ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಸವರಾಜ್ ಸುರೇಶ್ ಹಿರೇಮಠ (23)   ತಂದೆ: ಸುರೇಶ್, ವಾಸ: ನವಿ ಪೆಠ್ ರಾಮದುರ್ಗ ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿರವರು ತಮ್ಮ ಸಂಬಂಧಿಕರೊಂದಿಗೆ ಕೆಎ 69 ಎಮ್ 0236 ನೇ ಮಾರುತಿ ಆಲ್ಟೊ ಕಾರಿನಲ್ಲಿ ದಿನಾಂಕ:05.09.2021 ರಂದು ಬೆಳಿಗ್ಗೆ 11.00 ಗಂಟೆಗೆ ಉಡುಪಿಯಿಂದ ಹೊರಟು ಧರ್ಮಸ್ಥಳಕ್ಕೆ ಕಾರ್ಕಳ-ಗುರುವಾಯನಕೆರೆ ರಸ್ತೆಯಲ್ಲಿ ಕಾರನ್ನು ಪಿರ್ಯಾದಿದಾರರು  ಚಲಾಯಿಸಿಕೊಂಡು ಬರುತ್ತಾ ಮದ್ಯಾಹ್ನ ಸುಮಾರು 13.00 ಗಂಟೆಗೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮ ಸುಲ್ಕೇರಿ ಶಾಲೆಯ ಬಳಿ ತಲುಪಿದಾಗ ಅವರ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ  ಕೆಎ 21 ಬಿ 5715 ನೇ ಆಟೋ ರಿಕ್ಷಾವನ್ನು ಅದರ ಚಾಲಕ ವಿನೋದ ಎಂಬುವನು  ವೇಗವಾಗಿ ಚಲಾಯಿಕೊಂಡು ಬಂದು ಒಮ್ಮೇಲೆ ಬಲಕ್ಕೆ ತಿರುಗಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದು. ಡಿಕ್ಕಿ ಹೊಡೆದ ಪರಿಣಾಮ ಕಾರು  ರಸ್ತೆಯ ಎಡ ಬದಿಗೆ ಬಿದ್ದಿದ್ದು ರಿಕ್ಷಾ ಕೂಡ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು ಎರಡು ವಾಹನಗಳಿಗೆ ಜಖಂ ಆಗಿರುತ್ತದೆ. ಕಾರು ಮತ್ತು ರಿಕ್ಷಾದಲ್ಲಿದ್ದವರಿಗೆ ಯಾವುದೇ ಗಾಯಳಾಗಿರವುದಿಲ್ಲ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 57-2021 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರತೀಶ್ ಸಿ.ಪಿ (41) ತಂದೆ: ಪರಮಶಿವ ವಾಸ: ಮ್ಯಾನೇಜರ್ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರು ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯ ಮ್ಯಾನೇಜರ್ ಆಗಿದ್ದು, ದಿನಾಂಕ: 01.09.2021 ರಂದು 15.20 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪುತ್ತೂರು  ಹಿಂದೂಸ್ತಾನ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನದ ಅಂಗಡಿಗೆ 3 ಜನ ಬುರ್ಖಾ ಧರಿಸಿದ ಅಪರಿಚಿತ ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಅಂಗಡಿಯ ಬೆಂಡೋಲೆಗಳನ್ನು ಇರಿಸುವ ವಿಭಾಗಕ್ಕೆ ಬಂದು ಸೇಲ್ಸ್ ಮ್ಯಾನ್ ಆದ ಚೇತನ್ ರವರಲ್ಲಿ ಕಿವಿಯ ರಿಂಗ್ ನ್ನು ಕೇಳಿದಾಗ ಸೇಲ್ಸ್ ಮ್ಯಾನ್ ಕಿವಿಯ ಚಿನ್ನಾಭರಣಗಳನ್ನು ಟ್ರೇ ಯಲ್ಲಿರಿಸಿ ತೋರಿಸಿ 3 ಜನ ಬುರ್ಖಾ ಧರಿಸಿದ ಅಪರಿಚಿತ ಗ್ರಾಹಕರು  1.72 ಗ್ರಾಂ ನ  8,800/- ರೂ ಮೌಲ್ಯದ ಚಿನ್ನವನ್ನು ಖರೀದಿಸುವ ಸಮಯ ಅಪರಿಚಿತ ಗ್ರಾಹಕರು 50.242 ಗ್ರಾಂ ತೂಕದ ಕಿವಿಯ ರಿಂಗ್ 1 ಜೊತೆ ಇದರ ಅಂದಾಜು ಮೌಲ್ಯ 2,60,400/-ರ ಬದಲು 3.065 ಗ್ರಾಂ ತೂಕದ 13,400/- ರೂ ಮೌಲ್ಯದ ಚಿನ್ನವನ್ನು ಇರಿಸಿ ಆರೋಪಿಗಳು ಸುಳ್ಳು ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ  ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಸುಮಾರು 50.242 ಗ್ರಾಂ ತೂಕದ 2,60,400/- ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ  ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 68/2021 ಕಲಂ: 420, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 2

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಮೀನಾ w/o ಮೊಹಮ್ಮದ್ ಆಸಿಫ್ ವಾಸ: ಪುತ್ರಬ್ಯೆಲು, ಮನೆ ಲಾಯಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮೊಹಮ್ಮದ್ ಆಸಿಫ್ ಎಂಬುವರು ಲಾಯಿಲದ ಪುತ್ರಬ್ಯೆಲು ಎಂಬಲ್ಲಿ ಸೈಲೆಂಟ್ ಚಿಕನ್ ಅಂಗಡಿಯನ್ನು ನಡೆಸಿಕೊಂಡಿದ್ದು ದಿನಾಂಕ 03/09/2021 ರಂದು 18:30 ಗಂಟೆಗೆ ಕೋಳಿ ಗಾಡಿಯಲ್ಲಿ ಲ್ಯೆನ್ ಸೇಲ್ ಗೆಂದು ಮನೆಯಿಂದ ಹೊರಟು ಹೋದವರು ವಾಪಾಸ್ಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ  67/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿನಯಶ್ರೀ ಕೆ ,ಪ್ರಾಯ 40   ವರ್ಷ , ಗಂಡ ರಾಜೇಶ .ಜಿ , ಗುಂಡಿಗದ್ದೆ ಮನೆ  ಪೆರುವಾಜೆ ಗ್ರಾಮ , ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ರಾಜೇಶ ಜಿ   , ಪ್ರಾಯ 47 ವರ್ಷ ಎಂಬವರು ದಿನಾಂಕ 04-09-2021 ರಂದು ಬೆಳಿಗ್ಗೆ 08-30 ಗಂಟೆಗೆ ತಾನು ಅಗತ್ಯ ಕೆಲಸದ ನಿಮಿತ್ತ ಸುಳ್ಯಕ್ಕೆ ಹೋಗುವುದಾಗಿ ಹೇಳಿ ಅವರ ಬಾಬ್ತು ಕಾರು ನಂ ಕೆಎ 21-ಪಿ-6758 ನೇ ಎಕೋ ಸ್ಪೋರ್ಟ್ ಕಾರಿನಲ್ಲಿ   ಹೋದವರು ನಿನ್ನೆ ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರು ಪೋನ್‌ ಕರೆ ಮಾಡಿದಾಗ  ಅವರ ಪೋನ್‌ ನಂಬ್ರ ಗಳೆಲ್ಲವೂ  ಸ್ವಿಚ್‌ ಆಪ್‌ ಆಗಿ ಯಾವ ಸಂಪರ್ಕಕ್ಕೂ  ಸಿಕ್ಕಿರುವುದಿಲ್ಲ.  ಸುಳ್ಯಕ್ಕೆ ಅಗತ್ಯ ಕೆಲಸಕ್ಕೆಂದು ಹೋದ ರಾಜೇಶ ರವರು ಈವರೆಗೆ ಅವರ ಮನೆಗೂ ಬಾರದೇ ಹಾಗೂ ಸಂಬಂಧಿಕರಲ್ಲಿಗೂ ಹೋಗದೇ ಕಾರು ಸಮೇತ ಕಾಣೆಯಾಗಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣಾ ಆ.ಕ್ರ 41/2021 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 6

ಬಂಟ್ವಾಳ ನಗರ ಪೊಲೀಸ್ ಠಾಣೆ : 05-09-2021 ರಂದು  ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ  ಅಕ್ರ:104-2021 ಕಲಂ: 354(ಎ) ಐಪಿಸಿ ಮತ್ತು ಕಲಂ: 67(ಎ) ಐಟಿ ಆಕ್ಟ್  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : 05-09-2021 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 119/2021  ಕಲಂ:341,354,323,504,447,506 ಜೊತೆಗೆ 34 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ. 05.09.2021  ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ   105 /2021       ಕಲಂ 376 ಐಪಿಸಿ ಮತ್ತು ಕಲಂ 04 ಪೋಕ್ಸೋ ಕಾಯ್ದೆ 2012ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ದಿನಾಂಕ  05.09.2021  ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ  ಅಕ್ರ 80/2021 ಕಲಂ 376(2)(ಎನ್),506 ಐಪಿಸಿ ಮತ್ತು ಕಲಂ:- 5  6  POCSO Act ಯಂತೆ ಪ್ರಕರಣ ದಾಖಲಾಗಿರುತ್ತದೆ

 

ದ.ಕ ಮಹಿಳಾ ಪೊಲೀಸ್ ಠಾಣೆ : 05.09.2021  ರಂದು ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ 31/2021 ಕಲಂ: 498 (ಎ), 324, 323, 342, 504, 506 500  ಭಾದಂಸಂ & ಕಲಂ: 4, 6 INDECENT  REPRENTATION Of Women (Prohibition)  Act 1986ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ದಿನಾಂಕ.05-09-2021 ರಂದು ಕಡಬ ಠಾಣೆಯಲ್ಲಿ ಅ.ಕ್ರ 71/2021. ಕಲಂ 504.354(A) .323. 506   IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೆಲ್ವಿನ್ ಪಿಂಟೋ ತಂದೆ ಮ್ಯಾಕ್ಸಿಂ ಪಿಂಟೋ ದೇರಾಜೆ ಕೊಯಿಲಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಚಿಕ್ಕಪ್ಪ ವಿನ್ಸೆಂಟ್ ಪಿಂಟೋ ಪ್ರಾಯ 45 ವರ್ಷ ರವರು ಅವಿವಾಹಿತರಾಗಿದ್ದು ಪಿರ್ಯಾದುದರರ ಮನೆಯ ಪಕ್ಕದಲ್ಲಿಯೇ ಒಬ್ಬರೆ ವಾಸವಾಗಿದ್ದು ದಿನಾಂಕ 02.09.2021 ರಂದು  ಮಧ್ಯಸೇವನೆ ಮಾಡಿಕೊಂಡು ಪಿರ್ಯಾದುದಾರರ ಮನೆಗೆ ಬಂದು ತಟ್ಟೆಯಲ್ಲಿ  ಊಟ ಹಿಡಿದುಕೊಂಡು ಅವರ ಮನೆಗೆ ಹೋದವರು ವಾಪಸ್ಸು ಪಿರ್ಯಾದುದಾರರ  ಮನೆಗೆ ಬಂದಿರುವುದಿಲ್ಲ. ದಿನಾಂಕ 05.09.2021 ರಂದು 12.30 ಗಂಟೆಗೆ ಪರಿಚಯದ ಶ್ರೀನಿವಾಸ ಶೆಟ್ಟಿಗಾರ್ ರವರು ಕರೆ ಮಾಡಿ ವಿನ್ಸೆಂಟ್ ಪಿಂಟೋ ರವರು ನಮ್ಮ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು ಪಿರ್ಯಾದುದಾರರು ಕೂಡಲೇ ಹೋಗಿ ನೋಡಲಾಗಿ ವಿನ್ಸೆಂಟ್ ಪಿಂಟೋ ರವರ ಮೃತದೇಹವು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 32/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-09-2021 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080