ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುಷ್ಪರಾಜ (19), ತಂದೆ: ಉಮೇಶ ಗೌಡ, ವಾಸ: ಒಳಗುಡ್ಡೆ ಮನೆ, ನಾವೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 06-08-2021ರಂದು ಕೆಎ 70 ಎಚ್‌ 5092 ನೇ ದ್ವಿಚಕ್ರ  ವಾಹನದಲ್ಲಿ ಸಹಸವಾರನಾಗಿ ಕುಳಿತುಕೊಂಡು ದ್ವಿಚಕ್ರ ವಾಹನವನ್ನು ಸವಾರ ಮಂಜುನಾಥರವರು ಸವಾರಿ ಮಾಡಿಕೊಂಡು ಕಿಲ್ಲೂರು ಕಡೆಯಿಂದ ಲಾಯಿಲಾ ಕಡೆಗೆ ಬರುತ್ತಾ  ಸಮಯ ಸುಮಾರು ಸಂಜೆ 5.30 ಗಂಟೆಗೆ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ರಾಶಿರೋಟ್ಟು ಎಂಬಲ್ಲಿಗೆ  ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಲಾಯಿಲಾ ಕಡೆಯಿಂದ ಕಿಲ್ಲೂರು ಕಡೆಗೆ ಕೆಎ 21 ಬಿ 8186 ನೇ  ಮಹೀಂದ್ರಾ ಜೀತೋ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸವಾರ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಕಾಲಿನ ಮೊಣಗಂಟಿಗೆ, ತೊಡೆಗೆ, ಸೊಂಟಕ್ಕೆ ಗುದ್ದಿದ ರಕ್ತ ಗಾಯ, ಸವಾರ ಮಂಜುನಾಥನಿಗೆ ಬಲ ಕೈಗೆ ಗುದ್ದಿದ ಗಾಯವಾಗಿ  ಪಿರ್ಯಾಧಿದಾರರು ಮಂಗಳೂರು   ಆಸ್ಪತ್ರೆಯಲ್ಲಿ ಹಾಗೂ ಮಂಜುನಾಥರವರು ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 60/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಿ ಇಬ್ರಾಹೀಂ ಹಾಜಿ (61) ತಂದೆ: ಅಬ್ದುಲ್ಲಾ ವಾಸ: ಗುಂಡಿಯಡ್ಕ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಬಾಬ್ತು ಕೆಎ 21 ಸಿ 0527 ನೇ ಟಾಟಾ ಜೀಪ್ ನ್ನು ಚಾಲಕ ಉಮ್ಮರ್ ಎಂಬಾತನು ಈ ದಿನ ದಿನಾಂಕ 07.08.2021 ರಂದು ಮೀನನ್ನು ತಗೆದುಕೊಂಡು ಸುಳ್ಯ ದಿಂದ ಕಾವುವಿಗೆ ಹೋಗುವರೇ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಕದಿಕಡ್ಕ ಎಂಬಲ್ಲಿ ಸಮಯ ಸುಮಾರು 10.00 ಗಂಟೆಗೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಅಂದರೆ ಪುತ್ತೂರು ಕಡೆಯಿಂದ ಬಂದ ಕೆಎ 21 ಬಿ 5938 ನೇದರ ಪಿಕ್ ಅಪ್ ಚಾಲಕ ಪ್ರಮೋದ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಪಿಕ್ ಅಫ್ ನ್ನು ಚಲಾಯಿಸಿಕೊಂಡು ಬಂದು ಟಾಟಾ ಜೀಪಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಎರಡು ವಾಹನಗಳು ಜಖಂ ಆಗಿದ್ದು, ಉಮ್ಮರ್ ಚಲಾಯಿಸುತ್ತಿದ್ದ ಟಾಟಾ ಜೀಪ್ ಅಲ್ಲಿಯೇ ಹರಿಯುತ್ತಿದ್ದ ಕದಿಕಡ್ಕ ತೊರೆಗೆ ಬಿದ್ದು ಉಮ್ಮರ್ ಗೆ ಗಾಯಾವಾಗಿರುವುದಾಗಿದೆ ಮತ್ತು ಪ್ರಮೋದ್‌ ಎಂಬಾತನಿಗೆ ಸಹ ಸಣ್ಣಪುಟ್ಟ ಗಾಯವಾಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. 56/2021  ಕಲಂ : 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ: 07.08.2021  ರಂದು  ಸುಬ್ರಹ್ಮಣ್ಯ  ಪೊಲೀಸ್ ಠಾಣೆಯಲ್ಲಿ ಅ,ಕ್ರ 56/2021 ಕಲಂ; 376(2),506,384 ಐಪಿಸಿ, ಕಲಂ: 4,5(f),6,8,14 ಪೋಕ್ಸೋ ಕಾಯ್ದೆ-2012 ಹಾಗೂ 67(ಬಿ) ಐಟಿ ಕಾಯ್ದೆ -2008    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೀಕ್ಷಿತ್‌ ಪ್ರಾಯ 25 ವರ್ಷ ತಂದೆ . ನಾಣ್ಯಪ್ಪ ಪೂಜಾರಿ ವಾಸ: ಪೊಯ್ಯೆ  ಮನೆ,ಕಣಿಯೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ನಾಣ್ಯಪ್ಪ ಪೂಜಾರಿ ಪ್ರಾಯ 54 ವರ್ಷ ಎಂಬವರು ದಿನಾಂಕ:07-08-2021ರಂದು ಬೆಳಿಗ್ಗೆ 06.30ಗಂಟೆಯಿಂದ 08.00ಗಂಟೆಯ ಮದ್ಯದ ಅವಧಿಯಲ್ಲಿ ತನ್ನ ಮನೆಯ  ಬಳಿ ಇರುವ ತೆಂಗಿನ ಮರದ ಬುಡಕ್ಕೆ ಹಾಕುವರೇ ಹತ್ತಿರದ ಗುಡ್ಡೆಯಿಂದ ಸೊಪ್ಪು ತರಲು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪೊಯ್ಯೆ ಎಂಬಲ್ಲಿ  ಹಾದು ಹೋಗುವ ತೋಡನ್ನು ದಾಟಿ ಹೋಗುವ  ದಾರಿಯಲ್ಲಿ  ವಿದ್ಯುತ್‌ ವಯರ್‌ ತುಂಡಾಗಿ ಬಿದ್ದಿದನ್ನು ನಾಣ್ಯಪ್ಪ ಪೂಜಾರಿ ಪ್ರಾಯ 54 ವರ್ಷ  ರವರು ಗಮನಿಸದೆ ನಡೆದು ಹೋಗುತ್ತಿದ್ದಾಗ  ಸದ್ರಿ ವಿದ್ಯುತ್‌ ವಯರ್‌ ನಾಣ್ಯಪ್ಪ ಪೂಜಾರಿ ತಾಗಿ  ಮೈಮೇಲೆ ವಿದ್ಯುತ್‌ ಪ್ರವಹಿಸಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್‌ 27/2021  ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-08-2021 11:58 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080