ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಾಸು (38), ತಂದೆ: ದಿ ಬಾಡ, ವಾಸ: ನಡುಗುಡ್ಡೆ ಮನೆ, ಶಿರ್ಲಾಲು ಗ್ರಾಮ, ಬೆಳ್ತಂಗಡಿ ತಾಲೂಕು ರವರಿಗೆ ಮತ್ತು ಎದ್ರಿ ಗಣೇಶ ರವರಿಗೆ ತಂದೆಯ ಜಮೀನಿನ ಪಾಲಿನ ವಿಚಾರದಲ್ಲಿ ಮನಸ್ತಾಪ ಹೊಂದಿ ದಿನಾಂಕ 04.05.2022 ರಂದು ಸಂಜೆ ಸುಮಾರು 6:00 ಗಂಟೆಗೆ ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ನಡುಗುಡ್ಡೆ ಎಂಬಲ್ಲಿ ಆಪಾದಿತ ಗಣೇಶ ಎಂಬಾತನು ವಿನಾ ಕಾರಣ ಮಾತಿನ ಗಲಾಟೆ ನಡೆಸಿ ಫಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಾರಕಾಯುಧವಾದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಉರುಡಾಟ ಮಾಡಿ ಫಿರ್ಯಾದಿಯ ಕುಂಡೆಗೆ ಕಚ್ಚಿ ಗಾಯಗೊಳಿಸಿದ್ದು, ಗಲಾಟೆಯ ಬೊಬ್ಬೆ ಕೇಳಿ ಫಿರ್ಯಾದಿಯ ಹೆಂಡತಿ ಶ್ರೀಮತಿ ಉಷಾ ಗಲಾಟೆ ಬಿಡಿಸಲು ಬಂದಾಗ ಆಪಾದಿತ ಗಣೇಶನ ಹೆಂಡತಿ ಶ್ರೀಮತಿ ಶೋಭಾ ಎಂಬಾಕೆಯು ಮರದ ದೊಣ್ಣೆಯಿಂದ ಫಿರ್ಯಾದಿಯ ಹೆಂಡತಿಗೆ ಹಲ್ಲೆ ನಡೆಸಿ ಬಳಿಕ ಆಪಾದಿತ ಗಣೇಶನು ಫಿರ್ಯಾದಿಯನ್ನು ಉದ್ದೇಶಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನಿನ್ನನ್ನು ಕೊಂದು ಈ ಜಮೀನು ನನ್ನ ಹೆಸರಿಗೆ ಮಾಡುವುದಾಗಿ” ಜೀವ ಬೆದರಿಕೆ ಒಡ್ಡಿದ್ದು, ಆರೋಪಿತರ ಹಲ್ಲೆಯಿಂದ ಫಿರ್ಯಾದಿಯ ಬಲಕೈ ಮೊಣಗಂಟು, ಬಲಬದಿ ಕಾಲರ್ ಬೋನು, ಬೆನ್ನಿಗೆ ಹಣೆಗೆ ಹಾಗೂ ಕುಂಡೆಗೆ ರಕ್ತಗಾಯ ಹಾಗೂ ತರಚಿದ ಗಾಯ, ಫಿರ್ಯಾದಿಯ ಹೆಂಡತಿ ಶ್ರೀಮತಿ ಉಷಾಳಿಗೆ ಬಲಕೈಗೆ, ಎಡಕಾಲಿನ ತೊಡೆಗೆ ನೋವು ಗಾಯಗಳಾಗಿ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 27-2022 ಕಲಂ:504, 323, 324, 506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನೀಲಯ್ಯ ಕೆ (35) ತಂದೆ:ಮೋನಪ್ಪ ಗೌಡ  ವಾಸ: ಕರ್ನಂತೋಡಿ ಮನೆ, ಓಡಿಲ್ನಾಳ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆ ಮೋನಪ್ಪ ಗೌಡ (65) ರವರು ಸುಮಾರು 03 ವರ್ಷಗಳಿಂದ  ಕಾಲಿನ ಗಂಟುನೋವಿನ ಖಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರು, ಗಂಟುನೋವಿಗೆ ಹಳ್ಳಿ ಔಷಧಿಯನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಪಡೆದುಕೊಂಡು ಪ್ರತಿದಿನ ಔಷಧಿಯನ್ನು ಸೇವಿಸುತ್ತಿದ್ದರು.  ಹೀಗಿರುತ್ತಾ ದಿನಾಂಕ 05.05.2022 ರಂದು ಬೆಳಿಗ್ಗೆ 09.00 ಯಿಂದ 10.15 ಗಂಟೆಯ ಮಧ್ಯದ ಅವಧಿಯಲ್ಲಿ ತನಗಿರುವ ಗಂಟು ನೋವು ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಮನನೊಂದು ಜಿಗುಪ್ಸೆಹೊಂದಿ ತಮ್ಮ ಮನೆಯ ಕೊಟ್ಟಿಗೆಯ ಒಳಗೆ ಅಡ್ಡಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ  18/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪ್ರೈಸ್ ಮ್ಯಾಥ್ಯೂ (29) ತಂದೆ: ವಿ.ವಿ.ಮ್ಯಾಥ್ಯೂ   ವಾಸ: ಮಾರ್ನಿಂಗ್ ಸ್ಟಾರ್, ಲಾಯಿಲ, ಉಜಿರೆ ರಸ್ತೆ, ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು ರವರ ಬಾಬ್ತು ಸದರ್ನ್ ರಬ್ಬರ್ ಅಂಗಡಿಯಲ್ಲಿ ರಬ್ಬರ್ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಕೆಲಸದಾಳು ಬಿಹಾರ ಮೂಲದ ಬಬ್ಲು ಸಿಂಗ್ (39) ಎಂಬಾತನು ಅಂಗಡಿಯ ಹಿಂಬದಿಯಲ್ಲಿರುವ ರೂಮಿನಲ್ಲಿ ನಂದಲಾಲ್ ಮತ್ತು ಶಿವಾನಂದ ಎಂಬವರೊಂದಿಗೆ ವಾಸವಾಗಿದ್ದು, ಆತನು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿದ್ದವನು ದಿನಾಂಕ: 04-05-2022 ರಂದು  ರಾತ್ರಿ 12.00 ಗಂಟೆಯಿಂದ ದಿನಾಂಕ:05.05.2022 ರಂದು 12.30 ಗಂಟೆಯ ಮಧ್ಯೆ ಸಮಯದಲ್ಲಿ ಆತನು ವಾಸವಾಗಿರುವ ರೂಮಿನ ಪಕ್ಕದಲ್ಲಿರುವ ಬಾವಿಕಟ್ಟೆಯ ಮೇಲೆ ಕುಳಿತುಕೊಂಡ ಸಮಯ ಆಕಸ್ಮಿಕವಾಗಿ ಬಾವಿಯ ಒಳಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ:  19/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-05-2022 11:05 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080