ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್‌ ನಿಸಾರ್‌(34ವ), ತಂದೆ: ಅಬ್ದುಲ್‌ ರಝಾಕ್‌, ವಾಸ: ಸತ್ತಿಕಲ್ಲು ಮನೆ, ಕೆದಿಲ; ಗ್ರಾಮ, ಪೇರಮೊಗರು ಅಂಚೆ, ಬಂಟ್ವಾಲ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 06-02-2022 ರಂದು 20-00 ಗಂಟೆಗೆ ಆರೋಪಿ ಸ್ಯಾಂಟ್ರೋ ಕಾರು ಚಾಲಕ  KA-19-P-5034  ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ  ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಕಾರು ಚಾಲಕನ ಹತೋಟಿ ತಪ್ಪಿ ಹೆದ್ದಾರಿಯನ್ನು ಬಿಟ್ಟು ರಸ್ತೆಯ ಎಡಭಾಗದ ಮಣ್ಣು ರಸ್ತೆಯಲ್ಲಿ ಚಲಿಸಿ, ಜಲೀಲ್‌ ಎಂಬವರು ಹೊಟೇಲ್‌ ಭಾರತ್‌ ಎದುರು ಪಾರ್ಕ್ ಮಾಡಿದ್ದ KA-70-H-4955 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ನಂತರ ಹೊಟೇಲಿಗೆ ಗುದ್ದಿ, ಹೊಟೇಲಿನಲ್ಲಿದ್ದ ಮಾಲಿಕ ಸುಲೈಮಾನ್‌, ಹೊಟೇಲಿಗೆ ಚಹಾ ಕುಡಿಯಲು ಬಂದಿದ್ದ ಫೈಝಲ್‌, ಜಲೀಲ್‌ ಮತ್ತು ಮೊಹಮ್ಮದ್‌ ರಿಯಾಜ್‌ ಎಂಬವರಿಗೆ ಅಪಘಾತವಾಗಿ, ಕಾರು ತಗ್ಗು ಪ್ರದೇಶಕ್ಕೆ ಇಳಿದಿರುತ್ತದೆ. ಅಪಘಾತದಿಂದ ನಾಲ್ಕೂ ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ತುಂಬೆ ಫಾದರ್‌ ಮುಲ್ಲರ್ರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ  ಮೊಹಮ್ಮದ್‌ ರಿಯಾಜ್‌ ರವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅಪಘಾತದಿಂದ ಹೊಟೇಲ್‌, ಸ್ಕೂಟರ್‌ ಮತ್ತು ಕಾರು ಜಖಂಗೊಂಡಿರುತ್ತದೆ.  ಕಾರು ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  24/2022 ಕಲಂ: 279, 337 ಐಪಿಸಿ & ಕಲಂ; 134(A)&(B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಧೀರಜ್ ಎಂ ಆಚಾರ್ಯ (30 ವರ್ಷ) ತಂದೆ: ಮಂಜುನಾಥ ಆಚಾರ್ಯ ವಾಸ: ಬಲ್ಲೆಕೋಡಿ ಮಂಜುಶ್ರೀ ನಿಲಯ ಕಲ್ಲಡ್ಕ  ಗೋಳ್ತಮಜಲು ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿ ಫೂರ್ಚನ್ ಎಂಟರ್ಪ್ರೈಸಸ್ ಎಂಬ ಹಾರ್ಡ್ ವೇರ್ ಅಂಗಡಿಯನ್ನು ಡೆನ್ನಿಸನ್  ಎಸ್ ಎಂಬುವರ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದು. ಪಿರ್ಯಾಧಿದಾರರು ದಿನಾಂಕ 06/02/2022 ರಂದು ಮಧ್ಯಾಹ್ನ 13.00 ಗಂಟೆಗೆ ಅಂಗಡಿಯನ್ನು ಬಂದ ಮಾಡಿ ಹೋದವರು. ವಾಪಾಸ್ಸು ದಿನಾಂಕ 07-02-2022 ರಂದು ಬೆಳಿಗ್ಗೆ 6.30 ಗಂಟೆಗೆ ಅಂಗಡಿಗೆ ಬಂದು ನೋಡಿಲಾಗಿ ಸದ್ರಿಯವರ ಅಂಗಡಿಯ ಹಿಂಬದಿ ತೆರೆದ ಜಾಗದಲ್ಲಿ ಮಾರಾಟದ ಬಗ್ಗೆ ಸಂಗ್ರಹಿಸಿಇಟ್ಟಿದ್ದ ಪೈಪುಗಳಿಗೆ ದುಷ್ಕರ್ಮಿಗಳಿಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ಪಿರ್ಯಾಧಿದಾರರಿಗೆ ಅಂದಾಜು 2 ರಿಂದ 3 ಲಕ್ಷ ನಷ್ಟವಾಗಿರುತ್ತದೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 12/2022  ಕಲಂ: 435, 427 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಉಮೇಶ ಆರ್  ಮೂಲ್ಯ ಪ್ರಾಯ 43 ವರ್ಷ ತಂದೆ: ರಾಮ ಮೂಲ್ಯ ವಾಸ: ಶಾಂತಿಯಂಗಡಿ ಕೈಕಂಬ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ರವರು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಶಾಂತಿಯಂಗಡಿ ಎಂಬಲ್ಲಿ ಯುನಿಟೈಡ್ ಟಿ ವಿ ಎಸ್  ದ್ವಿ ಚಕ್ರ ವಾಹನದ ಮಾರಾಟ ಹಾಗೂ ಸೇವಾ ವಿಭಾಗದ ಅಧಿಕೃತ ವಿತರಕರಾಗಿದ್ದು. ದಿನಾಂಕ 07-02-2022 ರಂದು ಮದ್ಯಾಹ್ನ 4.45 ಗಂಟೆಗೆ  ಕೆಎ 70 ಹೆಚ್ 7217 ದ್ವಿ ಚಕ್ರ ಹಾಗೂ ಅಟೋ ರಿಕ್ಷಾದಲ್ಲಿ ತಸ್ಲೀಮ್ ಹಾಗೂ ಇತರರು ಯುನಿಟೈಡ್ ಟಿ ವಿ ಎಸ್  ಮಳಿಗೆಯ ಆವರಣಕ್ಕೆ ಪ್ರವೇಶಿಸಿ,  ಕೆಎ 70 ಹೆಚ್ 7217 ನೇದರ ದ್ವಿ ಚಕ್ರ ವಾಹನವನ್ನು ಸದ್ರಿ ಶೋರೂಂ ಮುಂದೆ ನಿಲ್ಲಿಸಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದು ಆಗ ಶೋರೂಂ ಒಳಗೆ ಇದ್ದ ಪಿರ್ಯಧಿದಾರರು ಸ್ಥಳಕ್ಕೆ ಧಾವಿಸಿ ಅವರ ಕೃತ್ಯವನ್ನು ಆಕ್ಷೇಪಿಸಿದಾಗ, ಪಿರ್ಯಾಧಿದಾರರನ್ನು ದೂಡಿ  ಹಾಕಿ ಕೆನ್ನೆಗೆ ಹೊಡೆದಾಗ, ಕಣ್ಣಾರೆ ಕಂಡಪಿರ್ಯಾಧಿದಾರರ ಸಿಬ್ಬಂದಿಯವರು  ಸ್ಥಳಕ್ಕೆ ಬಂದಾಗ ಆರೋಪಿಗಳು ಅವರನ್ನು ಉದ್ದೇಶಿಸಿ ನೀವು ಅಡ್ಡ ಬಂದರೆ ನಿಮ್ಮ ಕೈಕಾಲು ಮುರಿದು ಹಾಕುತ್ತೇವೆ, ನಿಮ್ಮ ಹಣಕಾಸು ಪೈನಾನ್ಸ್ ಕಂಪನಿಯವರು ನಾವು ಹಣವನ್ನು ಕಟ್ಟಿದ್ದು ನಮಗೆ ಕಿರುಕುಳ ನೀಡುತ್ತಿದ್ದಾರೆ ಅವರು ಏನಾದರೂ ಸಿಕ್ಕಿದರೆ ಅವರನ್ನು ಕೂಡ  ಈ ಸ್ಥಳದಲ್ಲಿ ನಾವು ಕಟ್ಟಿ ಹಾಕಿ ಸುಡಲು ಬಂದಿರುವುದಾಗಿಯೂ ಅವರು ಸಿಗದ ಕಾರಣ ಟಿ ವಿ ಎಸ್ ಪೈನಾನ್ಸ್ ನಿಂದ ಪಡಕೊಂಡ ವಾಹನವನ್ನು ಸುಡುತ್ತಿದ್ದೇವೆ ಎಂದು ಸ್ಥಳದಲ್ಲಿ ವಾಹನಕ್ಕೆ ಬೆಂಕಿ ಹಚ್ಚಿರುತ್ತಾರೆ ಇದರಿಂದಾಗಿ ಪಿರ್ಯಾಧಿದಾರರಿಗೆ ಅಂದಾಜು 1 ಲಕ್ಷ ನಷ್ಟವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 13/2022  ಕಲಂ: 448, 323, 435, 506, 427  ಜೊತೆ 34 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 08-02-2022 12:04 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080