ಕಳವು ಪ್ರಕರಣ: ೦2
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮುಹಿಯದ್ದೀನ್ ಅನಿಶ್, ಪ್ರಾಯ: 23 ವರ್ಷ, ತಂದೆ: ಹುಸೈನಾರ್.ಎಂ, ವಾಸ: ಸಂತೋಷ್ ನಗರ ಮನೆ, ಕೆಯ್ಯೂರು ಗ್ರಾಮ, ಪುತ್ತೂರು ತಾಲೂಕು ರವರ ತಂದೆ ತಾಯಿ ದಿನಾಂಕ 05.07.2021 ರಂದು ಮಂಗಳೂರಿಗೆ ಹೋಗಿದ್ದು, ಫಿರ್ಯಾದಿದಾರರು ಮತ್ತು ಅವರ ಗೆಳೆಯ ಸಮೀರ್ರವರು ಮನೆಯಲ್ಲಿದ್ದು ರಾತ್ರಿ ಗಂಟೆಗೆ ಊಟ ಮಾಡಿ ಮಲಗಿದ್ದು, ಫಿರ್ಯಾದಿದಾರರ ಬಾಬ್ತು KA-05-KQ-4766 ನೇ ನೀಲಿ ಮತ್ತು ಬಿಳಿ ಬಣ್ಣದ ಡಿಯೋ ಸ್ಕೂಟರನ್ನು ಫಿರ್ಯಾದಿದಾರರ ಮನೆಯ ಬಲ ಬದಿಯಲ್ಲಿರುವ ತೆರೆದ ಶೆಡ್ನಲ್ಲಿ ನಿಲ್ಲಿಸಿದ್ದು, ದಿನಾಂಕ 06.07.2021ರಂದು ಬೆಳಿಗ್ಗೆ ಸಮಯ ಸುಮಾರು 6.30 ಗಂಟೆಗೆ ಫಿರ್ಯಾದಿದಾರರು ನೋಡಿದಾಗ ಶೆಡ್ನಲ್ಲಿ ನಿಲ್ಲಿಸಿದ್ದ ಫಿರ್ಯಾದಿದಾರರ ಡಿಯೋ ಸ್ಕೂಟರ್ ಇಲ್ಲದೇ ಇದ್ದು, ಮನೆಯ ಸುತ್ತ ಮುತ್ತ ಹಾಗೂ ಆಸುಪಾಸಿನಲ್ಲಿ ಹುಡುಕಾಡಿಯೂ ಸ್ಕೂಟರ್ ಕಾಣಿಸದೇ ಇದ್ದು, ಸದ್ರಿ ಸ್ಕೂಟರನ್ನು ಯಾರೋ ಕಳ್ಳರು ದಿನಾಂಕ 05.07.2021 ರಂದು ರಾತ್ರಿ 11.45 ಗಂಟೆಯಿಂದ ದಿನಾಂಕ 06.07.2021 ರಂದು ಬೆಳಿಗ್ಗೆ 6.30 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಸ್ಕೂಟರಿನ ಅಂದಾಜು ಮೌಲ್ಯ ಸುಮಾರು ರೂ 40,000/- ಆಗಬಹುದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 58/21 ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಉಮ್ಮರ್ ಮಾಡಾವು ಪ್ರಾಯ 36 ವರ್ಷ ತಂದೆ: ಅಬ್ದುಲ್ ಖಾದರ್ ವಾಸ: ಎಂ ಯು ಹೌಸ್ ಮಾಡಾವು ಕೆಯ್ಯೂರು ಗ್ರಾಮ ಪುತ್ತೂರು ತಾಲೂಕು ರವರು ಮತ್ತು ಮನೆಯವರು ದಿನಾಂಕ 05.07.2021 ರಂದು ರಾತ್ರಿ 11.30 ಗಂಟೆಗೆ ಮನೆಯಲ್ಲಿ ಊಟ ಮಾಡಿ ಪಿರ್ಯಾದಿದಾರರು ಮತ್ತು ಪತ್ನಿ ಒಂದು ರೂಮಿನಲ್ಲಿ ಹಾಗೂ ತಾಯಿ ಮತ್ತು ಪಿರ್ಯಾದಿದಾರರ ಮಗಳು ಇನ್ನೊಂದು ರೂಮಿನಲ್ಲಿ ಮಲಗಿದ್ದು, ಪಿರ್ಯಾದಿದಾರರ ಅಣ್ಣ ಮಲಗುವ ರೂಮು ಖಾಲಿಯಾಗಿದ್ದು, ದಿನಾಂಕ 06.07.2021 ರಂದು ಬೆಳಗ್ಗಿನ ಜಾವ 04.15 ಗಂಟೆಗೆ ಪಿರ್ಯಾದಿದಾರರು ಎದ್ದು ಬೆಡ್ ರೂಮಿನಿಂದ ಹೊರಬಂದು ನೋಡಿದಾಗ ಮನೆಯ ಹಿಂಬಂದಿ ಬಾಗಿಲು ತೆರೆದಿರುವುದು ಕಂಡು ಬಂದಿದ್ದು, ನಂತರ ಲೈಟ್ ಹಾಕಿ ನೋಡಿದಾಗ ಪಿರ್ಯಾದಿದಾರರ ಅಣ್ಣನ ಬೆಡ್ ರೂಮಿನಲ್ಲಿದ್ದ ಕಪಾಟು ತೆರೆದಿದ್ದು ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದು, ಗ್ರೋದ್ರೇಜಿನ ಲಾಕರನ್ನು ಕೀ ಬಳಸಿ ತೆರದಿರುವುದು ಕಂಡು ಬಂದಿದ್ದು, ಮನೆಯವರೆಲ್ಲ ಎದ್ದು ಪರಿಶೀಲಿಸಿದಾಗ ಸುಮಾರು 04 ಗ್ರಾಂ ತೂಕದ ಮಗುವಿನ ಚಿನ್ನದ ಚೈನ್, 06 ಗ್ರಾಂ ತೂಕದ ಕಿವಿಯ ಬೆಂಡೋಲೆ, 05 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ಪಿರ್ಯಾದಿದಾರರ ತಾಯಿ ಜೊತೆ ಮಲಗಿದ್ದ ಮಗಳ ಕುತ್ತಿಗೆಯಲ್ಲಿದ್ದ ಸುಮಾರು 05 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಕಂಡುಬಂದಿದ್ದು, ಕಳವಾದ ಒಟ್ಟು 20 ಗ್ರಾಂ ಚಿನ್ನದ ಮೌಲ್ಯ ರೂ 80,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 59/21 ಕಲಂ: 457, 380 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ
ಜೀವಬೆದರಿಕೆ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಫಯಾಝ್ 20 ತಂದೆ: ಬಿ ಅಬ್ಬಾಸ್ ವಾಸ: ಮಾರನಡ್ಕ ಮನೆ ಬನ್ನೂರು ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 06-072021 ರಂದು ಪಿರ್ಯಾದಿದಾರರು ಮತ್ತು ಅವರ ಸ್ನೆಹಿತ ಮೊಹಮ್ಮದ್ ಝಿಯಾದ್ ರವರು ಜೈನರ ಗುರಿಯಲ್ಲಿರುವ ಅಂಗಡಿಯೊಂದಕ್ಕೆ ಸಾಮಾನು ತರಲು ಹೋದಾಗ ಅದೇ ಸಮಯ ಅಂಗಡಿಯಲ್ಲಿದ್ದ ಶರತ್ ಮತ್ತು ಅಭಿಜಿತ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ ಬೈದು ಪಿರ್ಯಾದಿದಾರರನ್ನು ಅಭಿಜಿತ್ ಎಂಬಾತನು ಕೈಯಿಂದ ದೂಡಿಹಾಕಿ ಶರತ್ ಎಂಬಾತನು ಆತನ ಮನೆಯಿಂದ ತಲವಾರನ್ನು ತಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಒಡ್ಡಿ ತಲವಾರು ಹಿಡಿದು ಓಡಿಸಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆ ಅಕ್ರ 54/2021 ಕಲಂ :341, 323, 504, 506 r/w 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 323, 498ಎ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪುರುಷೋತ್ತಮ ಪ್ರಾಯ: 45 ವರ್ಷ, ತಂದೆ ಬಾಬು ಮೂಲ್ಯ, ವಾಸ: ನಡಿಬೆಟ್ಟು ಮನೆ, ಪಾರೆಂಕಿ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಾಯಿ ಭವಾನಿ, ಪ್ರಾಯ: 65 ವರ್ಷ ಎಂಬವರು ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ನಡಿಬೆಟ್ಟು ಎಂಬಲ್ಲಿದ್ದ ಸಮಯ ಸಂಜೆ ಸುಮಾರು 6 ಗಂಟೆಗೆ ಯಾವುದನ್ನೋ ಸೇವಿಸಿ ಅಸ್ವಸ್ಥರಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ. ಯು ಡಿ ಆರ್ ನಂಬ್ರ 06/2021 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೆ ಮೋನಪ್ಪ ಗೌಡ ಪ್ರಾಯ:50 ವರ್ಷ ,ತಂದೆ: ರಾಮಯ್ಯ ಗೌಡ ವಾಸ: ಚಾರ್ಮತ ,ಕುತ್ಯಾಳ ಮನೆ ,ನಾಲ್ಕೂರು ಗ್ರಾಮ ಸುಳ್ಯ ತಾಲೂಕು .ದ.ಕ ಜಿಲ್ಲೆ ರವರ ತಂದೆ, ತಾಯಿ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಚಾರ್ಮತ ಕುತ್ಯಾಳ ಮನೆ ಎಂಬಲ್ಲಿರುವ ಆದಿಮನೆಯಲ್ಲಿ ವಾಸವಾಗಿದ್ದು, ಅದೇ ಮನೆಯಲ್ಲಿ ಪ್ರತ್ಯೇಕವಾಗಿ ಪಿರ್ಯಾದಿಯ ತಮ್ಮ ಮತ್ತು ತಮ್ಮನ ಹೆಂಡತಿ ವಾಸವಾಗಿರುವುದಾಗಿದೆ. ದಿನಾಂಕ: 05-07-2021 ರಂದು ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರ ತಂದೆ, ತಾಯಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ: 06-07-2021 ರಂದು ಪಿರ್ಯಾದಿಯ ತಾಯಿ ಎದ್ದಾಗ ಪಿರ್ಯಾದಿದಾರರ ತಂದೆ ರಾಮಯ್ಯ ಗೌಡ, ಪ್ರಾಯ: 75 ವರ್ಷ ಎಂಬವರು ಅಸ್ವಸ್ಥಗೊಂಡಿರುವುದನ್ನು ಕಂಡು ಪಿರ್ಯಾದಿಯ ತಾಯಿ ಪಿರ್ಯಾದಿಯ ತಮ್ಮ ವಿಶ್ವನಾಥನಿಗೆ ತಿಳಿಸಿದ್ದು, ಬಳಿಕ ವಿಶ್ವನಾಥನು ತಂದೆಯವರು ಮನೆಯಲ್ಲಿ ತಂದಿರಿಸಿದ್ದ ಮೈಲುತುತ್ತು ಕೀಟನಾಶಕವನ್ನು ಸೇವಿಸಿರುವುದನ್ನು ಕಂಡು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು ತಕ್ಷಣ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸೇವಾಭಾರತಿ ಆಂಬುಲೆನ್ಸ್ ನ್ನು ಸ್ಥಳಕ್ಕೆ ತರಿಸಿಕೊಂಡು ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಂತೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಮೃತ ರಾಮಯ್ಯಗೌಡರಿಗೆ ಸುಮಾರು 3 ವರ್ಷಗಳ ಹಿಂದೆ ತಲೆಯಲ್ಲಿ ಶಸ್ತ್ರ ಚಿಕಿತ್ಸೆ ಆಗಿದ್ದು, ಕಳೆದ ಒಂದು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು. ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ .ಈ ಬಗ್ಗೆ: ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯು.ಡಿ.ಆರ್ ನಂಬ್ರ 09-2021 ಕಲಂ: 174 ಸಿಆರ್ ಪಿ ಸಿ . ಯಂತೆ ಪ್ರಕರಣ ದಾಖಲಾಗಿರುತ್ತದೆ.