ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ.ಶೈಲಜಾ.ಸಿ.ಹೆಚ್ ಪ್ರಾಯ : 52 ವರ್ಷ ಗಂಡ: ಬಾಲಕೃಷ್ಣ.ಪಿ.ಎಸ್, ವಾಸ: ಶ್ರೀಶೈಲ, ಸಂಚಯಗಿರಿ, ಬಿ-ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 05-11-2021 ರಂದು ಪಿರ್ಯಾದಿದಾರರು ತನ್ನ ಗಂಡ ಬಾಲಕೃಷ್ಣ.ಪಿ.ಎಸ್ ರವರೊಂದಿಗೆ ತನ್ನ ಸಂಬಂಧಿಕರ ಮನೆಯಾದ ಮೊಡಂಕಾಪುವಿಗೆ ಹೋಗಿದ್ದು ವಾಪಾಸು ಪೊಳಲಿ ಕೈಕಂಬ ಹೆದ್ದಾರಿಯ ಬಲಬದಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಾ ಸಮಯ ಸುಮಾರು 17:50 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಮೊಡಂಕಾಪು ನೇಸರ ಪ್ರಿಂಟರ್ಸ್ ಬಳಿ ತಲುಪಿದಾಗ ಬಿ.ಸಿ.ರೋಡ್ ಕಡೆಯಿಂದ ಪೊಳಲಿ ಕಡೆಗೆ KA-70-1368 ನೇ ಸವಾರ ಅನಿಲ್ ರವರು ಆಟೋರಿಕ್ಷಾವನ್ನು ಅತೀವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಗೆ ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು ಪಿರ್ಯಾದಿದಾರರಿಗೆ ಮತ್ತು ಅವರ ಗಂಡನಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕೈಗೆ, ಕಣ್ಣಿನ ಭಾಗಕ್ಕೆ, ತಲೆಯ ಎಡಭಾಗಕ್ಕೆ ಮತ್ತು ಕಾಲುಗಳಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿದ್ದು ಪಿರ್ಯಾದಿದಾರರ ಗಂಡನಾದ ಬಾಲಕೃಷ್ಣ.ಪಿ.ಎಸ್.ರವರ ತಲೆಗೆ ರಕ್ತಗಾಯ, ಬಲಕಾಲಿಗೆ ಗುದ್ದಿದ ಗಾಯ, ಕೈಗಳಿಗೆ ತರಚಿದ ಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 116/2021  ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಇಮ್ರಾನ್ ಷಾ, ಪ್ರಾಯ: 31 ವರ್ಷ ತಂದೆ: ಅಬ್ದುಲ್ ಅಜೀಜ್ ವಾಸ: 1-325-ಬಿ ಅದ್ದಪಾಡಿ ಮನೆ, ಅಡ್ಡೂರು ಗ್ರಾಮ ಮತ್ತು ಅಂಚೆ ಮಂಗಳೂರು ಎಂಬವರ ದೂರಿನಂತೆ ದಿನಾಂಕ 30-10-2021 ರಂದು ಪಿರ್ಯಾದಿದಾರರ ಅಣ್ಣ ಸದಕತುಲ್ಲಾರವರು KA-19-HG-2142 ನೇ ಸ್ಕೂಟರಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಬಿ.ಸಿ.ರೋಡಿಗೆ ಬರುತ್ತಿರುವ ಸಮಯ ಸುಮಾರು 15:10 ಗಂಟೆಗೆ ತಲುಪಿದಾಗ  ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಮುಂಡೆಗುರಿ ಎಂಬಲ್ಲಿಗೆ ತಲುಪಿದಾಗ ಸ್ಕೂಟರನ್ನು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಎಡಕೈಗೆ ಗುದ್ದಿದ ಗಾಯಗೊಂಡವರನ್ನು ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ  ಅ.ಕ್ರ. 117/2021  ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸುಜಾತ ಗಂಡ:ಯಾದವ ಸಾಲ್ಯಾನ್‌ ವಾಸ:ಏಮಾಜೆ ಮನೆ, ನೆಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಏಮಾಜೆ ಎಂಬಲ್ಲಿ ಮನೆಯನ್ನು ನಿರ್ಮಿಸಿ ಅನೇಕ ವರ್ಷದಿಂದ ಅದರಲ್ಲಿ ವಾಸ ಮಾಡಿಕೊಂಡಿರುವುದಾಗಿದೆ. ದಿನಾಂಕ:05-11-2021 ರಂದು ಸಂಜೆ ಸುಮಾರು 6.00 ಗಂಟೆಗೆ ಪಿರ್ಯಾಧಿ ಪರಿಚಯದ ಚಂದ್ರಹಾಸ, ಪ್ರವೀಣ್, ಪ್ರಸಾದ, ನಂದಕಿಶೋರ್, ಪದ್ಮನಾಭ ಲೊಕೇಶ್ ರವರುಗಳು ಪಿರ್ಯಾಧಿದಾರರ ಮನೆಗೆ ಬಂದು ನೀನು ಈ ಮನೆಯನ್ನು ಬಿಟ್ಟು ಹೋಗದಿದ್ದರೆ ನಿನ್ನ ಕೈಕಾಲು ಮುರಿದು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ನಂತರ ಪಿರ್ಯಾಧಿ ಹೆದರಿ ತನ್ನ ಪತಿಯ ತಂದೆಯ ಮನೆಗೆ ರಾತ್ರಿ  ಮಕ್ಕಳೊಂದಿಗೆ ವಾಸಕ್ಕೆ ಹೋಗಿದ್ದು ರಾತ್ರಿ ಸಮಯ ಆರೋಪಿಗಳು ಪಿರ್ಯಾಧಿದಾರರು ವಾಸ ಮಾಡುತ್ತಿದ್ದ ಮನೆಯ ಬಾಗಿಲು ಮತ್ತು ಬೀಗವನ್ನು ಒಡೆದು ಮನೆಯಲ್ಲಿದ್ದ ಬಟ್ಟೆ ಬರೆಗಳು, ಅಡುಗೆ ಮಾಡಲು ಉಪಯೋಗಿಸುವ 10-12 ಸ್ಟೀಲ್‌ ಪಾತ್ರಗಳನ್ನು ಕಬ್ಬಿಣದ ಏಣಿ ಹಾಗೂ ಮನೆಯ ಮುಂದಿನ ಬಾಗಿಲಿಗೆ ಗುದ್ದಿ ಬಾಗಿಲಿನ ಚಿಲಕ ಹಾಗೂ ಅದರ ಸೆಟ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 142/2021  ಕಲಂ: 143,147,504,506,454,380 ಜೊತೆಗೆ 149 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯು ಕೆ ಅಬ್ದುಲ್ ಖಾದರ (41) ತಂದೆ:ಯು ಕೆ ಮಹಮ್ಮದ ವಾಸ:ಎಡಂಬಳ ಮನೆ, ಕರೋಪ್ಪಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಮಾವ ಎ ಎಂ ಇಸ್ಮಾಯಿಲ್ ರವರ ಬಾಬ್ತು ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಎಡಂಬಳ ಎಂಬಲ್ಲಿ ಅವರ ಮಾಲಿಕತ್ವದ ಒಂದು ಕಲ್ಲಿನ ಕೋರೆ ಇರುತ್ತದೆ. ಈ ಕೋರೆಯ ಉಸ್ತುವಾರಿಯನ್ನು ಪಿರ್ಯಾಧಿ ಸುಮಾರು 05 ವರ್ಷದಿಂದ ನೋಡಿಕೊಳ್ಳುತ್ತಿರುವುದಾಗಿದೆ. ಎಂದಿನಂತೆ ಸದ್ರಿ ಕೋರೆಯಲ್ಲಿ ಈ ದಿನ ದಿನಾಂಕ:06-11-2021 ರಂದು ಕೆಲಸ ನಡೆದಿರುತ್ತದೆ. ಪಿರ್ಯಾಧಿದಾರರು ಸಂಜೆ 4.30 ಗಂಟೆಯ ಸಮಯಕ್ಕೆ ಕೋರೆಯ ರೂಮ್‌ನಲ್ಲಿ ಇರುವ ಸಮಯ ಒಂದು ಪಿಕಾಪನಲ್ಲಿ ಪಿರ್ಯಾಧಿ ಪರಿಚಯದ ಅಹಮ್ಮದ್ ನಿಝಾರ್ ಮತ್ತು ಶರಿಫ್ ಎಂಬವರುಗಳು ಏಕಾಏಕಿಯಾಗಿ ಪಿರ್ಯಾಧಿದಾರರು ಇರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿಯ ಬಳಿಗೆ ಕತ್ತಿಯನ್ನು ಹಿಡಿದುಕೊಂಡು ಬಂದು ನಮಗೆ ನೀನು ಒಂದು ಲಕ್ಷ ಹಣ ನೀಡಬೇಕು ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿರುತ್ತಾರೆ. ಅದಕ್ಕೆ ಹಣ ಯಾಕೆ ನೀಡಬೇಕೆ ಎಂದು ಪಿರ್ಯಾಧಿ ಆಕ್ಷೇಪಿಸಿದಕ್ಕೆ ಅವರು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕತ್ತಿಯನ್ನು ತೋರಿಸಿ ನೀನು ನಮಗೆ ಹಣ ನೀಡದಿದ್ದರೆ ನಿನ್ನನ್ನು ಇದೆ ಕತ್ತಿಯಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದಾಗ ಆ ಸಮಯ ಬೊಬ್ಬೆ ಹಾಕಿದಾಗ ಸದ್ರಿ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕೀರ್ತಿ ಭಟ್ ಪಿರ್ಯಾಧಿಯ ರಕ್ಷಣೆಗೆ ಬಂದಾಗ ಆಪಾದಿತರು ಕೀರ್ತಿಭಟ್‌ರವರ ಕುತ್ತಿಗೆಯ ಬಳಿ ಕತ್ತಿಯನ್ನಿಟ್ಟು ನಮಗೆ ಹಣ ನೀಡದೆ ಕೋರೆಯನ್ನು ನಡೆಸಿದರೆ ನಿನ್ನನ್ನು ಕೂಡಾ ಕೊಲ್ಲದೆ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುತ್ತಾರೆ. ಆ ಸಮಯಕ್ಕೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಪವಾಝ್ ಹಾಗೂ ಇತರ ಜನರು ಪಿರ್ಯಾಧಿಯ ಬಳಿಗೆ ಬರುವುದನ್ನು ಕಂಡು ಆಪಾದಿತರುಗಳು ತಾವು ಬಂದಿದ್ದ ಪಿಕಪ್ ವಾಹನ ಬಿಟ್ಟು ಓಡಿ ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 143/2021  ಕಲಂ:447,387,506 ಜೊತೆಗೆ 34 ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಕುಮಾರ್ ಪೂಜಾರಿ (66) ತಂದೆ:ದಿ/ಕೊರಗಪ್ಪ ಪೂಜಾರಿ ವಾಸ:ಇಳಂತಿಲ ಮನೆ ಇಳಂತಿಲ ಗ್ರಾಮದ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 06-11-2021 ರಂದು ಸಂಜೆ ಸುಮಾರು 5.30 ಗಂಟೆಯಿಂದ 6.00 ಗಂಟೆಯ ವೇಳೆಗೆ ಉಪ್ಪಿನಂಗಡಿಯಿಂದ ಮನೆಯ ಕಡೆಗೆ ನಡೆದುಕೊಂಡು ಬರುವಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿದ್ದು  ಅದರಲ್ಲಿ ಒಂದು ಗ್ರೈನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು ಉಳಿದ ನಾಲ್ಕು ಗ್ರೇನೇಡ್ ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿದ್ದು, ಪಿರ್ಯಾದುದಾರರು ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಒ ಆಗಿ ನಿವೃತ್ತಿ ಹೊಂದಿರುವುದರಿಂದ ಈ ವಸ್ತುಗಳು ಗ್ರೈನೇಡ್ ಎಂಬುದಾಗಿ ಪಿರ್ಯಾದುದಾರರಿಗೆ  ತಿಳಿದುಬಂದಿರುತ್ತದೆ. ಈ ಗ್ರೇನೈಡ್ ಗಳನ್ನು ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತ ಪಿರ್ಯಾದುದಾರರು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಗ್ರಾನೈಡ್ ವಸ್ತುಗಳನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಪಿರ್ಯಾದುದಾರರು ಬರುವ ದಾರಿಯಲ್ಲಿ ಹಾಕಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 129/2021   ಕಲಂ: 25 1B, 7    ARMS Act ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-11-2021 12:16 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080