ಅಪಘಾತ ಪ್ರಕರಣ: ೦2
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಧಾಕರ, ಪ್ರಾಯ 32 ವರ್ಷ, ತಂದೆ: ನಾರಾಯಣ ಪೂಜಾರಿ, ವಾಸ: ಕಡಂಬು ಮನೆ, ಪೆರ್ನೆ ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 06-08-2021 ರಂದು 14-00 ಗಂಟೆಗೆ ಆರೋಪಿ ಕಾರು ಚಾಲಕ ಪ್ರದೀಪ ಶೆಟ್ಟಿ ಎಂಬವರು ಅಮಲು ಪದಾರ್ಥವನ್ನು ಸೇವಿಸಿ KA-20-AA-4556 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜಲ್ಪಡ್ಪು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಉರ್ಲಾಂಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮಂಜಲ್ಪಡ್ಪು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-2840 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಕಾರು ಓವರಟೆಕ್ ಮಾಡಿ ಅಟೋರಿಕ್ಷಾದ ಮುಂದೆ ಹೋಗುತ್ತಿದ್ದ KA-21-P-8581 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ನಂತರ ಮುಂದಕ್ಕೆ ಹೋಗಿ ಅದರ ಮುಂದೆ ಹೋಗುತ್ತಿದ್ದ KA-21-P-572 ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ನಂತರ ಕಾರು ಯು ಟರ್ನ್ ಹೊಡೆದು ಪಿರ್ಯಾದುದಾರರ KA-21-B-2840 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಮತ್ತು KA-21-EB-3659 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ ಕಾರು ರಸ್ತೆ ಬದಿಗೆ ಜಾರಿ ನಿಂತಿರುತ್ತದೆ. ಈ ಅಪಘಾತದಲ್ಲಿ ಎಲ್ಲಾ ವಾಹನಗಳೂ ಜಖಂಗೊಂಡಿರುತ್ತವೆ. ಸ್ಕೂಟರ್ ಸವಾರೆ ಬಬಿತಾರವರಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಟೋರಿಕ್ಷಾದಲ್ಲಿದ್ದವರಿಗೆ ಮತ್ತು ಕಾರುಗಳಲ್ಲಿದ್ದವರಿಗೆ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 102/2021 ಕಲಂ: 279, 337 ಐಪಿಸಿ & 185 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹೆಚ್ ಎಂ ಮಂಜುನಾಥ ಪ್ರಾಯ 48 ವರ್ಷ, ತಂದೆ: ದಿ|| ಮುನಿಯಪ್ಪ,ವಾಸ: 70/6, 4ನೇ ಮೇನ್, ಶಾಕಾಂಬರಿನಗರ, ಬನಶಂಕರಿ ದೇವಸ್ಥಾನ ಎದುರು, ಜೆ ಪಿ ನಗರ, 1ನೇ ಸ್ಪೇಸ್, ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿ ಹೆಚ್ ಎಂ ಮಂಜುನಾಥ ಹಾಗೂ ಸ್ನೇಹಿತರಾದ ನಾಗರಾಜು ಅವರ ತಂದೆ ವೈ ಎಂ ರಾಜು ಎಂಬವರು ಸೇರಿಕೊಂಡು ಧರ್ಮಸ್ಥಳ ದೇವರ ಧರ್ಶನಕ್ಕೆ ಹೋಗುವರೇ ದಿನಾಂಕ 05-08-2021ರಂದು ಬೆಳಿಗ್ಗೆ 7.00 ಗಂಟೆಗೆ ನಾಗರಾಜುರವರ ಬಾಬ್ತು ಕೆಎ-05-ಎಂವಿ-1781ನೇ ಕಾರಿನಲ್ಲಿ ಪಿರ್ಯಾದಿ ಮತ್ತು ನಾಗರಾಜು, ವೈ ಎಂ ರಾಜು ಎಂಬವರು ಪ್ರಯಾಣಿಕಾಗಿ ಮುಭಾರಕ್ ಎಂಬವರು ಕಾರು ಚಾಲಕರಾಗಿ ಬೆಂಗಳೂರಿನಿಂದ ಚಲಾಯಿಸಿಕೊಂಡು ಹೊರಟು ಹಾಸನ ಸಕಲೇಶಪುರ ಸುಬ್ರಹ್ಮಣ್ಯ ಆಗಿ ಧರ್ಮಸ್ಥಳ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಾ ಮದ್ಯಾಹ್ನ ಸುಮಾರು 1.30 ಗಂಟೆಗೆ ಕಡಬ ತಾಲೂಕು, ಇಚಲಂಪಾಡಿ ಗ್ರಾಮದ ಆಲಂಗ ಎಂಬಲ್ಲಿಗೆ ತಲಪುತ್ತಿದ್ದಂತೆ ಕಾರಿನ ಚಾಲಕ ಮುಭಾರಕ್ ನು ಕಾರನ್ನು ಅಜಾಗರುಕತೆಯಿಂದ ಹಾಗೂ ತೀರಾ ನಿರ್ಲಕ್ಷತನದಿಂದ ಚಾಲಾಯಿಸಿದ ಪರಿಣಾಮ ಕಾರು ಒಂದು ಕಿರು ಸೇತುವೆಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿಯ ತಲೆಗೆ, ಮುಖಕ್ಕೆ ತರಚಿದ ರಕ್ತ ಗಾಯವಾಗಿದ್ದು, ವೈ ಎಂ ರಾಜು ಎಂಬವರಿಗೆ ಗದ್ದಕ್ಕೆ ಹಾಗೂ ಎರಡೂ ಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು, ನಾಗರಾಜು ಎಂಬವರಿಗೆ ಎಡ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದಲ್ಲದೇ ಚಾಲಕ ಮುಭಾರಕನ ಎದೆಗೆ ಗುದ್ದಿದ ಮತ್ತು ಕಾಲಿಗೆ ತರಚಿರ ಗಾಯಗಳಾದವರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 75/2021 ಕಲಂ 279 337 338 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹೈದರಾಲಿ (30) ತಂದೆ:ದಿ.ಹೆಚ್.ಮಹಮ್ಮದ್ ವಾಸ:ಹೇಡ್ಮೆ ಮನೆ, ಕಾಶಿಪಟ್ಣ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರು ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಪಕ್ಕಿದಕಲ ಸುರೇಶ್ ನಾಯ್ಕರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಬೆಳ್ತಂಗಡಿಯ ಸಂತೆಕಟ್ಟೆಯ ಎಂ ಹೆಚ್ ಪ್ಲವರ್ಸ್ ಅಂಗಡಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿರುವುದಾಗಿದೆ. ಫಿರ್ಯಾದಿದಾರರು ದಿನಾಂಕ:03.08.2021 ರಂದು ಬೆಳಿಗ್ಗೆ 08.30 ಗಂಟೆಗೆ ಸುಮಾರಿಗೆ ರೂ.4,00,000/-ವನ್ನು ಹೂ ಖರೀದಿ ಮಾಡುವ ಬಗ್ಗೆ ತನ್ನ ಮಲಗುವ ಕೋಣೆಯ ಕಪಾಟಿನ ಡ್ರವರ್ನಲ್ಲಿರಿಸಿ ಮನೆಗೆ ಬೀಗ ಹಾಕಿ ವ್ಯಾಪಾರಕ್ಕೆ ತೆರಳಿದ್ದರು. ಹಾಗೂ ವ್ಯಾಪಾರ ಮುಗಿಸಿ ಫಿರ್ಯಾದಿದಾರರು ತಮ್ಮ ಸ್ವಂತ ಮನೆಯಾದ ಕಾಶಿಪಟ್ಣಕ್ಕೆ ತೆರಳಿ ಅಲ್ಲಿಯೇ ಉಳಕೊಂಡಿದ್ದರು. ಹೀಗಿರುತ್ತಾ ದಿ:06.08.2021 ರಂದು ಬೆಳಿಗ್ಗೆ 04.15 ಗಂಟೆಗೆ ಫಿರ್ಯಾದಿದಾರರು ತಮ್ಮ ಬಾಡಿಗೆ ಮನೆಗೆ ಬಂದು ಬೀಗ ತೆಗೆದು ಒಳಗೆ ಹೋದಾಗ ಕೋಣೆಯ ಒಳಗಿದ್ದ ಕಪಾಟಿನ ಡ್ರವರ್ನ್ನು ಯಾರೋ ಕಳ್ಳರು ಯಾವುದೋ ಆಯುಧ ಉಪಯೋಗಿಸಿ ಬೀಗ ಸಮೇತ ಜಾರಿಸಿ ಅದರಲ್ಲಿದ್ದ ರೂ.4,00,000/-ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಅ.ಕ್ರ 64/2021 ಕಲಂ:454,457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಣೆ ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಫಾತಿಮಾ ಪ್ರಾಯ 34 ವರ್ಷ ಗಂಡ: ರಪೀಕ್ ಖಾನ್ ವಾಸ: ಮೇದರಬೆಟ್ಟು ಅಪಾರ್ಟ್ ಮೆಂಟ್ 34 ನೇ ನೆಕ್ಕಿಲಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು 2019ನೇ ಸಾಲಿನಲ್ಲಿ ನೆಕ್ಕಿಲಾಡಿ ಗ್ರಾಮದ ರಾಘವೇಂದ್ರ ಮಠದ ಬಳಿ ಇರುವ A to Z ಗ್ಯಾರೇಜ್ನ ಮಾಲಕ ಮೊಹಮ್ಮದ್ ರಪೀಕ್ ಖಾನ್ ಎಂಬಾತನನ್ನು ಮದುವೆಯಾಗಿದ್ದು ಮದುವೆಯಾದ ಬಳಿಕ 34ನೇ ನೆಕ್ಕಿಲಾಡಿ ಗ್ರಾಮದ ಮೆದರಬೆಟ್ಟು ಅಪಾರ್ಟ್ ಮೆಂಟ್ ನಲ್ಲಿ ಪಿರ್ಯಾದಿದಾರರ ಜೊತೆ ವಾಸವಾಗಿದ್ದವರು ಮೊಹಮ್ಮದ್ ರಪೀಕ್ ಖಾನ್ ರವರು ದಿನಾಂಕ: 12-07-2021 ರ 16.00ಗಂಟೆಗೆ ಬೆಂಗಳೂರಿನಿಂದ ವಾಹನದ ಬಿಡಿಬಾಗಗಳನ್ನು ತರಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟು ಹೋಗಿ ದಿನಾಂಕ:18-07-2021ರಂದು ರಾತ್ರಿ 9.30ಗಂಟೆಗೆ ಕರೆ ಮಾಡಿ ಬೆಂಗಳೂರಿನಿಂದ ಬೆಳಗ್ಗಿನ ಬಸ್ಸಿನಲ್ಲಿ ಹೊರಟು ಬರುತ್ತೇನೆಂದು ಹೇಳಿ ಪೋನ್ ಕಟ್ ಮಾಡಿ ಪೋನ್ ಸ್ವಿಚ್ ಅಪ್ ಮಾಡಿದ್ದು ನಂತರ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 74/2021 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 06-08-2021 ರಂದು ಬೆಳಿಗ್ಗೆ 11.00 ಗಂಟೆಗೆ ಪ್ರಸನ್ನ ಎಂ.ಎಸ್ ಪೊಲೀಸ್ ಉಪ ನಿರೀಕ್ಷಕರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ದಾಳಿ ನಡೆಸಿ 4 ಜನರನ್ನು ವಶಕ್ಕೆ ಪಡೆದಿದ್ದು ಒಬ್ಬಾತ ಓಡಿ ಹೋಗಿರುತ್ತಾನೆ. ಅದರಲ್ಲಿ ಒಬ್ಬಾತ ಮಟ್ಕಾ ಚೀಟಿಯನ್ನು ಬರೆಯುತ್ತಾ ಹಣವನ್ನು ಸಂಗ್ರಹಿಸುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಶ್ರೀನಾಥ್ ಪೂಜಾರಿ ಪ್ರಾಯ 38 ವರ್ಷ ತಂದೆ; ಈಶ್ವರ ಪೂಜಾರಿ ವಾಸಿ ಕನಪಾಡಿ ಮನೆ ಕಳ್ಳಿಗೆ ಗ್ರಾಮ ಬಂಟ್ವಾಳ ತಾಲೂಕು ಎಂಬುದಾಗಿದ್ದು, ಉಳಿದವರ ಹೆಸರು ಉದಯ ಪೂಜಾರಿ , ಸುನಿಲ್ , ಚಂದ್ರಹಾಸ ಪೂಜಾರಿ ಎಂಬುವುದಾಗಿ ತಿಳಿಸಿರುತ್ತಾರೆ. ಆರೋಪಿಗಳಿಂದ ಸದರಿ ಆಟಕ್ಕೆ ಸಂಬಂಧಿಸಿದ ಚೀಟಿಗಳು ಹಾಗೂ ನಗದು ರೂ 6,000/ ಇದ್ದು ವಶಕ್ಕೆ ಪಡೆದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 90-2021 ಕಲಂ 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರೀಶ (38) ತಂದೆ; ಸುಬ್ರಾಯ ಆಚಾರ್ಯ ವಾಸ; ಗಾಂದಗುಡ್ಡೆ ಮನೆ, ಬಜಗೋಳಿ, ಮುಡಾರು ಗ್ರಾಮ, ಕಾರ್ಕಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಅಕ್ಕ ಶ್ರೀಮತಿ ಶೋಭಾ ಪ್ರಾಯ:40 ವರ್ಷ ರವರು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕುಂಡದಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ಗರ್ಡಾಡಿಯ ಕುಬಳಬೆಟ್ಟು ಶಿವಶಂಕರ ಭಟ್ ರವರ ಮನೆಗೆ ತೋಟದ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ದಿನಾಂಕ:03.08.2021 ರಂದು ಫಿರ್ಯಾದಿದಾರರ ಅಕ್ಕ ಶೋಭಾರವರು ಶಿವಶಂಕರ ಭಟ್ರವರ ತೋಟದ ಕೃಷಿ ಕೂಲಿ ಕೆಲಸಕ್ಕೆ ಹೋಗಿ ತೋಟಕ್ಕೆ ಗೊಬ್ಬರ ಹಾಕುವರೇ ಗೊಬ್ಬರ ತುಂಬಿದ ಗೋಣಿಚೀಲವನ್ನು ಹೊತ್ತುಕೊಂಡು ಹೋಗುವ ಸಮಯ 11.00 ಗಂಟೆಗೆ ಸುಮಾರಿಗೆ ಆಕಸ್ಮಿಕವಾಗಿ ಕಾಲುಜಾರಿ ಅಂಗಳದಲ್ಲಿ ಗೊಬ್ಬರ ತುಂಬಿದ ಗೋಣಿ ಚೀಲ ಸಮೇತವಾಗಿ ಬಿದ್ದು ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿರುವವರು ದಿನಾಂಕ:05.08.2021 ರಂದು ಮಧ್ಯಾಹ್ನ 3.23 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 21/2021 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರಮ್ಲತ್ (36) ಗಂಡ; ಇಸ್ಮಾಯಿಲ್ ವಾಸ; ಪೊಯ್ಯೆಗುಡ್ಡೆ ಮನೆ, ಪಡಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕುಎಂಬವರ ದೂರಿನಂತೆ ಪಿರ್ಯಾದಿದಾರರ ಮಗನಾದ ಮುಹಮ್ಮದ್ ರಫೀಕ್ (19) ಎಂಬಾತನು ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು ವಿನಃ ಕಾರಣ ಕ್ಷುಲ್ಲಕ ವಿಚಾರಗಳಿಗೆ ಗಲಾಟೆ ಮಾಡಿಕೊಂಡು ಮನೆಯಲ್ಲಿದ್ದವನು ಯಾವುದೋ ಆತನ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:05.08.2021 ರಂದು ರಾತ್ರಿ 8.00 ಗಂಟೆಯಿಂದ 9.00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಪಕ್ಕಾಸಿಗೆ ಬಿಳಿಬಣ್ದದ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 22/2021 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.