ಅಪಘಾತ ಪ್ರಕರಣ: ೦5
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರುದ್ರೇಗೌಡ ಪ್ರಾಯ 65 ವರ್ಷ ತಂದೆ:ದಿ|| ರಂಗೇ ಗೌಡ ವಾಸ:ಹೂವಿನಹಳ್ಳಿ ಮನೆ ಕುಂಬ್ರಹಳ್ಳಿ ಗ್ರಾಮ ಸಕಲೇಶಪುರ ತಾಲೂಕು ಹಾಸನ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 06.11.2021 ರಂದು ಧರ್ಮಸ್ಥಳಕ್ಕೆ ದೇವರ ದರ್ಶನ ಪಡೆಯುವರೇ ಸಕಲೇಪುರದಿಂದ ಕೆಎ 40 ಎಪ್ 1428 ನೇ ksrtc ಬಸ್ಸಿನಲ್ಲಿ ಹೊರಟು ಇತರ ಪ್ರುಯಾಣಿಕರೊಂದಿಗೆ ಪ್ರಯಾಣಿಸಿಕೊಂಡು ಬರುತ್ತಿದ್ದು ಸದ್ರಿ ಬಸ್ಸನ್ನು ಅದರ ಚಾಲಕನು ಅತೀ ವೇಗ ಅಜಾಗರೂಕತೆ ಮತ್ತು ತೀವೃ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಾಹೆ ಮಂಗಳೂರು ಬೆಂಗಳೂರು ರಸ್ತೆಯಲ್ಲಿ ಬರುತ್ತಾ ರಾತ್ರಿ 8.30 ಗಂಟೆಯ ಸಮುಕ್ಕೆ ಕಡಬ ತಾಲೂಕು ಶಿರಾಡಿ ಗ್ರಾಮದ ಇಂಡಿಯನ್ ಪೆಟ್ರೋಲ್ ಪಂಪ್ ತಲುಪಿದಾಗ ಚಾಲಕನ ಹತೋಟಿ ತಪ್ಪಿ ರಸ್ತೆಯ ಬದಿಯಲ್ಲಿ ಹರಿಯುತ್ತಿದ್ದ ನೀರಿನ ಕಣಿಗೆ ಮುಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ ಎಡ ಕಾಲಿಗೆ ಎಡ ಕೈಗೆ ಬಲ ಕೈಗೆ ಬಲ ಎದೆಗೆ ಕುತ್ತಿಗೆ ಹಿಂಬಾಗಕ್ಕೆ ಗುದ್ದಿದ ನಮೂನೆಯ ಮತ್ತು ಬಲ ಹಣೆಗೆ ರಕ್ದಗಾಯವಾಗಿರುತ್ತದೆ. ಪಿರ್ಯಾದಿದಾರರು ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪೆತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:130/2021 ಕಲಂ:279, 337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಾಲಕೃಷ್ಣ ಪಿ, ಪ್ರಾಯ: 46 ವರ್ಷ, ತಂದೆ: ಚೆನ್ನಯ್ಯ, ವಾಸ: ಕಮಿಲ ಮನೆ, ಗುತ್ತಿಗಾರು ಗ್ರಾಮ , ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 06-11-2021 ರಂದು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ಎಂಬಲ್ಲಿರುವ ಅವರ ಮಗಳ ಮನೆಗೆ ಬಂದಿದ್ದು, ಅವರ ಮಗ ಮನೀಶ್ ಅಳಿಯ ಮೋಹನನೊಂದಿಗೆ ಆತನ ಬಾಬ್ತು ಬೈಕ್ ನಂ: KA 21 W 6124 ನೇ ಹೋಂಡಾ ಆಕ್ಟಿವಾದಲ್ಲಿ ಸುಬ್ರಹ್ಮಣ್ಯ ಪೇಟೆಗೆಂದು ಸುಮಾರು 12-35 ಗಂಟೆಗೆ ಹೊರಟಿದ್ದು, ಸುಮಾರು 12-45 ಗಂಟೆಗೆ ಪಿರ್ಯಾದಿದಾರ ಮಗ ಮನೀಶ್ ಬೈಕ್ ಅಪಘಾತವಾಗಿ ಗಾಯಗೊಂಡ ಬಗ್ಗೆ ಪಿರ್ಯಾದಿದಾರರಿಗೆ ದೂರವಾಣಿ ಕರೆ ಬಂದ ಮೇರೆಗೆ ಪಿರ್ಯಾದಿದಾರರು ಕೂಡಲೇ ರಸ್ತೆ ಬದಿಗೆ ಓಡಿ ಹೋಗಿ ನೋಡಲಾಗಿ . ಮನೀಶ್ ನು ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದು, ಬಳಿಕ ವಿಚಾರಿಸಲಾಗಿ ಅಳಿಯ ಮೋಹನನು ಬೈಕ್ ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ದನವೊಂದು ರಸ್ತೆಯಲ್ಲಿ ಬಂದಿದ್ದು ಅದನ್ನು ತಪ್ಪಿಸುವ ಸಲುವಾಗಿ ಒಮ್ಮೆಗೆ ಬ್ರೇಕ್ ಹಾಕಿದಾಗ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಗೆ ಮಗುಚಿ ಬಿದ್ದಿದ್ದು, ಮನೀಶ್ ನು ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಆತನಿಗೆ ತಲೆಯ ಎದುರು ಭಾಗಕ್ಕೆ, ಬಲ ಮುಂಗೈಗೆ ಮುರಿತದ ಗಾಯ, ಬಲ ಕಾಲಿನ ತೊಡೆಗೆ ಮುರಿತದ ಗಾಯ, ಎಡ ಕಾಲಿನ ತೊಡೆಗೆ ರಕ್ತಗಾಯವಾಗಿರುತ್ತದೆ. ಹಾಗೂ ಅಳಿಯ ಮೋಹನನಿಗೂ ಗುದ್ದಿದ ನಮೂನೆಯ ಗಾಯವಾಗಿರುತ್ತದೆ. ಕೂಡಲೇ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಇಬ್ಬರನ್ನು ಕರೆದುಕೊಂಡು ಹೋಗಿ ಪ್ರಥಮ ಚಿಕತ್ಸೆ ನೀಡಿ ನಂತರ ಮಗ ಮನೀಶ್ ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾದಿಕಾರಿಯವರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 80-2021 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಮಾಲುದ್ದೀನ್. ಕೆ (31) ತಂದೆ:ಆದಂ ಕುಂಞ ಕೆ ವಾಸ: ಮೈದಾನಮೂಲೆ ಮನೆ, ಒಳಮೊಗ್ರು ಗ್ರಾಮ, ಕುಂಬ್ರ ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 06-11-2021 ರಂದು 15-00 ಗಂಟೆಗೆ ಆರೋಪಿ ಆಕ್ಟೀವಾ ವಾಹನದ ಸವಾರ ಮಹಮ್ಮದ್ ಶರೀಫ್ ಎಂಬವರು KA-19-EJ-4199ನೇ ನೋಂದಣಿ ನಂಬ್ರದ ಅಕ್ಟೀವಾ ವಾಹನವನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೊಡಿಂಬಾಡಿ ಗ್ರಾಮದ ಅರ್ಬಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಜಮಾಲುದ್ದೀನ್ ರವರು ಸಹಸವಾರರಾಗಿ ಅವರ ತಮ್ಮ ಶಾಹುಲ್ ಹಮೀದ್ ರವರು ಸವಾರರಾಗಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-S-0190 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರಿಗೆ ಬಲಕಾಲಿನ ಕಿರು ಬೆರಳಿಗೆ ಗುದ್ದಿದ ರಕ್ತಗಾಯ, ಶಾಹುಲ್ ಹಮೀದ್ ರವರಿಗೆ ಬಲ ಕೈಯ ತಟ್ಟೆ ಮತ್ತು ಬಲ ಕಾಲಿನ ಪಾದಕ್ಕೆ ರಕ್ತಗಾಯವಾಗಿ ಚಿಕಿತ್ಸೆಗೆ ಪುತ್ತೂರು ಸಿ.ಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 135/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀನಿವಾಸ(29) ತಂದೆ: ದೇರಣ್ಣ ಗೌಡ ವಾಸ: ಪರನೀರು ಮನೆ, ಉರುವಾಲು ಗ್ರಾಮ & ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 07-11-2021 ರಂದು 12-30 ಗಂಟೆಗೆ ಆರೋಪಿ ಕಾರು ಚಾಲಕ ರಾಜ ಎಂಬವರು KA-19-MH-4476ನೇ ನೋಂದಣಿ ನಂಬ್ರದ ಕಾರಲ್ಲಿ ಜೆರಾಲ್ಡಾನ್, ಮಾಲಿ ಮಸ್ಕರೇನ್ಸ್, ಮೆಲ್ವಿನ್ ಮಸ್ಕರೇನ್ಸ್ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಅರವಿಂದ ಎಂಬವರು ಚಾಲಕರಾಗಿ ಅನುಷಾ ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-02-ME-8748ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಅರವಿಂದರವರಿಗೆ ಎದೆಗೆ, ಎಡಕಾಲಿಗೆ ಗುದ್ದಿದ ಗಾಯ, ಅನುಷಾ ರವರಿಗೆ ಬಲ ಗೈ ಭುಜಕ್ಕೆ ಹಾಗೂ ಎಡಕಾಲಿಗೆ ಗುದ್ದಿ ಗಾಯ, ಆರೋಪಿ ಚಾಲಕ ರಾಜ ಮತ್ತು ಅದರಲ್ಲಿದ್ದ ಪ್ರಯಾಣಿಕರಾದ ಜೆರಾಲ್ಡಾನ್, ಮಾಲಿ ಮಸ್ಕರೇನ್ಸ್, ಮೆಲ್ವಿನ್ ಮಸ್ಕರೇನ್ಸ್ ರವರಿಗೆ ಗುದ್ದಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಒಂದು ಆಂಬೂಲೇನ್ಸ್ ನಲ್ಲಿ ಕಳುಹಿಸಿಕೊಟ್ಟಿರುತ್ತಾರೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 136/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ : ದಿನಾಂಕ 07-11-2021 ರಂದು ಸಮಯ ಸುಮಾರು 17:00 ಗಂಟೆಗೆ ಬಂಟ್ವಾಳ ತಾಲೂಕು ಬಿ-ಕಸಬಾ ಗ್ರಾಮದ ಬಸ್ತಿಪಡ್ಪು ಎಂಬಲ್ಲಿ ದ್ವಿಚಕ್ರ ವಾಹನ ನಂಬ್ರ KA-19-EP-6682 ನೇಯದನ್ನು ಅದರ ಸವಾರ ಸಹಸವಾರರಿಬ್ಬರನ್ನು ಕುಳ್ಳಿರಿಸಿಕೊಂಡು ಹೆಲ್ಮೆಟ್ ಧರಿಸದೇ ದುಡುಕುತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಡ್ಡಾದಿಡ್ಡಿಯಾಗಿ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ವಾಹನವನ್ನು ಚಲಾಯಿಸುವುದನ್ನು ಕಂಡು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕರು ನಿಲ್ಲಿಸಲು ಸೂಚನೆ ನೀಡಿದ ಸಮಯ ದ್ವಿಚಕ್ರ ವಾಹನ ಸವಾರರು ವಾಹನವನ್ನು ಮುಂದಕ್ಕೆ ನಿಲ್ಲಿಸಿ ವಾಹನವನ್ನು ಬಿಟ್ಟು ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 118/2021 ಕಲಂ 279, ಐಪಿಸಿ 128(A), 194(D),S 119, 177 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಮೀನಾಕ್ಷಿ ಗಂಡ: ವಿಠಲ ವಾಸ: ಮಿತ್ತಮಜಲು ಮನೆ ಸಜಿಪ ಮೂಡ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಅಂಗಡಿಯಲ್ಲಿ ಇರುವಾಗ ಮಗಳು ಕರೆ ಮಾಡಿ ತಂದೆಗೆ ಕೆಲವು ಜನರು ಬೈದುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾಧಿದಾರರು ಅಂಗಡಿಯಿಂದ ಮನೆಗೆ ಸಮಯ 12.30 ಗಂಟೆಗೆ ಬಂದಾಗ ನೆರೆಕೆರೆಯವರಾದ ಧನುಷ, ಚರಣರಾಜ್, ಜೀವನ, ಸುಮಂತ, ನೀತಾ, ಸರೀತಾ ರವರು ಪಿರ್ಯಾಧಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮನೆ ಬಳಿ ಬಂದು ಅವರೆಲ್ಲರೂ ಒಟ್ಟು ಸೇರಿ ಪಿರ್ಯಾಧಿದಾರರ ಗಂಡನಿಗೆ ಅವಾಚ್ಯವಾಗಿ ಬೈದಿದ್ದು, ನಮ್ಮ ತಂಟೆಗೆ ಬಂದರೆ ನಮ್ಮ ತಲವಾರಿನಿಂದ ಕಡೆಯುತ್ತೆವೆ ಎಂದು ಜೀವ ಬೆದರಿಕೆ ಹಾಕಿ ಚರಣ ಹಾಗೂ ಸುಮಂತರವರು ಪಿರ್ಯಾಧಿ ಗಂಡನಿಗೆ ಕೈ ಹಾಗೂ ಕೆನ್ನೆಗೆ ಕೈಯಿಂದ ಹೊಡೆದು ಪುನಃ ಪಿರ್ಯಾಧಿದಾರರಿಗೆ ಜೀವಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 129/2021 ಕಲಂ: 143, 147, 447, 504, 506, 323 ಜೊತೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬೂಬಕ್ಕರ್ ಸಿದ್ದಿಕ್ ಪ್ರಾಯ (27) ತಂದೆ ಹಸನಬ್ಬ ಕಲ್ಲಾಜೆ ಮನೆ, ಪುದು ಗ್ರಾಮ ಎಂಬವರ ದೂರಿನಂತೆ ದಿನಾಂಕ 07-11-2021 ರಂದು ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಮನೆಯವರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು ಮದ್ಯಾಹ್ನ 12.20 ಗಂಟೆಗೆ ಪಿರ್ಯಾದಿದಾರರ ನೆರೆಯ ಶಪೀಕ್ ರವರು ಪೋನು ಮಾಡಿ ನಿಮ್ಮ ಮನೆಯ ಪಕ್ಕ ಮಹಮ್ಮದ್ ನಿಶ್ವಾನ್, ರಮೀಜ್ ಕಲಾಯಿ ಇತರರು ವಿವಾದಿತ ಜಾಗದಲ್ಲಿ ಕಂಪೌಂಡ್ ಗೋಡೆ ಕಟ್ಟುತ್ತಿದ್ದಾರೆ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಮತ್ತು ತಂದೆ ಮದ್ಯಾಹ್ನ 12.40 ಗಂಟೆಗೆ ಹೋದಾಗ ಮಹಮ್ಮದ್ ನಿಶ್ವಾನ್, ರಮೀಜ್ ಕಲಾಯಿ ಮತ್ತು ಇಲ್ಯಾಸ್ ಪಲ್ಲಮಜಲು ರವರು ಇದ್ದು ಹಾಗೂ ಇತರರು ಇದ್ದು ಪಿರ್ಯಾದಿದಾರರು ಮತ್ತು ಅವರ ತಂದೆ ಅವರಲ್ಲಿ ಈ ಜಾಗದ ವಿಚಾರದಲ್ಲಿ ಕೇಸು ಈಗಾಗಲೆ ನ್ಯಾಯಾಲಯದಲ್ಲಿ ಇದ್ದು ಇತ್ಯರ್ಥ ವಾಗಿರುವುದಿಲ್ಲ. ನೀವು ಹೇಗೆ ಕಂಪೌಂಡ್ ಕಟ್ಟುತ್ತೀರಿ ಎಂದು ಕೇಳಿದಾಗ ಅವರುಗಳೆಲ್ಲರೂ ಪಿರ್ಯಾದಿದಾರರನ್ನು ಮತ್ತು ಅವರ ತಂದೆಯನ್ನು ಉದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈಯುತ್ತಾ ಮಹಮ್ಮದ್ ನಿಶ್ವಾನನು ಅಲ್ಲೇ ಇದ್ದ ತೆಂಗಿನ ಹೆಡೆಯಿಂದ ಪಿರ್ಯಾದಿದಾರರ ತಲೆಗೆ ಹೊಡೆಯಲು ಬೀಸಿದಾಗ ಪಿರ್ಯಾದಿದಾರರು ತಪ್ಪಿಸಿಕೊಂಡಿದ್ದು ಆಗ ಅದು ಬಲ ಕುತ್ತಿಗೆಗೆ ತಾಗಿ ನೋವಾಗಿರುತ್ತದೆ. ಆಗ ರಮೀಜ್ ಕಲಾಯಿರವರು ಒಂದು ಕೈಯಲ್ಲಿ ಪಿರ್ಯಾದಿದಾರರ ಕೂದಲನ್ನು ಹಿಡಿದು ಬಲಕೆನ್ನೆಗೆ , ಬಲ ಕಣ್ಣಿಗೆ ಕೈಯಿಂದ ಗುದ್ದಿದನು ಆಗ ಇಲಿಯಾಸ್ ಪಲ್ಲಮಜಲು ರವರು ಅವರನ್ನು ಉದ್ದೇಶಿಸಿ ಇನ್ನು ಹೊಡೆಯಿರಿ ಎಂದು ಹೇಳಿ ಆಗ ಅಲ್ಲಿ ಜನ ಸೇರುವುದನ್ನು ಕಂಡ ಇನ್ನು ಮುಂದಕ್ಕೆ ಜಾಗದ ವಿಚಾರ ದಲ್ಲಿ ಕೇಳು ಬಂದರೆ ನಿಮ್ಮನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 136/2021 ಕಲಂ 504,323, 324,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦3
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ,ಚೆನ್ನಪ್ಪ, ಪ್ರಾಯ 51 ವರ್ಷ ತಂದೆ : ಹುಕ್ರ ಅಜಿಲಾಯ. ವಾಸ : ಕಣಿಯಾರು ಮನೆ,ಕೆಯ್ಯೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೋದಲ್ಲಿ ಚಾಲಕ ಬಿಲ್ಲೆ ಸಂಖ್ಯೆ 15654 ರಂತೆ ಚಾಲಕರಾಗಿದ್ದು ಈ ದಿನ ದಿನಾಂಕ 07.11.2021 ರಂದು ಕೆಎಸ್‌ಆರ್‌ಟಿಸಿ ಬಸ್ ನೊಂದಣಿ ಸಂಖ್ಯೆ ಕೆಎ 19 ಎಫ್ 2771 ನೇದರಲ್ಲಿ ಚಾಲಕನಾಗಿ ಕರ್ತವ್ಯಕ್ಕೆ ನೇಮಿಸಿದಂತೆ ಕರ್ತವ್ಯದಲ್ಲಿದ್ದು ಸಂಜೆ 04.30 ಗಂಟೆಗೆ ಸುಬ್ರಹ್ಮಣ್ಯದಿಂದ ಬಸ್‌ನ್ನು ಪುತ್ತೂರು ಕಡೆಗೆ ಚಲಾಯಿಸುತ್ತಾ ಸಂಜೆ 05.25 ಗಂಟೆಗೆ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿಗೆ ತಲುಪಿದಾಗ ಹಿಂದಿನಿಂದ ಸ್ಕೂಟರ್ ಸವಾರನೋರ್ವನು ಹಾರನ್ ಹಾಕುತ್ತಾ ಬಸ್‌ನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಬಸ್ ಮುಂದಕ್ಕೆ ಹೋಗದಂತೆ ಬಸ್ಸಿಗೆ ಅಡ್ಡಲಾಗಿ ಸ್ಕೂಟರ್‌ನ್ನು ನಿಲ್ಲಿಸಿ ಸವಾರನು ಸ್ಕೂಟರ್‌ನಿಂದ ಇಳಿದು ಬಸ್ಸಿನ ಎಡಮುಂಬದಿಯ ಬಾಗಿಲಿನ ಮೂಲಕ ಬಸ್ಸಿನೊಳಗೆ ಬಂದು ಏಕಾಏಕಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಪಿರ್ಯಾದಿದಾರರ ಎಡಕಿವಿ ಹಿಂಬದಿಗೆ ಹೊಡೆದು ನೋವನ್ನುಂಟು ಮಾಡಿದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅಕ್ರ 54/2021 ಕಲಂ 341,353,504,323,ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 07-11-2021 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಕ್ರ 55/2021 ಕಲಂ 354(ಎ), 354(ಡಿ), 506 ಐಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.
ದ.ಕ ಮಹಿಳಾ ಪೊಲೀಸ್ ಠಾಣೆ ಪುತ್ತೂರು : ದಿನಾಂಕ 07-11-2021 ರಂದು ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 39/2021 ಕಲಂ: 354(A) ಭಾ.ದಂ.ಸಂ ಮತ್ತು ಕಲಂ 8 ಪೋಕ್ಸೋ ಕಾಯ್ದೆ 2012ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಜಾನಕಿ, ಗಂಡ:ಶೀನು ಕುಮಾರ್, ವಾಸ: ಬಿಜಿಭವನ್ ಮಿತ್ರನಗರ, ವಳನಾಡು, ನಿಡುಮಂಗಾಡು ತಾಲೂಕು ತಿರುವನಂತಪುರ ಜಿಲ್ಲೆ ಕೇರಳ ಎಂಬವರ ದೂರಿನಂತೆ ದಿನಾಂಕ:31.10.2021 ರಂದು ತನ್ನ ತವರು ಮನೆಯಾದ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಎಂಬಲ್ಲಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಂದಿದ್ದು, ಪಿರ್ಯಾದಿಯ ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ ಪಿರ್ಯಾದಿಯ ತಂದೆ ತನಿಯ ಪ್ರಾಯ 61 ವರ್ಷ ಎಂಬವರು ಮದ್ಯ ಸೇವನೆಯ ಚಟವುಳ್ಳವರಾಗಿದ್ದು ದಿನಾಂಕ: 06.11.2021 ರಂದು ರಾತ್ರಿ 10.00 ಗಂಟೆಗೆ ಮನೆಯವರೆಲ್ಲರೂ ಊಟ ಮಾಡಿ ಪಿರ್ಯಾದಿ ಹಾಗೂ ಅವರ ತಾಯಿ ಒಂದು ಕೋಣೆಯಲ್ಲಿ ಮತ್ತು ಪಿರ್ಯಾದಿಯ ತಂದೆ ತನಿಯರವರು ಮತ್ತೊಂದು ಕೋಣೆಯಲ್ಲಿ ಮಲಗಿದ್ದು, ದಿನಾಂಕ 07.11.2021 ರಂದು ಬೆಳಿಗ್ಗೆ 07.00 ಗಂಟೆಗೆ ಪಿರ್ಯಾದಿದಾರರು ಎದ್ದು ಮನೆಯಲ್ಲಿ ನೋಡಲಾಗಿ ಪಿರ್ಯಾದಿಯ ತಂದೆ ತನಿಯ ರವರು ಮಲಗಿದ್ದ ಕೋಣೆಯಲ್ಲಿ ಕಾಣಿಸದೇ ಇರುವುದರಿಂದ ಮನೆಯ ಸುತ್ತ ಮುತ್ತ ಹುಡುಕಿ ನೋಡಲಾಗಿ ಪಿರ್ಯಾದಿಯ ತಂದೆ ತನಿಯರವರು ತಮ್ಮ ಮನೆಯ ಸ್ವಲ್ಪ ದೂರದಲ್ಲಿ ಅಂಗಡಿಗೆಂದು ನಿರ್ಮಿಸಿದ್ದ ಕಟ್ಟಡದ ಒಳಗೆ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 26/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.