ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಆನಂದ ಮೂಲ್ಯ, 43 ವರ್ಷ ತಂದೆ: ಕೋಟ್ಯಪ್ಪ ಮೂಲ್ಯ ವಾಸ: ತಲೆ ಮೊಗರು ಬೀಬಿಕರಿಯ ಮನೆ, ಸಜಿಪ ಪಡು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ  03-12-2021 ರಂದು ಪಿರ್ಯಾದಿದಾರರು ತನ್ನ ಅಳಿಯ ಅಜಯ್ ರೊಂದಿಗೆ KA-19-EL-2367 ನೇ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತುಕೊಂಡು ಪಣೋಲಿಬೈಲು ದೈವಸ್ಥಾನಕ್ಕೆ ಹೋಗುವರೇ ಮುಡಿಪು- ಮೇಲ್ಕಾರ್ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು 20:15 ಗಂಟೆಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಕೊಳಕೆ ಜಂಕ್ಷನ್ ಎಂಬಲ್ಲಿಗೆ ತಲುಪುವಾಗ ಮೇಲ್ಕಾರ್ ಕಡೆಯಿಂದ KA-19-EQ-0253ನೇ ಮೋಟಾರ್ ಸೈಕಲನ್ನು ಅದರ ಸವಾರ ವಿಜಿತ್ ಎಂಬವರು  ಅತೀ ವೇಗ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಬರುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎರಡು ದ್ವಿಚಕ್ರ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡ ತೊಡೆಗೆ ಗುದ್ದಿದ ಗಾಯ, ಮೈಕೈಗೆ ಗುದ್ದಿದ ಗಾಯ, ಸವಾರ ಅಜಯ್ರವರ ಬಲದ ಕೈಗೆ, ಬಲ ಭುಜಕ್ಕೆ, ಬೆನ್ನಿಗೆ ಗುದ್ದಿದ  ಮತ್ತು ತರಚಿದ ಗಾಯವಾಗಿರುವುದಲ್ಲದೇ  ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ವಿಜಿತ್ ರವರಿಗೆ ಕಾಲಿಗೆ ಗಾಯವಾಗಿದ್ದು ಗಾಯಗೊಂಡ ಪಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿಯೂ  ಅಜಯ್ರವರು ಒಳರೋಗಿಯಾಗಿಯೂ ದಾಖಲಾಗಿದ್ದು, ವಿಜಿತ್ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 134/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ್ ಕೆ ಪ್ರಾಯ 39 ವರ್ಷ ತಂದೆ: ಪಿ.ವಿ ಕುಂಞ ರಾಮನ್ ಸಹಾಯಕ ಇಂಜಿನೀಯರ್ ಪುತ್ತೂರು ನಗರ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರವರು ದಿನಾಂಕ: 05.12.2021ರಂದು ಮಧ್ಯಾಹ್ನ 12.00 ಗಂಟೆ ಸಮಯಕ್ಕೆ  ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಹಾರಾಡಿ ಎಂಬಲ್ಲಿ KA 51 AG 3405 ನೇ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ   ಪುತ್ತೂರು ಉಪ್ಪಿನಂಗಡಿ ರಸ್ತೆಯ  ಬದಿಯಲ್ಲಿ ಮೆಸ್ಕಾಂ ಇಲಾಖೆಯ ವತಿಯಿಂದ ಅಳವಡಿಸಿದ್ದ   ಮೆಸ್ಕಾಂ ಇಲಾಖೆಯ ಹೈ ಟೆನ್ಸನ್ ವಿದ್ಯುತ್ ಕಂಬಕ್ಕೆ  ಡಿಕ್ಕಿ ಹೊಡೆದು ಎರಡು ವಿದ್ಯುತ್ ಕಂಬಗಳನ್ನು ಜಖಂ ಗೊಳಿಸಿರುತ್ತಾರೆ. ಇದರಿಂದಾಗಿ ಮೆಸ್ಕಾಂ ಇಲಾಖೆಗೆ 40,000/- ರೂ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 108/2021  ಕಲಂ: 279, 427 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: ೦1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೊಹಮ್ಮದ್ ಫಯಾಜ್ ತಂದೆ ಇಬ್ರಾಹಿಂ ವಾಸ: ಅಂಡೆತ್ತಡ್ಕ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಮಹಮ್ಮದ್ ಪಯಾಜ್ ರವರು  ದಿನಾಂಕ 05.12.2021 ರಂದು ಸಂಜೆ 7.30 ಗಂಟೆಗೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿರುವ ಮಂಜುಶ್ರೀ ಸ್ಟೋರಿಗೆ ದಿನಸಿ ವಸ್ತು ಖರೀದಿ ಮಾಡಲು ಪಿರ್ಯಾದಿದಾರರ ಸ್ನೇಹಿತ ಅಫೀಝನೊಂದಿಗೆ ಹೋಗುತ್ತಿರುವಾಗ ಅಂಗಡಿ ಬಳಿಗೆ ಆರೋಪಿತರುಗಳು ಅಕ್ರಮ ಕೂಟ ಸೇರಿಕೊಂಡು  ಮಾರಕಾಸ್ತ್ರವಾದ  ರಾಡ್ ನ್ನು ಹಿಡಿದುಕೊಂಡು ಬಂದು ಆರೋಪಿತರುಗಳಾದ  ಜಯರಾಮ ತಂದೆ ಚೆನ್ನಪ್ಪಗೌಡ. ಸಂದೀಪ್ ಕುಪ್ಪೆಟ್ಟಿ. .ನವೀನ ಕೊಡ್ಯಡ್ಕ ತಂದೆ ದಾಸಪ್ಪ. ಕಾರ್ತಿಕ್  ಅಂಡೆತ್ತಡ್ಕ ಕ್ವಾರ್ಟಸ್. ಸುಮಂತ್ ಶೆಟ್ಟಿ ತಂದೆ ಮಹಾಬಲ. ಪ್ರಿತಂ ತಂದೆ ಸೋಮಯ್ಯ ನಾಯ್ಕ. ಲತೇಶ ನೂಜಿ.ರವರುಗಳು ಮೂರು ಮೋಟಾರು ಸೈಕಲಿನಲ್ಲಿ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈಯುತ್ತಾ ಜಯರಾಮ ಎಂಬಾತನು ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ಹಾಕಿ ಆಗ ಪಿರ್ಯಾದಿದಾರರ ಸ್ನೇಹಿತ ಅಫೀಝ ಎಂಬಾತನಿಗೆ ಲತೇಶ ಎಂಬವನು ರಾಡಿನಿಂದ ಕೈ ಭಾಗಕ್ಕೆ ಹೊಡೆದು ಪಿರ್ಯಾದಿದಾರರು ಮತ್ತು ಅಫೀಝನು ತಪ್ಪಿಸಿಕೊಳ್ಳಲು ಓಡಿ ಹೋದಾಗ ಅಪಾದಿತರೆಲ್ಲರೂ   ಮೋಟರ್ ಸೈಕಲ್ ನಲ್ಲಿ  ರಾಡ್ ಸಮೇತ ಅಟ್ಟಾಡಿಸಿಕೊಂಡು ಬಂದು ಜಯರಾಮ ಎಂಬಾತನು ಪಿರ್ಯಾದಿದಾರರನ್ನು ದೂಡಿ ಹಾಕಿದ್ದರಿಂದ  ಪಿರ್ಯಾದಿದಾರರ ಎರಡೂ ಕಾಲಿನ ಮೊಣ ಗಂಟಿಗೆ ಹಾಗೂ ಎರಡು ಕೈಗಳಿಗೆ ಗಾಯ ಉಂಟಾಗಿರುವುದಲ್ಲದೆ.ಪಿರ್ಯಾದಿದಾರರ  ಕಿಸೆಯಲ್ಲಿದ್ದ ಮೊಬೈಲ್ ಪೋನು  ಜಖಂಗೊಂಡು 8000/ ರೂಪಾಯಿ ನಷ್ಠವಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 150/2021 ಕಲಂ:.143.147 148 149.323.324.427 504 R/W 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: ೦1

ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಜಕಾರಿಯಾ  ತಂದೆ ಉಸ್ಮಾನ್ ವಾಸ: ಅಂಡೆತ್ತಡ್ಕ ಕ್ವಾಟರ್ಸ ಮನೆ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 05/12/2021 ರಂದು ರಾತ್ರಿ ಸಮಯ 8.00 ಗಂಟೆಗೆ  ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿರುವ  ಇಕ್ಬಾಲ್ ರವರ ಜಿನಸು ಅಂಗಡಿ  ಬಳಿ  ಪಿರ್ಯಾದಿ  ಅಬ್ದುಲ್ ಝಕಾರಿಯಾ ರವರು ಸಿದ್ದಿಕ್ ರವರೊಂದಿಗೆ ಇರುವಾಗ ಸುಮಾರು 30 ಬೈಕ್ ಗಳಲ್ಲಿ ಎರಡೆಡು ಜನರಂತೆ  ಬಂದ ಆರೋಪಿಗಳು ಯಾವುದೋ ದ್ವೇಷದಲ್ಲಿ ಅಕ್ರಮ ಕೂಟ  ಸೇರಿಕೊಂಡು ಬಂದವರ ಪೈಕಿ ಆರೋಪಿಗಳು  ಮಾರಕಾಸ್ತ್ರವಾದ ತಲವಾರ್ ಮತ್ತು ರಾಡ್ ಗಳನ್ನು ಹಿಡಿದುಕೊಂಡುಬಂದು  ಪಿರ್ಯಾದಿಯ ಪರಿಚಯದ  ಆರೋಪಿ ಸಂದೀಪ್ ಕುಪ್ಟೆಟ್ಟಿ ಎಂಬಾತನು  ಬೈಕ್‌ನಲ್ಲಿ ಸಹ ಸವಾರನಾಗಿ ಆರೋಪಿ ಜಯರಾಮ ಎಂಬಾತನನ್ನು ಕುಳ್ಳಿರಿಸಿಕೊಂಡುಬಂದು  ಮೋಟಾರ್ ಸೈಕಲ್ ನ್ನು ನಿಲ್ಲಿಸಿ   ಇಳಿದು ಸಂದೀಪ್ ನು ಸಿದ್ದಿಕ್ ನನ್ನು ತೋರಿಸಿ  ಅವರಿಬ್ಬರು ತಮ್ಮೊಳಗೆ ಇವನಾ?  ಎಂದು ಕೇಳಿದಾಗ  ಇವನಲ್ಲ   ಎಂದು ಹೇಳಿದಾಗ  ಸಿದ್ದಿಕ್ ನಿಗೆ  ತಲವಾರಿನಿಂದ ಕೈ ಗೆ , ಬೆನ್ನಿಗೆ , ಹಾಗೂ ಇತರೆಡೆ,  ಕಡಿದಿರುವುದಲ್ಲದೇ ,ಆರೋಪಿಗಳಾದ ಸುಪ್ರೀತ್  ಪ್ರೀತಮ್ , ಲತೇಶ್ , ಎಂಬವರುಗಳು ಅವರ ಕೈಯಲ್ಲಿದ್ದ ರಾಡ್ ನಿಂದ  ಸಿದ್ದಿಕ್ ನ ಕೈಗೆ ಹೊಡೆದರು  ಬಳಿಕ ಅಲ್ಲಿದ್ದ ಪಿರ್ಯಾದಿದಾರರನ್ನು ಒಬ್ಬಾತನು ಹಿಡಿದುಕೊಂಡಾಗ ಆರೋಪಿ ಜಯರಾಮನು  ಪಿರ್ಯಾದಿಯ ತಲೆಯ ಹಿಂಬಾಗಕ್ಕೆ  ಕಡಿದಾಗ  ಆರೋಪಿ ಸಂದೀಪನು ರಾಡ್ ನಿಂದ ಪಿರ್ಯಾದಿಯ ಬಲ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿರುವುದಾಗಿದೆ . ಆ ಸಮಯ   ಪಿರ್ಯಾದಿ ಹಾಗೂ ಸಿದ್ದಿಕ್ ರವರು  ಆರೋಪಿಗಳಿಂದ ತಪ್ಪಿಸಿಕೊಂಡು   ಓಡಿ ಹೋದ ಸಮಯ ಆರೋಪಿಗಳು ಮೋಟಾರ್ ಸೈಕಲ್ ನಲ್ಲಿ ಹಿಂಬಾಲಿಸಿಕೊಂಡು ಮುಂದಕ್ಕೆ ಹೋಗಿ  ನಡೆದುಕೊಂಡು ಬರುತ್ತಿದ್ದ ಅಯೂಬ್ ಖಾನ್ ರವರ ತಲೆಯ ಬಾಗಕ್ಕೆ  ಆರೋಪಿ ಜಯರಾಮನು  ಕಡಿದು ಮಾರಣಾಂತಿಕ  ಹಲ್ಲೆ  ನಡೆಸಿದಾಗ ಅಸುಪಾಸಿನ ಜನರು ಸೇರುವುದನ್ನು ಕಂಡು ಅಲ್ಲಿಂದ ಆರೋಪಿಗಳು ಪರಾರಿಯಾಗಿರುತ್ತಾರೆ . ನಂತರ ವಿಚಾರ ತಿಳಿದು ಅಲ್ಲಿಗೆ ಬಂದ ರಹೀಂ ರವರು ಅವರ ಕಾರಿನಲ್ಲಿ ಗಾಯಗೊಂಡ ಅಯೂಬ್ ಖಾನ್,ಸಿದ್ದಿಕ್ , ಮತ್ತು ಪಿರ್ಯಾದಿದಾರರನ್ನು ಕುಳ್ಳಿರಿಸಿಕೊಂಡು  ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರು  ಅಯೂಬ್ ಖಾನ್  ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಲ್ಲದೇ , ಪಿರ್ಯಾದಿ ಮತ್ತು  ಸಿದ್ದಿಕ್ ರವರನ್ನು  ಹೆಚ್ಚಿನ   ಚಿಕಿತ್ಸೆಯ ಬಗ್ಗೆ ಪುತ್ತೂರಿನ ಪ್ರಗತಿ ಆಸ್ಪತ್ರೆ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ.ಈ ಬಗ್ಗೆ ಪೊಲೀಸ್ ಠಾಣಾ ಅ.ಕ್ರ 32/2016 ಕಲಂ 174(3)(iv)  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬೆಲಿಂಡ ಪ್ರಾಯ 25 ವರ್ಷ ತಂದೆ; ಬೆನೆಡಿಕ್ಟ್  ರೋಡ್ರಿಗಸ್ ವಾಸ;  ಕುಲ್ಲಾಜೆ ಮನೆ ಕುರಿಯಾಳ ಅಂಚೆ ಮತ್ತು ಗ್ರಾಮ ಎಂಬವರ ದೂರಿನಂತೆ ಪಿರ್ಯಾದಿದಾರರು ಮೇಲಿನ ವಿಳಾಸದಲ್ಲಿ  ತಂದೆ, ತಾಯಿ ಶ್ರೀಮತಿ ಬೆನೆಡಿಕ್ಟ  ಯೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರು  ಮೂಡಬಿದ್ರೆಯಲ್ಲಿ  ಕೆಲಸ ಮಾಡಿಕೊಂಡಿದ್ದು ಮನೆಯಲ್ಲಿ  ತಾಯಿ ಮತ್ತು ತಂದೆ ಮಾತ್ರ ಇರುವುದಾಗಿದೆ.  ಪಿರ್ಯಾದಿದಾರರ  ತಂದೆ ಕೃಷಿ   ಕೆಲಸ ಮಾಡಿಕೊಂಡಿದ್ದು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ಸುಮಾರು 1 ವರ್ಷದ ಹಿಂದೆ  ಮನೆಯಲ್ಲಿ ಬಿದ್ದವರಿಗೆ  ಎಡ ಕಾಲು   ಮುರಿತಕ್ಕೊಳಗಾಗಿ  ಮಂಗಳೂರು  ಎಸ್.ಸಿ.ಎಸ್  ಆಸ್ಪತ್ರೆಯಲ್ಲಿ  ಶಸ್ತ್ರ  ಚಿಕಿತ್ಸೆ  ಮಾಡಿಸಿ  ನಂತರ  ಮನೆಗೆ ಕರೆದುಕೊಂಡು ಬಂದಿದ್ದು   ಅವರಿಗೆ  ನಡೆದಾಡಲು ಸಾದ್ಯವಾಗದೇ   ವಾಕರ್ ಮೂಲಕ   ನಡೆದಾಡುತ್ತಿದ್ದು ಇದರಿಂದ ಅವರು ಮಾನಸಿಕವಾಗಿ ನೊಂದಿದ್ದರು ಅಂತೆಯೇ  ನಿನ್ನೆ ದಿನಾಂಕ 04-12-2021 ರಂದು   ವಿಪರೀತ ಮದ್ಯ ಸೇವನೆ ಮಾಡಿ  ಮನೆಯಲ್ಲಿ ಬೆಡ್ ನ  ಮೇಲೆ ಮಲಗಿದ್ದು  ಸಂಜೆ 4.30 ಗಂಟೆಗೆ ಬೆಡ್ ನ ಮೇಲೆ ಮಲಗಿದ್ದ ತಂದೆ  ಬೆಡ್ ನಿಂದ ಬಿದ್ದಿದ್ದು, ಕೂಡಲೇ   ಪಿರ್ಯಾದಿದಾರರು ಮತ್ತು ತಾಯಿ ಅವರನ್ನು  ಉಪಚರಿಸಿದಾಗ ಅವರು ವಾಂತಿ  ಮಾಡಿದ್ದು  ಅವರನ್ನು ಕೇಳಿದಾಗ  ಹುಲ್ಲಿಗೆ ಸಿಂಪಡಿಸುವ   ಕೆಮಿಕಲ್ ನನ್ನು  ಕುಡಿದಿರುವುದಾಗಿ  ತಿಳಿಸಿದ್ದು ಪಿರ್ಯಾದಿದಾರರು ಹೆದರಿ  ಪಿರ್ಯಾದಿದಾರರ  ದೊಡ್ಡಪ್ಪನ ಮಗ ಲೈನೆಲ್ ರೋಡ್ರಿಗಸ್ ರವರಿಗೆ ತಿಳಿಸಿ  ಅವರು ಬಂದು ಅವರ ಕಾರಿನಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಅಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು  ಚಿಕಿತ್ಸೆಯಲ್ಲಿದ್ದ  ಪಿರ್ಯಾದಿದಾರರ ತಂದೆ ಬೆಳಿಗ್ಗೆ 7.38 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 51-2021 ಕಲಂ 174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಕ್ಷತ ವಾಸುದೇವ್‌ ಪ್ರಾಯ: 23 ವರ್ಷ  ತಂದೆ: ವಾಸುದೇವ ಹೆಚ್‌ ವಾಸ: ಶ್ರೀಕರ ಮನೆ, ಎಂಐಜಿ 6 1 ನೇ ಕ್ರಾಸ್‌ ಕೆಹೆಚ್‌‌ಬಿ ಕಾಲೋನಿ ಚಿಕ್ಕಮಂಗಳೂರು ಎಂಬವರ ದೂರಿನಂತೆ ಫಿರ್ಯಾದಿದಾರರ ತಂದೆ ವಾಸುದೇವ ಹೆಚ್‌ ಎಂಬವರು ಪುತ್ತೂರು ತಾಲೂಕು ಮುರ ಎಂಬಲ್ಲಿರುವ ಶಿವ ಸದನ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ದಿನಾಂಕ: 05.12.2021 ರಂದು ಮಧ್ಯಾಹ್ನ 12.30 ಗಂಟೆಗೆ ಫಿರ್ಯಾದಿದಾರರ ತಂದೆ ಅವರ ಜೊತೆ ಕೆಲಸ ಮಾಡುತ್ತಿದ್ದ ಶಂಬೂ ದೇವಾಡಿಗ ಎಂಬವರೊಂದಿಗೆ ಮಧ್ಯಾಹ್ನ ಊಟಕ್ಕೆ ಹೋಗುವ ಎಂದು ತಿಳಿಸಿದ್ದು,  ಅದರಂತೆ ಅವರಿಬ್ಬರು  ಪುತ್ತೂರಿನಲ್ಲಿರುವ ಸುಜಾತ ಹೋಟೇಲ್‌ಗೆ ಹೋಗಿ ಊಟ ಮಾಡುತ್ತಿರುವ ಸಮಯ ಸುಮಾರು 1.30 ಗಂಟೆಗೆ ಊಟ ಮಾಡುತ್ತಿರುವಾಗ ಫಿರ್ಯಾದಿದಾರರ ತಂದೆ ಶಂಬೂ ದೇವಾಡಿಗವರಲ್ಲಿ ತನಗೆ ಏನೋ ಆಗುತ್ತದೆ ಎಂದು ಹೇಳಿ ಶೌಚಾಲಯಕ್ಕೆ ಹೋಗಿ ಬಂದು ನಂತರ ಊಟ ಮಾಡುತ್ತಿದ್ದ ಹಾಗೆಯೇ ವಾಸುದೇವ ಹೆಚ್‌ ರವರು  ಕುರ್ಚಿಯಿಂದ ಕೆಳಗೆ ಬಿದ್ದಿದ್ದು, ಅವರ ಸ್ನೇಹಿತರು ಕೂಡಲೇ ಆಟೋರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು  ಇಲ್ಲ ಎಂದು ತಿಳಿಸಿದಾಗ ಅವರನ್ನು ಅಲ್ಲೇ ಪಕ್ಕದ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಫಿರ್ಯಾದಿದಾರರ ತಂದೆ ವಾಸುದೇವ ಹೆಚ್‌ ಮೃತಪಟ್ಟಿರುತ್ತಾರೆ ಎಂಬುದಾಗಿ ಫಿರ್ಯಾದಿದಾರರ ತಂದೆಯ ಜೊತೆ ಕೆಲಸ ಮಾಡುತ್ತಿದ್ದ ರಾಜೇಶ್‌ ಎಂಬವರು ತಿಳಿಸಿರುವುದಾಗಿದೆ. ಫಿರ್ಯಾದಿದಾರರ ತಂದೆಯ ವಿಷಯ ತಿಳಿಸಿದ ಕೂಡಲೇ ಮನೆಯಿಂದ ಹೊರಟು ಪುತ್ತೂರಿಗೆ ಬಂದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದ್ದ ಫಿರ್ಯಾದಿದಾರರ ತಂದೆಯವರ ಮೃತದೇಹವನ್ನು ನೋಡಿದ್ದು, ಅವರು ಹೃದಯಾಘಾತದಿಂದಲೇ ಅಥವಾ ಇನ್ನಾವುದೇ ಖಾಯಿಲೆಯಿಂದಲೇ ಮೃತಪಟ್ಟಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣಾ ಯು.ಡಿ.ಆರ್ ನಂ: 31/2021 ಕಲಂ: 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-12-2021 10:55 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080