ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಕಾಶ್ ಪಿ.ಎಸ್. ಪ್ರಾಯ:29 ವರ್ಷ, ತಂದೆ: ಸೂರಪ್ಪ ಗೌಡ  ವಾಸ: ಪೊಂಬೋಳಿ   ಮನೆ,  ಬಿಳಿನೆಲೆ  ಗ್ರಾಮ ಮತ್ತು ನೆಟ್ಟಣ  ಅಂಚೆ,ಕಡಬ ತಾಲೂಕು ರವರು ದಿನಾಂಕ:06.06.2022 ರಂದು ಮದ್ಯಾಹ್ನ ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬ ಚೇರು ಎಂಬಲ್ಲಿ ಬಿಳಿನೆಲೆಯಿಂದ ಗುಂಡ್ಯ ಕಡೆಗೆ ತನ್ನ ಬಾಬ್ತು ಮೋಟಾರ್‌ ಸೈಕಲ್‌ನಲ್ಲಿ ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತಿದ್ದಾಗ ಎದುರಿನಿಂದ ಅಂದರೆ ಗುಂಡ್ಯ ಕಡೆಯಿಂದ ಕಾರು ವಾಹನವನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿರುವ ಸೇತುವೆಯ ತಡೆಗೋಡೆಗೆ ಗುದ್ದಿದ ರಭಸಕ್ಕೆ ಕಾರು ರಸ್ತೆಯ ಮದ್ಯೆ ಬಂದು ನಿಂತಿದ್ದನ್ನು ನೋಡಿದ ಪಿರ್ಯಾದುದಾರರು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ KA-41 MB-7975ನೇ ಹುಂಡೈ I20 ಕಾರು ವಾಹನವಾಗಿದ್ದು ಸದ್ರಿ ಕಾರಿನ  ಎದುರು ಸಂಪೂರ್ಣ ಜಖಂಗೊಂಡಿರುತ್ತದೆ ಕಾರಿನ ಒಳಗೆ ಕಾರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವರ ತಲೆಗೆ ಗಂಭಿರ ಗಾಯವಾಗಿ ರಕ್ತಸ್ರಾವವಾಗಿರುತ್ತದೆ. ಹಾಗೂ ಕಾರು ಚಾಲಕ ಮತ್ತು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ 4 ಜನ ಪ್ರಯಾಣಿಕರಿಗೆ ಹಾಗೂ ಕಾರಿನಲ್ಲಿದ್ದ ಒಂದು ಸಣ್ಣ ಮಗುವಿಗೂ ರಕ್ತಗಾಯವಾಗಿರುತ್ತದೆ. ತಕ್ಷಣ ಪಿರ್ಯಾದುದಾರರು ಮತ್ತು ಸಾರ್ವಜನಿಕರು ಕಾರು ಚಾಲಕನ ಪಕ್ಕದ ಸೀಟಿನಲ್ಲಿ ಗಂಬೀರ ಗಾಯಗೊಂಡು ಕುಳಿತಿದ್ದ ವ್ಯಕ್ತಿಯನ್ನು ಕಾರಿನಿಂದ ಇಳಿಸಿ ಆತನಿಗೆ ತಲೆಯಲ್ಲಿ ರಕ್ತಸ್ರಾವವಾಗುತ್ತಿದ್ದರಿಂದ ಅಂಬ್ಯಲೆನ್ಸ್ ವಾಹನದಲ್ಲಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟು ಕಾರಿನಲ್ಲಿದ್ದ ಉಳಿದ ಗಾಯಾಳುಗಳನ್ನು ಸ್ಥಳಕ್ಕೆ ಬಂದ ಇನ್ನೋಂದು 108 ಅಂಬ್ಯಲೆನ್ಸ್ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಸುಬ್ರಹ್ಮಣ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದ ಗಾಯಾಳುವನ್ನು ಅಲ್ಲಿನ ವೈದ್ಯರು ಪರೀಕ್ಷೀಸಿ ಕಡಬ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಆತನು ಕಡಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆತನ ಹೆಸರು ನಾಗೇಶ್‌ ಎಂಬುದಾಗಿ ತಿಳಿದಿರುತ್ತದೆ. ಹಾಗೂ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಗಾಯಾಳುಗಳ ಪೈಕಿ ಕುಮಾರಿ ತೇಜಸ್ವಿನಿ ಎಂಬವರು ಸಹ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಉಳಿದ ಗಾಯಾಳುಗಳಾದ ರವಿ, ರಂಜಿತ್, ರಜನಿ, ಹಾಗೂ ಮಕ್ಕಳಾದ ಅಚಿಂತ್ಯ ಹಾಗೂ ಒಂದು ಸಣ್ಣ ಮಗು ಗಾಯಗೊಂಡು ಚಿಕಿತ್ಸೆಯಲ್ಲಿರುವುದಾಗಿರುತ್ತದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 54/2022 ಕಲಂ: 279.337.338.304(A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು, ಪುಂಜಾಲಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 06.06.2022 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಇರುವ  ಸಮಯ  ದೇವಸ್ಯಮುಡೂರು ಕಡೆಯಿಂದ  ಕಕ್ಯೆಪದವು ಕಡೆಗೆ ನಸು ನೀಲಿ ಬಣ್ಣದ ಮಹೀಂದ್ರ ಜೀತೋ ವಾಹನದಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ದನವನ್ನು ಸಾಗಾಟ ಮಾಡುತ್ತಿದ್ದಾರೆಂದು  ಪಿರ್ಯಾದಿದಾರರಿಗೆ ಬಂದ ಮಾಹಿತಿಯಂತೆ, ಬಂಟ್ವಾಳ ತಾಲೂಕು ಉಳಿ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಾಸ್ಥಾನದ ಬಳಿ ತಲುಪುವಾಗ ಕಕ್ಯೆಪದವು ಕಡೆಯಿಂದ  ಬರುತ್ತಿದ್ದ  ಮಹೇಂದ್ರ ಜೀತೋ ನಂಬ್ರ ಕೆಎ 19 ಎಸಿ 1851ನೇದನ್ನು ನಿಲ್ಲಿಸಿದಾಗ ಆರೋಪಿಯು ಇಳಿದು ಪರಾರಿಯಾಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ದನವನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡು ವಿಚಾರಿಸಸಲಾಗಿ ಆರೋಪಿಯಲ್ಲಿ ಯಾವುದೇ ದಾಖಲೆಗಳು ಇಲ್ಲದ ಕಾರಣ ಆರೋಪಿಯನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ವಾಹನ ಹಾಗೂ ಕಪ್ಪು ಮತ್ತು ಕಂದು ಬಣ್ಣದ ದನವನ್ನು ಸ್ವಾದೀನಪಡಿಸಿಕೊಂಡಿದ್ದು, ಸ್ವಾದಿಪಡಿಸಿಕೊಂಡ  ದನದ ಅಂದಾಜು ಮೌಲ್ಯ ರೂ 3000 ಮತ್ತು ವಾಹನದ ಅಂದಾಜು ಮೌಲ್ಯ ರೂ 100000 ರೂ ಆಗಬಹುದು  ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 34/2022 ಕಲಂ: 5, 7, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 & ಕಲಂ: 11(1)(ಡಿ) ಪ್ರಾಣಿ ಹಿಂಸೆ ತಡೆ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಕಾಯ್ದೆ 1960 & ಕಲಂ: 66 ಎಂ ವಿ  ಕಾಯ್ದೆ. ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪಿ ಸುಬ್ರಹ್ಮಣ್ಯ ಭಟ್ ಪ್ರಾಯ 47 ವರ್ಷ ತಂದೆ: ಮಹಾಲಿಂಗೇಶ್ವರ ಭಟ್ ನಂದಗೋಕುಲ ನೂಜಾಲ ಮನೆ ನೆಲ್ಲೂರು ಕೆಮ್ರಾಜೆ ಗ್ರಾಮ ಸುಳ್ಯ ತಾಲೂಕು  ರವರ ತಂದೆ  ಮಹಾಲಿಂಗೇಶ್ವರ 76 ವರ್ಷ ಪ್ರಾಯ ರವರು ಸುಮಾರು 15 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಒಂದು ತಿಂಗಳ ಹಿಂದೆ ಹರ್ನಿಯಾ ಕಾಯಿಲೆಯ ಶಸ್ತ್ರ ಚಿಕಿತ್ಸೆ ಮಾಡಿಸಿ ಮನೆಯಲ್ಲಿ ಔಷಧೋಪಚಾರ ಮಾಡಿಸಿಕೊಳ್ಳುತ್ತಿದ್ದು, ದಿನಾಂಕ 05.06.2022 ರಂದು ರಾತ್ರಿ 10.00 ಗಂಟೆಗೆ ಊಟ ಮಾಡಿ ಮಲಗಿದ್ದು, ದಿನಾಂಕ 06.06.2022 ರಂದು ಬೆಳಿಗ್ಗೆ 05.30 ಗಂಟೆಗೆ ಘಾಟು ವಾಸನೆ ಬಂದಿದ್ದರಿಂದ ಪಿರ್ಯಾದಿದಾರರು ಎದ್ದು ಮನೆಯ ಹೊರಗೆ ಬಂದು ನೋಡಿದಾಗ ಅಡಿಕೆ ಗೋಡೌನ್‌ನಿಂದ ಬೆಂಕಿ ಮತ್ತು ಹೊಗೆ ಬರುವುದು ಕಂಡು ಬಂದಿದ್ದು, ಮನೆಯವರೆಲ್ಲರೂ ಸೇರಿ ಬೆಂಕಿಯನ್ನು ಆರಿಸಿದ್ದು, ನಂತರ ಬೆಳಿಗ್ಗೆ 06.30 ಗಂಟೆಯಾದರೂ ತಂದೆ ಮಹಾಲಿಂಗೇಶ್ವರ ಭಟ್‌ರವರು ಎದ್ದು ಬಾರದೇ ಇರುವುದನ್ನು ಕಂಡು ಕೋಣೇಯಲ್ಲಿ ನೋಡಿದಾಗ ತಂದೆ ಕಾಣಿಸದೇ ಇದ್ದು ಮನೆಯ ಸುತ್ತಮುತ್ತ ತೋಟದಲ್ಲಿ  ಹುಡುಕಿದರೂ ಕಾಣಿಸದೇ ಇದ್ದು, ನಂತರ ಪಿರ್ಯಾದಿದಾರರು ಮನೆಯ ಖಾಯಂ ಕೆಲಸದವರನ್ನು ಕರೆಸಿ ಬೆಂಕಿ ಆರಿಸುತ್ತಿದ್ದು, ಗೋಡಾನ್‌ನ ಸಾಮಾಗ್ರಿಗಳನ್ನು ಹೊರಗೆ ತೆಗೆಯುವ ಸಮಯ ತಂದೆಯವರ ಅರೆ ಬೆಂದ ಮೃತದೇಹ ಕಂಡು ಬಂದಿದ್ದು, ತಂದೆಯವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದುದ್ದಲ್ಲದೇ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗೋಡೌನ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಅರ್ ನಂಬ್ರ 23/22 ಕಲಂ 174 (3)(iv) ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಓಲ್ವಿನ್ ಡಿ ಪ್ರಾಯ 31 ವರ್ಷ ತಂದೆ:ದೇವಸ್ಯ ವಾಸ:ಶೆರ್ವತಡ್ಕ್ ಮನೆ ಶಿರಾಡಿ ಗ್ರಾಮ ಕಡಬ ತಾಲೂಕು ರವರ ತಂದೆ ದೇವಸ್ಯ ಎಂಬವರು ಸುಮಾರು ಎಂಟು ವರ್ಷಗಳಿಂದ ವೇಣೂರು ಎಂಬಲ್ಲಿ ಮ್ಯಾಥ್ಯು ಎಂಬವರ ತೋಟದ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಎರಡು ದಿನಗಳ ಹಿಂದೆ ಪಿರ್ಯಾದಿದಾರರ ಮನೆಯಾದ  ಕಡಬ ತಾಲೂಕು ಶಿರಾಡಿ ಗ್ರಾಮದ ಶೆರ್ವತಡ್ಕ್ ಎಂಬಲ್ಲಿಗೆ  ಬಂದಿದ್ದು, ದಿನಾಂಕ:03-06-2022 ರಂದು ಬೆಳಿಗ್ಗೆ  09.00 ಗಂಟೆಯ ಸಮಯಕ್ಕೆ ಪಿರ್ಯಾದುದಾರರ  ಮನೆಯಲ್ಲಿ ತೆಂಗಿನ ಬುಡಕ್ಕೆ ಸೊಪ್ಪು ಹಾಕುವುದಕೋಸ್ಕರ ತಂದೆಯು ಸೊಪ್ಪು ಕಡಿಯುವುದಕ್ಕಾಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ  ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಚಿಕಿತ್ಸೆಯನ್ನು ಮಾಡಿರುವುದಿಲ್ಲ. ದಿನಾಂಕ: 05-06-2022 ರಂದು  ಬೆಳಿಗ್ಗೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಯ ಬಗ್ಗೆ  ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಆದರೆ ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ: 05-06-2022 ರಂದು ಸಂಜೆ 5.40 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 11/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 07-06-2022 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080