ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ. ಯಶೋಧ, ಪ್ರಾಯ 43 ವರ್ಷ, ಗಂಡ: ಹರೀಶ್ ಪೂಜಾರಿ,  ವಾಸ: 1-920, ಬಿರಾವು ಮನೆ, ಪೆರಿಯತ್ತೋಡಿ, ಕಬಕ ಗ್ರಾಂ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 07-04-2022 ರಂದು ಆರೋಪಿ ಸ್ಕೂಟರ್ ಸವಾರ ಅಹಮ್ಮದ್ ಇರ್ಫಾನ್ ಎಂಬವರು KA-19-EP-0041 ನೇ ನೋಂದಣಿ ನಂಬ್ರದ ಸ್ಕೂಟರನ್ನು ಮಾಣಿ ಕಡೆಯಿಂದ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ ಬಲ್ನಾಡು ರಸ್ತೆ ಕಡೆಗೆ ಹೋಗುವ ಸಂದರ್ಭದಲ್ಲಿ ಬಲ್ನಾಡು-ಬಪ್ಪಳಿಗೆ ಕ್ರಾಸ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬಪ್ಪಳಿಗೆ ಎಂಬಲ್ಲಿ ಲಕ್ಷ್ಮೀ ಆರ್ಕೇಡ್ ಕಟ್ಟಡದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕೆ ಯಶೋಧ ಎಂಬವರು ಬಲ್ನಾಡು ಕಡೆಯಿಂದ ಬಪ್ಪಳಿಗೆ ಕ್ರಾಸ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-L-5461 ನೇ  ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಯಶೋಧರವರು ರಸ್ತೆಗೆ ಬಿದ್ದು, ಎಡಕೋಲು ಕಾಲಿಗೆ ಗುದ್ದಿದ ಒಳನೋವಿರುವ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸವಾರನಿಗೂ ಕೈಗೆ ಹಾಗೂ ಭುಜಕ್ಕೆ ಗುದ್ದಿದ ನೋವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  67/2022 ಕಲಂ: 279,337ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸ್ವೀವನ್ ಜೂಡ್ ಸಿಕ್ವೇರಾ ಪ್ರಾಯ: 49 ವರ್ಷ ತಂದೆ: ದಿ| ಅಲ್ಫೋನ್ಸ್ ಸಿಕ್ವೇರಾ ವಾಸ: ಕೆ.ಸಿ.ರೋಡ್ ಮನೆ, ಕಲ್ಲಡ್ಕ ಅಂಚೆ, ಗೋಳ್ತಮಜಲು ಗ್ರಾಮ ಬಂಟ್ವಾಳ ತಾಲೂಕು ರವರು ಪ್ರಶಾಂತ್ ಕಾರಂತ್ ರವರಿಗೆ ವ್ಯವಹಾರದ ನಿಮಿತ್ತ ಸುಮಾರು 60,000/- ಹಣವನ್ನು ನೀಡಿದ್ದು ದಿನಾಂಕ:06-04-2022 ರಂದು ರಾತ್ರಿ ಸುಮಾರು 9.30 ಗಂಟೆಗೆ ಪ್ರಶಾಂತ್ ಕಾರಂತ್ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ಬಿ ಮೂಡ ಗ್ರಾಮದ ಬಿಸಿರೋಡ್ ಬಳಿಯಿರುವ ಲಯನ್ಸ್ ಕ್ಲಬ್ ಬಳಿ ಬರುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಅವರ ಅಣ್ಣ ರೊನಾಲ್ಡ್ ಸಿಕ್ವೇರಾರವರ ಜೊತೆಯಲ್ಲಿ ಲಯನ್ಸ್ ಕ್ಲಬ್ ಬಳಿ ಬಂದು ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರು, ಅವರ ಅಣ್ಣ ಮತ್ತು ಪ್ರಶಾಂತ್ ಕಾರಂತ್ ರವರು ಮಾತನಾಡಿಕೊಂಡಿರುವಾಗ ರಾತ್ರಿ 10.00 ಗಂಟೆಗೆ ಪ್ರಶಾಂತ್ ಕಾರಂತ್ ರವರ ಮಗ ಸೋಹನ್ ಕಾರಂತ್ ಅಲ್ಲಿಗೆ ಬಂದು ಏಕಾಏಕಿ ಒಂದು ಸಿಮೆಂಟ್ ಶೀಟ್ ನ ತುಂಡಿನಿಂದ ಪಿರ್ಯಾದಿದಾರರಿಗೆ ಹೊಡೆದನು. ಆಗ ಪಿರ್ಯಾದಿದಾರರ ಅಣ್ಣ ಬೊಬ್ಬೆ ಹಾಕಿದಾಗ ಸಿಮೆಂಟ್ ಶೀಟ್ ನ ತುಂಡನ್ನು ಅಲ್ಲಿಯೇ ಬಿಸಾಡಿ ಓಡಿ ಹೋದನು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 39/2022  ಕಲಂ: 324  ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀ ರಾಕೇಶ್ (28 ವರ್ಷ ) ತಂದೆ: ಚಂದ್ರಶೇಖರ ಕುದ್ರೋಳಿ ಮನೆ ನೆಟ್ಟಣಿಗೆಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರಿಗೆ ದಿನಾಂಕ:-04.04.2022ರಂದು ರಾತ್ರಿ ಪಂಚೋಡಿಯ ಲೋಕೇಶ ಪಾಟಾಳಿ ಎಂಬವನು ಆತನ ಮೊಬೈಲ್ ನಂಬರಿನಿಂದ ಫಿರ್ಯಾದುದಾರರ ಮೊಬೈಲ್ ನಂಬರಿಗೆ ಕರೆ ಮಾಡಿ   ಮಹಿಳೆಯೊಬ್ಬರ ಮನೆಗೆ ಲೋಕೇಶ ಪಾಟಾಳಿಯು ರಾತ್ರಿ 12.00 ಗಂಟೆಗೆಲ್ಲಾ ಹೋಗುತ್ತಿರುವುದಾಗಿ ಫಿರ್ಯಾದುದಾರರು ಎಲ್ಲರಲ್ಲಿ ಹೇಳುತ್ತಿರುವುದಾಗಿ ಫಿರ್ಯಾದುದಾರರಲ್ಲಿ ಕೇಳಿರುತ್ತಾನೆ. ದಿನಾಂಕ;-06.04.2022ರಂದು ಮಧ್ಯಾಹ್ನದಿಂದ  ಸಂಜೆಯವರೆಗೆ ಮೇನಾಲದ ಭಾಸ್ಕರ ಎಂಬವನು ಆತನ ಮೊಬೈಲ್ ನಂಬರಿನಿಂದ ಫಿರ್ಯಾದುದಾರರ ಮೊಬೈಲ್ ನಂಬರಿಗೆ ಮಿಸ್‌ಕಾಲ್ ಮತ್ತು  ಕರೆ ಮಾಡಿ “ನೀನು ನನಗೆ ಒಮ್ಮೆ ಖುದ್ದಾಗಿ ಮಾತನಾಡಲು ಸಿಗಬೇಕು”  ಎಂಬುದಾಗಿ ಹೇಳಿದ್ದು, ಆ ವೇಳೆ ಫಿರ್ಯಾದುದಾರರು ಪುತ್ತೂರಿನಲ್ಲಿ ಇದ್ದುದರಿಂದ ರಾತ್ರಿ ವೇಳೆ ಸಿಗುವುದಾಗಿ ಸದ್ರಿಯವರಲ್ಲಿ ಹೇಳಿದ್ದು, ರಾತ್ರಿ ಸುಮಾರು 7.37 ಗಂಟೆಗೆ ಫಿರ್ಯಾದುದಾರರು ಮೇನಾಲಕ್ಕೆ ತಲುಪಿ ಸದ್ರಿ ಭಾಸ್ಕರನಿಗೆ ಕರೆ ಮಾಡಿದಾಗ ಸದ್ರಿಯವರು ತಾನು ಈಗ ಪಂಚೋಡಿಯಲ್ಲಿ ಇರುವುದಾಗಿ ಹೇಳಿ ಫಿರ್ಯಾದುದಾರರನ್ನು ಮೇನಾಲದ ಸಹಜ್ ಪೆಟ್ರೋಲ್ ಬಂಕ್‌ನ ಹಿಂಬದಿಯಲ್ಲಿರುವ  ಕುದ್ರೋಳಿ-ಮೈಯಾಳ ರಸ್ತೆಯಲ್ಲಿ ನಿಲ್ಲುವಂತೆಯೂ ತಾನು ಅಲ್ಲಿಗೆ ಬರುವುದಾಗಿಯೂ  ತಿಳಿಸಿರುತ್ತಾನೆ. ಅದರಂತೆ ಸಹಜ್ ಪೆಟ್ರೋಲ್ ಬಂಕಿನ ಹಿಂಬದಿಯಲ್ಲಿರುವ ಕುದ್ರೋಳಿ-ಮೈಯಾಳ ರಸ್ತೆಯಲ್ಲಿ  ಮೇನಾಲ ಎಂಬಲ್ಲಿ  ನಿಂತುಕೊಂಡಿರುವಾಗ ರಾತ್ರಿ ಸುಮಾರು 8.00 ಗಂಟೆಗೆ ಮೇನಾಲದ ಭಾಸ್ಕರನು ಈಶ್ವರಮಂಗಲ- ಪಳ್ಳತ್ತೂರು ಮುಖ್ಯ ರಸ್ತೆಯ ಕಡೆಯಿಂದ ನಡೆದುಕೊಂಡು ಫಿರ್ಯಾದುದಾರರ ಬಳಿಗೆ ಬಂದು ಫಿರ್ಯಾದುದಾರರನ್ನು ಉದ್ದೇಶಿಸಿ,”ನನ್ನ ಅತ್ತೆಯ ಮಗಳ ಮನೆಗೆ ಪಂಚೋಡಿಯ ಲೋಕೇಶ ಪಾಟಾಳಿ ರಾತ್ರಿ ವೇಳೆ ಬರುತ್ತಿರುವುದಾಗಿ ನೀನು  ಪ್ರಚಾರ ಮಾಡುತ್ತೀಯಾ?’  ಎಂದು ಕೇಳಿದಾಗ ಫಿರ್ಯಾದುದಾರರು “ನನಗೆ ಈ ವಿಚಾರ ಗೊತ್ತಿಲ್ಲ” ಎಂಬುದಾಗಿ ಹೇಳಿರುತ್ತಾರೆ. ಅಷ್ಟರಲ್ಲಿ  ಈಶ್ವರಮಂಗಲ- ಪಳ್ಳತ್ತೂರು ಮುಖ್ಯ ರಸ್ತೆಯ ಕಡೆಯಿಂದ ಬಿಳಿ ಬಣ್ಣದ ಕಾರೊಂದು ಸದ್ರಿ ರಸ್ತೆಯಲ್ಲಿ ಬಂದು ಫಿರ್ಯಾದುದಾರರ ಬಳಿ ನಿಂತಿದ್ದು, ಸದ್ರಿ ಕಾರಿನ ಹೆಡ್‌ಲೈಟನ್ನು ಆಫ್ ಮಾಡದೇ  ಪಂಚೋಡಿಯ ಲೋಕೇಶ ಪಾಟಾಳಿ ಮತ್ತು ಕೇಶವ ಪಾಟಾಳಿ ಎಂಬವರು ಸದ್ರಿ ಕಾರಿನಿಂದ ಇಳಿದು ಫಿರ್ಯಾದುದಾರರ ಬಳಿಗೆ ಬಂದಿದ್ದು, ಆ ಪೈಕಿ ಲೋಕೇಶ ಪಾಟಾಳಿಯು ಫಿರ್ಯಾದುದಾರರನ್ನು ಉದ್ದೇಶಿಸಿ” ಅವಾಚ್ಯ ಶಬ್ದದಿಂದ ಬೈದು ನೀನು ಇನ್ನು ಬದುಕಿರಬಾರದು. ನಿನ್ನನ್ನು ಇಲ್ಲಿಯೇ ಕೊಂದು ಬಿಡುತ್ತೇನೆ” ಎಂದು ಹೇಳುತ್ತಾ ಫಿರ್ಯಾದುದಾರರ ಎದೆಗೆ  ಇರಿಯಲು ಆತನ ಕೈಯಲ್ಲಿದ್ದ  ಚೂರಿಯನ್ನು ಬೀಸಿದಾಗ  ಫಿರ್ಯಾದುದಾರರು  ಕೈಯನ್ನು ಅಡ್ಡ ಹಿಡಿದಿದ್ದು, ಆವೇಳೆ ಆತನು ಇರಿದ ಚೂರಿಯು ಫಿರ್ಯಾದುದಾರರ ಎಡ ಕೋಲು  ಕೈಗೆ ತಾಗಿ   ರಕ್ತ ಗಾಯವಾಗಿರುತ್ತದೆ.  ಬಳಿಕ ಲೋಕೇಶ ಪಾಟಾಳಿಯು ಚೂರಿಯಿಂದ ಫಿರ್ಯಾದುದಾರರ ಕುತ್ತಿಗೆಗೆ ಇರಿಯಲು ಚೂರಿಯನ್ನು  ಬೀಸಿದಾಗ ಫಿರ್ಯಾದುದಾರರು ಪಕ್ಕಕ್ಕೆ ಸರಿದಿದ್ದು, ಆ ವೇಳೆ ಚೂರಿಯು ಫಿರ್ಯಾದುದಾರರ ಕುತ್ತಿಗೆಗೆ ಮತ್ತು ಎಡಕೈ ತೋಳಿಗೆ  ತಾಗಿ ರಕ್ತ ಗಾಯವಾಗಿರುತ್ತದೆ.  ಆವೇಳೆ ಸದ್ರಿ ರಸ್ತೆಯಲ್ಲಿ ಮೋಟಾರ್ ಸೈಕಲೊಂದು ಬರುತ್ತಿರುವುದನ್ನು ನೋಡಿ ಫಿರ್ಯಾದುದಾರರು ಸದ್ರಿ ಆರೋಪಿಗಳಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಭಾಸ್ಕರನು ಫಿರ್ಯಾದುದಾರರನ್ನು  ಹಿಡಿದುಕೊಂಡು ಓಡಿ ಹೋಗದಂತೆ  ತಡೆದಿದ್ದು, ಆ ವೇಳೆ ಕೇಶವ ಪಾಟಾಳಿಯು ಮರದ ದೊಣ್ಣೆಯಿಂದ ಫಿರ್ಯಾದುದಾರರ ತಲೆಯ ಹಿಂಭಾಗಕ್ಕೆ ಹೊಡೆದಿರುತ್ತಾನೆ. ಸದ್ರಿಯವರ ಕೃತ್ಯವನ್ನು ನೋಡಿದ ಮೋಟಾರ್ ಸೈಕಲಿನ ಸವಾರನು ಮೋಟಾರ್ ಸೈಕಲನ್ನು ನಿಲ್ಲಿಸಿದಾಗ ಭಾಸ್ಕರನು “ಇವತ್ತು ನೀನು ಬದುಕಿದೆ.  ಇನ್ನು ಮುಂದಕ್ಕಾದರೂ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಬೆದರಿಕೆ ಹಾಕಿದ್ದು, ಬಳಿಕ ಸದ್ರಿ 3 ಜನ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಚೂರಿ ಮತ್ತು ದೊಣ್ಣೆಯೊಂದಿಗೆ  ಕೇಶವ ಪಾಟಾಳಿಯು ಚಲಾಯಿಸಿಕೊಂಡಿದ್ದ KA21 N 6370ನೇ ಕಾರಿನಲ್ಲಿ ಸ್ಥಳದಿಂದ ತೆರಳಿರುತ್ತಾರೆ. ಆರೋಪಿಗಳ ಕೃತ್ಯದಿಂದ ಗಾಯಗೊಂಡ ಫಿರ್ಯಾದುದಾರರನ್ನು  ಮೈಯಾಳದ ಹರೀಶ್ ಎಂಬವರು, ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆ ತಂದಾಗ ವೈದ್ಯಾಧಿಕಾರಿಯವರು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆಯನ್ನು ನೀಡಿರುತ್ತಾರೆ.  ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 46/2022 ಕಲಂ:504 324 307 341 506 ಜತೆಗೆ 34 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 3

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಿಗೆ ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ ಸ.ನಂಬ್ರ: 238/1ಪಿ3 ರಲ್ಲಿ 2.18 ಎಕ್ರೆ ಕೃಷಿ ಭೂಮಿಯನ್ನು ಹೊಂದಿದ್ದು, ಸುಮಾರು 40 ವರ್ಷಗಳಿಂದ ಸ್ವಾದೀನದಲ್ಲಿರುವುದಾಗಿದೆ. ಪಿರ್ಯಾದುದಾರರ ಸ್ಥಿರಾಸ್ಥಿಯಲ್ಲಿ ಹೆಬ್ಬಲಸು ,ಬಣ್ಪು, ರಾಮಪತ್ರೆ ಹಾಗೂ ಮಾವು ಮರಗಳಿದ್ದು, ಗೇರು ಕೃಷಿ ಕೂಡ ಇರುತ್ತದೆ.ಗೇರು ಕೃಷಿ ಲಾಭ ಇಲ್ಲದೆ ಇದ್ದುದರಿಂದ ಅಡಿಕೆ ಕೃಷಿ ಮಾಡುವರೇ ಮರಗಳನ್ನು ಕಡಿದಿರುತ್ತಾರೆ.  ಕಡಿದ ಮರಗಳನ್ನು ದಿನಾಂಕ: 09-12-2021 ರಂದು ಕೃಷಿ ಜಮೀನಿಂದ ವಾಹನದಲ್ಲಿ ಹೊರಗಡೆ ಸಾಗಾಟ ಮಾಡಿ ಸ್ಥಳದಲ್ಲಿ ರಾಶಿ ಹಾಕುತ್ತಿದ್ದ ವೇಳೆಗೆ ಅರಣ್ಯ ಇಲಾಖೆಯ ಆಧಿಕಾರಿಗಳು ಸ್ಥಳಕ್ಕೆ ಬಂದು ಪಿರ್ಯಾದುದಾರರು ಕಡಿದು ಹಾಕಿದ ಮರ ಹಾಗೂ ವಾಹನವನ್ನು ಜಪ್ತಿ ಮಾಡಿರುತ್ತಾರೆ. ಪಿರ್ಯಾದುದಾರರ ವರ್ಗ ಜಮೀನಿಂದ  ಕಡಿದ ಮರಗಳನ್ನು ಅರಣ್ಯ ಇಲಾಖಾ ಅಧಿಕಾರಿಯವರು ಕಾನೂನು ರೀತಿಯ ವಶಪಡಿಸಿಕೊಂಡಿರುತ್ತಾರೆ ಹಾಗೂ ಪಿರ್ಯಾದುದಾರರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ. ದಿನಾಂಕ; 10-12-2021 ರಂದು ಯಾವುದೇ ನೋಟೀಸನ್ನು ನೀಡದೇ ಪಿರ್ಯಾದುದಾರರ ಸ್ಥಿರಾಸ್ಥಿಗೆ ಅರಣ್ಯಾಧಿಕಾರಿಗಳು ಅಕ್ರಮ ಪ್ರವೇಶ ಮಾಡಿ ತಾಯಿ ಹಾಗೂ ಪಿರ್ಯಾದುದಾರರನ್ನು  ಬರಹೇಳಿ ವಿಚಾರಿಸಿ ಮರಗಳನ್ನು ತೋರಿಸಿದಂತೆ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿರುತ್ತಾರೆ. ಸದ್ರಿ ಮರಗಳನ್ನು ಡಿಪ್ಪೋಗೆ ಸಾಗಿಸಿರುತ್ತಾರೆ. ಅಲ್ಲದೆ ಮತ್ತಷ್ಟು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸಿರುತ್ತಾರೆ. ಅಲ್ಲದೆ  ರೂ. 5,00,000/-ನೀಡುವಂತೆ ತಿಳಿಸಿರುತ್ತಾರೆ. ಪಿರ್ಯಾದುದಾರರು ಹಣ  ನೀಡಲು ಅನುಕೂಲ ಇರುವುದಿಲ್ಲವಾಗಿ ತಿಳಿಸಿದಾಗ ಬೆದರಿಸಿ ಜಾತಿ ನಿಂದನೆ ಮಾಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ;447,506 ಐಪಿಸಿ   ಮತ್ತು ಕಲಂ: 3(1)(s) SC & ST ACT 2014 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪೊಲೀಸ್ ಉಪನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರು ದಿನಾಂಕ:06.04.2022 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಮಾಡುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಮಂಜದ ಪಲ್ಕೆ ಎಂಬಲ್ಲಿರುವ ಬಶೀರ್ ಎಂಬಾತನ ಮನೆಗೆ ರಾತ್ರಿ 10.30ಗಂಟೆಯ ವೇಳೆಗೆ ದಾಳಿ ನಡೆಸಿ ಮನೆಯ  ಹಿಂಬದಿಯ ಒಳಗಿನ ಬಚ್ಚಲು ಕೋಣೆಯಲ್ಲಿ ಮಾಂಸಕ್ಕಾಗಿ  ಕುತ್ತಿಗೆ ಕೊಯಿದು ಕೊಂದು ಹಾಕಿದ ಹೋರಿ-1 ಅಂದಾಜಿ ಮೌಲ್ಯ 6000 ಹಾಗೂ ವಧೇ ಮಾಡಲು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹೋರಿ ಕರು-ಒಂದು 500 ಹಾಗೂ ವಧೆ ಮಾಡಲು ಉಪಯೋಗಿಸಿದ ಮಂಡೆ ಕತ್ತಿ –ಒಂದು 100ರೂ ಹಾಗೂ ಚಾಕು-ಒಂದು 50ರೂ ಮತ್ತು ಕೆ ಎ 21 ಬಿ 3329ನೇ ಆಟೋ ರೀಕ್ಚಾ –ಒಂದು ಅಂದಾಜು ಮೌಲ್ಯ 80000 ಇವುಗಳನ್ನು ಪಂಚರ ಸಮಕ್ಷ,ಮ ಮಹಜರು ಮುಖೇಮ ವಶಪಡಿಸಿ ಬೆಳ್ತಂಗಡಿ ಠಾಣಾ ಅ.ಕ್ರ 23/2022 ಕಲಂ: 4,5,7,8,12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ & ಸಂರಕ್ಷಣಾ ಆಧ್ಯಾದೇಶ ನಿಯಮ 2020 ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ

 

ಕಡಬ ಪೊಲೀಸ್ ಠಾಣೆ : ಪಿರ್ಯಾದುದಾರರ  ಸಂಬಂದಿಕ ಆರೋಪಿಯು ಪಿರ್ಯಾದುದರರ ಮನೆಗೆ ಆಗಾಗ ಬರುತ್ತಿದ್ದು ನಂತರ ಇಬ್ಬರ ನಡುವೆ ಸ್ನೇಹ ಬೆಳೆದು  ಪ್ರೀತಿಸಲು  ಪ್ರಾರಂಬಿಸಿದ್ದು ನಂತರ ಹೇಗೂ ಮದುವೆಯಾಗಲ್ಲಿದ್ದೆವೆ  ಎಂದು ನಂಬಿಸಿ  ಇಚ್ಚೆಗೆ ವಿರುದ್ದವಾಗಿ  ಸಂಬೋಗ ನಡೆಸಿದ್ದು ಬಳಿಕ ಕರ್ತವ್ಯಕ್ಕೆ ತೆರಳಿರುತ್ತಾನೆ  ನಂತರ ಪಿರ್ಯಾದುದಾರರು ಗರ್ಭಿಣಿಯಾದ ವಿಷಯ ಇಬ್ಬರ ಮನೆಯವರಿಗೆ ತಿಳಿದು ವಿವಾಹ ಮಾಡಲು  ನಿರ್ಧರಿಸಿರುತ್ತಾರೆ  ಮುಂದಿನ ದಿನಗಳಲ್ಲಿ ಅರೋಪಿತ ಗರ್ಭ ಧರಿಸಲು  ತಾನೇ ಕಾರಣ ಎಂದು ಪಿರ್ಯಾದುದಾರರನ್ನು ವಿವಾಹವಾಗುತ್ತೆನೆ ಎಂದು ಕುಟ್ರುಪ್ಪಾಡಿ  ಆಶಾ ಕಾರ್ಯಕರ್ತೆ ಇವರಿಗೆ  ಬರವಣಿಗೆ ಮುಖಾಂತರ ನೀಡಿ ಸ್ವತಃ ಒಪ್ಪಿ ಸಹಿ ಮಾಡಿ ಕಳುಹಿಸಿರುತ್ತಾನೆ ಅಲ್ಲದೇ ದಿನಾಂಕ 05/08/2021 ರಂದು ಪಿರ್ಯಾದುದಾರಿಗೆ ಗಂಡು ಮಗು ಜನಿಸಿದ್ದು   ನಂತರ ಆರೋಪಿಯು ದಿನಾಂಕ 15-11-2021 ರಂದು ಊರಿಗೆ ಬಂದು ಪಿರ್ಯಾದುದಾರರ ಮನೆಯವರಲ್ಲಿ ನಡೆಸಿದ ಮಾತುಕತೆಯಂತೆ ಅದೇ ದಿನ ಪುತ್ತೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹ ನೋಂದಾವಣೆಯಾಗಿರುತ್ತದೆ  ನಂತರ ಅದೇ ದಿನ ಆರೋಪಿತನು ಮರಳಿ ಕರ್ತವ್ಯಕ್ಕೆ ತೆರಳಿದ್ದು  ನಂತರದ ದಿನಗಳಲ್ಲಿ ಅರೋಪಿತನು ದೂರವಾಣಿ ಕರೆಯ ಮುಖಾಂತರ  ಪಿರ್ಯಾದುದಾರರ ಶೀಲದ ಬಗ್ಗೆ  ಅನುಮಾನ ವ್ಯಕ್ತಪಡಿಸುತ್ತಿದ್ದು ನಿನಗೆ ಹುಟ್ಟಿದ ಮಗು ನನ್ನದಲ್ಲ  ನೀನು ವ್ಯಭಿಚಾರಿ  ನಾನು ನಿನಗೆ ಡಿಎನ್ಎ ಟೆಸ್ಟ್ ಮಾಡಿಸುತ್ತೆನೆ  ನಿನ್ನ  ಮೇಲೆ ಮನನಷ್ಟ ಮೊಕದ್ದಮೆ  ಹೂಡುತ್ತೇನೆ  ಎಂದು  ಕಟು ಮಾತುಗಳಿಂದ ನಿಂದಿಸಿರುತ್ತಾರೆ  ನನಗೆ  ವರದಕ್ಷಣೆ ಕೊಡಬೇಕು ಎಂದು  ಪಿರ್ಯಾದುದಾರರಲ್ಲಿ ಪದೇ ಪದೇ ಕಿರುಕುಳ ನೀಡಿರುತ್ತಾರೆ ಅಲ್ಲದೇ ಪಿರ್ಯಾದುದಾರರ ಸಂಬಂಧಿಕರಿಬ್ಬರು ಆರೋಪಿಗಳು ಬೆದರಿಕೆ ಒಡ್ಡಿರುತ್ತಾರೆ ಈ ಬಗ್ಗೆ ಕಡಬ ಠಾಣೆಯಲ್ಲಿ ಕಲಂ. 376.498(A) 504.506.R/W 34 IPC And 3.4 D P Act     ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 3

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನವೀನ (33) ತಂದೆ: ರವಿ ಪೂಜಾರಿ ವಾಸ:  ದುರ್ಗಾ ಪ್ರಸಾದ್ ಕಂಬಳದಡ್ಡ ಬಳಿ ಮನೆ, ಕಾಶಿಪಟ್ಣ ಗ್ರಾಮ, ಬೆಳ್ತಂಗಡಿ ತಾಲೂಕು  ರವರ ತಮ್ಮ ನಾಗೇಶನಿಗೆ  ವಿಪರೀತ ಕುಡಿತದ ಅಭ್ಯಾಸವಿದ್ದು ದಿನಾಂಕ 04.04.2022 ರಂದು ಮಧ್ಯಾಹ್ನ 2.30 ಗಂಟೆಗೆ ವಿಪರೀತ ಕುಡಿದು ಮನೆಗೆ ಬಂದು  ಮನೆಯಲ್ಲಿ ಹುಲ್ಲಿಗೆ ಸಿಂಪಡಿಸುವರೇ  ತಂದಿಟ್ಟಿದ್ದ  Round Off ಎನ್ನುವ ಹುಲ್ಲು ನಾಶಕವನ್ನು ಸೇವಿಸಿ ಅಸ್ವಸ್ಥಗೊಂಡವರನ್ನು  ಪಿರ್ಯಾದಿದಾರರ ತಂದೆ ಕೂಡಲೇ ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಅಲ್ಲಿ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ. ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07.04.2022 ರಂದು ಮೃತಪಟ್ಟಿರುವುದಾಗಿದೆ ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 09-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ವಸಂತಿ ಪ್ರಾಯ 39 ವರ್ಷ. ಗಂಡ; ರಮೇಶ್ ಆಚಾರ್ಯ, ವಾಸ; ಹಳೆಯ ಅಂಚೆ ಕಚೇರಿ ಬಳಿ ಮನೆ ಗುರುವಾಯನಕೆರೆ ಕುವೆಟ್ಟು ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು   ರವರ ಗಂಡ ರಮೇಶ್ ಆಚಾರ್ಯ (55) ರವರು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮ ಗುರುವಾಯನಕೆರೆ, ಹಳೆಯ ಅಂಚೆ ಕಚೇರಿ ಬಳಿ ಇರುವ ತಮ್ಮ ಮನೆಯಲ್ಲಿ  ಬೆಳ್ಳಿ ಆಭರಣಗಳ ಕೆಲಸ ಮಾಡಿಕೊಂಡಿದ್ದವರು ದಿನಾಂಕ 06.04.2022 ರಂದು ರಾತ್ರಿ 8.00 ಗಂಟೆಗೆ ಒಮ್ಮೆಲೇ ಕೆಮ್ಮು ಬಂದಿದ್ದು ಉಗುಳಲೆಂದು ಬಚ್ಚಲು ಕೊಣೆಗೆ ಹೋದವರು ಅಲ್ಲಿಯೇ ಕುಸಿದು ಬಿದ್ದುದನ್ನು ಕಂಡು ಉಪಚರಿಸಿ ಸಂಬಂದಿಯಾದ ಅಜಯ ಎಂಬವರಿಗೆ ವಿಚಾರ ತಿಳಿಸಿ ಒಂದು ಆ್ಯಂಬ್ಯೂಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಬಂದಾಗ ಅಲ್ಲಿಯ ವೈಧ್ಯರು ಪರೀಕ್ಷಿಸಿ ರಾತ್ರಿ 8.40 ಗಂಟೆಗೆ ರಮೇಶ್ ಆಚಾರ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯು ಡಿ ಆರ್ 15/2022 ಕಲಂ. 174  ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗೀತಾ  ಪ್ರಾಯ 24 ವರ್ಷ ಗಂಡ. ಬರಮಪ್ಪ ವಾಸ;  ಡಿಎಸ್‌ ಹಡಗಲಿ, ರೋಣ ತಾಲೂಕು ಗದಗ ಜಿಲ್ಲೆ ಪ್ರಸ್ತುತ ವಾಸ: ಮೂಡಡ್ಕ ಮನೆ, ಸರಳಿಕಟ್ಟೆ   ತೆಕ್ಕಾರು ಗ್ರಾಮ ಬೆಳ್ತಂಗಡಿ ತಾಲೂಕು ರವರು ಮೂಲತ ಗದಗ ಜಿಲ್ಲೆಯವರಾಗಿದ್ದು ಸುಮಾರು  1  ವಾರದ ಹಿಂದೆ  ಸರಳೀಕಟ್ಟೆ ಸಂದೇಶ್‌ ರವರ ಮನೆಗೆ  ಸಂಸಾರ ಸಮೇತ ತೋಟದ ಕೆಲಸಕ್ಕೆಂದು ಬಂದಿದ್ದು  ಅಲ್ಲಿಯೇ ಉಳಕೊಂಡಿದ್ದು, ಪಿರ್ಯಾದಿದಾರರ ಗಂಡ  ಬರಮಪ್ಪ ರವರು ವಿಪರೀತ ಮದ್ಯಪಾನ ಮಾಡುತ್ತಿದ್ದವರನ್ನು ಈ ಹಿಂದೆ ಧರ್ಮಸ್ಥಳ ಮದ್ಯವರ್ಜನ ಶಿಬಿರದಲ್ಲಿ ಮದ್ಯಪಾನ ಚಟವನ್ನು ಬಿಡಿಸಿ ಸುಮಾರು  3  ತಿಂಗಳ ಕಾಲ ಮದ್ಯಪಾನ ಬಿಟ್ಟವರು ವಾಪಾಸು  ಮದ್ಯಪಾನ ಸೇವಿಸಲು ಪ್ರಾರಂಬಿಸಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ: 07-04-2022ರಂದು ಸಂಜೆ 4.30 ಗಂಟೆಗೆ ನೇತ್ರಾವತಿ ಬ್ರಿಡ್ಜ್‌ ನಿಂದ ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 06/2022 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 08-04-2022 10:56 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080