ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಭವಿಷ್‌,  ಪ್ರಾಯ 17  ವರ್ಷ, ತಂದೆ: ಬಾಲಕೃಷ್ಣ ನಾಯಕ್‌, ವಾಸ: ಕೊಡಿಪ್ಪಾಡಿ ಮಜಲು ಮನೆ, ಕೊಡಿಪ್ಪಾಡಿ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 06-02-2021 ರಂದು ಆರೋಪಿ ಮೋಟಾರ್‌ ಸೈಕಲ್‌ ಸವಾರ ಬಾಲಕೃಷ್ಣ ನಾಯಕ್‌ ಎಂಬವರು KA-21-Y-0160 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌‌ನಲ್ಲಿ ಪಿರ್ಯಾದುದಾರರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು, ಎಪಿಎಂಸಿ-ತಾರಿಗುಡ್ಡೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೊಡಿಪ್ಪಾಡಿ ಕಡೆಯಿಂದ ತಾರಿಗುಡ್ಡೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಎಂಬಲ್ಲಿ ಮೌಂಟೆನ್‌‌ ವ್ಯೂ ಶಾಲೆಯ ಹತ್ತಿರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ನಾಯಿಯೊಂದು ರಸ್ತೆಗೆ ಅಡ್ಡವಾಗಿ ಬಂದಾಗ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ, ಮೋಟಾರ್‌ ಸೈಕಲ್‌ ಸ್ಕಿಡ್‌ ಆಗಿ, ಪಿರ್ಯಾದುದಾರರು ಮತ್ತು ಆರೋಪಿ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎರಡೂ ಮೊಣಕೈಗಳು ಮತ್ತು ಎಡಕಾಲಿನ ಮೊಣಕಾಲಿಗೆ ಗುದ್ದಿದ ಗಾಯ ಮತ್ತು ಆರೋಪಿ ಸವಾರನಿಗೆ  ಎಡಕಾಲಿನ ಪಾದಕ್ಕೆ ಗುದ್ದಿದ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  27/2021  ಕಲಂ: 279, 337 ಐಪಿಸಿ ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆ ಅ.ಕ್ರ 191/16 ಕಲಂ: 279,337 ಐಪಿಸಿ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶ್ವತ್‌ ನಾಯ್ಕ  ಪ್ರಾಯ 23  ವರ್ಷ, ತಂದೆ: ಐತಪ್ಪ ನಾಯ್ಕ, ವಾಸ: ಗೋಳಿಮೂಲೆ ಮನೆ, ಮೈರ ಅಂಚೆ ಮತ್ತು ಗ್ರಾಮ, ಮಂಜೇಶ್ವರ  ತಾಲೂಕು. ಕಾಸರಗೋಡು, ಕೇರಳ ರಾಜ್ಯ ರವರು ನೀಡಿದ ದೂರೇನೆಂದರೆ ದಿನಾಂಕ 07-02-2021 ರಂದು ಆರೋಪಿ ಜೀಪು ಚಾಲಕ ಮನೋಜ್‌ ಎಂಬವರು KA-12-N-9223 ನೇ ನೋಂದಣಿ ನಂಬ್ರದ ಜೀಪನ್ನು ಅಂಬಿಕಾ ವಿದ್ಯಾಲಯ ಕಡೆಯಿಂದ ಚಲಾಯಿಸಿಕೊಂಡು ಹೊಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬಪ್ಪಳಿಗೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಪುತ್ತೂರು-ಬಲ್ನಾಡು ಸಾರ್ವಜನಿಕ ಡಾಮಾರು ರಸ್ತೆಗೆ ಚಲಾಯಿಸಿದ ಪರಿಣಾಮ, ಸುಬ್ರಮಣ್ಯರವರು ಸವಾರರಾಗಿ ಪಿರ್ಯಾದುದಾರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಲ್ನಾಡು ಕಡೆಯಿಂದ ಪುತ್ತೂರು  ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-U-9485 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಸವಾರ ಮತ್ತು ಸಹಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  28/2021  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರಾಜೇಶ್ ನಾಯ್ಕ್ ಪ್ರಾಯ: 37 ವರ್ಷ ತಂದೆ; ಪೂವಪ್ಪ ನಾಯ್ಕ್ ವಾಸ; ಬಿ,ಆರ್,ನಗರ ಮನೆ, ಬಾಳ್ತಿಲ ಗ್ರಾಮ  ,ಬಂಟ್ವಾಳ ತಾಲೂಕು ರವರು ದಿನಾಂಕ 07.02.2021 ರಂದು ಬಾಡಿಗೆ ನಿಮಿತ್ತ ಕಲ್ಲಡ್ಕದಿಂದ ಮಾಣಿ ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಬೋಲ್ಪೋಡಿ ಕುದ್ರೆಬೆಟ್ಟು ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಮನೋಜ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-70-E-4625 ಸ್ಕೂಟರಿಗೆ ಮಾಣಿ ಕಡೆಯಿಂದ KA-19-MJ-8398  ನೇ ಕ್ರೇಟಾ ಕಾರನ್ನು ಅದರ ಚಾಲಕ ಇಸ್ಮಾಯಿಲ್ ಇಸಾಕ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಮನೋಜ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದವರ ಮೇಲೆ ಮೇಲ್ಕಾರ್ ಕಡೆಯಿಂದ KA-19-AA-6849 ನೇ ಇತಿಯೋಸ್ ಕಾರನ್ನು ಅದರ ಚಾಲಕ ಸುಕೇಶ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಅಂತರವಿಲ್ಲದೇ ಚಲಾಯಿಸಿಕೊಂಡು ಬಂದು ಸ್ಕೂಟರ್ ಸವಾರ ಮನೋಜ್ ರವರ ಮೇಲೆ ಹಾಯ್ದು ಹೋದ ಪರಿಣಾಮ ಮನೋಜ್ ರವರ ಹೊಟ್ಟೆಗೆ, ಸೊಂಟಕ್ಕೆ, ಬಲ ಕೈ ಮೊಣಗಂಟಿಗೆ ಗಂಭೀರ ಗಾಯವಾದವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ. ಮೊ.ನಂ  16/2021ಕಲಂ 279,304[ಎ]  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶಿವಪ್ರಸಾದ್.ರೈ, 49 ವರ್ಷ, ತಂದೆ: ಸುಂದರ.ರೈ, ವಾಸ: ಬೆಂಜನಪದವು ಶೆಟ್ಟಿ ಕಂಪೌಂಡ್ ಮನೆ, ಜೂನಿಯರ್ ಕಾಲೇಜಿನ ಎದುರು, ಅಮ್ಮುಂಜೆ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 06.02.2021 ರಂದು ತಮ್ಮ ನೆರೆಕರೆಯ ರಾಜೇಶ್ ಗಿಲ್ಬರ್ಟ್ ಕುಟಿನ್ಹಾರವರೊಂದಿಗೆ ಬೆಂಜನಪದವಿನಿಂದ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಮನೆ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಜೂನಿಯರ್ ಕಾಲೇಜಿನ ಎದುರು ತಲುಪಿದಾಗ ಕಲ್ಪನೆ ಕಡೆಯಿಂದ KL-59-M-8193 ನೇ ಸ್ಕೂಟರನ್ನು ಅದರ ಸವಾರ ಸತೀಶ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಾಜೇಶ್ ಗಿಲ್ಬರ್ಟ್ ಕುಟಿನ್ಹಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಬಲ ಕೈ ಮಣಿಗಂಟಿಗೆ, ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 15/2021 ಕಲಂ 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್  ಹಮೀದ್ (32) ತಂದೆ; ಕೆ ಇಸ್ಮಾಯಿಲ್  ವಾಸ; ಕೆ ಸಿ ರೋಡ್ ಮನೆ ಕಲ್ಲಡ್ಕ ಅಂಚೆ ಗೋಳ್ತಮಜಲು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 07.02.2021 ರಂದು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿದ್ದ ಸಮಯ ಮಂಗಳೂರು ಕಡೆಯಿಂದ KA-19-D-9445 ನೇ ಟ್ಯಾಂಕರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಇತರೆ ವಾಹನಗಳನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ವಿಟ್ಲ ಕಡೆಯಿಂದ ಬರುತ್ತಿದ್ದ KA-19-EN-7003 ನೇ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಹಮ್ಮದ್ ಇಮಾದ್ ರವರು ಟ್ಯಾಂಕರಿನ ಬಲಬದಿಯ ಚಕ್ರದಡಿಗೆ ಸಿಲುಕಿ ಎದೆಯಿಂದ ಮೇಲ್ಭಾಗ ಸಂಪೂರ್ಣ ಛಿದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಅಪಘಾತಕ್ಕೆ KA-19-D-9445 ನೇ ಟ್ಯಾಂಕರ್ ಚಾಲಕ ಕೃಷ್ಣಪ್ರಸಾದ್ ರವರ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 14/2021 ಕಲಂ 279, 304 (ಎ) ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಪುತ್ತೂರು ನಗರ  ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ಕಮರುದ್ದೀನ್ ಪ್ರಾಯ: 38 ವರ್ಷ ತಂದೆ: ದಿ/ಮಹಮ್ಮದ್ ವಾಸ: ಸಂಜಯನಗರ ಮನೆ ಮರೀಲ್ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ರವರು  ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಫಿಲೋಮಿನಾ ಕಾಲೇಜು ಬಳಿ ಹಣ್ಣು ಹಂಪಲು ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ: 04-02-2021 ರಂದು ರಾತ್ರಿ 10:00 ಗಂಟೆಗೆ  ವ್ಯಾಪಾರದಿಂದ ಬಂದ ಹಣ ರೂ 8 ಸಾವಿರ ನಗದನ್ನು   ಅಂಗಡಿಯ ಕ್ಯಾಶ್  ಡ್ರವರ್ ನಲ್ಲಿರಿಸಿ  ಅಂಗಡಿಯ ಬಾಗಿಲು ಮುಚ್ಚಿಕೊಂಡು ಹೋಗಿದ್ದು  ದಿನಾಂಕ: 05-02-2021 ರಂದು  ಬೆಳಿಗ್ಗೆ 08:00 ಗಂಟೆಗೆ   ಪಿರ್ಯಾದಿದಾರರು ಅಂಗಡಿಗೆ   ಬಂದು ನೋಡಿದಾಗ  ಅಂಗಡಿಯ ಬಲಬದಿಗೆ ಅಳವಡಿಸಿದ್ದ ಮರದ ರೀಪು ಮತ್ತು ನೆಟ್ ನ್ನು ಯಾರೋ ಸರಿಸಿದ್ದು, ಪರಿಶೀಲಿಸಿದಾಗ  ರಾತ್ರಿ ಸಮಯ ಕ್ಯಾಶ್ ಡ್ರವರ್ ನಲ್ಲಿರಿಸಿದ್ದ 8000/- ರೂ ಕಳವಾಗಿರುತ್ತದೆ. ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆ ಅ.ಕ್ರ; 8/2020 ಕಲಂ: 457, 380 ಐ.ಪಿ.ಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ: 07.02.2021 ರಂದು ದ.ಕ ಮಹಿಳಾ ಪೊಲೀಸ್ ಠಾಣೆ ಪುತ್ತೂರು ಇಲ್ಲಿ ಕಲಂ: 378,376 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಲತಾ ಪ್ರಾಯ: 40 ವರ್ಷ   ಗಂಡ: ಸತೀಶ್ ಶೆಟ್ಟಿ ವಾಸ: ನೆಹರುನಗರ ಎಸ್.ಆರ್.ಟಿ ರೋಡ್ ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರು ಸುಮಾರು 13 ವರ್ಷಗಳ ಹಿಂದೆ ಸತೀಶ್ ಶೆಟ್ಟಿ ಪ್ರಾಯ: 45 ವರ್ಷ ಎಂಬವರನ್ನು ವಿವಾಹವಾಗಿ ಸುಮಾರು 2 ವರ್ಷಗಳ ಕಾಲ ಮುಂಬೈನಲ್ಲಿ ವಾಸವಾಗಿದ್ದರು ಆ ನಂತರ  ಒಬ್ಬರೇ ಊರಿಗೆ ಬಂದು ತನ್ನ ತಾಯಿಯ ಮನೆಯಾದ ನೆಹರೂನಗರದಲ್ಲಿ ವಾಸವಾಗಿದ್ದರು.  ಸತೀಶ್ ಶೆಟ್ಟಿಯವರು ಮುಂಬೈನಲ್ಲಿದ್ದು  ಆ ನಂತರ ಊರಿಗೆ ಬಂದವರು ಮುಕ್ರಂಪಾಡಿಯಲ್ಲಿ ವಾಸವಾಗಿದ್ದು, ಪಿರ್ಯಾದಿದಾರರೊಂದಿಗೆ ಸಂಪರ್ಕವಿಲ್ಲದೇ ಇದ್ದು, ಪುತ್ತೂರಿನ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಬೇರೆಯವರಿಂದ ವಿಷಯ ತಿಳಿದಿರುತ್ತದೆ.  ದಿನಾಂಕ: 07-02-2021 ಸಮಯ ಸುಮಾರು 10:30 ಗಂಟೆಗೆ ದೂರವಾಣಿ ಕರೆ ಮಾಡಿ ತಿಳಿಸಿದಂತೆ  ಪಿರ್ಯಾದಿದಾರರ ಗಂಡ ಸತೀಶ್ ಶೆಟ್ಟಿಯವರು ದಿನಾಂಕ: 06-02-2021 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 07-02-2021 ರಂದು 08:00 ಗಂಟೆಯ ಮಧ್ಯ ಅವಧಿಯಲ್ಲಿ  ಪುತ್ತೂರು ಕಸ್ಬಾ ಗ್ರಾಮದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮೇಲೆ ಎದ್ದೇಳಲಾಗದೇ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್‌ ನಂಬ್ರ 07/2021  ಕಲಂ: 174 ಸಿಆರ್‌ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಧಾಕರ ಕೆ. ಪ್ರಾಯ 56 ವರ್ಷ ತಂದೆ- ದಿ. ಕೊರಗ ವಾಸ- ಕೆಳಗಿನ ಮನೆ, ಬಲ್ನಾಡು ಗ್ರಾಮ ಪುತ್ತೂರು ತಾಲೂಕು ರವರ ತಮ್ಮನಾದ ಸುಮಾರು 48 ವರ್ಷ ಪ್ರಾಯದ ಮುತ್ತ ಎಂಬವನು ಕಾಸರಗೋಡು ನೆಟ್ಟಣಿಗೆ ಗ್ರಾಮದ ಭೈರಿತ್ತಿಯಡ್ಕ ಎಂಬಲ್ಲಿಯ ಖಾಯಂ ನಿವಾಸಿಯಾಗಿದ್ದು, ಈಗ ಸುಮಾರು 3 ವರ್ಷಗಳಿಂದ ಸುಳ್ಯ ತಾಲೂಕು ಕನಕಮಜಲಿನ ಪಂಜಿಗುಂಡಿ ಎಂಬಲ್ಲಿ ತನ್ನ ಪತ್ನಿಯ ಮನೆಯಲ್ಲಿ ವಾಸವಾಗಿದ್ದು, ಸದ್ರಿಯವನು ಸುಮಾರು 1 ವರ್ಷದಿಂದ ಕೆಲವೊಮ್ಮೆ  ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದನು.  ದಿನಾಂಕ:- 05.02.2021ರಂದು ಮಧ್ಯಾಹ್ನ ಸದ್ರಿ ಮುತ್ತನು ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಕೆಳಗಿನ ಮನೆ ಎಂಬಲ್ಲಿರುವ ಫಿರ್ಯಾದುದಾರರ ಮನೆಗೆ ಬಂದಿದ್ದವನು ದಿನಾಂಕ:- 07.02.2021ರಂದು ಬೆಳಿಗ್ಗೆ ಸುಮಾರು 6.00 ಗಂಟೆಗೆ ಫಿರ್ಯಾದುದಾರರ ಮನೆಯಿಂದ ಹೊರಗೆ ಹೋದವನು ಬೆಳಿಗ್ಗೆ ಸುಮಾರು 7.00 ಗಂಟೆಯವರೆಗೂ ವಾಪಾಸು ಫಿರ್ಯಾದುದಾರರ ಮನೆಗೆ ಬರದೇ ಇದ್ದುದರಿಂದ ಫಿರ್ಯಾಧುದಾರರು ಮತ್ತು ಕೌಶಿಕ್ ಎಂಬವನು ಮನೆಯ ಆಸುಪಾಸು ಸದ್ರಿ ಮುತ್ತನನ್ನು ಹುಡುಕಾಡುತ್ತಾ ಬೆಳಿಗ್ಗೆ ಸುಮಾರು 8.00 ಗಂಟೆಗೆ ಬಲ್ನಾಡು ಗ್ರಾಮದ ಕೆಳಗಿನ ಮನೆಯ ಅಪ್ಪಿ ಎಂಬವರಿಗೆ ಸೇರಿದ ಗುಡ್ಡ ಪ್ರದೇಶಕ್ಕೆ ತೆರಳಿದಾಗ ಅಲ್ಲಿ  ಮುತ್ತನು ನೈಲಾನ್ ಹಗ್ಗವೊಂದರ ತುದಿಯನ್ನು ಗೇರು ಮರದ ಕೊಂಬೆಗೆ ಕಟ್ಟಿ ಸದ್ರಿ ಹಗ್ಗದ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ತನ್ನ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಸದ್ರಿ ಮುತ್ತನು ಸುಮಾರು 1 ವರ್ಷದಿಂದ ಕೆಲವೊಮ್ಮೆ  ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಅದೇ ಬೇಸರದಿಂದ  ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ನಂಬ್ರ 04/21 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-02-2021 01:48 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080