗೆ 187 ಐಎಮ್‌ವಿ ಆಕ್ಟ್‌  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು ಬೆಳ್ತಂಗಡಿ ಪೊಲೀಸ್‌ ಠಾಣೆ  ರವರು ದಿನಾಂಕ; 05.03.2021 ರಂದು ಸಿಬ್ಬಂದಿಗಳ ಜೊತೆಗೆ ರೌಂಡ್ಸ್‌ ಕರ್ತವ್ಯದಲ್ಲಿ ಇರುತ್ತಾ ಬೆಳ್ತಂಗಡಿ ತಾಲೂಕು ಕನ್ಯಾಡಿ -1 ಗ್ರಾಮದ ಕೇಳ್ತಾಜೆ ಬಸ್‌ ಸ್ಟಾಂಡ್‌ ಬಳಿ ಸಂಜೆ ಸಾರ್ವಜನಿಕ ಸ್ಥಳದಲ್ಲಿ ಯುವಕರಿಬ್ಬರು ಒಬ್ಬರಿಗೊಬ್ಬರು ಪರಸ್ಪರ ದೂಡಾಡಿ ಹೊಡೆದಾಡಿಕೊಳ್ಳುತ್ತಿದ್ದುದನ್ನು ಕಂಡು ಜೀಪು ನಿಲ್ಲಿಸಿ ಅವರ ಬಳಿ ತೆರಳಿ ಅವರಿಬ್ಬರನ್ನು ವಿಚಾರಿಸಿ, ನೀವುಗಳು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಒಬ್ಬರಿಗೊಬ್ಬರು ದೂಡಾಡಿ ಕೊಂಡು ಕಲಹ ನಡೆಸಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಬೆಳ್ತಂಗಡಿ ಠಾಣಾ ಅ.ಕ್ರ 25/2021 US 160 ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜ್ಯೋತಿ (25) ತಂದೆ ತನಿಯ  ವಾಸ: ಮಾದುಗುರಿ  ಮನೆ , ಬರಿಮಾರು  ಗ್ರಾಮ , ಬಂಟ್ವಾಳ ತಾಲೂಕು ರವರ ತಮ್ಮ ನವೀನ (23) ಎಂಬಾತನು ಕೂಲಿ ಕೆಲಸ ಮಾಡಿಕೊಂಡಿದ್ದವನು ಪ್ರತೀ ದಿನ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುತ್ತಿದ್ದುದಾಗಿದೆ. ಎಂದಿನಂತೆ ದಿನಾಂಕ: 02.03.2021 ರಂದು ಬೆಳಿಗ್ಗೆ 06.30 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿದ್ದವನು ಬೆಳಿಗ್ಗೆ ಸುಮಾರು 10.00 ಗಂಟೆಗೆ ಪಿರ್ಯಾದಿದಾರರ ತಾಯಿಗೆ ಫೋನ್ ಕರೆ ಮಾಡಿ ತಾನು ಕೊಂಕಣಪದವು ಎಂಬಲ್ಲಿ ಗುಡ್ಡದಲ್ಲಿ ವಿಷ ಪದಾರ್ಥ ಸೇವನೆ ಮಾಡಿರುತ್ತೇನೆ ಎಂದು ತಿಳಿಸಿದ ಮೇರೆಗೆ ಸದ್ರಿ ಸ್ಥಳಕ್ಕೆ ಪಿರ್ಯಾದಿದಾರರ ಮನೆಯವರು ಹೋದಾಗ ನವೀನನು ಬರಿಮಾರು ಗ್ರಾಮದ ಕೊಂಕಣಪದವು ಮುಳಿಬೈಲು ಎಂಬಲ್ಲಿ ಗುಡ್ಡಪ್ರದೇಶದಲ್ಲಿ ಇದ್ದವನನ್ನು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾದಲ್ಲಿ ಮಾಣಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ನವೀನನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿ ದಿನಾಂಕ: 05.03.2021 ರಂದು ಬೆಳಿಗ್ಗೆ 05.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ನವೀನನು ಯಾವುದೋ ಕಾರಣದಿಂದ ಮನನೊಂದು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 10/2021 ಕಲಂ   174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶಿವಪ್ರಸಾದ್, ಪ್ರಾಯ: 42 ವರ್ಷ,ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಕುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ರವರು ಕುವೆಟ್ಟು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿದ್ದು, ದಿನಾಂಕ: 05-03-2021 ರಂದು ಸಾರ್ವಜನಿಕರೊಬ್ಬರು ಸದ್ರಿ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆಯ ಬಸ್ಸು ನಿಲ್ದಾಣದಲ್ಲಿ  ಮೃತದೇಹವೊಂದು ಇರುವುದಾಗಿ ತಿಳಿಸಿದ್ದು,   ಪಿರ್ಯಾದಿದಾರರು ಹೋಗಿ ನೋಡಲಾಗಿ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವಾಗಿದ್ದು, ಯಾವುದೋ ಖಾಯಿಲೆ ಅಥಾವಾ ಇನ್ನಿತರ ಕಾರಣದಿಂದ  ಮಲಗಿದಲ್ಲಿಯೇ ಮೃತಪಟ್ಟಿರುವಂತೆ ಕಂಡು ಬರುತ್ತಿದ್ದು,, ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 11/2021  ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-03-2021 11:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080