ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಮ್ಮರ್ ಮಕ್ತಿಯಾರ್ ಪ್ರಾಯ 32ವರ್ಷ ತಂದೆ: ಮಹಮ್ಮದ್ ಇಸ್ಮಾಯಿಲ್ ವಾಸ:  ಮನೆ ನಂ 4-32 ಎಫ್ ಸೈಟ್ ನಂ 26 ಸರ್ವೆ ನಂ 70, 4ನೇ ಬ್ಲಾಕ್ ಕರ್ನಾಟಕ ಬ್ಯಾಂಕ್ ಹತ್ತಿರ , ಕೃಷ್ಣಾಪುರ,  ಮಂಗಳೂರು ತಾಲೂಕು ರವರು ತನ್ನ ಸಂಬಂಧಿಕರ ಮನೆಯಾದ ಸಕಲೇಶಪುರಕ್ಕೆ ಮದುವೆ ಕಾರ್ಯಕ್ರಮಕ್ಕೆ ತನ್ನ ಮಕ್ಕಳು ಹಾಗೂ ಕುಟುಂಬದವರ ಜೊತೆಗೆ ಒಟ್ಟು 03 ಕಾರಿನಲ್ಲಿ ಹೋದವರು ಮದುವೆ ಕಾರ್ಯಕ್ರಮ ಮುಗಿಸಿ ದಿನಾಂಕ 05-07-2022 ರಂದು ಬರುತ್ತಿರುವಾಗ ಕಾರು ನಂಬ್ರ ಕೆಎ 04 ಎಮ್.ಎಮ್ 1402 ನೇ ಕಾರಿಗೆ  ಇಕ್ಬಾಲ್ ಮಂಝಿಲ್ ರವರು ಚಾಲಕರಾಗಿದ್ದು, ಫಿರ್ಯಾದಿದಾರರ ಮಕ್ಕಳಾದ ಮಹಮ್ಮದ್ ಫೈಜ್, ಮಹಮ್ಮದ್ ಆತೀಫ್ ಹಾಗೂ ನಿಹಾಲ್ ಪ್ರಯಾಣಿಕರಾಗಿದ್ದು, ಫಿಯಾದಿದಾರರ ಕಾರಿನ ಎದುರಿನಿಂದ ರಾ ಹೆ 75ರಲ್ಲಿ ಹೋಗುತ್ತಿದ್ದಾಗ  ಸಂಜೆ 6.00 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಸಮೀಪ ತಲುಪಿದಾಗ ಎದುರಿನಿಂದ ಬರುತ್ತಿದ್ದ ಅಂದರೆ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎ 57 ಎಫ್ 4451 ನೇ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕೆಎ 04 ಎಮ್.ಎಮ್ 1402 ನೇ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂದು  ಕಾರಿನ ಚಾಲಕ  ಇಕ್ಬಾಲ್ ಮಂಝಿಲ್ ರವರಿಗೆ ಸೊಂಟಕ್ಕೆ ಮೂಳೆ ಮುರಿತದ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು, ಮಹಮ್ಮದ್ ಫೈಜ್, ಮಹಮ್ಮದ್ ಆತೀಫ್ ರವರಿಗೆ ಹಣೆಗೆ ಮತ್ತು ಕೈಗೆ ತರಚಿತ ಗಾಯವಾಗಿ ಗಾಯಾಳುಗಳು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 79/2022 ಕಲಂ: 279. 337. 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗಿರಿಜಾ (70) ಗಂಡ: ದಿ| ಲಿಂಗಪ್ಪ ಪೂಜಾರಿ, ಕರಾವಳಿ ಸೈಟ್‌, ಬೆಂಜನಪದವು, ಕಳ್ಳಿಗೆ ಗ್ರಾಮ, ಬಂಟ್ವಾಳ ತಾಲೂಕು ಎಂಬವರಿಗೆ 70 ವರ್ಷ ವಯಸ್ಸಾಗಿದ್ದು ಅವರು ಅವರ ಮಗನಾದ ಹರಿರಾಂ ಮತ್ತು ಸೊಸೆ ಪೂಜಾ ಎಂಬವರೊಂದಿಗೆ ವಾಸವಾಗಿದ್ದು, ಪಿರ್ಯಾದುದಾರರು  10-01-2020 ರಂದು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜಪದವು ಎಂಬಲ್ಲಿರುವ ಅವರ ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿದ್ದು ಅವರಿಗಾದ ಗಾಯಕ್ಕೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸಿರುವುದಿಲ್ಲ, ಬಿದ್ದು ಉಂಟಾದ ನೋವಿನಿಂದ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿ ಮಲಗುವಂತಾದ ಫಿರ್ಯಾದುದಾರರಿಗೆ ಯಾವುದೇ ಆರೈಕೆ ಮಾಡದೆ  ಅವರ ಮನೆಯ ಶೌಚಗೃಹದಲ್ಲಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿದ್ದುದಲ್ಲದೆ, ತುಳು ಭಾಷೆಯಲ್ಲಿ 'ಪರಬು ಸೈಪುನಿಲ ಇಜ್ಜಿ', ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ 'ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ' ಎಂದು ತುಳು ಭಾಷೆಯಲ್ಲಿ ಪಿರ್ಯಾದಿದಾರರ ಸೊಸೆಯು ಬೈಯುತ್ತಿದ್ದು ದಿನಾಂಕ 06-07-2022 ರಂದು ಹಿರಿಯ ನಾಗರಿಕ ಸಮಿತಿಗೆ ಮಾಹಿತಿ ತಿಳಿದು  ಅವರು ಪಿರ್ಯಾದುದಾರರನ್ನು ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ಧಾಖಲಿಸಿ ಸೂಕ್ತ ಚಿಕಿತ್ಸೆ ನೀಡಿರುವುದಾಗಿದೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ 68/2022 ಕಲಂ 336, 504 ಜೊತೆಗೆ 34 ಐಪಿಸಿ ಮತ್ತು ಕಲಂ 24 Maintenance and Welfare of Parents and Senior Citizens Act, 2007. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಬೈದ್  ಪ್ರಾಯ 29 ತಂದೆ;ಮಹಮ್ಮದ್  ವಾಸ; ಕಲ್ಲಾಜೆ ದಾಸರಕೋಡಿ  ಮನೆ,ಕಡೇಶಿವಾಲಯ ಗ್ರಾಮ  ಬಂಟ್ವಾಳ ತಾಲೂಕು ರವರ ತಮ್ಮ ನಜೀರ್ ಪ್ರಾಯ 21 ವರ್ಷ ಎಂಬವರು ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಕೊಡಾಜೆ ಪ್ಲಾಟ್‌ ಬಾಡಿಗೆಯ ಮನೆಯಲ್ಲಿ ದಿನಾಂಕ 06.07.2022 ರಂದು ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 18.00 ಗಂಟೆಯ ಮಧ್ಯದ ಅವದಿಯಲ್ಲಿ ಮಗು ಮಲಗುವ ಸೀರೆಯ ಜೋಕಾಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 27/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-07-2022 10:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080