ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರವಿ , ಪ್ರಾಯ: 35 ವರ್ಷ,  ತಂದೆ:  ದಿ|.ತನಿಯಪ್ಪ ಪಜಾರಿ ವಾಸ: ಮಾರಂಗ ಮನೆ,ಕೊಯಿಲ ಗ್ರಾಮ  ಕಡಬ ತಾಲೂಕು, ದ.ಕ.ಜಿಲ್ಲೆ ಎಂಬವರ ದೂರಿನಂತೆ ದಿನಾಂಕ: 05.10.2021 ರಂದು  ಆತೂರು ಎಂಬಲ್ಲಿಗೆ  ಕೂಲಿ  ಕೆಲಸಕ್ಕೆ  ಹೋಗುವರೇ  ರಾಮಕುಂಜ ಜಂಕ್ಷನ್ ಹತ್ತಿರ ಅಂಗಡಿಗೆ  ಹೋಗಿದ್ದ ಸಮಯ  ಸುಮಾರು  ಬೆಳಿಗ್ಗೆ 08.45 ಗಂಟೆಗೆ  ಒಂದು  ಮೋಟಾರು ಸೈಕಲ್ ನಲ್ಲಿ  ಓರ್ವ ಮಹಿಳೆಯನ್ನು  ಸಹ ಸವಾರೆಯಾಗಿ  ಕುಳ್ಳಿರಿಸಿಕೊಂಡು ರಾಮಕುಂಜ ಗ್ರಾಮದ ರಾಮಕುಂಜ ಜಂಕ್ಷನ್ ನಲ್ಲಿ  ಅಜಾಗರೂಕತೆ ಹಾಗೂ  ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಾಗ  ಮೋಟಾರ್  ಸೈಕಲ್ ಸ್ಕಿಡ್ ಆಗಿ ಸಹ ಸವಾರೆ ಪುಷ್ಪಾವತಿ ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು ಅಷ್ಟರಲ್ಲಿ  ಪಿರ್ಯಾದುದಾರರು  ಹಾಗೂ ಅಲ್ಲೆ ಅಂಗಡಿಯಲ್ಲಿದ್ದ ಇತರರು ಸೇರಿ ನೋಡಲಾಗಿ ಗಾಯಗೊಂಡ ಸಹ ಸವಾರೆ ಪಿರ್ಯಾದುದಾರರ ಪತ್ನಿ ಪುಷ್ಪಾವತಿ ಆಗಿದ್ದು, ಮೋಟಾರ್ ಸೈಕಲ್ ಸವಾರ ಪಿರ್ಯಾದುದಾರರ   ತಮ್ಮ  ಸಂಜೀವರವರಾಗಿದ್ದು  ಈ  ಅಪಘಾತದಲ್ಲಿ  ಪಿರ್ಯಾದುದಾರರ ಪತ್ನಿ    ಪುಷ್ಪಾವತಿಯ  ತಲೆಯ ಹಿಂಬದಿಗೆ ಗುದ್ದಿದ  ಹಾಗೂ  ರಕ್ತ ಗಾಯ ಉಂಟಾಗಿ ಕಿವಿ ಮತ್ತು  ಮೂಗಿನಿಂದ  ರಕ್ತ ಸುರಿಯುತ್ತಿತ್ತು. ಈ ಅಪಘಾತಕ್ಕೆ  ಒಳಗಾದ ಮೋಟಾರ್ ಸೈಕಲ್ ನ್ನು ನೋಡಲಾಗಿ KA-21 EB-5901  ನೇದಾಗಿದ್ದು ಕೂಡಲೇ  ಗಾಯಗೊಂಡ  ಪಿರ್ಯಾದುದಾರರ ಪತ್ನಿ ಯನ್ನು  ಉಪಚರಿಸಿ  ಪಿರ್ಯಾದುದಾರರು   ಹಾಗೂ  ಮಗ  ಜಯರಾಮ ರವರು ಒಂದು ಖಾಸಗಿ   ವಾಹನದಲ್ಲಿ  ಚಿಕಿತ್ಸೆ ಬಗ್ಗೆ  ಪುತ್ತೂರು  ಸರಕಾರಿ  ಆಸ್ಪತ್ರೆಗೆ ಹೋಗಿ  ವೈದ್ಯರಲ್ಲಿ  ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಪಿರ್ಯಾದುದಾರರ ಮಗ ಜಯರಾಮರವರು  ಆ್ಯಂಬ್ಯುಲೆನ್ಸ್  ನಲ್ಲಿ  ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 83/2021 ಕಲಂ.279.337. ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಬೆಳ್ಳಾರೆ ಪೊಲೀಸ್ ಠಾಣೆ : ಬೆಳ್ಳಾರೆ ಪೊಲೀಸ್ ಠಾಣೆ ಸಿಬ್ಬಂದಿರವರು ಗ್ರಾಮ ಗಸ್ತು ಕರ್ತವ್ಯದಲ್ಲಿದ್ದ ಸಮಯ 19-15 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಬಯಂಬಾಡಿ ಅಡ್ಕರೆಗುಂಡಿ ಕ್ರಾಸ್ ಬಳಿ ಆರೋಪಿಗಳು ವಾಹನ ಚಾಲನೆ ವಿಚಾರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ಬಂದು ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ಫಿರ್ಯಾದಿದಾರರ ಎದುರೇ ಆರೋಪಿತರಿಬ್ಬರು ಪರಸ್ಪರ ಹೊಡೆದಾಡಿಕೊಂಡು, ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 48/2021 U/s 160 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ರೈ ಬಿ.ಕೆ. ತಂದೆ: ಶೀನಪ್ಪ ರೈ, ಕರ್ನೂರು ಬಾವ ಮನೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಅವರ ಸಂಬಂಧಿ ಮೃತ ಧನಂಜಯ ರೈ, ಪ್ರಾಯ: 55 ವರ್ಷ,  ತಂದೆ: ದಿ: ಸೋಮಪ್ಪ ರೈ ವಾಸ: ಕರ್ನೂರು ಪಾದೆ ಮನೆ, ನೆಟ್ಟಣಿಗೆಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರು ಅವರ ಪತ್ನಿ ಶ್ರೀಮತಿ ಅಮಿತಾ ರೈ ಎಂಬವರಿಗೆ ಸೇರಿದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಬೋಳೋಡಿ ಎಂಬಲ್ಲಿರುವ ಅಡಿಕೆ ತೋಟಕ್ಕೆ ಕೆಲಸದಾಳುಗಳನ್ನು ದಿನಾಂಕ: 05.10.2021 ರಂದು ಬೆಳಿಗ್ಗೆ ಕರ್ನೂರಿನಿಂದ ಪಿಕ್ ಅಪ್ ನಲ್ಲಿ ಕೂಲಿಯಾಳುಗಳನ್ನು ಕರೆದುಕೊಂಡು ಹೋಗಿ ಮಧ್ಯಾಹ್ನ ಸುಮಾರು 13.30 ಗಂಟೆಗೆ ಪಿಕ್ ಅಪ್ ನಲ್ಲಿದ್ದ ಅಲ್ಯುಮಿನಿಯಂ ಏಣಿಯನ್ನು ತೆಗೆದುಕೊಂಡು ಹೋಗುತ್ತಿರುವಾಗ ಏಣಿಯ ಒಂದು ತುದಿ ವಿದ್ಯುತ್ ಲೈನ್ ಗೆ ತಾಗಿ ವಿದ್ಯುತ್ ಪ್ರಸರಿಸಿ ಶಾಕ್ ಹೊಡೆದು ಧನಂಜಯ ರೈ ರವರು ನೆಲಕ್ಕೆ ಬಿದ್ದಿರುತ್ತಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ 14:40 ಗಂಟೆಗೆ ಕರೆದುಕೊಂಡು ಬಂದಲ್ಲಿ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯು ಡಿ ಆರ್ ಸಂಖ್ಯೆ ಮತ್ತು ಕಲಂ: 34/2021 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-10-2021 03:10 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080