ಅಪಘಾತ ಪ್ರಕರಣ: ೦4
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಮಾಲಿಕ್ ಪ್ರಾಯ:19 ವರ್ಷ ತಂದೆ: ಇಕ್ಬಾಲ್ ವಾಸ: ನಚ್ಚಬೆಟ್ಟು ಮನೆ ಕಡೇ ಶಿವಾಲಯ ಗ್ರಾಮ ಪೆರ್ಲಾಪು ಅಂಚೆ ಬಂಟ್ವಾಳ ತಾಲೂಕು ರವರು ಸಹಸವಾರನಾಗಿ ಹಾಗೂ ಸಾಹಿರ್ ಮಹಮ್ಮದ್ ರವರು ಸವಾರನಾಗಿ ದಿನಾಂಕ: 05-04-2022 ರಂದು KA 70 H 2288 ನೇ ದ್ವಿ ಚಕ್ರ ವಾಹನದಲ್ಲಿ ಅತ್ತಾಜೆ ಕಡೆಯಿಂದ ಟಿಬಿ ಕ್ರಾಸ್ ರಸ್ತೆಯಲ್ಲಿ ಬರುತ್ತಾ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಅತ್ತಾಜೆ ಕಡೆಯಿಂದ ಟಿಬಿ ಕ್ರಾಸ್ ಕಡೆಗೆ KA 17 C 8339 ನೇ ಈಚರ್ ಟಿಪ್ಪರ್ ಲಾರಿಯನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನವನ್ನು ಹಿಂದಿಕ್ಕಿ ಒಮ್ಮೆಲೆ ಎಡಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ದ್ವಿ ಚಕ್ರ ವಾಹನದ ಎದುರುಗಡೆ ಬಲಬಾಗಕ್ಕೆ ತಾಗಿ ಸವಾರ ಹಾಗೂ ಪಿರ್ಯಾದಿದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕಾಲಿನ ಹಿಮ್ಮಡಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ, ಸವಾರ ಸಾಹಿರ್ ಮಹಮ್ಮದ್ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 54/2022 ಕಲಂ; 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಚಿನ್, ಪ್ರಾಯ 30 ವರ್ಷ, ತಂದೆ: ದಯಾನಂದ, ವಾಸ: ಭಗವತಿ ನಿಲಯ, ತಾರಿಪಡ್ಪು, ಕೋಟೆಕಾರು ಅಂಚೆ, ಮಾಡೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 05-04-2022 ರಂದು 21-00 ಗಂಟೆಗೆ ಆರೋಪಿ ಕಾರು ಚಾಲಕ ಮಿಲನ್ ಎಂ ಎಂಬವರು ನೋಂದಣಿಯಾಗದ ಹೊಸ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಎಂಬಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮುಂದೆ ಅವಿನಾಶ್ ಎಂಬವರು ಸಂಪ್ಯ ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-7147ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಅವಿನಾಶ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ತೊಡೆಗೆ, ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 65/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನವೀನ್ ರೈ, ಪ್ರಾಯ 49 ವರ್ಷ, ತಂದೆ: ರಾಮಣ್ಣ ರೈ, ವಾಸ: ಶ್ರೀ ನಿಕೇತನ, ಪೊರ್ಕಳ ಮನೆ, ಪುತ್ತಿಲ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 06-04-2022 ರಂದು ಆರೋಪಿ ಕ್ವಾಲಿಸ್ ಕಾರು ಚಾಲಕ ಜಗದೀಶ ಎಂಬವರು KA-07-M-4595 ನೇ ನೋಂದಣಿ ನಂಬ್ರದ ಕ್ವಾಲಿಸ್ ಕಾರನ್ನು ಕಲ್ಲೇರಿ-ಮೂರುಗೋಳಿ-ವಗ್ಗ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಲ್ಲೇರಿ ಕಡೆಯಿಂದ ವಗ್ಗ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಕಜೆಮಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆ ದಾಟುತ್ತಿದ್ದ ಪಾದಚಾರಿ ಮಗು ಮಹಮ್ಮದ್ ಅಝೀಮ್ (5 ವರ್ಷ) ರವರಿಗೆ ಅಪಘಾತವಾಗಿ, ಅವರ ಬಲ ಕಾಲಿನ ಪಾದಕ್ಕೆ ತೆರಚಿದ ಗಂಭೀರ ಗಾಯವಾಗಿರುತ್ತದೆ. ಗಾಯಾಳು ಮಗುವನ್ನು ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 66/2022 ಕಲಂ: 279,338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನೇಮಣ್ಣ ಗೌಡ , ಪ್ರಾಯ: 71 ವರ್ಷ, ತಂದೆ: ದಿ|| ವೀರಪ್ಪ ಗೌಡ, ವಾಸ: ನೇರಳ ಮನೆ, ಪಂಜ, ಐವತ್ತೊಕ್ಲು ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ: 04.04.2022 ರಂದು ಅವರ ಮಗ ದೀಪಕ್ ನ ಜೊತೆ ಸಹಸವಾರರಾಗಿ ಅವನ ಬಾಬ್ತು KA 19 EE 8860 ನೇ ಹೊಂಡಾ ಶೈನ್ ಬೈಕ್ ನಲ್ಲಿ ಪಂಜ ಪೇಟೆಗೆ ತೆರಳಿ ಮನೆ ಸಾಮಾನುಗಳನ್ನು ಖರೀದಿಸಿ ಮರಳಿ ಬೈಕ್ ನಲ್ಲಿ ಮನೆಗೆ ತೆರಳುವಾಗ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಕಮಿಲಕ್ಕೆ ತಲುಪುವಾಗ ಅವರ ಮಗ ಚಲಾಯಿಸುತ್ತಿದ್ದ ಬೈಕ್ ಗೆ ಒಂದು ನಾಯಿ ಅಡ್ಡ ಬಂದುದರಿಂದ ಕೂಡಲೇ ಬೈಕ್ ನ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರು ಮಣ್ಣಿನ ರಸ್ತೆಯಲ್ಲಿ ಬಿದ್ದಿದ್ದು, ಅವರಿಗೆ ಕುತ್ತಿಗೆಯ ಎಡಭಾಗಕ್ಕೆ ಗುದ್ದಿದ ಗಾಯ, ಎಡಕಾಲಿನ ಮೊಣಗಂಟಿಗೆ ತೆರಚಿದ ಗಾಯವಾಗಿದ್ದು, ಅವರ ಮಗ ದೀಪಕ್ ನಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅ.ಕ್ರ ನಂಬ್ರ : 45-2022 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಲೈಮಾನ್ ಪ್ರಾಯ: 56 ವರ್ಷ ತಂದೆ: ಮೋಯ್ದೀನ್ ಬ್ಯಾರಿ, ವಾಸ: 2-151, ಗುಂಡಿಮಜಲು ಮನೆ, ಮಂಚಿ ಗ್ರಾಮ ಬೋಳಂತೂರು ಅಂಚೆ, ಬಂಟ್ವಾಳ ತಾಲೂಕು ರವರು ಕಲ್ಲಡ್ಕದ ಅಪೊಲೋ ಎಲೆಕ್ಟ್ರಿಕಲ್ಸ್ ಸಂಸ್ಥೆಯನ್ನು ಹೊಂದಿದ್ದು. ಸದ್ರಿ ಸಂಸ್ಥೆಯ ವರ್ಕ್ ಶಾಪ್ ಮತ್ತು ದಾಸ್ತಾನು ಕೊಠಡಿಯು ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ರಾಯಪ್ಪ ಕೋಡಿಯಲ್ಲಿದ್ದು, ಹಗಲು ಸಮಯದಲ್ಲಿ ಮ್ಯಾನೇಜರ್ ಆದ ಮಹಮ್ಮದ್ ಫಾರೂಕ ರವರು ಉಸ್ತುವಾರಿ ನೋಡಿ ಕೊಳ್ಳುತ್ತಿರುವುದಾಗಿದೆ. ಸದ್ರಿ ರಾಯಪ್ಪಕೋಡಿ ವರ್ಕ್ ಶಾಪ್ ನಲ್ಲಿ ದಿನಾಂಕ 05.04.2022 ರಂದು ಹಗಲು ಸಮಯ ಮ್ಯಾನೇಜರ್ ಮಹಮ್ಮದ್ ಫಾರೂಕ್ ರವರು ಇದ್ದು, ವರ್ಕ್ ಶಾಪ್ ನಲ್ಲಿ ಕೆಲಸ ಮುಗಿದ ಬಳಿಕ ಸಂಜೆ ಸಮಯ ಸುಮಾರು 6.45 ಗಂಟೆಗೆ ವರ್ಕ್ ಶಾಪ್ ಗೆ ಬೀಗ ಹಾಕಿ ವರ್ಕ್ ಶಾಪ್ ನ ಅಂಗಳದಲ್ಲಿ ಫಿರ್ಯಾದಿದಾರರ ಬಾಬ್ತು ಮಹೀಂದ್ರಾ ಬೊಲೆರೋ ಪಿಕ್ಅಪ್ ವಾಹನ ಸಂಖ್ಯೆ: ಕೆಎ-19- ಎಬಿ-5366 ನೇಯದನ್ನು ನಿಲ್ಲಿಸಿ ಬಂದಿದ್ದು, ವರ್ಕ್ ಶಾಪ್ ನ ಗೇಟಿನ ಬೀಗವನ್ನು ಅಲ್ಲಿಯೇ ವರ್ಕ್ ಶಾಪ್ ಪಕ್ಕದಲ್ಲಿ ಇರಿಸಿ ಬಂದಿರುತ್ತಾರೆ. ದಿನಾಂಕ: 06.04.2022 ರಂದು ಬೆಳಿಗ್ಗೆ 09.00 ಗಂಟೆಗೆ ಮ್ಯಾನೇಜರ್ ವರ್ಕ್ ಶಾಪ್ ತೆರೆಯಲು ಹೋದ ಸಮಯ, ಗೇಟಿನ ಬೀಗವು ತೆಗೆದಿದ್ದು, ಗೇಟಿನ ಒಳಗಡೆ ಹೋದಾಗ ಪಿಕ್ಅಪ್ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು, ಈ ಬಗ್ಗೆ ಫಿರ್ಯಾದಿದಾರರಿಗೆ ಮ್ಯಾನೇಜರ್ ಕರೆ ಮಾಡಿ ತಿಳಿಸಿದಂತೆ ಹೋಗಿ ನೋಡಲಾಗಿ ಪಿಕ್ಅಪ್ ವಾಹನ ಹಾಗೂ ವೆಲ್ಡಿಂಗ್ ಮಿಷನ್ ಅಂಗಳದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಸದ್ರಿ ಪಿಕ್ಅಪ್ ವಾಹನವನ್ನು ದಿನಾಂಕ: 05.04.2022 ರಂದು ಸಂಜೆ 6.45 ಗಂಟೆಯಿಂದ ದಿನಾಂಕ: 06.04.2022 ರಂದು ಬೆಳಿಗ್ಗೆ 09.00 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಪಿಕ್ಅಪ್ ವಾಹನದ ಅಂದಾಜು ಮೌಲ್ಯ ರೂ. 2,30,000/- ಹಾಗೂ ವೆಲ್ಡಿಂಗ್ ಮಿಷನ್ ನ ಅಂದಾಜು ಮೌಲ್ಯ ರೂ 5000/- ಆಗಿದ್ದು, ಒಟ್ಟು ಮೌಲ್ಯ ರೂ. 2,35,000/- ಆಗಬಹುದು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 38/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ವಿಟ್ಲ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆ ರವರು ದಿನಾಂಕ;06-04-2022 ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕೊಡಾಜೆ ಎಂಬಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಉಲಾಯಿ-ಪಿದಾಯಿ ಆಟವಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ 1.) ಯೋಗೀಶ್ 2.) ಮಹಮ್ಮದ್ ಶರೀಫ್ 3.) ಬಾಬು @ ಯಾದವ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಓಡಿ ತಪ್ಪಿಸಿದ 3 ಜನರ ಹೆಸರು ತಿಳಿಯಲಾಗಿ ಕಿಶೋರ್ ಕೊಡಾಜೆ,ರವಿ ಕೊಡಾಜೆ, ಜಗದೀಶ್ ಏಮಾಜೆ, ಎಂಬುದಾಗಿ ತಿಳಿದಿರುತ್ತದೆ. ಸದ್ರಿ ಇಸ್ಪೀಟ್‌ನ ಉಲಾಯಿ-ಪಿದಾಯಿ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ 1370/-ರೂ ಹಾಗೂ ವಿವಿಧ ಜಾತಿಯ ಇಸ್ಪೀಟ್ ಎಲೆಗಳು -52 ಅಂದಾಜು ಮೌಲ್ಯ -10 ರೂ, ನೆಲಕ್ಕೆ ಹಾಸಿದ ಹಳೆ ಪೇಪರ -01, ಆಗಿರುತ್ತದೆ ಸದ್ರಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 59/2022 ಕಲಂ:87 ಕೆಪಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕುಮಾರಿ ಅಕ್ಷತಾ ಪ್ರಾಯ; 20 ವರ್ಷ ತಂದೆ; ರಾಮ ನಾಯ್ಕ ವಾಸ; ಶಕ್ತಿನಗರ ಮನೆ ಕುವೆಟ್ಟು ಗ್ರಾಮ ಬೆಳ್ತಂಗಡಿ ತಾಲೂಕು. ರವರ ತಂದೆ ರಾಮ ನಾಯ್ಕ ಪ್ರಾಯ ;59 ವರ್ಷರವರು ಕೂಲಿ ಕೆಲಸ ಮಾಡಿಕೊಂಡಿದ್ದು ಕಳೆದ ಜನವರಿ ತಿಂಗಳಲ್ಲಿ ಕೃಷಿ ಮಾಡುವ ಉದ್ದೇಶದಿಂದ ತನ್ನ ಜಾಗದಲ್ಲಿದ್ದ ಕಾಟು ಮರಗಳನ್ನು ಕಡಿದ ವಿಚಾರದಲ್ಲಿ ಅರಣ್ಯ ಇಲಾಖೆಯ ಸಂಧ್ಯಾ ಮೇಡಂ ರವರು ಪಿರ್ಯಾದಿದಾರರ ತಂದೆಯು ಕಡಿಸಿದ ಮರಕ್ಕೆ ಸೀಲು ಹಾಕಿ ಕೇಸು ಹಾಕುವುದಾಗಿ ಹೇಳಿ ಹೋಗಿರುವ ವಿಚಾರದಲ್ಲಿ ಬೇಸರದಿಂದ ಇದ್ದು ಸರಿಯಾಗಿ ಆಹಾರ ಪದಾರ್ಥ ಸೇವನೆ ಮಾಡದೇ ಇದ್ದವರು ದಿನಾಂಕ 31.03.2022ರಂದು ಅಸ್ವಸ್ಥಗೊಂಡು ಕುಸಿದು ಬಿದ್ದವರನ್ನು ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ 05.04.2022ರಂದು ರಾತ್ರಿ 08.47 ಗಂಟೆ ಸಮಯಕ್ಕೆ ಚಿಕಿತ್ಸೆ ಪಲಕಾರಿಯಾಗದೇ ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ: 14/2022 ಕಲಂ:174 (3) (IV) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಘ್ನೇ಼ಶ ಪ್ರಾಯ:45 ವರ್ಷ ತಂದೆ: ಜನಾರ್ಧನ ವಾಸ; ನೇರೋಳ ಪಲ್ಕೆ ಕನ್ಯಾಡಿ-2 ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಾಹಿತಿ ಕಛೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ:06-04-2022 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾದುದಾರರು ಕಛೇರಿಯಲ್ಲಿ ಇರುವ ಸಮಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮುಖ್ಯದ್ವಾರದ ಬಳಿ ಇರುವ ಖಾಸಗಿ ಶೌಚಾಲಯದ ಬಳಿ ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಯಾರೋ ಯಾತ್ರಾರ್ಥಿಗಳು ತಿಳಿಸಿದ ಮೇರೆಗೆ ಪಿರ್ಯಾದುದಾರರು ಅಲ್ಲಿಗೆ ಹೋಗಿ ನೋಡಿದಾಗ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಅಂಗಾತನೆ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮೃತ ಪಟ್ಟಿರುವುದು ಕಂಡುಬಂದಿದ್ದು ಆತನ ಹೆಸರು ವಿಳಾಸದ ಬಗ್ಗೆ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಮೃತನು ಮಲಗಿದಲ್ಲೇ ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 19/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.