ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವರ್ಕಿ ಇ ಪಿ ಪ್ರಾಯ 56 ವರ್ಷ ತಂದೆ ಕೆ ಪಿ ಪೈಲಿ,  ವಾಸ: ಎಡಪ್ಪಾಟ್‌ ಮನೆ,  ಶಿರಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ: 04-06-2021ರಂದು  ಕಡಬ ತಾಲೂಕು ಶಿರಾಡಿ ಗ್ರಾಮ ಪೇರಮಜಲು ಎಂಬಲ್ಲಿ ಪಿರ್ಯಾದಿದಾರರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೇರಮಜಲು ಕಡೆಯಿಂಡ ಅಡ್ಡಹೊಳೆ ಕಡೆಗೆ ದ್ಚಿಚಕ್ರ ವಾಹನ ಕೆಎ:21ವೈ7626ನೇದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ದ್ಚಿಚಕ್ರ ವಾಹನವು ಪಿರ್ಯಾದಿದಾರರ ಎಡಕಾಲಿನ ಮೇಲೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕಾಲಿಗೆ ಗುದ್ದಿದ  ನಮೂನೆಯ ಗಾಯವುಂಟಾಗಿದ್ದು ಪ್ರಸ್ತುತ ಪಿರ್ಯಾದಿದಾರರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 50/2021  ಕಲಂ  279 337  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಾಫರ್ ಕೆ ಪ್ರಾಯ 34 ವರ್ಷ ತಂದೆ: ಮಹಮ್ಮದ್ ವಾಸ: ಕೋಡಿಯಡ್ಕ ಮನೆ, ಕರ್ನೂರು ಅಂಚೆ ನೆಟ್ಟಣಿಗೆ ಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 06.06.2021 ರಂದು ಸುಮಾರು 10.30 ಗಂಟೆ ಸಮಯಕ್ಕೆ ಆಶ್ರಫ್ ನು ಪಿರ್ಯಾದಿದಾರರ ಮಾವ ಅಬ್ದುಲ್ ಖಾದರ್‌ರವರಿಗೆ ಸೇರಿದ ಕುಮ್ಕಿ ಸ್ಥಳದಲ್ಲಿ ಅಗಳು ತೆಗೆಯಲು ಬಂದ ಬಗ್ಗೆ ಪಿರ್ಯಾದಿದಾರರು ಕೇಳಬೇಕೆನ್ನುವಷ್ಟರಲ್ಲಿ ಆಶ್ರಫನು ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರಿಗೆ ಕಡಿಯಲು ಬೀಸಿದಾಗ ಪಕ್ಕದಲ್ಲಿದ್ದ ಗಿಡವು ತಡೆದು ಕತ್ತಿಯು ಪಿರ್ಯಾದಿದಾರರ ಎಡಬದಿ ಭುಜಕ್ಕೆ ತಾಗಿ ಗಾಯವಾಗಿದ್ದು, ಪಿರ್ಯಾದಿದಾರರು ರಕ್ಷಣೆಗಾಗಿ ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಬೀಸಿದಾಗ ಆಶ್ರಫ್‌ಗೆ ತಾಗಿ ಗಾಯವಾಗಿದ್ದು, ಆಶ್ರಫ್‌ ನೊಂದಿಗೆ ಇದ್ದ ಮಿಶ್ರಿಯಾ ಕೂಡಾ ಒಂದು ಮರದ ದೊಣ್ಣೆಯಿಂದ ಪಿರ್ಯಾದಿದಾರರಿಗೆ ದೊಣ್ಣೆಯಿಂದ ಹೊಡೆದಾಗ ಪಿರ್ಯಾದಿದಾರರು ಕೈಯನ್ನು ಅಡ್ಡವಾಗಿ ಹಿಡಿದಿದ್ದು, ಗಲಾಟೆಯನ್ನು ನೋಡಿ ನೆರೆಯ ರಫೀಕ್ ತಾಯಿ ಆಯಿಷಾ ಅತ್ತೆಯವರಾದ ಅಮೀನಾ ಮುಂತಾದವರು ಬಂದು ಜಗಳವನ್ನು ಬಿಡಿಸಿದ್ದು ಚಿಕಿತ್ಸೆ ಬಗ್ಗೆ ರಫೀಕ್‌ರವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಆ.ಕ್ರ 48/21 ಕಲಂ: 324 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ  06.06.2021 ರಂದು ಪುತ್ತೂರು ಗ್ರಾಮಾಂತರ ಆ.ಕ್ರ 47/21 ಕಲಂ: 324,354  ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಾಜಿ ತೋಮಸ್, ಪ್ರಾಯ:46ವರ್ಷ ತಂದೆ; ಕೆ.ಜೆ ಜೋಸೆಪ್  ವಾಸ;ಕೊಲಂಕೋಯಿ ಮನೆ , ಕೊಯ್ಯೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರ ಮಗ ಸಿಬಿನ್ ತೋಮಸ್ (19 ವರ್ಷ) ಎಂಬವರು ಅವರ ಚಿಕ್ಕಮ್ಮನ ಮನೆಯಾದ ಬೆಳ್ತಂಗಡಿ ತಾಲೂಕು ಕಳಂಜ ಗ್ರಾಮದ ಮಾಣಿಗೆರೆ ಎಂಬಲ್ಲಿಗೆ ಹೋಗಿದ್ದು, ದಿನಾಂಕ: 06-06-2021 ರಂದು ರೋಹಿ ಎಂಬವರು ದೂರವಾಣಿ ಕರೆ ಮಾಡಿ ಮಾಣಿಗೆರೆಗೆ ಬರಲು ಹೇಳಿದಂತೆ ಫಿರ್ಯಾದುದಾರರು ಮಾಣಿಗೆರೆ ಬಂದಾಗ ರೋಹಿಯವರು ತನ್ನ ಮಕ್ಕಳೊಂದಿಗೆ ಸಿಬಿನ್‌ ತೋಮಸ್‌ನನ್ನು ಕರೆದುಕೊಂಡು ಮಾಣಿಗೆರೆಯ ನೆರಿಯಾ ಹೊಳೆಗೆ ಸ್ನಾನಕ್ಕೆಂದು ಬಂದಿದ್ದು, ಸಿಬಿನ್ ತೋಮಸ್‌ನು ಸ್ನಾನ ಮಾಡುತ್ತಾ ಆಯತಪ್ಪಿ ಆಳ ತಿಳಿಯದೇ ನೀರಿನಲ್ಲಿ ಮುಳುಗಿ ಹೋಗಿದ್ದು, ನೆರೆಯವರನ್ನು ಕರೆದು ವಿಚಾರ ತಿಳಿಸಿ ಹುಡುಕಾಡಿದಾಗ ಸಿಬಿನ್‌ ತೋಮಸ್‌ನ ಮೃತದೇಹವು ಮದ್ಯಾಹ್ನ 3-45 ಗಂಟೆಗೆ ಸಿಕ್ಕಿರುತ್ತದೆ. ಎಂಬುವುದಾಗಿ ತಿಳಿಸಿದಂತೆ ಫಿರ್ಯಾದಿದಾರರ ಮಗನಿಗೆ ಈಜುಬಾರದೇ ಆಯ ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್ ನಂ:38/2021 ಕಲಂ:174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-06-2021 10:18 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080