ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಆಸಿಯಾ ಪ್ರಾಯ 50 ವರ್ಷ ಗಂಡ: ಅಬ್ದಲ್‌  ಖಾದರ್‌ ವಾಸ: ಪಿಲಿಚಾಮುಂಡಿಕಲ್ಲು ಮನೆ, ಕುವೆಟ್ಟು ಗ್ರಾಮ, ಗುರುವಾಯನಕೆರೆ ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 06-03-2022 ರಂದು 16-00 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಮಹಮ್ಮದ್‌ ಮನ್ಸೂರ್‌ ಎಂಬವರು KA-21-Q-3899ನೇ ನೋಂದಣಿ ನಂಬ್ರದ ಸ್ಕೂಟರ್‌ನಲ್ಲಿ ಪಿರ್ಯದುದಾರರಾದ ಆಸಿಯಾ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೊಳುವಾರು-ಪುತ್ತೂರು ಮುಖ್ಯ ರಸ್ತೆಯಲ್ಲಿ ಕೊಡಿಪ್ಪಾಡಿ ಕಡೆಯಿಂದ ಕುವೆಟ್ಟು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೊಳುವಾರು ವಿಶ್ವಕರ್ಮ ಹಾಲ್‌ ಬಳಿ ರಸ್ತೆಗೆ ಹಾಕಲಾದ ಉಬ್ಬು ಹತ್ತಿರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಸಹಸವಾರರಾದ ಆಸಿಯಾ ರವರು ರಸ್ತೆಗೆ ಎಸೆಯಲ್ಪಟ್ಟು, ಬಲ ಭುಜಕ್ಕೆ ಗುದ್ದಿದ ಒಳ ನೋವು ಹಾಗೂ ಹಣೆಯ ಬಲ ಭಾಗ ಮತ್ತು ಬಲ ಕಣ್ಣಿನ ಬಳಿ ಗಾಯಗಳಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  42/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೋಮಪ್ಪ.ಪಿ  ಪ್ರಾಯ:36 ವರ್ಷ ತಂದೆ:ಮೇದಪ್ಪಗೌಡ ವಾಸ:ಪಟ್ನ ಮನೆ, ಕೋಡಿಂಬಾಳ ಗ್ರಾಮ,  ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:06.03.2022 ರಂದು   ಪಿರ್ಯಾದುದಾರರು ತನ್ನ ಮೋಟಾರ್‌ ಸೈಕಲ್‌ನಲ್ಲಿ ಮನೆಯಿಂದ ಮರ್ದಾಳ ಪೇಟೆಗೆ ಹೋಗುವರೇ ಕಡಬ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಮದ್ಯಾಹ್ನ 14.00 ಗಂಟೆಗೆ ಕಡಬ ತಾಲೂಕು ಬಂಟ್ರ ಗ್ರಾಮ ಮರ್ಧಾಳ ಅಂಚೆ  ಕೇಂಚಭಟ್ರ ಎಂಬಲ್ಲಿಗೆ ತಲುಪಿದಾಗ ಅದೇ ರಸ್ತೆಯಲ್ಲಿ ಪಿರ್ಯಾದುದಾರರ ಎದುರುಗಡೆಯಿಂದ ಕಡಬ ಕಡೆಗೆ ಮೋಟಾರ್ ಸೈಕಲ್ ಸವಾರನೊಬ್ಬನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದಾಗ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಮೋಟಾರ್‌ ಸೈಕಲ್‌ ಸವಾರನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಮೋಟಾರ್‌ ಸೈಕಲ್‌ನ ಬ್ರೇಕ್ ಒಮ್ಮೆಲೇ ಹಾಕಿದಾಗ ನಿಯಂತ್ರಣ ತಪ್ಪಿ ಮೋಟಾರ್‌ ಸೈಕಲ್‌ ಸವಾರ ಮತ್ತು ಸಹ ಸವಾರ ರಸ್ತೆಗೆ ಬಿದ್ದಿದು  ನಂತರ ಅಪಘಾತವಾದದನ್ನು ನೋಡಿದ ಪಿರ್ಯಾದುದಾರರು ಮೋಟಾರ್‌ ಸೈಕಲ್‌ ನಿಲ್ಲಿಸಿ ಹತ್ತಿರ ಹೋಗಿ ಮೋಟಾರ್ ಸೈಕಲ್  ಸವಾರ ಮತ್ತು ಸಹಸವಾರರನ್ನು ಉಪಚರಿಸಿ KA-02 HW-5574 ನೇ ಮೋಟಾರ್‌ ಸೈಕಲ್‌ನ್ನು ‌ರಸ್ತೆಯ ಎಡಬದಿಗೆ ನಿಲ್ಲಿಸಿ ನೋಡಲಾಗಿ ಮೋಟಾರ್ ಸೈಕಲ್ ಸವಾರ ಪಿರ್ಯಾದುದಾರರ  ಪರಿಚಯದ ದೀಕ್ಷೀತ್ .ಕೆ ಎಂಬಾತನಾಗಿದ್ದು ಆತನಿಗೆ ಎಡ ಕಾಲಿಗೆ ಗುದ್ದಿದ ಸಣ್ಣ ತರಚಿದ ಗಾಯವಾಗಿರುತ್ತದೆ ನಂತರ ಸಹಸವಾರನನ್ನು ಉಪಚರಿಸಿ ನೋಡಲಾಗಿ ವೀಕ್ಷೀತ್‌ ಪಿ ಎಂಬಾತನಾಗಿದ್ದು ಆತನಿಗೆ ತಲೆಗೆ ಮತ್ತು ಕೈ ಮತ್ತು ಕಾಲಿಗೆ ರಕ್ತಗಾಯವಾಗಿದ್ದು ಪ್ರಜ್ಞೆ ತಪ್ಪಿರುತ್ತಾನೆ.ತಕ್ಷಣ ಪಿರ್ಯಾದುದಾರರು  ಮತ್ತು ಸ್ಥಳದಲ್ಲಿದ್ದ ಧನುಷ್‌ ಎಂಬಾತನು ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ ಆಟೋ ರಿಕ್ಷಾ ವಾಹನವೊಂದರಲ್ಲಿ ಗಾಯಾಳುಗಳನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 20/2022 ಕಲಂ. 279,337   IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಕೇಶ್ ಕೆ  ಪ್ರಾಯ:27 ವರ್ಷ ತಂದೆ:ನಾರಾಯಣ ಶೆಟ್ಟಿ ವಾಸ:ಕೊಡಾಜೆ  ಮನೆ, ಮಾಣಿ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:07-03-2022 ರಂದು 15:15 ಗಂಟೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮೋಟಾರ್ ಸೈಕಲ್ KA-21-EA-4184 ರಲ್ಲಿ ದಿನೇಶ್ ಆರ್ ಶೆಟ್ಟಿ ರವರು ಸವಾರರಾಗಿ ಅದ್ವೈತ್  ಡಿ  ಶೆಟ್ಟಿ (12 ವರ್ಷ) ರವರು ಸಹ ಸವಾರರಾಗಿ ಕುಳಿತುಕೊಂಡು ಮಾಣಿ ಕಡೆಯಿಂದ ಜೋಗಿಬೆಟ್ಟು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ   ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಈಚರ್ ಲಾರಿ KA-52-A 9729 ನೇದನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಒಂದು ವಾಹನವನ್ನು ಓವರ್ ಟೇಕ್ ಮಾಡಿ ಮುಂದಿನಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ KA-21-EA-4184 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ  ರಸ್ತೆಗೆ ಬಿದ್ದು ಸವಾರ ದಿನೇಶ್ ಆರ್ ಶೆಟ್ಟಿ ರವರ ಬಲ ಕೈ ಭುಜದ ಎಲುಬಿಗೆ ತೀವ್ರ ತರಹದ ಗುದ್ದಿದ ಗಾಯ ಹಾಗೂ ಎರಡು ಕಾಲಿಗೆ ರಕ್ತ ಗಾಯ ಸಹ ಸವಾರನಾಗಿ ಕುಳಿತಿದ್ದ  ಅದ್ವೈತ್  ಡಿ  ಶೆಟ್ಟಿ ನವನ ತಲೆಯ ಮೇಲ್ಗಡೆ ತೀವ್ರ ತರಹದ ಗುದ್ದಿದ ಗಾಯ ಹಣೆಯ ಎಡ ಬದಿ ಗುದ್ದಿ ಗಾಯವಾಗಿ ಗಾಯಾಳುಗಳನ್ನು ಬಂಟ್ವಾಳದ ತುಂಬೆ ಫಾದರ್ ಮುಲ್ಲರ್ ಚಿಕಿತ್ಸೆಗೆ 16:30 ಗಂಟೆಗೆ ದಾಖಲು ಮಾಡಿ  ಅದ್ವೈತ್ ಡಿ ಶೆಟ್ಟಿ ನವನು ಚಿಕಿತ್ಸೆ ಫಲಕಾರಿಯಾಗದೇ 17:39 ಗಂಟೆಗೆ ಮೃ ತಪಟ್ಟಿರುವುದಾಗಿದೆ.ಗಾಯಾಳು ದಿನೇಶ್ ಶೆಟ್ಟಿರವರನ್ನು ಚಿಕಿತ್ಸೆ ಬಗ್ಗೆ  ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆ ಅ ಕ್ರ 40/2022 ಕಲಂ:279,337,304(ಎ) ಭಾ.ದಂ.ಸಂ ಮತ್ತು 134 ಎ&ಬಿ ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವೆಂಕಟೇಶ್‌ಕುಮಾರ್‌ ಹೆಚ್‌ಪಿ ಪ್ರಾಯ 57 ವರ್ಷ ತಂದೆ:ಪಿ ಹೆಚ್‌ ಆಚಾರ್ಯ ವಾಸ:ಜಪ್ಪಿನಮೊಗರು ಮನೆ, ಬ್ರಹ್ಮಬೈರದಕಳ ,ಮಂಗಳೂರು ಎಂಬವರ ದೂರಿನಂತೆ ಪಿರ್ಯಾಧಿದಾರರು ತನ್ನ ಕೆಲಸದ ನಿಮಿತ್ತ ತನ್ನ ಬಾಬ್ತು KA-19-HC-1542ನೇ ಮೋಟಾರ್ ಬೈಕ್‌ನಲ್ಲಿ ದಿನಾಂಕ:05-03-2022 ರಂದು ಸಾಲೆತ್ತೂರಿಗೆ ಹೋಗಿ ವಾಪಾಸು ತನ್ನ ಕಚೇರಿಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ 5.30 ಗಂಟೆಗೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿಗೆ ತಲುಪಿದಾಗ ಮೆದುಬೈಲು ಕಡೆಯಿಂದ ಮೆದು ಜಂಕ್ಷನ್‌ ಕಡೆಗೆ ಬಂದ KA-19-EM-1195ನೇ ಮೋಟಾರ್‌ ಬೈಕನ್‌ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿ ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿದಾರರು ಮೋಟಾರ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಎಡ ಕೈ ಕೋಲು ಕೈಗೆ,ಎಡಕೋಲು ಕಾಲಿಗೆ ಹಾಗೂ ಎಡಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 39/2022  ಕಲಂ: 279,337 ಬಾಧಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಝರೀನಾ ಪ್ರಾಯ 35 ವರ್ಷ ಗಂಡ: ಕೆ ಖಾಲಿದ್  ವಾಸ:ಆಳಕೆ ಮನೆ.ತಣ್ಣಿರುಪಂಥ  ಗ್ರಾಮ ಬೆಳ್ತಂಗಡಿ  ತಾಲೂಕು ಎಂಬವರ ದೂರಿನಂತೆ ದಿನಾಂಕ:07-03-2022ರಂದು ಬೆಳಿಗ್ಗೆ 10.40ಗಂಟೆಯಿಂದ  11.00ಗಂಟೆಯ ಮದ್ಯದ ಅವಧಿಯಲ್ಲಿ ಪಿರ್ಯಾದಿದಾರರು ಕಲ್ಲೇರಿಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಯಾರೋ ಕಳ್ಳರು ಪಿರ್ಯಾದಿದಾರರ ಬ್ಯಾಗ್‌ನ ಝಿಪ್‌ ನ್ನು ಪಿರ್ಯಾದಿದಾರರಿಗೆ ತಿಳಿಯದಂತೆ ತೆಗೆದು ಬ್ಯಾಗ್‌ನಲ್ಲಿಟ್ಟಿದ್ದ  ತಲಾ 14 ಗ್ರಾಂ ತೂಕವಿರುವ ಚಿನ್ನದ ಬಳೆಗಳು -2,   ಸುಮಾರು  8 ಗ್ರಾಂ ತೂಕದ  ಚಿನ್ನದ ಸರ-1,  ತಲಾ  2 ಗ್ರಾಂ ತೂಕದ ಉಂಗುರಗಳು -2,  ತಲಾ 1 ಗ್ರಾಂ ತೂಕದ  ಮಕ್ಕಳ ಉಂಗುರಗಳು-2   2 ಗ್ರಾಂ ತೂಕದ  ಮಗುವಿನ ಕಿವಿಯ  ಬೆಂಡೋಲೆ =-1  ಜೊತೆ ಒಟ್ಟು   44ಗ್ರಾಂ ತೂಕದ ಚಿನ್ನಾಭರಣಗಳನ್ನು ಪಿರ್ಯಾದಿದಾರರಿಗೆ  ತಿಳಿಯದಂತೆ ತೆಗೆದು ಅದರಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ  1,76,000 ಆಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 36/2022 ಕಲಂ:379 ಭಾದಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವನಿತಾ ಎನ್ ಜೆ  ಪ್ರಾಯ:  45 ವರ್ಷ, ಗಂಡ: ಜಗದೀಶ್ ಎನ್ ಎಸ್, ವಾಸ: ನೇರಳ ಮನೆ, ಐವತ್ತೊಕ್ಲು ಗ್ರಾಮ,  ಸುಳ್ಯ  ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ನೇರಳ ಮನೆ ಎಂಬಲ್ಲಿ ತಮ್ಮ ಸಂಸಾರದೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರ ಗಂಡ ಜಗದೀಶ ಎಂಬವರು ದಿನಾಂಕ: 07.03.2022 ರಂದು ಪೂರ್ವಾಹ್ನ 10:50 ಗಂಟೆಗೆ ಅವರ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಹೋಗಿರುವ ಸಂದರ್ಭದಲ್ಲಿ ಜಮೀನಿನ ಹತ್ತಿರವಿರುವ ಎದ್ರಿ ಸೀತಾರಾಮ ಶೆಟ್ಟಿ ಎಂಬವರು ಅಪರಿಚಿತ ವ್ಯಕ್ತಿಗಳು ಗುಂಪನ್ನು ಕಟ್ಟಿಕೊಂಡು ಸುಮಾರು 4-5 ಜನರು ಅವರ ಜಮೀನನ್ನು ಒತ್ತುವರಿ ಮಾಡುವ ಉದ್ದೇಶದಿಂದ ಕಣಿಯನ್ನು ತೆಗೆಯುವಾಗ ಪಿರ್ಯಾದಿಯ ಗಂಡ ಎದ್ರಿ ಸೀತಾರಾಮ ಶೆಟ್ಟಿಯವರಲ್ಲಿ ಮೌಖಿಕವಾಗಿ, “ಇದು ನನ್ನ ಜಮೀನು”, ಹಾಗಿರುವಾಗ ನೀವು ಜನರ ಗುಂಪನ್ನು ಕಟ್ಟಿಕೊಂಡು ಏಕಾಏಕಿ ಕಾಮಗಾರಿ ಮಾಡುವುದು ಸರಿಯಲ್ಲ ಎಂಬುದಾಗಿ ವಿನಯದಿಂದ ಹೇಳಿದ್ದು, ಆ ಸಂದರ್ಭದಲ್ಲಿ ಎದ್ರಿಯು ಪಿರ್ಯಾದಿಯ ಗಂಡನಿಗೆ ಹೀನಾಮಾನವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿ ಕಬ್ಬಿಣದ ರಾಡ್ ನಿಂದ ಜೀವಹಾನಿಯಾಗುವ ರೀತಿಯಲ್ಲಿ ಹಲ್ಲೆ ಮಾಡಿದ್ದು, ತಕ್ಷಣವೇ ಈ ವಿಷಯವನ್ನು ತಿಳಿದು ಅವರ ಪರಿಚಯಸ್ಥರಾದ ದಿನೇಶ್ ಪುಂಡಿಮನೆ ಎಂಬವರ ಸಹಕಾರದೊಂದಿಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ  ಅ.ಕ್ರ ನಂಬ್ರ  : 28-2022 ಕಲಂ: 143, 146, 148, 324, 504, 506 ಜೊತೆಗೆ 149  IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:07.03.2022 ರಂದು ಹೆಎಚ್ ಸಿ 418 ನೇ ರವರೊಂದಿಗೆ ಬೀಟ್ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 18.00 ಗಂಟೆಗೆ ಸುರ್ಯ ದೇವಸ್ಥಾನದ ರಸ್ತೆಯ ಮೂಲಕ ಕೆಎ21 8800 ನೇ ಪಿಕಪ್ ವಾಹನದಲ್ಲಿ ದನ ಮತ್ತು ಕರುವನ್ನು ವಧೆಮಾಡಿ ಮಾಂಸಮಾಡಿ ಮರಾಟಮಾಡಲು ಸಾಗಾಟ ಮಾಡುತ್ತಿದ್ದಾಗ ಉಜಿರೆ ಗ್ರಾಮದ ಇಚ್ಚಿಲ ಸರ್ಕಲ್ ಬಳಿ ತಲುಪಿದಾಗ ಎದುರಿನಿಂದ ಅದೇ ಕೆಎ21 8800 ನೇ ಪಿಕಪ್ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ಕಂಡು ನಿಲ್ಲಿಸಿ ಸಿಬ್ಬಂದಿಗಳ ಸಹಾಯದಿಂದ ಪರಿಶೀಲಿಸಿ ನೋಡಲಾಗಿ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೇ ಜಾನುವಾರನ್ನು ಸುಮಾರು 11000/- ರೂ ಮೌಲ್ಯದ ದನ, ಸುಮಾರು 500/- ರೂ ಮೌಲ್ಯದ ಕರು ಹಾಗೂ ಇವುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ಸುಮಾರು 200000/- ರೂ ಮೌಲ್ಯದ ಪಿಕಫ್ ವಾಹನ ಹಾಗೂ ಮೂರು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 16/2022 ಕಲಂ: 4,5,7,8,,12 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-03-2022 10:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080