ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಕೇತ್ (21) ತಂದೆ: ರಾಮ ಬಿ ವಾಸ: ಕೊಂಗ್ರಬೆಟ್ಟು ಮನೆ, ಮಣಿಹಳ್ಳ ಬಂಟ್ವಾಳ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 05.03.2022 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 19 ಡಬ್ಲೂ 4280 ನೇದರಲ್ಲಿ ಜಕ್ರಿಬೆಟ್ಟುನಿಂದ ತನ್ನ ಮನೆಯಾದ ಕೊಂಗ್ರಬೆಟ್ಟು ಎಂಬಲ್ಲಿಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಸುಮಾರು 19.30 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿಗೆ ತಲುಪಿದಾಗ ಬಂಟ್ವಾಳ ಕಡೆಯಿಂದ ಕೆಎ 19 ಇಝಡ್ 2520 ನೇ ಮೋಟಾರ್ ಸೈಕಲ್ ಸವಾರ ಒಬ್ಬ ಸಹಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಮತ್ತು ನಿರ್ಲಕ್ಷ್ಯದಿಂದ  ತನ್ನ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಬದಿ ಹಣೆ ಮತ್ತು ಬಲ ಕಣ್ಣಿನ ಬಳಿ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಅಲ್ಲದೆ ಡಿಕ್ಕಿಹೊಡೆದ ಮೋಟಾರ್ ಸೈಕಲ್ ಸವಾರ ಬಾಸ್ಕರ ಹಾಗೂ ಸಹಸವಾರ ನಿಶಾಂತ ರವರಿಗೆ ಗಾಯವಾಗಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ  ಅ.ಕ್ರ : 29/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಸಂತಿ (27) ಗಂಡ: ವಸಂತ ವಾಸ: ಬಾಳೆಗುಂಡಿ ಮನೆ ಶಿಶಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು  ದಿನಾಂಕ: 05-03-2022 ರಂದು ತನ್ನ ಗಂಡ ವಸಂತ ಮತ್ತು ತಂದೆ ತಾಯಿಯ ಜೊತೆ ಕೆಎ 21 2896 ನೇ ಸರ್ವಿಸ್‌ ಜೀಪಿನಲ್ಲಿ ಇತರ ಸಹ ಪ್ರಯಾಣಿಕರೊಂದಿಗೆ ಕುಳಿತುಕೊಂಡು ಕೊಕ್ಕಡದಿಂದ ಶಿಶಿಲಕ್ಕೆ ಹೊರಟು ಸದ್ರಿ ಜೀಪನ್ನು ಕೊಕ್ಕಡದಿಂದ ಶಿಶಿಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 3:45 ಗಂಟೆಗೆ ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಮಸೀದಿ ಬಳಿ ತಲುಪುತ್ತಿದ್ದಂತೆ ಜೀಪನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿ ಚಾಲಕನ ಹತೋಟಿ ತಪ್ಪಿ ಜೀಪು ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕಣ್ಣಿನ ಬಳಿ ಮತ್ತು ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾದಿದಾರರ ತಾಯಿ ಕಮಲಾ ರವರಿಗೆ  ತುಟಿಗೆ, ಮೂಗಿಗೆ, ತಲೆಗೆ ಗುದ್ದಿದ ಗಾಯ ಹಾಗೂ ಪಿರ್ಯಾದಿದಾರರ ತಂದೆ ಉಮೇಶ ರವರಿಗೆ ಎರಡೂ ಕಾಲುಗಳಿಗೆ ಗುದ್ದಿದ ಗಾಯ, ಸಹಪ್ರಯಾಣಿಕರಾದ ರಕ್ಷಿತಾ ರವರಿಗೆ ಹಣೆಗೆ, ಗಲ್ಲಕ್ಕೆ ಬೆನ್ನಿಗೆ ಗುದ್ದಿದ ಗಾಯ, ಹೊನ್ನಪ್ಪ ಪೂಜಾರಿ ರವರಿಗೆ ತಲೆಗೆ ಎರಡೂ ಕೈ ಕಾಲುಗಳಿಗೆ ಗುದ್ದಿದ ರಕ್ತ ಗಾಯ, ಜೀಪು ಚಾಲಕ ಗೌರೀಶ್‌ ರವರಿಗೆ ಬಲಕೆನ್ನೆಗೆ, ಬಲಕಾಲಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳೆಲ್ಲರು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 40/2022 ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗೌತಮ್ ರಾಜ್ ಬಿ (24) ತಂದೆ: ನಾರಯಣ ಬಿ ಡಿ ವಾಸ: ಬೆಳ ಮನೆ ನಿರ್ಚಾಲ್ ಬೆಳ ಗ್ರಾಮ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು  ದಿನಾಂಕ:06-03-2022 ರಂದು ತನ್ನ ಬಾಬ್ತು KA 21 EB 6861 ನೇ ದ್ವಿ ಚಕ್ರ ವಾಹನವನ್ನು  ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 9:15 ಗಂಟೆಗೆ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ರೇಷ್ಮೆ  ರೋಡ್‌ ಜಂಕ್ಷನ್‌ ಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರು ದ್ವಿ ಚಕ್ರ ವಾಹನದ ಬಲಬದಿಯ ಇಂಡೀಕೆಟರ್‌ ಹಾಕಿ ಬಲಕ್ಕೆ ತಿರುಗಿಸುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಗುರುವಾ‌ಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ KA 21 C 2417 ನೇ  ಅಶೋಕ್‌ ಲೈಲ್ಯಾಂಡ ದೋಸ್ತ್‌ ಗೂಡ್ಸ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ದ್ವಿ ಚಕ್ರ ವಾಹನದ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಬಲ ಕೈ ಭುಜಕ್ಕೆ, ಎದೆಗೆ ಗುದ್ದಿದ ಗಾಯವಾಗೊಂಡು ಚಿಕಿತ್ಸೆ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 41/2022 ಕಲಂ; 279,337ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ದಿನಾಂಕ:03-03-2022 ರಂದು ಸಮಯ ಸುಮಾರು ಬೆಳಿಗ್ಗೆ 7:20 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಎಸ್‌ ಡಿ ಎಮ್‌ ಕಾಲೇಜಿನ ಸಮೀಪ ಬೆಳಾಲು ಕ್ರಾಸ್‌ ಎಂಬಲ್ಲಿ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ದ್ವಿ ಚಕ್ರ ವಾಹನ ನಂಬ್ರ ಕೆಎ 70 ಹೆಚ್‌ 3270 ನೇ ದ್ದನ್ನು ಅದರ ಸವಾರ ಸಂದೀಪ್‌ ರವರು ಸಹ ಸವಾರಳಾಗಿ ಅವರ ತಾಯಿ ಶ್ರೀಮತಿ ಪ್ರೇಮ ಎಂಬವರನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ರಸ್ತೆಗೆ ನಾಯಿಯೊಂದು ಅಡ್ಡವಾಗಿ ಬಂದ ಕಾರಣ ದ್ವಿ ಚಕ್ರ ವಾಹನವನ್ನು ನಿಯಂತ್ರಿಸಲಾಗದೇ ಚಾಲನಾ ಹತೋಟಿ ತಪ್ಪಿ ರಸ್ತೆಗೆ ದ್ವಿ ಚಕ್ರ ವಾಹನದೊಂದಿಗೆ ಬಿದ್ದ ಪರಿಣಾಮ ಶ್ರಿಮತಿ ಪ್ರೇಮ ರವರಿಗೆ ತಲೆಯ ಬಲಬದಿ ಕಿವಿಯ ಮೆಲ್ಬಾಗಕ್ಕೆ ಗುದ್ದಿದ ಗಾಯ, ಎರಡು ಕಾಲುಗಳಿಗೆ ತರಚಿದ ಗಾಯ, ಸವಾರ ಸಂದೀಪ್‌ ನಿಗೆ ಎಡಕಾಲಿನ ಪಾದಕ್ಕೆ, ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು ಗಾಯಾಳುಗಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರೇಮ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 42/2022 ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಯಮುನ ಪ್ರಾಯ 30 ವರ್ಷ, ಗಂಡ: ಮಾಧವ, ವಾಸ; ಕಾಪುತ್ತಡ್ಕ ಮನೆ, ಮುರುಳ್ಯ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಫಿರ್ಯಾದಿದಾರರ ಗಂಡ ಮಾಧವ ಪ್ರಾಯ 32 ವರ್ಷ, ತಂದೆ: ದಿ: ಗುರುವ ರವರು ಸುಳ್ಯ ತಾಲೂಕು ಮುಪ್ಪೆರ್ಯಾ ಗ್ರಾಮದ ಪಾಜಪಳ್ಳ ನಿವಾಸಿ ರಾಜೇಂದ್ರಪ್ರಸಾದ್ ಎಂಬವರ ತೋಟಕ್ಕೆ ಬೆಳಿಗ್ಗೆ 8-15 ಗಂಟೆಗೆ ಕೃಷಿ ಕೂಲಿ ಕೆಲಸದ ಬಗ್ಗೆ ಪಿರ್ಯಾಧಿದಾರರ ಸಂಬಂಧಿಕರಾದ ಜಯಪ್ರಸಾದ್ ರವರ ಜೊತೆ ಹೋದವರು ತೋಟದಲ್ಲಿ ಮರದ ಗೆಲ್ಲನ್ನು ಕಡಿಯುತ್ತಿರುವಾಗ ಸಮಯ ಸುಮಾರು 11-00 ಗಂಟೆಗೆ ಆಕಸ್ಮಿಕವಾಗಿ ಕೈಜಾರಿ ಮರದಿಂದ ಬಿದ್ದು ತೀವ್ರ ಗಾಯಗೊಂಡವರನ್ನುಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  08/2022  ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-03-2022 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080