ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶೇಖ್ ಅಹಮ್ಮದ್ ಬಾವಾ, ಪ್ರಾಯ: 62 ವರ್ಷ ತಂದೆ: ದಿ|| ಶೇಖಬ್ಬ, ವಾಸ: ಕಾರಾಜೆ ಪಡ್ಪು ಮನೆ , ಸಜಿಪಮೂಡ ಗ್ರಾಮ, ಬಂಟ್ವಾಳ ತಾಲೂಕು  ರವರು ನೀಡಿದ ದೂರಿನಂತೆ ದಿನಾಂಕ: 05.09.2022 ರಂದು ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿ ಮೋಟಾರ್ ಸೈಕಲ್ ಹಾಗೂ ಕಾರಿನ ಮಧ್ಯೆ ಅಪಘಾತವಾಗಿದ್ದು, ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ಯೋಗೀಶ್ ರವರಿಗೆ ಬಲ ಕೋಲು ಕಾಲಿಗೆ ಗುದ್ದಿದ ಗಾಯ ಮತ್ತು ಸಹಸವಾರ ಪ್ರಕಾಶ್ ರವರಿಗೆ ಬಲಕಾಲು ಮೊಣಗಂಟಿಗೆ ಹಾಗೂ ಬಲಕೋಲು ಕಾಲಿಗೆ ಗುದ್ದಿದ ಗಾಯ ನೋವಾಗಿದ್ದು ಗಾಯಗೊಂಡವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೊಡಿಯಾಲ್ ಬೈಲ್ ಯೆನಪೊಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 100/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೃಷ್ಣಪ್ರಸಾದ್(16), ತಂದೆ:ಪದ್ಮಯ್ಯ ಗೌಡ, ವಾಸ: ಬಾಲಂಪಾಡಿ ಮನೆ, ಬಂದಾರು ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 05-09-2022 ರಂದು ಕೆಎ 21 ಆರ್‌ 4711 ನೇ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತುಕೊಂಡು ದ್ವಿ ಚಕ್ರ ವಾಹನವನ್ನು ಪಿರ್ಯಾಧಿದಾರರ ತಂದೆ ಪದ್ಮಯ್ಯ ಗೌಡ ರವರು ಸವಾರಿ ಮಾಡಿಕೊಂಡು ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು ಸಂಜೆ 6.30 ಗಂಟೆಗೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಪರಪ್ಪು ಮಸೀದಿ ಬಳಿ ತಲುಪುತ್ತಿದ್ದಂತೆ ಪಿರ್ಯಾಧಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಕೆಎ 21 ಎನ್‌ 6395 ನೇ ಕಾರನ್ನುಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿ ಪಿರ್ಯಾಧಿದಾರರು ಮತ್ತು ಪದ್ಮಯ್ಯ ಗೌಡ ರವರು ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಪಿರ್ಯಾಧಿದಾರರು ತಲೆಯ ಬಲಬದಿಗೆ, ಬಲಕೈಯ ಕೋಲು ಕೈಗೆ ತರಚಿದ ಗಾಯ, ಪದ್ಮಯ್ಯ ಗೌಡ ರವರು ಬಲಕಾಲಿನ ತೊಡೆಗೆ, ಸೊಂಟಕ್ಕೆ ಗುದ್ದಿದ ರಕ್ತಗಾಯಗೊಂಡು ಪಿರ್ಯಾಧಿದಾರರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಪದ್ಮಯ್ಯ ಗೌಡ ರವರು ಮಂಗಳೂರು ಅತ್ತಾವರ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  110/2022 ಕಲಂ: 279 337 ಭಾ.ದ.ಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಕಾಶ್, ಪ್ರಾಯ: 56ವರ್ಷ ತಂದೆ: ದಿ|| ತಿಮ್ಮಪ್ಪ ಮೂಲ್ಯ, ವಾಸ: ಮನೆ.ನಂ 11-282/1 ನಿಸರ್ಗ ಮನೆ , ಜೋಡುಮಾರ್ಗ ಅಂಚೆ, ಬಿ-ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 30.08.2022 ರಂದು ಅವರ ಬಾಬ್ತು KA-19EP-1515 ನೇ ಸ್ಕೂಟರನ್ನು ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಬಿ.ಸಿ.ರೋಡ್ ಪ್ಲೈಓವರ್ ನ ಕೆಳಗೆ  ಪಾರ್ಕಿಂಗ್ ನಿಂದ  ತೆಗೆದು ರಸ್ತೆ ಕ್ರಾಸ್ ಮಾಡಲು ನಿಲ್ಲಿಸಿಕೊಂಡಿದ್ದ ಸಮಯ ನಾರಾಯಣ ಗುರು ವೃತ್ತದ ಕಡೆಯಿಂದ KA-19-HF-5283 ನೇ ಸ್ಕೂಟರನ್ನು ಅದರ ಸವಾರಿಣಿ ಪವಿತ್ರ, ಸಹಸವಾರಿಣಿ ಕೀರ್ತನಾ ಎಂಬವರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅಪಘಾತ ಪಡಿಸಿದ ಸ್ಕೂಟರ್ ಸವಾರಿಣಿ ಹಾಗೂ ಸಹಸವಾರಿಣಿ ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೋಲು ಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು, ಅಪಘಾತಪಡಿಸಿದ ಸ್ಕೂಟರ್ ಸವಾರಿಣಿ ಪವಿತ್ರರವರ ಬಲ ಮೊಣಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯ ಹಾಗೂ ಸಹಸವಾರಿಣಿ ಕೀರ್ತನಾರವರಿಗೆ ಸಣ್ಣಪುಟ್ಟ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ  ಅ.ಕ್ರ 101/2022 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಟಿ ಪದ್ಮನಾಭ ಪೂಜಾರಿ ಪ್ರಾಯ 65 ವರ್ಷ ತಂದೆ: ದಿ| ಕೃಷ್ಣಪ್ಪ ಪೂಜಾರಿ ವಾಸ; ಪಣಕಜೆ ಮನೆ, ಸೋಣಂದೂರು ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ 06-09-2022 ರಂದು ಬೆಳಗ್ಗೆ 06-00 ಗಂಟೆಗೆ ಬೆಳ್ತಂಗಡಿ ತಾಲೂಕು ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿನ ತನ್ನ ಬಾಡಿಗೆ ಮನೆಯ ಅಂಗಳದಲ್ಲಿರುವ ಸಮಯ, ಮನೆಯ ಎದುರಿನ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆರೋಪಿತ ರಮಾನಂದ ಎಂಬಾತನು ಬಂಟ್ವಾಳ ಕಡೆಯಿಂದ ಬೆಳ್ತಂಗಡಿ ಕಡೆಗೆ  KA 19 HB 7619 ನೇ ಸ್ಕೂಟರ್ ನಲ್ಲಿ ತನ್ನ ಪತ್ನಿ ವಿಶಾಲಾಕ್ಷಿ ಎಂಬವರನ್ನು ಹಿಂಬದಿ ಸವಾರಳಾಗಿ ಕುಳ್ಳಿರಿಸಿಕೊಂಡು, ಅಜಾಗಾರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯಲ್ಲಿದ್ದ ಗುಂಡಿಯನ್ನು ನೋಡಿ ತಪ್ಪಿಸಲು ಪ್ರಯತ್ನಿಸಿದಾಗ, ಸ್ಕೂಟರಿನ ಹಿಂಬದಿಯಲ್ಲಿ ಕುಳಿತಿದ್ದ ಆತನ ಪತ್ನಿ ನಿಯಂತ್ರಣ ತಪ್ಪಿ ಸ್ಕೂಟರ್ನಿಂದ ಡಾಮಾರು ರಸ್ತೆಗೆ ಬಿದ್ದಿದ್ದು ಈ ಸಮಯ ಸ್ಕೂಟರ್ ಸವಾರನು ಜೋರಾಗಿ  ಬೊಬ್ಬೆ ಹಾಕುವುದನ್ನು ಕೇಳಿ, ಫಿರ್ಯಾದಿದಾರರು ಹಾಗೂ ಇತರರು ಘಟನಾ ಸ್ಥಳಕ್ಕೆ ತೆರಳಿ, ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಮೇಲಕ್ಕೆತ್ತಿ, ಆರೈಕೆ ಮಾಡಿದ್ದು, ಮಹಿಳೆಯ ತಲೆಯ ಎಡಭಾಗಕ್ಕೆ ಗಂಭೀರ ಗಾಯ ಹಾಗೂ ಕೈಗೆ ರಕ್ತಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪ್ರಸ್ತುತ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 64/2022 ಕಲಂ: 279, 338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕರು ಬಂಟ್ವಾಳ ನಗರ ಪೊಲೀಸ್ ಠಾಣೆ ರವರು ದಿನಾಂಕ  06.09.2022 ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂಟ್ವಾಳ ತಾಲೂಕು ಬಿ.ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ತಲಪಿದಾಗ ವ್ಯಕ್ತಿಯೊಬ್ಬನು ರಸ್ತೆಯ ಬದಿಯ ಪೊದೆಯ ಬಳಿ ಗಿರಾಕಿಗಳಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದಲ್ಲಿಗೆ ದಾಳಿ ನಡೆಸಿ ಅಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತನು ರವಿಚಂದ್ರ ಪೂಜಾರಿ, ಪ್ರಾಯ: 45 ವರ್ಷ, ಎಂದು ತಿಳಿಸಿದ್ದು, ಆತನ ಕೈಯಲ್ಲಿದ್ದ ಕೆಂಪು ನೀಲಿ ಬಣ್ಣದ ಚೀಲದಲ್ಲಿರುವ ಮದ್ಯದ ಬಗ್ಗೆ ವಿಚಾರಿಸಿದಾಗ ಗಿರಾಕಿಗಳಿಗೆ ಮದ್ಯವನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಸದ್ರಿ ಮದ್ಯವನ್ನು ಗಿರಾಕಿಗಳಿಗೆ ಮಾರಾಟ ಮಾಡುವರೇ ಪರವಾನಿಗೆ ಇದೇಯೇ ಎಂದು ಕೇಳಿದಲ್ಲಿ ಇಲ್ಲವಾಗಿ ನುಡಿದಿದ್ದು, ಚೀಲದಲ್ಲಿದ್ದ ಮದ್ಯವನ್ನು ಪರಿಶೀಲಿಸಿದಲ್ಲಿ, ಆಫೀಸರ್ ಚೊಯಿಸ್ 180 ಮಿಲಿ ಲೀಟರ್ ನ 3  ಪೌಚ್ ಗಳು  ಇದ್ದು  ಇದರ ಒಟ್ಟು ಮೌಲ್ಯ 319/- ರೂ. ಆಗಿರುತ್ತದೆ. ಸದ್ರಿ ಸ್ಥಳದಲ್ಲಿ ನೆಲದಲ್ಲಿ ಆಫೀಸರ್ ಚೊಯಿಸ್ ನ ಖಾಲಿ  ಸ್ಯಾಚೇಟ್ 3,  ಅರ್ಧ ನೀರು ತುಂಬಿದ ಪ್ಲಾಸ್ಟಿಕ್ ಬಾಟ್ಲಿ, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು ಸದ್ರಿ ಸೊತ್ತುಗಳನ್ನು ಸ್ವಾಧೀನಕ್ಕೆ ಪಡೆಯಲಾಯ್ತು, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ. ಕ್ರ: 85/2022 ಕಲಂ:  15(ಅ), 32 (3) ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 07-09-2022 02:31 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080